Read Time:5 Minute, 49 Second

Kashmir DDC Polls | ವಾಸ್ತವ ಇಲ್ಲಿದೆ: ಮಿತ್ರಕೂಟಕ್ಕೆ ಗರಿಷ್ಠ ಸ್ಥಾನವಾದರೂ ನಿಜವಾಗಿ ಛಾಪು ಮೂಡಿಸಿದ್ದು ಬಿಜೆಪಿ!

0 0

ಶ್ರೀನಗರ: ಸ್ವತಂತ್ರ ಭಾರತದಲ್ಲೇ ಮೊದಲ ಬಾರಿಗೆ ನಡೆದ ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ ನೇತೃತ್ವದ ಮಿತ್ರಕೂಟಕ್ಕೇ ಭರ್ಜರಿ ವಿಜಯ ದೊರಕಿದೆ ಎಂದೆಲ್ಲಾ ಪ್ರಮುಖ ಮಾಧ್ಯಮಗಳು ಬಿಂಬಿಸಿವೆ.

ಆದರೆ, ನೈಜ ಅಂಶವನ್ನೇ ಮುಚ್ಚಿಟ್ಟಿವೆ. ಜಮ್ಮು ಮತ್ತು ಕಾಶ್ಮೀರವೆಂಬ, ಒಂದು ಕಾಲದಲ್ಲಿ ಕಾಶ್ಮೀರೀ ಪಂಡಿತರ ನಾಡಾಗಿದ್ದ ಭೂಲೋಕದ ಸ್ವರ್ಗದಲ್ಲೀಗ ಮುಸ್ಲಿಮರದೇ ಪಾರುಪತ್ಯ. ಇಂಥ ಸ್ಥಳದಲ್ಲಿ ಬಿಜೆಪಿ 74ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡು, ಏಕೈಕ ಅತಿದೊಡ್ಡ ಪಕ್ಷವಾಗಿ ಮೂಡಿಬಂದಿದೆ.

ಇದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಹಾಗೂ ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿದ್ದಕ್ಕೆ ದೊರೆತ ವಿಜಯ ಎಂಬುದು ಅಲ್ಲಿನ ರಾಜಕೀಯ ಗಮನಿಸಿದವರಿಗೆ ತಿಳಿಯುವ ನೈಜ ಸಂಗತಿ. ಇಷ್ಟೇ ಅಲ್ಲ, ಅಲ್ಲಿ ಬಿಜೆಪಿಗೆ ದೊರೆತ ಮತಗಳ ಸಂಖ್ಯೆಯೂ ಕಾಶ್ಮೀರದ ಅಭಿವೃದ್ಧಿ ಬಗ್ಗೆ ಆಶಾವಾದ ಮೂಡಿಸುತ್ತದೆ.

7 ಪಕ್ಷಗಳನ್ನೊಳಗೊಂಡ ಸಮ್ಮಿಶ್ರ ಗುಂಪಾಗಿರುವ PAGD (ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಶನ್) ಕೂಟಕ್ಕೆ ದೊರಕಿದ್ದು 110 ಸ್ಥಾನಗಳು.

ಕಾಶ್ಮೀರ ಕಣಿವೆಯಲ್ಲಿ ಗುಪ್ಕಾರ್ ಕೂಟವೂ, ಜಮ್ಮು ವಲಯದಲ್ಲಿ ಬಿಜೆಪಿಯೂ ಒಳ್ಳೆಯ ಸಾಧನೆ ಮಾಡಲಿದೆ ಎಂಬುದು ನಿರೀಕ್ಷಿತವೇ. ಕಾರಣವೆಂದರೆ, ಕಾಶ್ಮೀರ ಕಣಿವೆಯ 10 ಜಿಲ್ಲೆಗಳಲ್ಲಿ ಮುಸ್ಲಿಮರು, ಜಮ್ಮುವಿನ 10ರಲ್ಲಿ 6 ಜಿಲ್ಲೆಗಳಲ್ಲಿ ಹಿಂದುಗಳು ಬಹುಸಂಖ್ಯಾತರು. ಉಳಿದ ರಾಜೌರಿ, ಪೂಂಛ್, ದೋಡಾ ಮತ್ತು ಕಿಶ್ಚವಾರ್ ಎಂಬ ಗಡಿ ಜಿಲ್ಲೆಗಳಲ್ಲೂ ಮುಸ್ಲಿಮರೇ ಹೆಚ್ಚು.

ಚುನಾವಣಾ-ಪೂರ್ವ ಮೈತ್ರಿಯ ಅನುಸಾರ, ಏಳು ಪಕ್ಷಗಳ ಗುಪ್ಕಾರ್ ಮಿತ್ರಕೂಟಕ್ಕೆ 112 ಸ್ಥಾನಗಳು ದೊರೆತಿವೆ. ಒಟ್ಟು 280ರಲ್ಲಿ (ಜಮ್ಮು 140, ಕಾಶ್ಮೀರ 140), 75 ಸ್ಥಾನ ಗೆದ್ದ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಹಿಂದೆ ಬದ್ಧವೈರಿಗಳಾಗಿದ್ದ ಫಾರೂಕ್ ಅಬ್ದುಲ್ಲಾರ ನ್ಯಾಶನಲ್ ಕಾನ್ಫರೆನ್ಸ್ 67, ಮೆಹಬೂಬಾ ಮುಫ್ತಿ ಅವರ ಪಿಡಿಪಿ 27 ಹಾಗೂ ಕಾಂಗ್ರೆಸ್ 27 ಸ್ಥಾನಗಳಲ್ಲಿ ಗೆದ್ದಿವೆ. ಸಜ್ಜಾದ್ ಲೋನೆಯ ಪೀಪಲ್ಸ್ ಕಾನ್ಫರೆನ್ಸ್ 3, ಸಿಪಿಐಎಂಗೆ 5 ಸ್ಥಾನಗಳು ದೊರೆತಿವೆ. ಸ್ವತಂತ್ರರು 50 ಸ್ಥಾನಗಳಲ್ಲಿ ಗೆದ್ದಿದ್ದು, ಅವರಲ್ಲಿ ಸುಮಾರು 40ರಷ್ಟು ಮಂದಿಗೆ ಬಿಜೆಪಿ ಬೆಂಬಲವಿತ್ತು. ಬಿಜೆಪಿಯ ಮಿತ್ರ ಅಪ್ನೀ ಪಾರ್ಟಿಗೆ 12 ಸ್ಥಾನಗಳು ದೊರೆತಿವೆ.

ಹಿಂದೆ ಬದ್ಧವೈರಿಗಳಾಗಿದ್ದ ಎನ್‌ಸಿ ಮತ್ತು ಪಿಡಿಪಿ ರಾಜ್ಯವನ್ನು ಹಲವು ದಶಕಗಳ ಕಾಲ ಆಳುತ್ತಾ ಬಂದಿದ್ದು, ಸಾಕಷ್ಟು ಆಸ್ತಿಪಾಸ್ತಿ ಮಾಡಿಕೊಂಡಿರುವುದು ಈಗ ಒಂದೊಂದಾಗಿ ಬಯಲಿಗೆ ಬರುತ್ತಿದೆ. ಈಗ ಅವರೆಡು ಕೈಜೋಡಿಸಿದ್ದರಿಂದ ಇಷ್ಟು ಸ್ಥಾನಗಳು ಆ ಕೂಟಕ್ಕೆ ದೊರೆತಿದೆ.

https://twitter.com/ShobhaBJP/status/1341329666024456192

ಫಲಿತಾಂಶವನ್ನು ಒಟ್ಟಾರೆ ನೋಡಿದರೆ, ಬಿಜೆಪಿಗೆ ಭರ್ಜರಿ ಲಾಭವಾಗಿದ್ದರೆ, ಪಿಡಿಪಿ ಮತ್ತು ಕಾಂಗ್ರೆಸ್‌ಗೆ ಭಾರಿ ನಷ್ಟವೇ ಆಗಿದೆ. 140ರಲ್ಲಿ 3 ಸ್ಥಾನ ಗೆದ್ದುಕೊಳ್ಳುವ ಮೂಲಕ ಬಿಜೆಪಿಯು ಕಾಶ್ಮೀರ ಕಣಿವೆಗೂ ಕಾಲಿಟ್ಟಂತಾಗಿದೆ. ಇದು ಬಿಜೆಪಿಯ ಅತಿದೊಡ್ಡ ಬಲವೂ ಆಗಿದೆ.

ಬಿಜೆಪಿಗೆ 4,87,364 ಮತಗಳು, ನ್ಯಾಶನಲ್ ಕಾನ್ಫರೆನ್ಸಿಗೆ 2,82,514, ಪಿಡಿಪಿಗೆ 57,789 ಹಾಗೂ ಕಾಂಗ್ರೆಸಿಗೆ 1,39,382 ಮತಗಳು ದೊರೆತಿವೆ. ಸಿಂಹಪಾಲು ಬಿಜೆಪಿಯದ್ದೇ.

ಅಂದರೆ, ಕಾಂಗ್ರೆಸ್-ಪಿಡಿಪಿ-ಎನ್‌ಸಿಯ (4,79,685) ಅಷ್ಟೂ ಮತಗಳಿಗಿಂತಲೂ ಬಿಜೆಪಿಯೊಂದಕ್ಕೇ ಲಭ್ಯವಾಗಿದ್ದು ಗರಿಷ್ಠ ಮತಗಳು.

2014ರ ಜಮ್ಮು ಮತ್ತು ಕಾಶ್ಮೀರ ಅಸೆಂಬ್ಲಿ ಚುನಾವಣೆಗಳವರೆಗೂ ಅಲ್ಲಿ ಇದ್ದದ್ದು ಮೂರೇ ಪಕ್ಷಗಳು. ಆ ಚುನಾವಣೆಗಳಲ್ಲಿ ಎಂಟ್ರಿ ಕೊಟ್ಟಿದ್ದ ಬಿಜೆಪಿಯು, ಕಾಂಗ್ರೆಸ್ ಹಾಗೂ ಪಿಡಿಪಿಗಳನ್ನು ಹಿಂದಿಕ್ಕಿ ಎರಡನೇ ಅತಿದೊಡ್ಡ ಪಕ್ಷವಾಗಿ ಮೂಡಿಬಂದಿರುವುದು ಬಲುದೊಡ್ಡ ಅಚ್ಚರಿ.

ಈ ಬಾರಿ ಶೇಕಡಾವಾರು ಮತದಾನವೂ ಗಣನೀಯ ಏರಿಕೆ ಕಂಡಿರುವುದು ಸುಶಿಕ್ಷಿತರ ಮತಗಳು ಬಿಜೆಪಿಗೆ ದೊರೆತಿರುವುದು, ಶಾರದಾದೇವಿಯ ನಾಡಾಗಿರುವ ಕಾಶ್ಮೀರದ ಏಳಿಗೆಯ ಶುಭ ಸೂಚನೆಯೇ.

ಆದರೆ, ಗುಪ್ಕಾರ್ ಕೂಟಕ್ಕೆ ಒಟ್ಟಾಗಿ ಗರಿಷ್ಠ ಮತಗಳು ದೊರೆತಿರುವುದನ್ನೇ ಅನೇಕ ಮಾಧ್ಯಮಗಳು ಇದು, 370ನೇ ವಿಧಿಯ ರದ್ದತಿ ವಿರುದ್ಧದ ಜನಾದೇಶ ಎಂದು ಬಿಂಬಿಸಿರುವುದು ಹಾಸ್ಯಾಸ್ಪದ.

“ಇದನ್ನೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕೇಳಿದ್ದು – ವಿಧಿ ರದ್ದು ಮಾಡಿದ್ದಕ್ಕೆ ದೊರೆತ ಜನಾದೇಶವಲ್ಲವೇ ಇದು? ಪ್ರಜಾಪ್ರಭುತ್ವ ಮತ್ತು ಭಾರತ – ಇಂದು ಎರಡೂ ಗೆದ್ದಿವೆ” ಎಂದವರು ಟ್ವೀಟ್ ಮಾಡಿದ್ದಾರೆ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಕೋವಿಡ್-19 ಲಸಿಕೆಯಲ್ಲಿ ಹಂದಿಯ ಅಂಶ: ಮುಸಲ್ಮಾನರಲ್ಲಿ ಆತಂಕ, ‘ಹರಾಮ್’ ಅಲ್ಲ ಎಂದ ಯುಎಇ ಫತ್ವಾ ಮಂಡಳಿ
Next post Farmer Protest: ಸುಳ್ಳು ಹೇಳಿ ರೈತರ ದಾರಿ ತಪ್ಪಿಸುತ್ತಿರುವ ರಾಹುಲ್, ಕೇಜ್ರಿವಾಲ್: ಸಾಕ್ಷ್ಯಾಧಾರ ಸಮೇತ ನೈಜಮುಖ ಬಟಾಬಯಲು

ಸುದ್ದಿ ಸಂಚಯ

ಇವುಗಳನ್ನೂ ನೋಡಿ