ಹೈದರಾಬಾದ್: ದೇಶಾದ್ಯಂತ ಲಾಗೂ ಆಗಿರುವ ಹೊಸ ಕೃಷಿ ಕಾಯ್ದೆಗಳ ಅನುಸಾರವಾಗಿ, ರೈತರು ಯಾರಿಗೆ ಬೇಕಿದ್ದರೂ (ಹೆಚ್ಚು ಹಣ ನೀಡುವವರಿಗೆ) ತಮ್ಮ ಕೃಷ್ಯುತ್ಪನ್ನಗಳನ್ನು ಮಾರಾಟ ಮಾಡಬಹುದಾಗಿರುವುದರಿಂದ, ರಾಜ್ಯ ಸರ್ಕಾರಗಳು ರೈತರಿಂದ ಖರೀದಿಸಬೇಕಾದ ಅಗತ್ಯವಿರುವುದಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಕೊನೆಗೂ ಹೇಳಿದ್ದಾರೆ.
ಇದುವರೆಗೆ ನರೇಂದ್ರ ಮೋದಿ ಸರ್ಕಾರವು ರೈತರ ಹಿತಕ್ಕಾಗಿ ಜಾರಿಗೊಳಿಸಿದ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಭಾರತ ಬಂದ್‌ಗೂ ಬೆಂಬಲಿಸಿದ್ದ ಕೆಸಿಆರ್, ಇದೀಗ ಅನುಕೂಲಗಳನ್ನು ಕೊನೆಗೂ ಮನಗಂಡಿದ್ದಾರೆ ಮತ್ತು ನಿಲುವು ಬದಲಾಯಿಸಿದ್ದಾರೆ.
ಇದನ್ನೂ ಓದಿ: Farmer Protest: ಸುಳ್ಳು ಹೇಳಿ ರೈತರ ದಾರಿ ತಪ್ಪಿಸುತ್ತಿರುವ ರಾಹುಲ್, ಕೇಜ್ರಿವಾಲ್: ಸಾಕ್ಷ್ಯಾಧಾರ ಸಮೇತ ನೈಜಮುಖ ಬಟಾಬಯಲು
ಕೃಷಿ ಕಾಯ್ದೆಗಳ ಬಗ್ಗೆ ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳು ದೇಶಾದ್ಯಂತ ಅಪಪ್ರಚಾರ ಮಾಡಿ, ರೈತರಿಗೆ ಹಾನಿಯಾಗುತ್ತದೆ ಎಂದು ಎಚ್ಚರಿಸಿದ ಪರಿಣಾಮವಾಗಿ, ಅವರ ರಾಜಕೀಯ ತಂತ್ರದ ಅರಿವಿಲ್ಲದ ಕೆಲವು ಮುಗ್ಧ ರೈತರು ಪ್ರತಿಭಟನೆಗೆ ಬೆಂಬಲಿಸಿದ್ದರೆ, ಕೆಲವರು ಒಂದು ತಿಂಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೆಸಿಆರ್ (ಕೆ.ಚಂದ್ರಶೇಖರ ರಾವ್) ಅವರು ಇತ್ತೀಚೆಗೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ, ಕೃಷಿ ಕಾಯ್ದೆಯ ಬಗ್ಗೆ ತಮ್ಮಲ್ಲಿದ್ದ ಸಂದೇಹಗಳನ್ನು ನಿವಾರಿಸಿಕೊಂಡಿದ್ದು, ಈಗ ಅದು ಕೃಷಿಕರಿಗೆ ಪೂರಕವಾದ ಕಾಯ್ದೆ ಎಂದು ಅರ್ಥ ಮಾಡಿಕೊಂಡಿದ್ದಾರೆ.
ಅವರ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷವು ಸಂಸತ್ತಿನಲ್ಲಿ ಕೃಷಿ ಕಾಯ್ದೆಯನ್ನು ವಿರೋಧಿಸಿ ಮತ ಚಲಾಯಿಸಿತ್ತು ಎಂಬುದು ಗಮನಿಸಬೇಕಾದ ಸಂಗತಿ.
ಸಿಎಂ ನೇತೃತ್ವದಲ್ಲಿ ಭಾನುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಕೃಷಿ ಉತ್ಪನ್ನ ಖರೀದಿ ಮತ್ತು ಮಾರಾಟ ಪ್ರಕ್ರಿಯೆಯನ್ನು ಮಾರುಕಟ್ಟೆಗಳಿಗೇ ವಹಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಮೋದಿ ವಿರುದ್ಧದ ರೈತ ಹೋರಾಟ | ಕಿಸಾನ್ ಯೂನಿಯನ್‌ಗೆ ವಿದೇಶದಿಂದ ಅಕ್ರಮವಾಗಿ ಹರಿದುಬರುತ್ತಿದೆ ಲಕ್ಷ ಲಕ್ಷ ಹಣ!
ಇದನ್ನು ಸರ್ಕಾರ ಮಾಡಬೇಕಾಗಿಲ್ಲ. ಯಾಕೆಂದರೆ ಸರ್ಕಾರ ಎಂಬುದು ವ್ಯಾಪಾರ ಸಂಘಟನೆಯಲ್ಲ, ವ್ಯಾಪಾರಿಯೂ ಅಲ್ಲ. ಅಕ್ಕಿ ಮಿಲ್ ಅಥವಾ ದಾಲ್ ಮಿಲ್ ಅಲ್ಲ. ಮಾರಾಟ ಹಾಗೂ ಖರೀದಿಯು ಸರ್ಕಾರದ ಹೊಣೆಯಲ್ಲ. ಮುಂದಿನ ವರ್ಷದಿಂದ ಹಳ್ಳಿಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯುವುದಿಲ್ಲ ಎಂದು ಮುಖ್ಯಮಂತ್ರಿ ಕಚೇರಿಯು ತಿಳಿಸಿದೆ.
ಆದರೆ, ರೈತರು ತಮ್ಮ ಎಲ್ಲ ಫಸಲನ್ನೂ ಏಕಕಾಲದಲ್ಲಿ ಮಾರುಕಟ್ಟೆಗೆ ತರಬೇಕಾಗಿಲ್ಲ. ಹಂತ ಹಂತವಾಗಿ ತಂದರೆ, ಉತ್ತಮ ಬೆಳೆ ಲಭ್ಯವಾಗಬಹುದು ಎಂದೂ ಕೆಸಿಆರ್ ಸಲಹೆ ನೀಡಿದ್ದಾರೆ.
ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಮಾನವೀಯತೆ ನೆಲೆಯಲ್ಲಿ ಖರೀದಿ ಕೇಂದ್ರಗಳ ಮೂಲಕ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗಿತ್ತು. ಭತ್ತ, ರಾಗಿ, ಜೋಳ, ಉದ್ದು, ಸೂರ್ಯಕಾಂತಿ ಮತ್ತಿತರ ಕೃಷಿ ಉತ್ಪನ್ನಗಳ ಖರೀದಿಯಿಂದ ರಾಜ್ಯ ಸರ್ಕಾರಕ್ಕೆ ಸುಮಾರು 7500 ಕೋಟಿ ರೂ. ನಷ್ಟವಾಗಿದೆ. ಈ ಬೆಳೆಗಳಿಗೆ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ನೀಡಿದೆಯಾದರೂ, ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದ ಕಾರಣ ಅದನ್ನು ಕಡಿಮೆ ಬೆಲೆಗೆ ಮಾರಬೇಕಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದೇ ಕೆಸಿಆರ್ ಮತ್ತವರ ಪಕ್ಷವು ಸಂಸತ್ತಿನಲ್ಲಿ ಕೃಷಿಕರಿಗೆ ಪೂರಕವಾದ ಈ ಕಾಯ್ದೆಗಳನ್ನು ವಿರೋಧಿಸಿ, ಡಿ.8ರ ಭಾರತ ಬಂದ್‌ನಲ್ಲೂ ಪಾಲ್ಗೊಂಡಿತ್ತು ಎಂಬುದು ಗಮನಾರ್ಹ.
ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಅವರು ಮುಖ್ಯಮಂತ್ರಿಯ ನಡೆಯನ್ನು ಸ್ವಾಗತಿಸಿ, ‘ಕನಿಷ್ಠ ಈಗಲಾದರೂ ಅವರಿಗೆ ಜ್ಞಾನೋದಯವಾಗಿದೆ. ಖಂಡಿತವಾಗಿಯೂ ಈ ಕಾಯ್ದೆಗಳು ರೈತರ ಹಿತಕ್ಕಾಗಿಯೇ ಇರುವಂಥವು’ ಎಂದಿದ್ದಾರೆ.

Average Rating