ಲಖನೌ: ಇಡೀ ದೇಶವೇ ಕೊರೊನಾ ವೈರಸ್ ಎಂಬ ಜಾಗತಿಕ ಪೀಡೆಯಿಂದ ಮುಳುಗೇಳುತ್ತಾ, ಲಸಿಕೆಗಾಗಿ ಹಪಹಪಿಸುತ್ತಿದ್ದರೆ, ‘ಸಮಾಜವಾದ’ ಹೆಸರಲ್ಲಿ ಸ್ವಂತ ಅಪ್ಪನನ್ನೇ ಮೂಲೆಗುಂಪಾಗಿಸಿದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ‘ಬಿಜೆಪಿ ಲಸಿಕೆ ನನಗೆ ಬೇಡ’ ಎಂಬ ಹೊಸ ವರಸೆ ನಗೆ ಬಾಂಬ್ ಸ್ಫೋಟಿಸಿದೆ.
ನೆಟ್ಟಿಗರಂತೂ ಅವರನ್ನು ‘ರಾಹುಲ್ ಗಾಂಧಿ ಉತ್ತರಾಧಿಕಾರಿ’ ಎಂಬಂತೆ ಬಿಂಬಿಸಿದರೆ, ಮತ್ತೆ ಕೆಲವರು ಇಂಥವರಿಗೆ ರಾಷ್ಟ್ರೀಯತೆಯ ಲಸಿಕೆ ತಯಾರಿಸಬೇಕಿದೆ ಅಂತ ಕಟಕಿಯಾಡಿದ್ದಾರೆ. ಬಿಜೆಪಿ ಲಸಿಕೆ ತಯಾರಿಸಿದೆ ಅಂತ ಗೊತ್ತೇ ಇರಲಿಲ್ಲ, ತಿಳಿಸಿದ್ದಕ್ಕೆ ಧನ್ಯವಾದ ಅಂತ ಮತ್ತೆ ಕೆಲವರು ಹೇಳಿದ್ದಾರೆ.
ಸುಶಿಕ್ಷಿತ ಯುವ ರಾಜಕಾರಣಿ ಎಂದೇ ಬಿಂಬಿತವಾಗಿದ್ದ ಅಖಿಲೇಶ್ ಏನೆಲ್ಲಾ ಹೇಳಿದ್ದಾರೆ ಗೊತ್ತೇ? ಇಲ್ಲಿದೆ ನೋಡಿ, ಮೂರ್ಖತನದ ಮಾತುಗಳ ಪಟ್ಟಿ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy
- ಕೊರೊನಾ ಅಂದ್ರೇನು? ಇಲ್ಲಿ ಯಾರಿಗಿದೆ ಕೊರೊನಾ? ಕೊರೊನಾ ಇದೆ ಅಂತ ಸರ್ಕಾರವೇ ಒಪ್ತಾ ಇಲ್ಲ. ಆದ್ರೂ ಲಸಿಕೆಯ ಡ್ರೈ ರನ್ ಯಾಕೆ ಮಾಡ್ತಿದಾರೆ? ನೋಡಿ, ನಾನು ಮಾಸ್ಕ್ ಹಾಕದೇ ಮಾತಾಡುತ್ತಿದ್ದೇನೆ. ಎಲ್ಲಿದೆ ಕೊರೊನಾ?
- ಬಿಜೆಪಿಯು ಜನರಲ್ಲಿ ಆತಂಕ ಹುಟ್ಟುಹಾಕಲು ಪ್ರಯತ್ನಿಸುತ್ತಿದೆಯಷ್ಟೇ. ವಿರೋಧ ಪಕ್ಷಗಳು ಯಾವುದೇ ಕಾರ್ಯಕ್ರಮಗಳನ್ನು ಸಂಘಟಿಸದಂತೆ ಬಿಜೆಪಿ ಈ ರೀತಿ ಭೀತಿ ಹುಟ್ಟಿಸುತ್ತಿದೆ.
- ಬಿಜೆಪಿ ಲಸಿಕೆಯನ್ನು ನಾನಂತೂ ನಂಬುವುದಿಲ್ಲ. ಬಿಜೆಪಿ ಲಸಿಕೆಯನ್ನು ನಾನು ಹಾಕಿಸಿಕೊಳ್ಳುವುದೂ ಇಲ್ಲ.
- ನಮ್ಮ ಸರ್ಕಾರ (2022ರಲ್ಲಿ) ಅಧಿಕಾರಕ್ಕೆ ಬಂದ ಮೇಲೆ, ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ಮಾಡಿಕೊಡುತ್ತೇವೆ.
- ಕೇಂದ್ರ ಸರ್ಕಾರವು ವಿರೋಧ ಪಕ್ಷಗಳು ಸಂಘಟಿಸುವ ಕಾರ್ಯಕ್ರಮಗಳನ್ನು ನಡೆಯದಂತೆ ಮಾಡಲು ಕೊರೊನಾ ಭೀತಿಯನ್ನು ಹರಡುತ್ತಿದೆ.
ಒಂದು ದೊಡ್ಡ ಪಕ್ಷದ ಮುಖ್ಯಸ್ಥರಾಗಿ, ಉತ್ತರ ಪ್ರದೇಶದ ಸಿಎಂ ಆಗಿ ಕೆಲಸ ಮಾಡಿದ್ದ ಅಖಿಲೇಶ್ ಯಾದವ್ ಹೇಳಿಕೆಗೆ ಎಲ್ಲೆಡೆಯಿಂದ ಭಾರಿ ಟೀಕೆ ವ್ಯಕ್ತವಾಗಿದೆ.
ಅಖಿಲೇಶ್ ಅವರಂತೂ ರಾಹುಲ್ ಗಾಂಧಿಯನ್ನು ಅನುಕರಿಸುವ ಯತ್ನ ಮಾಡುತ್ತಿದ್ದಾರೆ ಅಂತ ಒಬ್ಬರು ಪ್ರತಿಕ್ರಿಯಿಸಿದ್ದು, ಮುಂದೆ ಜಾತ್ಯತೀತ ಲಸಿಕೆ, ಕೋಮುವಾದಿ ಲಸಿಕೆ ಎಂಬ ಪ್ರತ್ಯೇಕತೆಯೂ ಬರಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಅಧಿಕಾರದ ಕಳೆದುಕೊಂಡಾಗ ಏನೆಲ್ಲಾ ಆಗುತ್ತದೆ ಎಂಬುದಕ್ಕಿದು ಉದಾಹರಣೆ ಅಂತ ಕಿರಣ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಇಷ್ಟೇ ಅಲ್ಲ, ಇದೇ ಸಮಾಜವಾದಿ ಪಕ್ಷದ ಮತ್ತೊಬ್ಬ ನಾಯಕನೂ ತನ್ನ ಹರಕುಬಾಯಿಯನ್ನು ಬಟಾಬಯಲು ಮಾಡಿದ್ದು, ಲಸಿಕೆ ಪಡೆದರೆ ಪೌರುಷ ನಾಶವಾಗುತ್ತದೆ ಎಂಬ ಹೇಳಿಕೆ ನೀಡಿದ್ದಾನೆ!

Average Rating