Read Time:7 Minute, 17 Second

ಕೋವಿಡ್-19 ಲಸಿಕೆಗೆ ಭಾರತ ಅಸ್ತು | ಹೆಮ್ಮೆಯ ಸಾಧನೆಗೆ ಎಲ್ಲೆಡೆ ಶ್ಲಾಘನೆ; ಅಪಪ್ರಚಾರದ ಬಗ್ಗೆ ಇರಬೇಕಿದೆ ಎಚ್ಚರ!

0 0

ನವದೆಹಲಿ: ಇಡೀ ಜಗತ್ತನ್ನೇ ಕಾಡಿದ ಮಹಾಮಾರಿ ಕೋವಿಡ್-19ಗೆ ತಡೆಯೊಡ್ಡಲು ಭಾರತವೂ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಕೆಲವೇ ದಿನಗಳಲ್ಲಿ ಭಾರತೀಯರು ವರ್ಷದ ದುಗುಡ, ಆತಂಕದ ಕಾರ್ಮೋಡದಿಂದ ಮುಕ್ತರಾಗಲಿರುವ ಶುಭ ಸೂಚನೆ ದೊರೆತಿದೆ.

ಸ್ವಾವಲಂಬನೆಯ ಮಂತ್ರ ಜಪಿಸುತ್ತಲೇ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟ ಭಾರತೀಯ ಔಷಧ ಸಂಸ್ಥೆಗಳೇ ಅಭಿವೃದ್ಧಿಪಡಿಸಿರುವ ಲಸಿಕೆಗಳಿಗೆ ಕೇಂದ್ರದ ಭಾರತೀಯ ಔಷಧ ನಿಯಂತ್ರಣ ಮಹಾಮಂಡಳಿ (ಡಿಸಿಜಿಐ) ಅನುಮೋದನೆ ನೀಡಿದೆ.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

ಭಾರತೀಯರ ಹೆಮ್ಮೆಗೆ ಕಾರಣವಾಗಿರುವ, ವಿಜ್ಞಾನಿಗಳಿಗೆ ಶಹಭಾಸ್ ಹೇಳಲು ಕಾರಣವಾಗಿರುವ ಕೋವಿಡ್-19 ನಿರೋಧಕ ಲಸಿಕೆಗಳೆಂದರೆ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಕೋವಿಶೀಲ್ಡ್ ಹಾಗೂ ಭಾರತ್ ಬಯೊಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಎಂಬ ಲಸಿಕೆಗಳು. ಇವುಗಳ ತುರ್ತು (ನಿರ್ಬಂಧಿತ) ಬಳಕೆಗೆ ಅನುಮೋದನೆ ದೊರೆತಿದ್ದು, ದೇಶದ ಬಗ್ಗೆ ಹೆಮ್ಮೆಯುಳ್ಳವರೆಲ್ಲರೂ ಆನಂದತುಂದಿಲರಾಗಿದ್ದಾರೆ.

ಇದು ನಮ್ಮದೇ ಸಾಧನೆ, ನಮ್ಮದೇ ದೇಶದ ಸಾಧನೆ ಎಂಬಂತೆ ಭಾರತೀಯ ಉದ್ಯಮಿಗಳಿಗೆ ಉಘೇ ಉಘೇ ಎನ್ನುತ್ತಿದ್ದಾರೆ.

ಇದು 2021 ವರ್ಷಾರಂಭದ ನಿಜವಾದ ಶುಭ ಸುದ್ದಿ, ಭಾರತೀಯ ವಿಜ್ಞಾನಿ ವೈದ್ಯರಿಗೆ ಅಭಿನಂದನೆಗಳು. ಭಾರತದ ಯಶಸ್ಸಿನ ಪಯಣ ಆರಂಭವಾಗಿದೆ ಎಂದೆಲ್ಲಾ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯರು ಹರ್ಷ ವ್ಯಕ್ತಪಡಿಸಿದ್ದಾರೆ.

ಕೆಲವರಂತೂ ಮೀಮ್‌ಗಳ ಮೂಲಕವೂ ಈ ಬೆಳವಣಿಗೆಯ ಬಗ್ಗೆ ಆನಂದ ವ್ಯಕ್ತಪಡಿಸಿದ್ದಾರೆ.

https://twitter.com/jhampakjhum/status/1344984444214525952

ಪ್ರಧಾನಿ ನರೇಂದ್ರ ಮೋದಿ ಅವರು ಹಗಲಿರುಳೆನ್ನದೆ ವಿಜ್ಞಾನಿಗಳನ್ನು ಪ್ರೇರೇಪಿಸುತ್ತಾ, ದೇಶದ ಜನತೆಗೆ ಧೈರ್ಯ ತುಂಬುತ್ತಾ, ವಿರೋಧ ಪಕ್ಷಗಳ ನಿಂದನೆಯ ಮಧ್ಯೆಯೂ ಸಂತನಂತೆ ಕೆಲಸ ಮಾಡಿದ್ದಕ್ಕೆ ದೊರೆತ ಫಲವೂ ಇದು. ಈ ಬಗ್ಗೆ ಪ್ರಧಾನಿ ಹರ್ಷಚಿತ್ತರಾಗಿ ಶ್ಲಾಘಿಸಿದ್ದಾರೆ.

ಈಗಾಗಲೇ ಲಸಿಕೆ ಹೇಗೆ ನೀಡಬೇಕು ಎಂಬುದರ ಕುರಿತು ದೇಶದ ನಾಲ್ಕು ರಾಜ್ಯಗಳಲ್ಲಿ ತಾಲೀಮು ನಡೆಸಲಾಗುತ್ತಿದ್ದು, ಮಕರ ಸಂಕ್ರಾಂತಿ ವೇಳೆಗೆ ನಿಜವಾದ ಲಸಿಗೆ ನೀಡುವ ಅಭಿಯಾನ ಆರಂಭವಾಗುವ ನಿರೀಕ್ಷೆ ಇದೆ.ಟ

ಆದರೆ, ಲಸಿಕೆಯ ಬಗ್ಗೆಯೂ ಈಗಾಗಲೇ ಅಪಪ್ರಚಾರ ಮಾಡುವ ಅಭಿಯಾನವೊಂದು ಸದ್ದಿಲ್ಲದೆ ಶುರುವಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ತಗಾದೆ ತೆಗೆದು, ‘ಇದು ಬಿಜೆಪಿ ಲಸಿಕೆ ನನಗೆ ಬೇಕಿಲ್ಲ’ ಅಂತೆಲ್ಲಾ ಹೇಳಿದರೆ, ಇದಕ್ಕೆ ಕಾಂಗ್ರೆಸ್ ಕೂಡ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಕಾಂಗ್ರೆಸ್‌ನ ರಶೀದ್ ಅಳವಿ ಅವರು ಈಗಾಗಲೇ ಅಖಿಲೇಶ್ ಯಾದವ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಇಲ್ಲಿ ಓದಿ: ಕೊರೊನಾವೇ ಇಲ್ಲ, ‘ಬಿಜೆಪಿ ಲಸಿಕೆ’ ಬೇಡ ಎಂದ ಅಖಿಲೇಶ್ ಮಾತಿಗೆ ಇಂಟರ್ನೆಟ್‌ನಲ್ಲಿ ನಗೆ ಸ್ಫೋಟ!

ನರೇಂದ್ರ ಮೋದಿ ಸರ್ಕಾರ ಕೈಗೊಳ್ಳುವ ಪ್ರತಿಯೊಂದು ಜನಪರ ಕೆಲಸದಲ್ಲಿ, ಭ್ರಷ್ಟಾಚಾರ ನಡೆಯುವ ಸಾಧ್ಯತೆಗಳು ತೀರಾ ಕಡಿಮೆ ಇರುವುದರಿಂದಾಗಿ, ಹಣ ಮಾಡುವ ಎಲ್ಲ ಮಾರ್ಗಗಳು ಬಂದ್ ಆಗಿರುತ್ತವೆ. ಈ ಕಾರಣಕ್ಕೆ ಮೋದಿಯವರ ಪ್ರತಿಯೊಂದು ಕಾರ್ಯವನ್ನೂ ಅಂಥವರು ವಿರೋಧಿಸುತ್ತಲೇ ಬಂದಿದ್ದಾರೆ.

ಉದಾಹರಣೆಗೆ, ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಹೊರದೇಶದಿಂದ ಅಕ್ರಮವಾಗಿ ನೆಲೆಸಿದವರನ್ನು ಹೊರ ಹಾಕುವ ಕಾರ್ಯಕ್ಕೆ ಮುಂದಾದಾಗ, ವೋಟ್ ಬ್ಯಾಂಕ್‌ಗೆ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ವಿರೋಧ ಪಕ್ಷಗಳು ಇದರ ವಿರುದ್ಧ ಹೋರಾಟ ನಡೆಸಿ, ಗಲಭೆ ಎಬ್ಬಿಸಿ ದೇಶದ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿದವು. ಇಲ್ಲಿ ಓದಿ: CAA ವಿರೋಧಿಸಿ ಅನಗತ್ಯ ಗಲಭೆಗಳಿಗೆ ಪಾಪ್ಯುಲರ್ ಫ್ರಂಟ್ (PFI) ಹಣಕಾಸು: 26 ಕಡೆ ED ದಾಳಿ

ಅದೇ ರೀತಿ, ಕೃಷಿಕರಿಗೆ ಹೆಚ್ಚು ಲಾಭ ತಂದುಕೊಡುವಂತೆ ಕೃಷಿ ಕಾಯ್ದೆಗೆ ತಂದ ತಿದ್ದುಪಡಿಯಿಂದಾಗಿ, ಮಧ್ಯವರ್ತಿಗಳಿಗೆ ಏನೂ ದಕ್ಕದೆ, ನೇರವಾಗಿ ರೈತರಿಗೇ ಎಲ್ಲ ಲಾಭ ಆಗುತ್ತದೆ ಎಂಬ ಆತಂಕದಿಂದಾಗಿ, ಈ ಕಾಯ್ದೆಗಳ ವಿರುದ್ಧ ರೈತರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿ ಪ್ರತಿಭಟನೆಗೆ ಕುಮ್ಮಕ್ಕು ನೀಡಲಾಗುತ್ತಿದೆ. ಇಲ್ಲಿ ಓದಿ: ಕೋವಿಡ್ ಸಂಕಷ್ಟದ ನಡುವೆ ರೈತರ ವೃಥಾ ಪ್ರತಿಭಟನೆಯಿಂದ ದೇಶಕ್ಕೆ ಎಷ್ಟು ನಷ್ಟ ಗೊತ್ತೇ? 70 ಸಾವಿರ ಕೋಟಿ!

ಇಂಥ ಹಂತದಲ್ಲಿ ಇದೀಗ ಚೀನಾದ ಕೊರೊನಾ ವೈರಸ್ ಮೂಲಕ ಜಾಗತಿಕವಾಗಿ ಹರಡಿದ ಕೋವಿಡ್-19 ಕಾಯಿಲೆಗೆ ಲಸಿಕೆ ಬಂದಿರುವ ಶುಭ ಸುದ್ದಿಯನ್ನೂ ಅರಗಿಸಿಕೊಳ್ಳಲಾಗದೆ, ಅದು ಸುರಕ್ಷಿತವಲ್ಲ, ಅಡ್ಡ ಪರಿಣಾಮವಿದೆ ಎಂದೆಲ್ಲಾ ತಪ್ಪು ಪ್ರಚಾರ ಮಾಡಲಾಗುತ್ತಿದೆ.

ಆದರೆ, ಇದು ಶೇ.110ರಷ್ಟು ಸುರಕ್ಷಿತವಾಗಿದೆ. ಸ್ವಲ್ಪ ಸಮಸ್ಯೆಯಿದ್ದರೂ ನಾವು ಅನುಮೋದನೆ ನೀಡುವುದಿಲ್ಲ ಎಂದು ಔಷಧ ನಿಯಂತ್ರಣಾಲಯದ ಮುಖ್ಯಸ್ಥ ಡಾ.ವಿ.ಜಿ.ಸೊಮಾನಿ ತಿಳಿಸಿದ್ದಾರೆ.

ಆದರೆ, ಚೀನಾ, ಅಮೆರಿಕ, ಯುಕೆ ಮುಂತಾದೆಡೆಗಳಲ್ಲಿಯೂ ಲಸಿಕೆ ತಯಾರಿ ನಡೆಯುತ್ತಿದ್ದು, ಭಾರತೀಯ ಲಸಿಕೆಯ ಬಗ್ಗೆ ಅಪಪ್ರಚಾರ ಮಾಡಿ, ಚೀನಾ ಮತ್ತಿತರ ಎಡ ಪಂಥೀಯ ದೇಶಗಳಿಂದ ಲಸಿಕೆಗೆ ಮನ್ನಣೆ ನೀಡುವಂತೆ ಮಾಡುವ ಹುನ್ನಾರದ ಬಗ್ಗೆಯೂ ಈಗಾಗಲೇ ಜನರಲ್ಲಿ ಆತಂಕ ವ್ಯಕ್ತವಾಗತೊಡಗಿದೆ.

https://twitter.com/satnam81556668/status/1345608419676311552

ಭಾರತದ ಕಾರ್ಯಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೂ ಮೆಚ್ಚುಗೆ ವ್ಯಕ್ತಪಡಿಸಿದೆ. ಲಸಿಕೆಯ ಪ್ರಯೋಗಕ್ಕೆ ಅನುಮೋದನೆ ನೀಡುವ ಮೂಲಕ ಭಾರತವು ಕೋವಿಡ್-19 ಹೆಮ್ಮಾರಿ ನಿಯಂತ್ರಣದ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ವಲಯದ ಪ್ರಾದೇಶಿಕ ನಿರ್ದೇಶಕ ಖೇತ್ರಪಾಲ್ ಸಿಂಗ್ ಹೇಳಿಕೆ ನೀಡಿದ್ದಾರೆ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ವಿರೋಧ ಪಕ್ಷಗಳ ಅಸಹಕಾರ ಮಧ್ಯೆಯೇ ಮೋದಿ ಆಡಳಿತಕ್ಕೆ ಜಾಗತಿಕ ಶಹಭಾಸ್‌ಗಿರಿ: ಜಗತ್ತಿನ ಜನಪ್ರಿಯ ನೇತಾರರಲ್ಲಿ ನಂ.1 ಸ್ಥಾನ
Next post Mood Of The Nation | ಕೋವಿಡ್‌ನಿಂದ 130 ಕೋಟಿ ಜನರಿಗೆ ರಕ್ಷಣೆ: ಪ್ರಧಾನಿ ಮೋದಿಗೆ ಭರ್ಜರಿ ಜನಬೆಂಬಲ

ಸುದ್ದಿ ಸಂಚಯ

ಇವುಗಳನ್ನೂ ನೋಡಿ