ಪುದುಚೇರಿ: ಪ್ರಧಾನಿ ಹುದ್ದೆಗೇರಲು ಇರುವ ಸಮರ್ಥ ಅಭ್ಯರ್ಥಿ ಎಂದು ಕಾಂಗ್ರೆಸಿಗರಿಂದ ಹೊಗಳಿಸಿಕೊಳ್ಳುತ್ತಿರುವ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಸಂಸತ್ತಿನ ಒಳಗೆ ಹಾಗೂ ಹೊರಗೆ ಪದೇ ಪದೇ ಮುಖಭಂಗಕ್ಕೀಡಾಗುತ್ತಿರುವುದು ಮುಂದುವರಿಯುತ್ತಲೇ ಇದೆ.
ಸಂಸತ್ತಿನಲ್ಲಿ, ಬಜೆಟ್ ಅಧಿವೇಶನದ ಕೊನೆಯಲ್ಲಿ ಬಜೆಟ್ ಬಗ್ಗೆ ಮಾತನಾಡುವುದೇ ಇಲ್ಲ, ರೈತರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಮೌನವಾಗಿ ಎದ್ದು ನಿಂತು, ಆತ್ಮನಿರ್ಭರ (ಸ್ವಾವಲಂಬಿ) ಭಾರತಕ್ಕೆ ಪೂರಕವಾದ ಬಜೆಟ್ಗೂ ಅವಮಾನ ಮಾಡಿದ್ದ ರಾಹುಲ್ ಗಾಂಧಿ, ರೈತರ ಪರವಾಗಿಯೇ ಇರುವ ಕೃಷಿ ಕಾಯ್ದೆಯಿಂದ ರೈತರಿಗೆ ಅನ್ಯಾಯವಾಗಿದೆ, ಅದನ್ನು ಹಿಂತೆಗೆದುಕೊಳ್ಳಲೇಬೇಕು ಎಂದು ಮತ್ತೆ ಮತ್ತೆ ಸುಳ್ಳು ಹೇಳಿದ್ದರು.
ಇದನ್ನೂ ಓದಿ: Farmer Protest: ಸುಳ್ಳು ಹೇಳಿ ರೈತರ ದಾರಿ ತಪ್ಪಿಸುತ್ತಿರುವ ರಾಹುಲ್, ಕೇಜ್ರಿವಾಲ್: ಸಾಕ್ಷ್ಯಾಧಾರ ಸಮೇತ ನೈಜಮುಖ ಬಟಾಬಯಲು
ಕಾಯ್ದೆಗಳಿಂದ ರೈತರಿಗೆ ಎಂಎಸ್ಪಿ ನಿಲ್ಲಿಸಲಾಗುತ್ತದೆ, ಅವರ ಜಮೀನನ್ನು ಹಾಗೂ ಉತ್ಪನ್ನಗಳನ್ನು ದೊಡ್ಡ ಉದ್ಯಮಿಗಳಿಗೆ ಒಪ್ಪಿಸಲಾಗುತ್ತದೆ ಎಂಬ ಆರೋಪಗಳಿಗೆ ‘ಹಾಗಿಲ್ಲವೇ ಇಲ್ಲ’ ಅಂತ ಕೇಂದ್ರ ಸರಕಾರವು ಬಾರಿ ಬಾರಿ ಸ್ಪಷ್ಟನೆ ನೀಡಿದ್ದರೂ ಮತ್ತೆ ಅದೇ ಆರೋಪಗಳನ್ನು ರಾಹುಲ್ ಗಾಂಧಿ ಸಣ್ಣ ಮಕ್ಕಳಂತೆ ಸಂಸತ್ತಿನಲ್ಲಿ ಮಾಡುತ್ತಲೇ ನಗೆಪಾಟಲಿಗೀಡಾಗಿದ್ದರು.
ಇದನ್ನೂ ಓದಿ: Tractor Rally | ದೆಹಲಿ ಪೊಲೀಸರ ತಾಳ್ಮೆಗೆ ಸಲಾಂ: ಹಿಂಸೆಯಲ್ಲಿ ತೊಡಗಿದವರು ರೈತರಲ್ಲ!
ಈಗ ಮತ್ತೊಮ್ಮೆ ನಗೆಪಾಟಲಿಗೀಡಾದ ಪ್ರಸಂಗ ಪುದುಚೇರಿಯಲ್ಲಿ. ಫೆ.17ರಂದು ಅಲ್ಲಿಗೆ ಹೋಗಿದ್ದ ರಾಹುಲ್ ಗಾಂಧಿ, ಮೀನುಗಾರರನ್ನು ಉದ್ದೇಶಿಸಿ ಮಾತನಾಡುತ್ತಾ, ‘ನೀವು ಸಮುದ್ರದ ರೈತರು’ ಅಂತ ಕರೆದು, ಕೇಂದ್ರದಲ್ಲಿ ನಿಮಗಾಗಿ ಮೀನುಗಾರಿಕಾ ಸಚಿವಾಲಯ ಆಗಬೇಕಿದೆ, ಅದನ್ನು ಮಾಡಿಕೊಡುವುದಾಗಿಯೂ ಭರವಸೆ ನೀಡಿದರು.
ವಿಷಯ ಏನೆಂದರೆ, ಮೀನುಗಾರಿಕಾ ಸಚಿವಾಲಯವು ಈಗಾಗಲೇ ಇದೆ. ಗಿರಿರಾಜ್ ಸಿಂಗ್ ಅವರು ಮೀನುಗಾರಿಕಾ ಇಲಾಖೆಯ ಸಚಿವರು. ಅದರ ಜೊತೆ ಪಶುಸಂಗೋಪನೆ ಮತ್ತು ಡೈರಿ ಇಲಾಖೆಯನ್ನೂ ನಿರ್ವಹಿಸುತ್ತಿದ್ದಾರೆ.
ಇದಕ್ಕೂ ದೊಡ್ಡ ವಿಶೇಷವೆಂದರೆ, ದಶಕಗಳ ಕಾಲ ಈ ದೇಶವಾಳಿದ್ದ ಕಾಂಗ್ರೆಸ್ ಸರಕಾರ ಮಾಡದೇ ಇರೋದನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಆದರೂ ಟೀಕಿಸಬೇಕೆಂಬ ಕಾರಣಕ್ಕಾಗಿ ಟೀಕೆ!
ಸ್ವತಃ ಅವರೇ ಟ್ವೀಟ್ ಮಾಡಿದ್ದು, ದೇಶದ ಚುಕ್ಕಾಣಿ ಹಿಡಿಯಲು ಹೊರಟಿರುವ ರಾಹುಲ್ ಗಾಂಧಿಯವರ ಅಜ್ಞಾನದ ಬಗ್ಗೆ ಸ್ಪಷ್ಟನೆ ನೀಡಬೇಕಾಯಿತು.
“2019ರ ಮೇ 31ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಬಾರಿ ಅಧಿಕಾರಕ್ಕೇರಿದ ತಕ್ಷಣ ಮೀನುಗಾರಿಕೆ ಸಚಿವಾಲಯವನ್ನು ಘೋಷಿಸಿದ್ದರೆಂಬ ಸತ್ಯವನ್ನು ರಾಹುಲ್ ಗಾಂಧಿ ಅರಿಯಬೇಕಿತ್ತು. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗಾಗಿ 20,500 ಕೋಟಿ ರೂ. ಕೂಡ ಮೀಸಲಿರಿಸಿದ್ದರು” ಎಂದು ಗಿರಿರಾಜ್ ಟ್ವೀಟ್ ಮಾಡಿದ್ದರು.
ಅಷ್ಟೇ ಅಲ್ಲ, “ರಾಹುಲ್ಜೀ, ಈ 20050 ಕೋಟಿ ರೂ. ಭಾರತ ಸ್ವಾತಂತ್ರ್ಯದ ನಂತರ 2014ರವರೆಗೆ (ಮೋದಿ ಅಧಿಕಾರಕ್ಕೆ ಬಂದಂದಿನಿಂದ) ಕೇಂದ್ರ ಸರ್ಕಾರವು ಖರ್ಚು ಮಾಡಿದ (3682 ಕೋಟಿ) ಹಣಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚು ಎಂಬುದನ್ನು ಮರೆಯಬೇಡಿ” ಎಂದೂ ನೆನಪಿಸಿದರು.
ವಿಶೇಷವೆಂದರೆ, ಫೆ.17ರಂದು ಮೀನುಗಾರರಿಗೆ ‘ನಿಮಗೊಂದು ಮೀನುಗಾರಿಕಾ ಸಚಿವಾಲಯ ರಚಿಸುವುದಾಗಿ’ ಭರವಸೆ ನೀಡಿದ್ದ ಇದೇ ರಾಹುಲ್ ಗಾಂಧಿ, 2021ರ ಫೆ.2ರಂದು ಸಂಸತ್ತಿನಲ್ಲಿ ಮೀನುಗಾರಿಕಾ ಇಲಾಖೆಗೆ ಪ್ರಶ್ನೆ ಕೇಳಿದ್ದರು! ಇದರ ದಾಖಲೆಯಿದೆ!
ಅದರಲ್ಲಿ, ಮೀನುಗಾರಿಕೆ ಮತ್ತು ಜಲಕೃಷಿಗೆ ಮೂಲಸೌಕರ್ಯ ಒದಗಿಸಲು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಳಿದ್ದರು.
ಇದನ್ನೂ ಓದಿ: ಕೋವಿಡ್ ಸಂಕಷ್ಟದ ನಡುವೆ ರೈತರ ವೃಥಾ ಪ್ರತಿಭಟನೆಯಿಂದ ದೇಶಕ್ಕೆ ಎಷ್ಟು ನಷ್ಟ ಗೊತ್ತೇ? 70 ಸಾವಿರ ಕೋಟಿ!
ಗಿರಿರಾಜ್ ಸಿಂಗ್ ಅವರಂತೂ ಇಟಲಿ ಭಾಷೆಯಲ್ಲೇ ಟ್ವೀಟ್ ಮಾಡಿ ರಾಹುಲ್ ಗಾಂಧಿಯನ್ನು ಗೇಲಿ ಮಾಡಿದರು
‘ಕರೋ ರಾವುಲ್’ ಅಂತ ರಾಹುಲ್ ಗಾಂಧಿಯನ್ನು ಕರೆದ ಗಿರಿರಾಜ್, “ಇಟಲಿಯಲ್ಲಂತೂ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಇಲ್ಲ. ಅಲ್ಲಿ ಅದಿರುವುದು ಕೃಷಿ ಮತ್ತು ಅರಣ್ಯ ನಿಯಮಗಳ ಅಡಿಯಲ್ಲಿ ಮಾತ್ರ” ಎಂದು ಹೇಳುತ್ತಾ, ಅಲ್ಲಿನ ವೆಬ್ ಸೈಟ್ ಲಿಂಕನ್ನೂ ಹಾಕಿದ್ದರು.
ನಂತರ ನೆಟ್ಟಿಗರು ರಾಹುಲ್ ಅಜ್ಞಾನದ ಬಗ್ಗೆ ಕಿಡಿ ಕಾರುತ್ತಲೇ ಹೋದರು.
ರಾಹುಲ್ ಅಂತೂ ನಮ್ಮನ್ನೆಂದಿಗೂ ನಿರಾಸೆಗೊಳಿಸುವುದಿಲ್ಲ ಎಂಬುದು ಮತ್ತೊಬ್ಬರ ಅಭಿಪ್ರಾಯ.
ಮತ್ತೊಮ್ಮೆ ನಗೆಪಾಟಲಿಗೀಡಾದ ರಾಹುಲ್ ಗಾಂಧಿಯವರ ಈ ವರ್ತನೆಯು ಸಂಸತ್ ಸದಸ್ಯರಾಗಿ ಅವರಿಗಿರುವ ಜ್ಞಾನದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ತಂದೊಡ್ಡಿದೆ. ಯಾಕೆಂದರೆ, ಅವರು ಕೇರಳದ ವಯನಾಡ್ ಸಂಸದ. ಅಲ್ಲಿಯಂತೂ ಮೀನುಗಾರಿಕೆಗೆ ಹೆಚ್ಚು ಪ್ರಾಶಸ್ತ್ಯವಿದೆ. ಸಚಿವಾಲಯ ಇದೆಯೆಂಬುದೇ ತಿಳಿಯದಿದ್ದರೆ ಕ್ಷೇತ್ರದ ಜನತೆಗೆ ಅವರು ಏನನ್ನು ಮಾಡಬಲ್ಲರು ಎಂಬುದು ಒಂದು ಶಂಕೆ.
ಅಲ್ಲದೆ, ಸಚಿವಾಲಯ ಇದೆ ಎಂಬುದೇ ಗೊತ್ತಿಲ್ಲದಿದ್ದರೆ ಅವರು ಅದೇ ಇಲಾಖೆಗೆ ಪ್ರಶ್ನೆ ಕೇಳಿದ್ದಾದರೂ ಹೇಗೆ? ಇದು ಮತ್ತೊಂದು ಪ್ರಶ್ನೆ.

Average Rating