Read Time:17 Minute, 15 Second

ಚೀನಾ ವೈರಸ್: ಈಗ ಇಂಡಿಯನ್ ವೈರಸ್ ಎನ್ನುತ್ತಾ, ಮೋದಿ, ಭಾರತದ ಹೆಸರಿಗೆ ಮಸಿ ಬಳಿಯುವ ಅಂತರರಾಷ್ಟ್ರೀಯ ಸಂಚು

0 0

* ಲಸಿಕೆಯಲ್ಲಿ ದುಡ್ಡು ಮಾಡುವ ಅಂತರರಾಷ್ಟ್ರೀಯ ಸಂಚು ವಿಫಲಗೊಳಿಸಿದ ಮೋದಿ

* ಪ್ರತಿಪಕ್ಷಗಳ ಅಸಹಕಾರದ ಮಧ್ಯೆ 140 ಕೋಟಿ ಜನರ ರಕ್ಷಣೆಗೆ ಏಕಾಂಗಿ ಹೋರಾಟ

* ಪ್ರತಿಯೊಂದಕ್ಕೂ ಮೋದಿ ಸರ್ಕಾರದ ಮೇಲೆ ಗೂಬೆ ಕೂರಿಸುವ ದುರುಳರ ಸಂಚು

* ವಿದೇಶೀ ಮಾಧ್ಯಮಗಳಿಗೆ ದಿನಕ್ಕೊಂದು ಭಾರತ ವಿರೋಧಿ ಲೇಖನ ಪ್ರಕಟ

* ಎಲ್ಲಾ ಸಮಸ್ಯೆಗಳಿಗೂ ಮೋದಿ ಮೇಲೆ ವ್ಯಕ್ತಗತ ಟಾರ್ಗೆಟ್ ಮಾಡುವ ವಿದೇಶೀ ಸಂಚು

ಈ ಕೋವಿಡ್-19 ಎಂಬ ಚೀನಾ ವೈರಸ್ ಇಡೀ ವಿಶ್ವವನ್ನು ವ್ಯಾಪಿಸಿರುವುದು ಹೌದಾದರೂ, ಇದರ ಹಿಂದೆ ಅಥವಾ ಇದರ ಜೊತೆಗೆ ಸೇರಿಕೊಂಡ ಷಡ್ಯಂತ್ರಗಳು ಮಾತ್ರ ತನ್ನ ದೇಶದ ಬಗ್ಗೆ ಅಭಿಮಾನ, ಹೆಮ್ಮೆಯುಳ್ಳ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುವಂತೆ ಮಾಡುತ್ತಿವೆ.

ಈ ಕೊರೊನಾ ಗಿರೋನಾ ಎಲ್ಲ ಏನೂ ಇಲ್ಲ. ಎಲ್ಲ ರಾಜಕಾರಣಿಗಳು ದುಡ್ಡು ಮಾಡಲು ಹೂಡಿರುವ ಹೂಟ ಅಂತ ಹಲವರು ಆಡಿಕೊಳ್ಳುತ್ತಿರುವುದನ್ನು ನಾವು ಕೇಳಿದ್ದೇವೆ. ಇದೆಲ್ಲ ಅಮೆರಿಕದ ತಂತ್ರ ಎಂಬ ಮಾತೂ ಕೇಳಿಬರುತ್ತಿದೆ. ಅದೆಲ್ಲಾ ಬಿಡಿ, ಇದು ಪ್ರಧಾನಿ ನರೇಂದ್ರ ಮೋದಿ ಅವರೇ ಸೃಷ್ಟಿಸಿರುವ ಪಿಡುಗು ಅಂತ ಇದೇ ಭಾರತದ ನೆಲವನ್ನೇ ಆಶ್ರಯಿಸುತ್ತಾ, ಪಾಕಿಸ್ತಾನ, ಚೀನಾ, ಇಟಲಿಗೆ ಒಳಗೊಳಗೇ ಜೈಕಾರ ಹಾಕುತ್ತಿರುವವರೇ ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿರುವುದನ್ನೂ ನೋಡುತ್ತಿದ್ದೇವೆ.

ಒಟ್ಟಾರೆಯಾಗಿ ಹೇಳುವುದಾದರೆ, ಇದರಲ್ಲಿ ಫಾರ್ಮಾ ಕಂಪನಿಗಳ ಲಾಬಿಯ ವಾದವನ್ನು ಅಲ್ಲಗಳೆಯಲಾಗುವುದಿಲ್ಲ. ಈ ಅಂಶ ಎಷ್ಟು ನಿಜವೋ, ಇದರ ಹಿಂದೆ ಚೀನಾದ ಕುತಂತ್ರವೊಂದು, ಅದಕ್ಕೆ ಪಾಕಿಸ್ತಾನದ ಗುಳ್ಳೆನರಿ ಬುದ್ಧಿಯೊಂದು ಇರುವುದು ಕೂಡ ಅಷ್ಟೇ ನಿಜ ಎಂಬಂತೆ ಭಾಸವಾಗುತ್ತಿದೆ. ಅದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯನ್ನು ಅಧಿಕಾರದಿಂದ ಇಳಿಸುವ ಅಥವಾ ಅವರ ಎಲ್ಲ ಒಳ್ಳೆಯ ಕಾರ್ಯಗಳಿಗೆ, ಭಾರತವನ್ನು ಭ್ರಷ್ಟರ ಕೈಯಿಂದ, ಸುತ್ತಮುತ್ತಲಿರುವ ಭಯೋತ್ಪಾದಕರ ಕೈಯಿಂದ ರಕ್ಷಿಸುವ ಕೈಂಕರ್ಯಕ್ಕೆ ಮಸಿ ಬಳಿಯುತ್ತಾ, 2024ರಲ್ಲಾದರೂ ಅವರನ್ನು ಸೋಲಿಸಲೇಬೇಕೆಂದು ಪಣ ತೊಟ್ಟಿರುವ ರಾಜಕೀಯ ಹುನ್ನಾರವೂ ಸೇರಿಕೊಂಡಿದೆ. ಬಹುಶಃ ಇದು ಸ್ವತಃ ಆಡಳಿತಾರೂಢ ಬಿಜೆಪಿಯ ಗಮನಕ್ಕೆ ಇನ್ನೂ ಬಂದಂತಿಲ್ಲ.

ಓದಲೇಬೇಕು: ಮೋದಿ ವಿರೋಧಿಗಳು ಓದಲೇಬೇಕು: 140 ಕೋಟಿ ಮಂದಿಯನ್ನು ಮೋದಿ ರಕ್ಷಿಸಿದ್ದು

ಕಾರಣ ಇಲ್ಲದಿಲ್ಲ. 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಂದಿನಿಂದ ದೇಶದಲ್ಲಿ ಒಂದು ವರ್ಗವು ಮೋದಿಯವರ ಪ್ರತಿಯೊಂದು ಕಾರ್ಯವನ್ನೂ, ಪ್ರತಿಯೊಂದು ಹೆಜ್ಜೆಯನ್ನೂ ಸೋಷಿಯಲ್ ಮೀಡಿಯಾದಲ್ಲಿ, ಮಾಧ್ಯಮಗಳಲ್ಲಿ ಟೀಕಿಸುತ್ತಾ ಬಂದಿದೆ. ದೇಶದಲ್ಲಿ ಏನೇ ಸಣ್ಣಪುಟ್ಟ ಘಟನೆ ನಡೆದರೂ (ಸಣ್ಣಪುಟ್ಟ ಎಂಬ ಪದ ಪ್ರಯೋಗ ಯಾಕೆಂದರೆ, ವಿಷಯ ಆಯಾ ಊರಿಗೆ ದೊಡ್ಡದೇ ಆಗಿರುತ್ತದೆ. ಆದರೆ, ಅಂಥ ಅತ್ಯಾಚಾರ, ಕೊಲೆ, ಸುಲಿಗೆ, ಭ್ರಷ್ಟಾಚಾರ, ದರೋಡೆ, ವಂಚನೆ – ಇವೆಲ್ಲವೂ ಮೋದಿ ಬರುವುದಕ್ಕಿಂತ ಮೊದಲು ಹೆಚ್ಚೇ ಆಗುತ್ತಿದ್ದವು ಆದರೆ ಸುದ್ದಿಯಾಗುತ್ತಿರಲಿಲ್ಲ, ಈ ಕಾರಣಕ್ಕೆ). ಇಂಥ ‘ಸಣ್ಣಪುಟ್ಟ’ ಘಟನೆಗಳಿಗೆ ಬಣ್ಣ ಹಚ್ಚಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದಾಗುವಂತೆ ನೋಡಿಕೊಳ್ಳುವ ಸೋಷಿಯಲ್ ಮೀಡಿಯಾ ತಂಡವೇ ಹುಟ್ಟಿಕೊಂಡಿದೆ.

ದೇಶದಲ್ಲಿ ಎಲ್ಲೇ ಏನೇ ಆದರೂ, ಅದಕ್ಕೆ ಕೋಮು ಬಣ್ಣ ಅಥವಾ ದಲಿತ ಬಣ್ಣ ಹಚ್ಚಿ, ನರೇಂದ್ರ ಮೋದಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಲೇ ಇದೆ. ಇದೇ ಕಾರಣಕ್ಕೆ, ಗುಜರಾತ್‌ನ ಗೋಧ್ರಾದಲ್ಲಿ ಅಮಾಯಕ ಹಿಂದುಗಳನ್ನು ಬೆಂಕಿಹಚ್ಚಿ ಸುಟ್ಟ ಘೋರ ಪಾತಕವು ಸುದ್ದಿಯಾಗಲೇ ಇಲ್ಲ. ಸುಖಾ ಸುಮ್ಮನೇ ಕೊಂದವರ ವಿರುದ್ಧ ಹಿಂದುಗಳು ಆಕ್ರೋಶದಿಂದ ದಾಳಿ ಮಾಡಿದ್ದಷ್ಟೇ ಸುದ್ದಿಯಾಯಿತು ಮತ್ತು ಅದನ್ನೇ ಮುಂದಿಟ್ಟುಕೊಂಡು ಮೋದಿಯನ್ನು ಗುರಿ ಮಾಡಲಾಯಿತು. ಇದಕ್ಕೆ ನರೇಂದ್ರ ಮೋದಿಯವರದು ಮೌನದಲ್ಲೇ ಉತ್ತರ. ಅತ್ಯುತ್ತಮ ಆಡಳಿತ ನೀಡುತ್ತಲೇ, ಎದುರಾಳಿಗಳ ಬಾಯಿ ಮುಚ್ಚಿಸಿದರು.

ಭಾರತೀಯ ಬುದ್ಧಿಜೀವಿಗಳ ಷಡ್ಯಂತ್ರದಿಂದಾಗಿ ಅಮೆರಿಕವೇ ಮೋದಿಗೆ ವೀಸಾ ನಿರಾಕರಿಸಿತ್ತು. ಆದರೆ, ಮೋದಿ ಸ್ವತಃ ಅಮೆರಿಕವೇ ಬಂಗಾರದ ಬಟ್ಟಲಲ್ಲಿ ವೀಸಾ ನೀಡುವಂತೆ ಮಾಡಿದ್ದು ದರ್ಪದಿಂದಲ್ಲ, ದುರಹಂಕಾರದಿಂದಲ್ಲ, ಅಥವಾ ಯಾವುದೇ ಕುತಂತ್ರದಿಂದಲ್ಲ. ಬದಲಾಗಿ, ಅಮೆರಿಕವೇ ಮೋದಿಯವರ ನಾಯಕತ್ವವನ್ನು ಒಪ್ಪಿಕೊಂಡಿತು. ಇದು ಬುದ್ಧಿಜೀವಿಗಳಿಗೆ ಅರಗಿಸಿಕೊಳ್ಳಲಾಗದ ಸತ್ಯ.

ಟೂಲ್ ಕಿಟ್ ಬಯಲಾಗಿದ್ದು ನೆನಪಿದೆಯೇ? ಓದಿ: ಭಾರತದ ವಿರುದ್ಧದ ಅಂತರರಾಷ್ಟ್ರೀಯ ಸಂಚು ಬೆಳಕಿಗೆ ತಂದ ಟೂಲ್ ಕಿಟ್‌ನಲ್ಲಿ ಏನಿತ್ತು, ಗೊತ್ತೇ?

ಈಗ ನೋಡಿ, ಆಕ್ಸಿಜನ್ ಕೊರತೆಯ ವಿಷಯವನ್ನೇ ತೆಗೆದುಕೊಂಡರೆ, ಎಲ್ಲರೂ ಪ್ರಧಾನಿಗೇ ಬಯ್ಯುವವರು. ಕಾಂಗ್ರೆಸ್ ಆಡಳಿತದ ರಾಜ್ಯಗಳು, ಕಾಂಗ್ರೆಸ್ ಮುಖಂಡರು ನೇರವಾಗಿ ಮೋದಿಯವರನ್ನೇ ತಪ್ಪಿತಸ್ಥ ಎಂದು ಆರೋಪ ಮಾಡುತ್ತಾ, ಅವರ ಹೆಸರಿಗೆ ಮಸಿ ಬಳಿಯುತ್ತಲೇ ಬಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಜಯ ಸಾಧಿಸಿ, ಮಮತಾ ಬ್ಯಾನರ್ಜಿಗೆ ಸವಾಲೊಡ್ಡಿದ ಬಿಜೆಪಿಯ ಕಾರ್ಯಕರ್ತರನ್ನೆಲ್ಲಾ ಹುಡುಕಿ ಚಚ್ಚಲಾಗುತ್ತಿದ್ದರೆ, ಇದಕ್ಕೂ ಮೋದಿ ಕಾರಣ ಎಂದು ಬಿಂಬಿಸುವ ಪ್ರಯತ್ನವೂ ನಡೆಯುತ್ತಿದೆ. ಅಲ್ಲಿ ಬಿಜೆಪಿ ಕಾರ್ಯಕರ್ತರು ಭೀತಿಯಿಂದ ಪಲಾಯನ ಮಾಡಿ ಅಸ್ಸಾಂ ಮೊರೆ ಹೋಗುತ್ತಿದ್ದಾರೆ ಎಂದರೆ, ಪಶ್ಚಿಮ ಬಂಗಾಳದಲ್ಲಿ ಭಾರತ ವಿರೋಧಿಗಳ ಪಡೆ ಯಾವ ಮಟ್ಟದಲ್ಲಿ ಕೆಲಸ ಮಾಡುತ್ತಿದೆ ಎಂಬುದು ವೇದ್ಯವಾಗುತ್ತದೆ.

ಈ ವೈರಸ್ಸು ಚೀನಾದ ವುಹಾನ್ ಲ್ಯಾಬ್‌ನಿಂದಲೇ ಬಂತೆಂಬುದಕ್ಕೆ ಸಾಕಷ್ಟು ವಿಜ್ಞಾನಿಗಳು ಪುರಾವೆಗಳನ್ನು ಮುಂದಿಟ್ಟರು. ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾಗಿದ್ದಾಗ ಈ ಬಗ್ಗೆ ತನಿಖೆ ನಡೆಸುವುದು ಶತಃಸಿದ್ಧ ಎಂದು ಘೋಷಿಸಿದರು. ಜಾಗತಿಕ ಬುದ್ಧಿಜೀವಿಗಳಿಗೆ ಭಯ ಶುರುವಾಗಿತ್ತು. ಇದೇ ಕಾರಣಕ್ಕಾಗಿ, ಹೂಟ ಹೂಡಿ, ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುವಂತೆ, ಅವರು ಪುನಃ ಆಯ್ಕೆ ಆಗದಂತೆ ನೋಡಿಕೊಂಡರು.

ಪರಿಣಾಮವಾಗಿ ಜೋ ಬೈಡೆನ್ ಅಧಿಕಾರಕ್ಕೇರಿದರು. ಚೀನಾ ವಿರುದ್ಧ ಯಾವುದೇ ಗಟ್ಟಿ ಧ್ವನಿ ಇಲ್ಲ. ಭಾರತವು ತನಗೆ ನೆರವು ನೀಡಿದ್ದಕ್ಕಾಗಿ ಅನಿವಾರ್ಯವೆಂಬಂತೆ, ಉಳಿದ ದೇಶಗಳೆಲ್ಲಾ ನೀಡುವಾಗ ಈಗಿನ ಸಂಕಷ್ಟ ಪರಿಸ್ಥಿತಿಯಲ್ಲಿ ಭಾರತಕ್ಕೇನೋ ಸಹಾಯ ಮಾಡಿದ್ದಾರಷ್ಟೇ.

ಲಸಿಕೆ ಲಾಬಿಯಿಂದ ಮೋದಿ ರಕ್ಷಣೆ
ಮೋದಿ ಅವರು ಚೀನಾ ಸೇರಿದಂತೆ ವಿದೇಶೀ ಲಸಿಕೆ ಕಂಪನಿಗಳಿಗೆ ಭಾರತದಲ್ಲಿ ಹಣ ಮಾಡುವುದಕ್ಕೆ ಅವಕಾಶವೇ ಕೊಡಲಿಲ್ಲ. ಭಾರತದ್ದೇ ಲಸಿಕೆ ತಯಾರಿಕೆ ಕಂಪನಿಗಳನ್ನು ಉತ್ತೇಜಿಸಿ, ವಿದೇಶಗಳಿಗೂ ಹಂಚಿದರು. ಇದರಿಂದಾಗಿ ಮಹಾಮಾರಿಯ ಸಂದರ್ಭದಲ್ಲಿ ಭಾರತದ ಆರ್ಥಿಕತೆಗೆ ಕೊಂಚ ಲಾಭವಾಯಿತು. ವಿದೇಶೀ ಲಸಿಕೆ ಕಂಪನಿಗಳು ಭಾರತದ 140 ಕೋಟಿ ಜನಸಂಖ್ಯೆಯಿಂದ ಭರ್ಜರಿ ಲಾಭ ಮಾಡಿಕೊಳ್ಳಬಹುದೆಂದು ಬಾಯಲ್ಲಿ ನೀರು ಸುರಿಸುತ್ತಿದ್ದವು. ಇದೀಗ ಮೋದಿ ಕೊಟ್ಟ ಹೊಡೆತವು ಈ ಭಾರತ ವಿರೋಧಿ ಲಾಬಿಯನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.

ಚೀನಾದ ಹೆಸರಿಲ್ಲ, ಈಗ ಭಾರತದ ತಳಿ ಎಂಬ ಮಸಿ ಬಳಿಯುವ ಯತ್ನ
ಚೀನಾದ ವೈರಸ್ ಈಗ ಚೀನಾದಲ್ಲಿ ಕಾಟ ಕಡಿಮೆ ಮಾಡಿದೆ. ಆದರೆ, ನೀವು ಗಮನಿಸಿರಬಹುದು. ನಿಧಾನವಾಗಿ ಇದು ಭಾರತದ ತಳಿ ಎಂದು ಭಾರತದ ಹೆಸರಿಗೂ ಮಸಿ ಬಳಿಯುವ ಕಾರ್ಯ ಆರಂಭವಾಗಿದೆ. ಕೋವಿಡ್-19 ಮೊದಲು ಕಾಣಿಸಿಕೊಂಡಾಗ, ಅದು ಚೀನಾದ ವೈರಸ್ ಎಂಬಂತೆ ಬಿಂಬಿಸಬಾರದು ಎಂಬ ಬಗ್ಗೆ ಎಲ್ಲರೂ, ವಿಶೇಷವಾಗಿ ಭಾರತದೊಳಗಿರುವ ಭಾರತ ವಿರೋಧಿಗಳು ಕೂಡ ಸಾಕಷ್ಟು ಎಚ್ಚರಿಕೆ ವಹಿಸಿದರು. ಆದರೆ, ಈಗ ಇದು ಭಾರತದ ರೂಪಾಂತರಿ ತಳಿ ಎಂದು ಖುಷಿಯಿಂದಲೇ ಬಿಂಬಿಸುತ್ತಿದ್ದಾರೆ ಈ ದೇಶದ್ರೋಹಿಗಳು.

ಭಾರತದ ಹೆಸರಿಗೆ ಮಸಿ ಬಳಿಯುವ ಪ್ರತಿಯೊಂದು ಕ್ರಮವನ್ನೂ ದೇಶ-ವಿದೇಶದಲ್ಲಿ ಬೆಂಬಲಿಸುತ್ತಿರುವ ಭಾರತದೊಳಗಿನ ದ್ರೋಹಿಗಳು, ಕೋವಿಡ್ ಸಂಬಂಧಿತ ಎಲ್ಲ ಸಮಸ್ಯೆಗಳಿಗೆ ಪ್ರಧಾನಿ ನರೇಂದ್ರ ಮೋದಿಯ ಹೆಸರನ್ನು, ಕೇಂದ್ರ ಸರ್ಕಾರದ ಹೆಸರನ್ನು ಅಥವಾ ಬಿಜೆಪಿ ಆಡಳಿತವಿರುವ ರಾಜ್ಯಗಳ ಹೆಸರನ್ನೇ ಎಳೆದು ತರುತ್ತಿದ್ದಾರೆ. ಆದರೆ, ಕಾಂಗ್ರೆಸ್, ಎಡಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿನ ಹೀನಾಯ ಸ್ಥಿತಿಯನ್ನು ಮುಚ್ಚಿಡುತ್ತಾ ಅಥವಾ ತಿರುಚುತ್ತಾ ಅಲ್ಲಿನ ಧನಾತ್ಮಕ ಸುದ್ದಿಗಳನ್ನು ಮಾತ್ರವೇ ಬಿಂಬಿಸುತ್ತಿವೆ.

ಇವೆಲ್ಲ ದುರುಳದ ಏಕಮಾತ್ರ ಟಾರ್ಗೆಟ್ ನರೇಂದ್ರ ಮೋದಿ. ಅವರನ್ನು ಕೆಳಗಿಳಿಸುವ ಏಕಮಾತ್ರ ಉದ್ದೇಶದ ಅಂತರರಾಷ್ಟ್ರೀಯ ಸಂಚು ಎಂಬ ಶಂಕೆಯಂತೂ ಈಗ ನಿಜ ಭಾರತೀಯರಲ್ಲಿ ಉಂಟಾಗತೊಡಗಿದೆ. ಆದರೆ, ಗಟ್ಟಿಗರಾದ ಪ್ರಧಾನಿ ನರೇಂದ್ರ ಮೋದಿ, ಕಾಯಕವೇ ಕೈಲಾಸ ಎಂಬಂತೆ, ದೇಶದ ಪ್ರಜೆಗಳನ್ನು ಚೀನಾದ ವೈರಸ್‌ನಿಂದ ರಕ್ಷಿಸಲು ಟೊಂಕ ಕಟ್ಟಿ, ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ.

ವೈವಿಧ್ಯಮಯ ಪ್ರಧಾನಿಗಳಿರುವ ಹತ್ತಾರು ದೇಶಗಳನ್ನೆಲ್ಲ ಸೇರಿಸಿದರೂ ಭಾರತದ ಜನಸಂಖ್ಯೆಯನ್ನು ಸರಿಗಟ್ಟಲಾಗದು. ಆದರೆ, 140 ಕೋಟಿ ಜನರನ್ನು ಒಬ್ಬರೇ ಪ್ರಧಾನಿ ನಿಭಾಯಿಸಬೇಕಿದೆ ಎಂಬುದು ನೆನಪಿರಲಿ. ಭಾರತದ ಜನಸಂಖ್ಯೆಯನ್ನು ನೋಡಿದರೆ, ಸಾವಿನ ಸಂಖ್ಯೆಯಾಗಲೀ, ಸೋಂಕಿತರ ಸಂಖ್ಯೆಯಾಗಲೀ ಕಡಿಮೆಯೇ. ಇದಕ್ಕೆ ಕಾರಣ, ಸೋಂಕಿತರು ‘ನನಗೇನೂ ಇಲ್ಲ, ಚೆನ್ನಾಗಿದ್ದೇನೆ’ ಎನ್ನುತ್ತಾ ಊರಿಡೀ ಓಡಾಡುವುದು ಮತ್ತು ಸೋಂಕು ಹರಡುವುದು. ಇಂಥ ಹಲವಾರು ಜನಗಳ ಬೇಜವಾಬ್ದಾರಿಯಿಂದಲೇ ವೈರಸ್ ಈ ಪರಿಯಾಗಿ ಹರಡುತ್ತಿದೆ ಎಂಬುದನ್ನು ಗಮನಿಸಬೇಕು. ಇದಕ್ಕೂ ಪ್ರಧಾನಿ ಮೋದಿಯನ್ನೇ ದೂರುವುದು ಎಷ್ಟು ಸರಿ?

ನಮ್ಮ ಬೇಜವಾಬ್ದಾರಿಗೆ, ಮೋದಿಯೇ ಮದ್ದರೆಯುತ್ತಾರೆ ಎಂದು ಕಾದು ಕುಳಿತುಕೊಳ್ಳುವುದೆಷ್ಟು ಸರಿ? ಗಂಡು ಗುಂಡಿಗೆಯ ನರೇಂದ್ರ ಮೋದಿಗೆ ವಿರೋಧ ಪಕ್ಷಗಳು ಒಂದು ಎಳ್ಳಿನಷ್ಟೂ ಸಹಕಾರ ನೀಡುತ್ತಿಲ್ಲ. ಸಾಲದ್ದಕ್ಕೆ, ಈ ದೇಶದ, ಮೋದಿಯ ಮರ್ಯಾದೆ ಹರಾಜು ಹಾಕುವ, ಋಣಾತ್ಮಕ ಸುದ್ದಿಗಳನ್ನೇ ದೊಡ್ಡದಾಗಿ ಬಿಂಬಿಸುತ್ತಾ ಭಾರತದ ಹೆಸರಿಗೆ ಮಸಿ ಬಳಿಯುವ ಕಾರ್ಯದಲ್ಲೇ ವ್ಯಸ್ತವಾಗಿವೆ. ಇಂಥ ಸಂದರ್ಭದಲ್ಲಿ, ಈ ದೇಶವನ್ನು ರಕ್ಷಿಸುವುದಕ್ಕಾಗಿ, ಭಾರತಾಂಬೆಯ ಹೆಸರಿಗೆ ಮಸಿ ಬಳಿಯುತ್ತಿರುವ ದುರುಳರಿಂದ ಕಾಪಾಡುವುದಕ್ಕಾಗಿ ಗಂಡೆದೆಯ ಗಂಡುಗಲಿ ನರೇಂದ್ರ ಮೋದಿ ಅವರಿಗೆ ನಿಮ್ಮ ಬೆಂಬಲವಿದೆಯಲ್ಲವೇ?

ನರೇಂದ್ರ ಮೋದಿ ಅವರು ಭಾರತ ಮಾತೆಯ ಸೇವೆಗೆ ಆಯ್ಕೆಯಾಗಿದ್ದೇ, ಈ ದೇಶವನ್ನು ಚೀನಾದ ಕುತಂತ್ರದಿಂದ, ಪಾಶ್ಚಾತ್ಯ ಶಕ್ತಿಗಳ ಕಪಿಮುಷ್ಟಿಯಿಂದ ರಕ್ಷಿಸುವುದಕ್ಕಾಗಿ ಎಂಬುದು ನೆನಪಿರಲಿ. ಹಿಂದು-ಮುಸ್ಲಿಮರು ಸೌಹಾರ್ದದಿಂದ ಬಾಳುತ್ತಿದ್ದರೂ, ಅವರ ನಡುವೆ ಕಂದರ ಸೃಷ್ಟಿಸಿ, ನರೇಂದ್ರ ಮೋದಿಯನ್ನು ಕಟ್ಟರ್ ಹಿಂದುತ್ವವಾದಿ, ಮುಸ್ಲಿಮ್ ವಿರೋಧಿ ಅಂತೆಲ್ಲ ಬಿಂಬಿಸಲಾಗುತ್ತಿದೆ. ಸಿಎಎ ವಿರುದ್ಧದ ಅನಗತ್ಯ ಹೋರಾಟ, ರೈತರ ಹಿತಕ್ಕಾಗಿಯೇ ಮಾಡಿದ ಕಾಯ್ದೆ ವಿರುದ್ಧವೂ ಹೋರಾಟ ಏರ್ಪಡಿಸಿದ್ದು, ಇದಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗಿದೆ. ಪಾಪದ ರೈತರಿಗಾಗಲೀ, ಬೀದಿ ಹೋರಾಟಗಾರರಿಗಾಗಲೀ ಹಣ ಎಲ್ಲಿಂದ? ಇವೆಲ್ಲವೂ ಮೋದಿ ವಿರುದ್ಧದ ಸಂಚಿನ ಭಾಗವಾಗಿತ್ತು. ಇದಕ್ಕೆ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳ ಬಲವಾದ ಬೆಂಬಲವೂ ಇತ್ತು.

ನೀವೇ ಗಮನಿಸಿರಬಹುದು. ಕೆಲವೇ ಕೆಲವು ದಾರಿ ತಪ್ಪಿದ ಮುಸಲ್ಮಾನರು ಭಯೋತ್ಪಾದನೆಯಲ್ಲೋ ಅಥವಾ ಕಳ್ಳತನ, ಕೊಲೆ, ಸುಲಿಗೆಗಳಲ್ಲೋ ಸಿಕ್ಕಿಬಿದ್ದಾಗ, ಅಂಥವರಿಗೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಬೆಂಬಲಕ್ಕೆ ನಿಂತು, ಇದು ಭಾರತದಲ್ಲಿನ ‘ಕೋಮು ದ್ವೇಷ’ ಎಂದೆಲ್ಲ ಬಿಂಬಿಸುತ್ತಾ, ವಿಷ ಬೀಜ ಹರಡಲಾಗುತ್ತಿದೆ. ಇಂಥವರ ಬೆಂಬಲಕ್ಕೆ ದೇಶ-ವಿದೇಶದ ಮಾಧ್ಯಮಗಳೂ ನಿಲ್ಲುತ್ತವೆ, ಧ್ವನಿಯಾಗುತ್ತವೆ. ಬಿಬಿಸಿ, ಗಾರ್ಡಿಯನ್, ನ್ಯೂಯಾರ್ಕ್ ಟೈಮ್ಸ್ ಮುಂತಾದವುಗಳಲ್ಲೆಲ್ಲಾ ಭಾರತದ ಅನ್ನ ತಿಂದು, ಭಾರತದ ವಿರುದ್ಧವೇ ಬರೆಯುತ್ತಿರುವ, ದೇಶದ ಮಾನ ಹರಾಜು ಹಾಕುತ್ತಿರುವ ಪತ್ರಕರ್ತರು ತುಂಬಿಕೊಂಡು, ದಿನಕ್ಕೊಂದು ನೆಗೆಟಿವ್ ವರದಿ ಪ್ರಕಟವಾಗುವಂತೆ ನೋಡಿಕೊಳ್ಳುತ್ತಾರೆ. ಇವರಿಗೆ ನಮ್ಮ ದೇಶದೊಳಗಿನವರ ಬಲವಾದ ಬೆಂಬಲವಿದೆ. ಇದೆಲ್ಲ ಏನನ್ನು ತೋರಿಸುತ್ತದೆ? ನಮ್ಮ ದೇಶ ಅಪಾಯದಲ್ಲಿದೆ.

ಬದಲಾಗಿ, ಕೋವಿಡ್‌ನಿಂದ ಮೃತಪಟ್ಟ ಹಿಂದುಗಳನ್ನು ಕೇಳುವವರೇ ಇಲ್ಲ, ಈಗಾಗಲೇ ಹತ್ತು ಹಲವು ಪ್ರಕರಣಗಳಲ್ಲಿ ಸಿಕ್ಕಿಬಿದ್ದಿರುವ ಪಿಎಫ್ಐ, ಎಸ್‌ಡಿಪಿಐ ಮುಂತಾದ ಮುಸ್ಲಿಂ ಸಂಘಟನೆಗಳು ಅವರ ಅಂತ್ಯ ಸಂಸ್ಕಾರ ಮಾಡುತ್ತಿವೆ ಎಂಬ ಸುದ್ದಿಗಳನ್ನು ಅಂತರರಾಷ್ಟ್ಪೀಯ ಮಟ್ಟಕ್ಕೇರಿಸಲಾಗುತ್ತಿದೆ. ಅಲ್ಲಿನ ವಾಸ್ತವ ಸ್ಥಿತಿ? ಹಿಂದು ಸತ್ತ ಕೂಡಲೇ, ‘ನಮ್ಮವರು ಬರಲಿ’ ಎಂಬ ಆದೇಶವೊಂದು ಹೋಗುತ್ತದೆ. ಇವರು ತಮ್ಮ ಸಂಘಟನೆಯ ಟಿ-ಶರ್ಟ್ ಧರಿಸಿ ಬರುತ್ತಾರೆ. ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡುವುದನ್ನು ವಿಡಿಯೊ ಮಾಡಿ ಹರಿಬಿಡಲಾಗುತ್ತದೆ. ಅಲ್ಲಿಗೆ, ಅವರ ಉದ್ದೇಶ ಈಡೇರಿತು. ದೇಶದ ವಿರುದ್ಧ ಈ ಸಂಘಟನೆಗಳು ಮಾಡುತ್ತಿರುವ ಕೃತ್ಯಗಳಿಂದಾಗಿ ಅವುಗಳಿಗೆ ಭಾರತವೇ ನಿಷೇಧ ಹೇರುವ ಸಿದ್ಧತೆಯಲ್ಲಿರುವಾಗ ಈ ಸಂಘಟನೆಗಳು, ತಾವು ಸಾಚಾ ಅಂತ ಅಂತರರಾಷ್ಟ್ರೀಯ ಮಾಧ್ಯಮಗಳೆದುರು ಬಿಂಬಿಸಲು ವೇದಿಕೆಯನ್ನಾಗಿಸಿಕೊಳ್ಳುತ್ತಿವೆ ಈ ಚಿತೆಗಳನ್ನು. ಇದು ಕೂಡ ಚಿತಾ ರಾಜಕೀಯ. ಪರಿಸ್ಥಿತಿ ಚಿಂತಾಜನಕವಾಗಿದೆ, ಪ್ರತಿಯೊಬ್ಬ ನಿಜ ಭಾರತೀಯನೂ ಎಚ್ಚೆತ್ತುಕೊಳ್ಳಲು ಇದು ಸಕಾಲ.

ಏನೇ ಕೋಮು ಗಲಭೆ ನಡೆದರೂ, ಭಾರತದ ಆಡಳಿತ ಸರಿ ಇಲ್ಲ, ಅಂದರೆ ನರೇಂದ್ರ ಮೋದಿ ಸರಿ ಇಲ್ಲ ಎಂದೇ ಬಿಂಬಿಸಲಾಗುತ್ತಿದೆ. ಸೌಹಾರ್ದದ ನಾಡಿನಲ್ಲಿ ವೃಥಾ ಅಸಹಿಷ್ಣುತೆಯ ವಿಷ ಬೀಜ ಬಿತ್ತಲಾಗುತ್ತಿದೆ. ಈ ಮೂಲಕ, ಮೋದಿಯನ್ನು ಕೆಳಗಿಳಿಸಿ, ದೇಶವನ್ನು ಮತ್ತೆ ಭ್ರಷ್ಟಾಚಾರದ ಕೂಪವನ್ನಾಗಿಸಿ, ತಮಗೆ, ತಮ್ಮವರಿಗಷ್ಟೇ ಈ ದೇಶದ ಅಧಿಕಾರವೂ, ಈ ದೇಶದ ಸಂಪತ್ತೂ ಸೀಮಿತ ಎಂಬ ಹುನ್ನಾರವೊಂದು ಸದ್ದಿಲ್ಲದೇ ನಡೆಯುತ್ತಿದೆ. ಇದಕ್ಕೆ ನಿಜ ಭಾರತೀಯರು ಬಲಿಯಾಗಬಾರದು.

ನಮ್ಮ ದೇಶ, ನಮ್ಮ ಹೆಮ್ಮೆ. ಭಾರತ ಮಾತೆಯ ಮಕ್ಕಳು ನಾವಿಂದು ದೇಶದ ರಕ್ಷಣೆಗಾಗಿ ಟೊಂಕ ಕಟ್ಟಿರುವ ಮೋದಿಗೆ ಬೆಂಬಲವಾಗಿ ನಿಲ್ಲಬೇಕಾಗಿದೆ. ಈತ ನಿಸ್ವಾರ್ಥಿಯಾಗಿ, ಏಕಾಂಗಿಯಾಗಿ ಹೋರಾಡುತ್ತಿದ್ದಾನೆ. ಈತನ ವಿರುದ್ಧ ದೇಶದೊಳಗಿನ ಕ್ಷುದ್ರ ಜೀವಿಗಳು, ವಿದೇಶೀ ದುರುಳರೊಂದಿಗೆ ರಹಸ್ಯವಾಗಿ ಕೈ ಜೋಡಿಸಿದ್ದಾರೆ. ಬನ್ನಿ, ದೇಶ ರಕ್ಷಣೆಗೆ ಮುಂದಾಗೋಣ. ವಿದೇಶೀ ದುರುಳರ ಆಟಕ್ಕೆ ನಾವು ಕೈಗೊಂಬೆಯಾಗುವುದು ಬೇಡ. ನಮ್ಮ ದೇಶದ ಒಳಿತಿಗಾಗಿ ಕೈಗೊಳ್ಳುವ ಯಾವುದೇ ನಿರ್ಧಾರವನ್ನೂ ಸ್ವಾಗತಿಸೋಣ. ಕೇಂದ್ರ ಸರ್ಕಾರಕ್ಕೆ ಬೆಂಬಲಿಸೋಣ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಕೇಂದ್ರ ಸಚಿವರ ಮೇಲೂ ಟಿಎಂಸಿ ಗೂಂಡಾಗಳಿಂದ ದಾಳಿ
Next post ಸಂಕಷ್ಟ ಕಾಲದಲ್ಲಿ ಭಾರತೀಯರನ್ನು ಭ್ರಷ್ಟ ಭಾರತೀಯರೇ ಕೊಲ್ಲುತ್ತಿದ್ದಾರೆ!

ಸುದ್ದಿ ಸಂಚಯ

ಇವುಗಳನ್ನೂ ನೋಡಿ