Read Time:10 Minute, 34 Second

ಕೊರೊನಾ ಸಾವಿನ ಸಂಖ್ಯೆ ಹೆಚ್ಚಳಕ್ಕೆ ‘ಲಸಿಕೆ ಬಗ್ಗೆ ಭೀತಿ ಬಿತ್ತಿದ ಕಾಂಗ್ರೆಸ್ ಕಾರಣ’ ಅಂತ ಹೇಳಿದ್ದೇಕೆ ಬಿಜೆಪಿ?

0 0

ನವದೆಹಲಿ: ಕೊರೊನಾಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ತೆಗೆದುಕೊಳ್ಳಲಾಗುವ ಲಸಿಕೆಗೆ ಭಾರತದಲ್ಲಿ ನರೇಂದ್ರ ಮೋದಿ ಸರ್ಕಾರ ಅನುಮತಿ ನೀಡಿದಾಗಲೇ ವಿರೋಧ ಪಕ್ಷಗಳು, ಚೀನಾ ಪರವಾಗಿರುವ ಕಮ್ಯುನಿಸ್ಟರ ಕಣ್ಣು ಕೆಂಪಗಾಗಿತ್ತು. ಇದಕ್ಕೆ ಕಾರಣವೆಂದರೆ, ಚೀನಾದ ಲಸಿಕೆಗೆ ಅವಕಾಶ ನೀಡಿದರೆ ಆ ದೇಶದ ಆರ್ಥಿಕತೆ ಉದ್ಧಾರವಾಗುತ್ತದೆ, ಭಾರತದ್ದೇ ಲಸಿಕೆ ಬಂದರೆ, ಅದಕ್ಕೆ ಅವಕಾಶವಿರುವುದಿಲ್ಲ ಎಂಬ ದೂರಾಲೋಚನೆ ಎಂದು ಹಲವು ಬಿಜೆಪಿ ಮುಖಂಡರು ಈಗಾಗಲೇ ಹೇಳಿದ್ದಾರೆ. ಇದಕ್ಕೆ ಕಾರಣವೇನು?

ವಿಶೇಷವೆಂದರೆ, ಉತ್ತರ ಪ್ರದೇಶದಲ್ಲಿ ವಿರೋಧ ಪಕ್ಷ ಬಿಎಸ್ಪಿ ನಾಯಕಿ ಮಾಯಾವತಿ ಅವರಂತೂ ವಿಜ್ಞಾನಿಗಳ ಸಾಧನೆಗೆ ಜೈ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರಂತೂ ಕೋವಿಡ್ ವಿರುದ್ಧ ಅಸ್ತ್ರ ಸಿಕ್ಕ ಬಗ್ಗೆ ಆನಂದದಿಂದ ಜೈ ಎಂದಿದ್ದರು.

ಆದರೆ…

2021ರ ಜನವರಿ 3ರ ಈ ವರದಿ ನೋಡಿ. ಕೋವಿಡ್-19ಕ್ಕೆ ಲಸಿಕೆ ತಯಾರಿಸುವ ಭಾರತ್ ಬಯೋಟೆಕ್ ಎಂಬ ಸ್ವದೇಶೀ ಕಂಪನಿಗೆ ಅನುಮೋದನೆ ನೀಡಿದ್ದನ್ನು ಇದೇ ಕಾಂಗ್ರೆಸ್ ಘಟಾನುಘಟಿ ನಾಯಕರು ನರೇಂದ್ರ ಮೋದಿ ವಿರುದ್ಧ ಕೆಂಡ ಕಾರುವ ಏಕೈಕ ಉದ್ದೇಶದಿಂದ ಪ್ರಶ್ನಿಸಿದ್ದರು. ಅಂದಿನಿಂದಲೇ ಭಾರತೀಯ ಲಸಿಕೆ ವಿರುದ್ಧ ವಿಷ ಬೀಜ ಬಿತ್ತಲಾರಂಭಿಸಿದ್ದರು.

ಸೀರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಸ್ವದೇಶೀ ಲಸಿಕೆ ಕೋವ್ಯಾಕ್ಸಿನ್‌ನ ತುರ್ತು ಬಳಕೆಗೆ ಭಾರತ ಸರ್ಕಾರದ ಔಷಧ ನಿಯಂತ್ರಣ ಸಂಸ್ಥೆ ಡಿಸಿಜಿಎ ಜ.3ರಂದು ಅನುಮೋದನೆ ನೀಡಿತ್ತು. ತಕ್ಷಣ ಕಾಂಗ್ರೆಸ್ ಮುಖಂಡರು ಪುಂಖಾನುಪುಂಖ ಹೇಳಿಕೆಗಳನ್ನು ನೀಡುತ್ತಾ, ಲಸಿಕೆ ಬಗ್ಗೆ ಜನರಲ್ಲಿ ಭಯದ ಬೀಜ ಬಿತ್ತಿದರು.

ಭಾರತದ ಸಾಧನೆಯನ್ನು ಹೊಗಳುವ ಬದಲು, ಮೋದಿ ಟೀಕಿಸುವ ಭರದಲ್ಲಿ ದೇಶದ ವಿಜ್ಞಾನಿಗಳ ಸಾಮರ್ಥ್ಯವನ್ನೇ ಕೀಳಂದಾಜಿಸಿದರು ಈ ಕಾಂಗ್ರೆಸ್ ಮುಖಂಡರು. ಲಸಿಕೆಯ ಸಾಮರ್ಥ್ಯದ ಬಗ್ಗೆ ವಿಷ ಬೀಜುವ ಬಿತ್ತುವ ಕೆಲಸವು ಬಹುತೇಕ ವ್ಯವಸ್ಥಿತ ಷಡ್ಯಂತ್ರ ರೂಪದಲ್ಲೇ ನಡೆಯಿತು. ಪರಿಣಾಮ ಏನಾಯಿತು?

ದೇಶದಾದ್ಯಂತ ಜನರು ಲಸಿಕೆ ಪಡೆಯುವುದಕ್ಕೆ ಹಿಂಜರಿಕೆ ತೋರತೊಡಗಿದರು. ಕಾಂಗ್ರೆಸ್ ಮತ್ತು ಅದರ ನಾಯಕರು ಲಸಿಕೆ ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುವಲ್ಲಿ ಯಶಸ್ವಿಯಾಗಿದ್ದರು. ಜನರಿಗೆ ಆತಂಕ ಶುರುವಾಗತೊಡಗಿತು.

ಕಾಂಗ್ರೆಸ್ ಹಿರಿಯ ಮುಖಂಡರಾದ ಆನಂದ ಶರ್ಮಾ, ಶಶಿ ತರೂರ್, ಮತ್ತೀಗ ಲಸಿಕೆ ಬಗ್ಗೆ ಮೋದಿಗೇ ಬಯ್ಯುತ್ತಿರುವ ಜೈರಾಮ್ ರಮೇಶ್ ಮುಂತಾದವರು ಆಗಲೇ ಪ್ರಶ್ನಿಸಲಾರಂಭಿಸಿದ್ದರು. ಇದಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಬಲವಾಗಿಯೇ ತಿರುಗೇಟು ನೀಡಿದ್ದರು.

ಕೇಂದ್ರ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಅವರು ಕೂಡ ಹೇಳಿದ್ದು ಇದನ್ನೇ. ಜೈರಾಮ್, ತರೂರ್ ಮತ್ತು ಅಖಿಲೇಶ್ ಕಂಪನಿಗಳು ಮೊದಲು ನಮ್ಮ ಸೈನಿಕರ ಸಾಹಸವನ್ನು ಪ್ರಶ್ನಿಸಿದ್ದರು. ಈಗ ದೇಶ ಅಭಿವೃದ್ಧಿಪಡಿಸಿದ ಲಸಿಕೆಗಳಿಗೆ ಅನುಮೋದನೆ ಸಿಕ್ಕಿದಾಗ ಕೂಗಾಡುತ್ತಿದ್ದಾರೆ. ಒಟ್ಟಿನಲ್ಲಿ ಶಾಶ್ವತ ರಾಜಕೀಯ ಪ್ರತ್ಯೇಕೀಕರಣದತ್ತ ಅವರು ಸ್ಪಷ್ಟವಾಗಿ ಹಪಹಪಿಸುತ್ತಿದ್ದಾರೆ ಎಂದಿದ್ದರು.

ಅದೇ ರೀತಿ ರೆಮ್‌ಡಿಸಿವಿರ್ ಬಗ್ಗೆಯೂ ಬಂಬಡಾ ಬಜಾಯಿಸಿದ ಇದೇ ಕಾಂಗ್ರೆಸಿಗರು, ಅದರ ಬೇಡಿಕೆ ಹೆಚ್ಚಾದಾಗ, ನಕಲಿ ರೆಮ್‌ಡಿಸಿವಿರ್ ತಯಾರಿಸಿ ಸುದ್ದಿ ಮಾಡಿದ್ದೂ ಕೂಡ ಇದೇ ಕಾಂಗ್ರೆಸಿಗರು.

ಇದಕ್ಕಾಗಿಯೇ ಬಿಜೆಪಿ ಮುಖಂಡರು ಪದೇ ಪದೇ ಜನರನ್ನು ಎಚ್ಚರಿಸುವ ಕೆಲಸ ಮಾಡಿದರು. ಕೇಂದ್ರ ಸಚಿವ ಕಪಿಲ್ ಮಿಶ್ರಾ ಹೇಳಿದ್ದು ನೋಡಿ.

ಅಂದರೆ, ರಾಹುಲ್ ಗಾಂಧಿಯಾಗಲೀ ಅಥವಾ ಕೇಜ್ರಿವಾಲ್ ಆಗಲೀ, ಅವರಿಬ್ಬರೂ ವಿಷಯುಕ್ತ ರಾಜಕೀಯದ ಎಲ್ಲ ಸೀಮೆಗಳನ್ನು ದಾಟಿದ್ದಾರೆ. ದೇಶವಾಸಿಗಳ ಮನಸ್ಸಿನಲ್ಲಿ ನಿರಾಶೆ, ಭಯ, ಹತಾಶೆ ಮತ್ತು ಸೋಲಿನ ಭಾವನೆಗಳನ್ನು ಬಿತ್ತುತ್ತಿದ್ದಾರೆ. ಮೋದಿ ಅವರೇನಾದರೂ ಇಲ್ಲದಿದ್ದರೆ, ಈ ಮಂದಿ ದೇಶದ ಜನರನ್ನು ಹರಿದು ಮುಕ್ಕಿಬಿಡುತ್ತಿದ್ದರು. ಮೋದಿ ತೊಲಗಲಿ, ನಾವು ದೇಶವನ್ನು ಲೂಟಿ ಮಾಡೋಣ, ಒಡೆಯೋಣ ಎಂಬ ಮನಸ್ಥಿತಿಯಲ್ಲೇ ಅವರಿದ್ದಾರೆ ಎಂದು ಕಪಿಲ್ ಮಿಶ್ರಾ ಟೀಕಿಸಿದ್ದಾರೆ.

ಲಸಿಕೆಯ ಪರಿಣಾಮವು ದೇಹದ ಮೇಲೆ ಕಾಣಿಸಿಕೊಳ್ಳುವುದು ಎರಡು ಡೋಸ್‌ಗಳನ್ನು ತೆಗೆದುಕೊಂಡಾದ ಕೆಲವಾರು ದಿನಗಳ ನಂತರ ಎಂಬ ಸಾಮಾನ್ಯ ಜ್ಞಾನವನ್ನೂ ತಿಳಿದುಕೊಳ್ಳಲು ಬಯಸದ ಈ ಕಾಂಗ್ರೆಸಿಗರು, ಲಸಿಕೆ ತೆಗೆದುಕೊಂಡ ಬಳಿಕ ಕೊರೊನಾದಿಂದ ಮೃತಪಟ್ಟವರನ್ನು, ಲಸಿಕೆಯ ಅಡ್ಡ ಪರಿಣಾಮ ಎಂದೆಲ್ಲಾ ಬಿಂಬಿಸತೊಡಗಿದ್ದರು. ಕೆಲವರಲ್ಲಿ ಲಸಿಕೆಯ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಎಂಬ ಮೂಲಭೂತ ಸಂಗತಿಯನ್ನೂ ದೊಡ್ಡದಾಗಿಸಿ, ಲಸಿಕೆ ತೆಗೆದುಕೊಂಡರೆ ನೋವು, ವಾಂತಿ, ತಲೆಸುತ್ತು, ಸಾವು – ಹೀಗೆಲ್ಲಾ ಆಗುತ್ತದೆ ಎಂದು ಪ್ರಚಾರ ಮಾಡುತ್ತಲೇ ಇದ್ದರು.

ಅಖಿಲೇಶ್ ಯಾದವ್ ಅವರಂತೂ, ಇದು ಬಿಜೆಪಿ ಲಸಿಕೆ ನಾನು ತೆಗೆದುಕೊಳ್ಳುವುದಿಲ್ಲ ಎಂದು ರಾಜಕೀಯಗೊಳಿಸಿದರು.

ಕಾಂಗ್ರೆಸ್, ಸಮಾಜವಾದಿ ಪಕ್ಷದ ಈ ಕ್ರಮಗಳಿಂದಾಗಿ ಜನರು ಲಸಿಕೆ ತೆಗೆದುಕೊಳ್ಳಲು ಹಿಂಜರಿದರು. ಬನ್ನಿ ಬನ್ನಿ ಲಸಿಕೆ ಬಗ್ಗೆ ಹೆದರಬೇಡಿ, ಅಪಪ್ರಚಾರಕ್ಕೆ ಕಿವಿಕೊಡಬೇಡಿ ಅಂತ ಸರ್ಕಾರ, ಮಂತ್ರಿಗಳು ಜಾಹೀರಾತಿನ ಮೂಲಕ ಪದೇ ಪದೇ ಕೇಳಿಕೊಂಡರೂ ಜನರು ಬರಲಿಲ್ಲ. ಆದರೆ, ಇದೇ ಕಾಂಗ್ರೆಸ್ ಮುಖಂಡರು ಜನರನ್ನು ಸಾವಿನಂಚಿಗೆ ತಳ್ಳಿ, ತಾವು ಮಾತ್ರ ನೆಮ್ಮದಿಯಿಂದ ಲಸಿಕೆ ತೆಗೆದುಕೊಂಡುಬಿಟ್ಟರು. ಕೆಲವರು ರಹಸ್ಯವಾಗಿ, ಮತ್ತೆ ಕೆಲವರು ತಾವು ಲಸಿಕೆ ತೆಗೆದುಕೊಂಡಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕಿಕೊಂಡುಬಿಟ್ಟರು.

ಇದನ್ನೂ ಓದಿ: ಕೋವಿಡ್ ನಿಯಂತ್ರಣಕ್ಕೆ ನರೇಂದ್ರ ಮೋದಿ ಏನೂ ಮಾಡಿಲ್ಲವೇ?: ಇಲ್ಲಿದೆ ಪ್ರಶ್ನೆಗಳಿಗೆ ಉತ್ತರ

ಪರಿಣಾಮವೇನಾಯಿತು?
ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳೆಲ್ಲವೂ ಲಸಿಕೆ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರಿಂದ, ಜನರು ಲಸಿಕೆ ಪಡೆಯಲು ಹಿಂಜರಿದರು. 60 ಮೇಲ್ಪಟ್ಟವರು ಅಂದೇ ಲಸಿಕೆ ತೆಗೆದುಕೊಂಡಿದ್ದಿದ್ದರೆ ಕೋವಿಡ್ ಎರಡನೇ ಅಲೆ ಬಂದಾಗ ಸುರಕ್ಷಿತವಾಗಿರಬಹುದಿತ್ತು. ಇದನ್ನು ಮನಗಂಡೇ ಕೇಂದ್ರ ಆರೋಗ್ಯ ಸಚಿವರೇ ವಿಷಾದ ವ್ಯಕ್ತಪಡಿಸಿ, ಕೋವಿಡ್ ಎರಡನೇ ಅಲೆಯಲ್ಲಿ ಇಷ್ಟೊಂದು ಸಾವು ನೋವುಗಳಾಗುವುದಕ್ಕೆ ವಿರೋಧ ಪಕ್ಷಗಳ ಲಸಿಕೆ ವಿರೋಧಿ ಅಭಿಯಾನವೂ ಕಾರಣವಾಯಿತು ಎಂದರು. ಇಲ್ಲಿದೆ ನೋಡಿ ವಿವರ.

ಅಂತೆಯೇ, ದೇಶೀ ಲಸಿಕೆ ವಿರುದ್ಧ ಜನರನ್ನು ನೇರವಾಗಿ ಎತ್ತಿಕಟ್ಟುವ ಮೂಲಕ ಸರ್ಕಾರದ ಮುಖ್ಯಸ್ಥರಾಗಿ ನಿಮ್ಮದೇ ಪಕ್ಷದ ಮುಖ್ಯಮಂತ್ರಿಯೊಬ್ಬರು, ಆತಂಕಕಾರಿ ವಿಶ್ವ ದಾಖಲೆಯನ್ನೇ ಸೃಷ್ಟಿಸಿದರು. ಕೆಲವು ಕಾಂಗ್ರೆಸ್ ಮುಖಂಡರಂತೂ ಭಾರತೀಯ ಲಸಿಕೆಗಳ ವಿರುದ್ಧವೇ ಅಪಪ್ರಚಾರ ಮಾಡಿದರು, ಆದರೆ ಖಾಸಗಿಯಾಗಿ ತಾವಂತೂ ಲಸಿಕೆ ತೆಗೆದುಕೊಂಡುಬಿಟ್ಟರು ಎಂದು ಕೇಂದ್ರ ಸಚಿವರು ಹೇಳಿದರು.

ಇದನ್ನೂ ಓದಿ: ಮೋದಿ ವಿರೋಧಿಗಳು ಓದಲೇಬೇಕು: 140 ಕೋಟಿ ಮಂದಿಯನ್ನು ಮೋದಿ ರಕ್ಷಿಸಿದ್ದು ಹೀಗೆ!

ಕಾಂಗ್ರೆಸ್ ನಾಯಕರ ಮಾತುಗಳನ್ನು ನಂಬಿದ ಜನ, ಲಸಿಕೆ ತೆಗೆದುಕೊಳ್ಳಲಿಲ್ಲ. ಹಲವರು ಕೋವಿಡ್‌ನಿಂದಾಗಿ ಅಸು ನೀಗಿದರು. ಈಗ ಕೋವಿಡ್ ಎರಡನೇ ಅಲೆ ಜೋರಾದಾಗ, ಅಂದು ಕಾಂಗ್ರೆಸ್ ಮಾತನ್ನು ನಂಬಿ ಹಿಂಜರಿದವರೆಲ್ಲ ಈಗ ಸರ್ಕಾರದ ಮಾತಿನ ಮೇಲೆ ಭರವಸೆ ವ್ಯಕ್ತಪಡಿಸಿ, ಲಸಿಕೆ ಪಡೆಯಲು ಸಾಲು ಸರತಿಯಲ್ಲಿ ನಿಲ್ಲಲಾರಂಭಿಸಿದರು. ದಿಢೀರ್ ಬೇಡಿಕೆ ಬಂದಾಗ, ಲಸಿಕೆ ತಯಾರಿಗೂ ವೇಗ ನೀಡಬೇಕಾಯಿತು. ಲಸಿಕೆಗಳನ್ನು ಕೆಡದಂತೆ ಕಾಪಾಡುವುದೂ ಸವಾಲು ಆಗಿರುವುದರಿಂದ, ಬೇಡಿಕೆಯೇ ಇಲ್ಲದಾಗ ಅನಗತ್ಯವಾಗಿ ಲಸಿಕೆ ತಯಾರಿಸಿರಲಿಲ್ಲ. ತಯಾರಿಸಿದ ಕೆಲವನ್ನು ಇದಕ್ಕಾಗಿ ಕಚ್ಚಾ ವಸ್ತುಗಳನ್ನು ನೀಡಲು ಸಹಕರಿಸಿದ ರಾಷ್ಟ್ರಗಳೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ, ಲಸಿಕೆ ತಯಾರಿಸಿ ಅವರಿಗೂ ಕಳುಹಿಸಲಾಯಿತು.

ಈಗ ಇದೇ ಕಾಂಗ್ರೆಸಿಗರು ಲಸಿಕೆಯನ್ನೇಕೆ ವಿದೇಶಕ್ಕೆ ಮಾರಿದ್ದು ಅಂತ ಮೋದಿಯನ್ನು ಪ್ರಶ್ನಿಸತೊಡಗಿದ್ದಾರೆ. ರಾತ್ರಿ ಹಗಲೆನ್ನದೆ ಪರಿಶ್ರಮ ಪಡುವ, ಕೋವಿಡ್ ಮಹಾಮಾರಿಯನ್ನು ದೇಶದಿಂದ ಓಡಿಸಲು, ವಿರೋಧ ಪಕ್ಷಗಳ ಎಳ್ಳಷ್ಟೂ ಸಹಕಾರವಿಲ್ಲದೆ ದುಡಿಯುತ್ತಿರುವ ಒಬ್ಬ ಪ್ರಧಾನಿಯನ್ನು ಹೀಗಳೆಯುವವರನ್ನು ಬಂಧಿಸುವುದರ ವಿರುದ್ಧ ಸ್ವತಃ ರಾಹುಲ್ ಗಾಂಧಿಯೇ “ತಾಕತ್ತಿದ್ದರೆ ನನ್ನನ್ನೂ ಬಂಧಿಸಿ” ಅಂತ ಸವಾಲೊಡ್ಡುತ್ತಿದ್ದಾರೆ. ಲಸಿಕೆ ಕೊಡದಿದ್ರೆ ಜನ ದಂಗೆ ಏಳುತ್ತಾರೆ ಎನ್ನುತ್ತಾ ಪ್ರಚೋದಿಸುತ್ತಿದ್ದಾರೆ. ದೇಶ ರಕ್ಷಿಸುವ ಹೊಣೆಗಾರಿಕೆ ಮರೆತು, ರಾಜಕೀಯವನ್ನೇ ಮೈಯೆಲ್ಲಾ ವಿಷವಾಗಿಸಿಕೊಂಡಿರುವ ವಿರೋಧ ಪಕ್ಷಗಳ ಈ ನೀತಿಯ ಬಗ್ಗೆ ದೇಶದ ಜನರಿಗೆ ಅರ್ಥವಾಗತೊಡಗಿದೆ.

ಇದನ್ನೂ ಓದಿ: ಕೊರೊನಾ ವೈರಸ್ ಎಂಬ ಜೈವಿಕ ಅಸ್ತ್ರ?: ಚೀನಾದ ದುಷ್ಟತನಕ್ಕೆ ಸಾಕ್ಷಿ ಸಿಕ್ತು!

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಕೋವಿಡ್ ನಿಯಂತ್ರಣಕ್ಕೆ ನರೇಂದ್ರ ಮೋದಿ ಏನೂ ಮಾಡಿಲ್ಲವೇ?: ಇಲ್ಲಿದೆ ಪ್ರಶ್ನೆಗಳಿಗೆ ಉತ್ತರ
Next post Congress Toolkit: ಮೋದಿ, ಹಿಂದುತ್ವ ಹೆಸರಿಗೆ ಕಳಂಕ ತರಲು ಕಾಂಗ್ರೆಸ್ ಟೂಲ್‌ಕಿಟ್ – ಬಿಜೆಪಿ ಕೆಂಡಾಮಂಡಲ

ಸುದ್ದಿ ಸಂಚಯ

ಇವುಗಳನ್ನೂ ನೋಡಿ