Read Time:7 Minute, 19 Second

ಸದ್ದಿಲ್ಲದೆ ಉಗ್ರರ ನಿಗ್ರಹ: ಭಾರತಕ್ಕೆ ನರೇಂದ್ರ ಮೋದಿ ಎಂಬ ರಕ್ಷಾ ಕವಚ

0 0

ಅಲ್ಲಿ ಅಫ್ಘಾನಿಸ್ತಾನ ದೇಶದ ಅಧ್ಯಕ್ಷ ಕೇವಲ ನಾಲ್ಕು ಕೋಟಿ ಜನರನ್ನು ಉಗ್ರರ ಕೈಯಲ್ಲಿ ಬಿಟ್ಟು ದೇಶ ಬಿಟ್ಟು ಓಡಿಹೋದ. ಆದರೆ ಇಲ್ಲಿ 139 ಕೋಟಿ ಜನರ ಸುರಕ್ಷತೆಯ ಜವಾಬ್ದಾರಿ ಹೊತ್ತಿರುವ ಭಾರತದ ಪ್ರಧಾನಿ ಒಲಿಂಪಿಕ್ ಕ್ರೀಡಾಕೂಟದಿಂದ ವಾಪಾಸ್ ಬಂದ ಕ್ರೀಡಾಪಟುಗಳ ಜೊತೆ ತಣ್ಣಗೆ ಐಸ್ ಕ್ರೀಂ ತಿನ್ಕೊಂಡ್ ಎಂಜಾಯ್ ಮಾಡ್ತಿದ್ದಾರೆ!

ಅಫ್ಘಾನಿಸ್ತಾನದ ರಾಜಕೀಯ, ತಾಲಿಬಾನ್ ಆಕ್ರಮಣ, ಅಮೆರಿಕದ ಸ್ವಾರ್ಥ ಮನೋಭಾವ, ರಷ್ಯಾ ಮತ್ತು ಚೀನಾಗಳ ಕುತಂತ್ರ ನಡೆ, ಕೊನೆಗೆ ತಾಲಿಬಾನಿಗಳ ಕೈಗೆ ಅಫ್ಘಾನಿಸ್ತಾನದ ಆಡಳಿತ, ಮುಂದೆ ಏನಿದ್ರೂ ಷರಿಯಾ ಕಾನೂನುಗಳ ಜೊತೆ ಒಂದು ಮತಾಂಧತೆಯ ಅಟ್ಟಹಾಸ ಅಷ್ಟೇ. ಈಗ ಅಫ್ಘಾನಿಸ್ತಾನದಲ್ಲಿ ನಡೀತಿರೊದು ಟ್ರೈಲರ್ ಅಷ್ಟೇ, ಪಿಚ್ಚರ್ ಅಭೀ ಬಾಕಿ ಹೈ. ತಾಲಿಬಾನ್ ಉಗ್ರರ ಬಗ್ಗೆ ಮಾಹಿತಿ ಬೇಕು ಅಂದ್ರೆ ರವಿ ಬೆಳಗೆರೆಯವರ “ಮುಸ್ಲಿಂ- ಅದು ದೈವ ಸೈನಿಕರ ಲೋಕ” ಅನ್ನೋ ಪುಸ್ತಕ ಓದಿದ್ರೆ ಗೊತ್ತಾಗುತ್ತೆ. ಅಫ್ಘಾನಿಸ್ತಾನದ ವಿಚಾರ ಹಾಗಿರ್ಲಿ ಇಲ್ಲಿ ನಮ್ಮ ವಿಚಾರ ಒಂಚೂರ್ ನೋಡೋಣ.

ನರೇಂದ್ರ ಮೋದಿ ಅಧಿಕಾರಕ್ಕೆ ಬಂದ್ಮೇಲೆ ಸೇನೆಯ ಕ್ಯಾಂಪುಗಳ ಮೇಲೆ ಭಯೋತ್ಪಾದಕ ದಾಳಿ ಆಗಿರೋದು ಬಿಟ್ರೆ ನಾಗರಿಕರ ಮೇಲೆ (ಮುಂಬೈ ತಾಜ್ ಹೋಟೇಲ್ ಮೇಲಿನ ದಾಳಿ ರೀತಿ) ಯಾವುದೇ ಭಯೋತ್ಪಾದನಾ ದಾಳಿಗಳು ಆಗಿಲ್ಲ. ಯಾಕಂದ್ರೆ ಭಾರತದ ರಕ್ಷಣಾ ವ್ಯವಸ್ಥೆ ಅಷ್ಟರ ಮಟ್ಟಿಗೆ ಬಲಿಷ್ಠ ಮಾಡಿಬಿಟ್ಟಿದ್ದಾರೆ ಮೋದಿ.

ಮೋದಿ ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ಸೋತಿದ್ದಾರೆ, ಬೆಲೆ ಏರಿಕೆ ಗಗನ ಮುಟ್ಟಿದೆ, ಮೋದಿ ಬರಿ ಭಾಷಣ ಮಾಡುತ್ತಾರೆ, ಎಲ್ಲಿ ಲೇಸರ್ ಬೇಲಿ? ತಾವೇ ರೈಲಿನಲ್ಲಿ ಕಸ ಎಸೆದು ನೋಡಿ – ಇದು ಮೋದಿಯ ಸ್ವಚ್ಛ ಭಾರತ ಅಂತೆಲ್ಲಾ ಅನ್ನೋರ ನಡುವೆ ಮೋದಿ ಸದ್ದಿಲ್ಲದೆ ಭಾರತದ ರಕ್ಷಣಾ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ನಿರ್ಮಿಸಿದ್ದಾರೆ, ಬಲಪಡಿಸಿದ್ದಾರೆ. ಎಲ್ಲ ಸಹಜವಾಗಿ ಜೀವನ ನಡೀತಿದೆ ಅನ್ನುವಾಗ್ಲೇ ಇಂಟಲಿಜೆನ್ಸ್ ರವರು ಭಟ್ಕಳದ ಯಾವುದೊ ಮನೆಗೆ ನುಗ್ಗಿ ಉಗ್ರರ ಸಂಪರ್ಕ ಹೊಂದಿರುವವರನ್ನ ಕರೆದುಕೊಂಡು ಹೋಗ್ತಾರೆ, ಕಾಂಗ್ರೆಸ್ ಮಾಜಿ ಶಾಸಕ ಇದಿನಬ್ಬರ ಮನೆಗೇ ನುಗ್ಗಿ ಐಸಿಸ್ ಸಂಪರ್ಕಿತರನ್ನು ಕರೆದುಕೊಂಡು ಹೋಗ್ತಾರೆ, ಇನ್ನೆಲ್ಲೋ ಒಳಗಿನ ಶತ್ರುಗಳು ಸಂಚು ರೂಪಿಸಿದ್ರೆ ಅಷ್ಟೇ ಸೂಕ್ಷ್ಮವಾಗಿ ಗುಪ್ತಚರ ಇಲಾಖೆ ಕೆಲಸ ಮಾಡಿ ದಾಳಿ ಆಗದಂತೆ ತಡೆಯುತ್ತೆ.

ಒಟ್ನಲ್ಲಿ ಉಗ್ರರು ಭಾರತದಲ್ಲಿ ಬಾಂಬ್ ಹಾಕೋದ್ ಹಾಳಾಗೋಗ್ಲಿ, ಸಣ್ಣ ಗಲಭೆ ಮಾಡೋಕೂ ಯೋಚನೆ ಮಾಡ್ಬೇಕು. ಆ ರೀತಿಯ ರಕ್ಷಣಾ ವ್ಯವಸ್ಥೆ ಭಾರತದಲ್ಲಿದೆ.

ಇದು ಮೋದಿ – ಅಮಿತ್ ಶಾ ರವರ ಚಾಣಾಕ್ಷತನವೂ ಹೌದು. ಇನ್ನು ಕೇಂದ್ರ ಸರ್ಕಾರ ಕೊಟ್ಟಿರೋ ಸ್ವಾತಂತ್ರ್ಯವನ್ನು ಕಾಶ್ಮೀರದಲ್ಲಿ ಭಾರತೀಯ ಸೇನೆ ಯಾವ ರೀತಿ ಬಳಸಿಕೊಂಡು ಉಗ್ರರ ಬೇಟೆ ಆಡ್ತಿದೆ ಅನ್ನೋದು ಎಲ್ರಿಗೂ ಗೊತ್ತಿರುವ ವಿಚಾರ. ಸದೃಢ ನಾಯಕತ್ವ ಇರೋದ್ರಿಂದ ಕಾಶ್ಮೀರದ ಪರಿಸ್ಥಿತಿ ಈಗ ಲಾಲ್ ಚೌಕದಲ್ಲಿ ತ್ರಿವರ್ಣಧ್ವಜ ಹಾರುವಷ್ಟರ ಮಟ್ಟಕ್ಕೆ ಉತ್ತಮವಾಗಿದೆ. ಇಲ್ದಿದ್ರೆ ಅಲ್ಲಿನ ಪರಿಸ್ಥಿತಿ ಸಿರಿಯಾ, ಅಫ್ಘಾನಿಸ್ತಾನದ ಥರ ಆಗಿರ್ತಿತ್ತು.

ರಾಜಕೀಯದಲ್ಲಿ ಸೋಲು ಗೆಲವು ಸಹಜ. ಬೆಲೆ ಏರಿಕೆಯೇ ಪ್ರಮುಖ ಕಾರಣ ಓಟ್ ಹಾಕ್ದೆ ಇರೋಕೆ ಅಂತ ಮೋದಿಯನ್ನ ಸೋಲಿಸಿದ್ರೆ, ಮತ್ತೊಂದು ಪಕ್ಷ ಅಧಿಕಾರಕ್ಕೆ ಬರುತ್ತೆ. ಮತ್ತೊಬ್ಬರು ಪ್ರಧಾನಿ ಆಗ್ತಾರೆ, ದೇಶ ಅದರ ಪಾಡಿಗೆ ಅದು ನಡಿಯುತ್ತೆ. ಆದ್ರೆ ಸ್ವಲ್ಪ ಹುಷಾರು ತಪ್ಪಿದರೂ ಭಾರತ ಇನ್ನಿಲ್ಲದ ತೊಂದರೆಗೆ ಸಿಲುಕುತ್ತೆ. ನಾಲ್ಕು ಕೋಟಿ ಅಫ್ಘಾನಿಸ್ತಾನಿಗಳು ಕೇವಲ ಜೀವ ಉಳಿಸಿಕೊಳ್ಳುವ ಸಲುವಾಗಿ ವಿಮಾನದ ರೆಕ್ಕೆಯ ಹತ್ತಿರ ಹತ್ತಿ ಕುಳಿತು ಕೆಳಗೆ ಬಿದ್ದು ಸಾಯ್ತಿದ್ದಾರೆ ಅಂದ್ರೆ ಅಲ್ಲಿನ ಪರಿಸ್ಥಿತಿ ಅದಿನ್ನೆಷ್ಟು ಘೋರವಾಗಿ ಇರ್ಬೋದು! ಅಮೆರಿಕಾದ ಏರ್‌ಪೋರ್ಟ್‌ಗಳಲ್ಲಿ ಮುಸಲ್ಮಾನರನ್ನ ಹೇಗೆ ಚೆಕ್ ಮಾಡ್ತಾರೆ ಅಂತ ಶಾರುಕ್ ಖಾನಿಗೆ ಗೊತ್ತು, ಚೀನಾದಲ್ಲಿ ಮುಸಲ್ಮಾನರನ್ನ ಹೇಗೆ ನೆಡೆಸಿಕೊಳ್ತಾರೆ ಅನ್ನೋದು ಅಮೀರ್ ಖಾನಿಗೂ ಗೊತ್ತು, ಭಾರತದಲ್ಲಿ ಮುಸಲ್ಮಾನರು ಹೇಗೆ ಬದುಕ್ತಿದ್ದಾರೆ ಅನ್ನೋದು ಈ ದೇಶದ ಎಡಬಿಡಂಗಿಗಳಿಗೂ ಗೊತ್ತು‌. ಆದ್ರೂ ಭಾರತ ಸುರಕ್ಷಿತವಲ್ಲ ಅಂತ ಬಾಯಿ ಬಡ್ಕೋತಾರೆ ಅದನ್ನ ಸೋಲ್ಡ್ ಮೀಡಿಯಾಗಳು, ಉಗ್ರರ ಪರವಾಗಿರೋರು ಹೆಡ್ಲೈನ್ ಹಾಕಿ ವಿಕೃತಿ ಮೆರೀತಾರೆ.

ರಾಜಕೀಯ ಪರ ವಿರೋಧ, ಸಿದ್ಧಾಂತಗಳ ಭಿನ್ನಾಭಿಪ್ರಾಯ, ಜಾತಿ ರಾಜಕಾರಣ, ಭ್ರಷ್ಟ ವ್ಯವಸ್ಥೆ, ಇದೆಲ್ಲದರ ನಡುವೆ ಭಾರತವನ್ನ ಮೋದಿ ಮುನ್ನಡೆಸಿದ ರೀತಿಯನ್ನು ಭವಿಷ್ಯದಲ್ಲಿ ಎಲ್ಲರೂ ನೆನೆಪು ಮಾಡಿಕೊಳ್ತಾರೆ. ಮುಂದಿನ ಸವಾಲು ತಾಲಿಬಾನಿಗಳಿಂದ ಭಾರತಕ್ಕೆ ಆಗುವ ಅಪಾಯ ತಡೆಯೋದು ಹಾಗೂ ಭಾರತದ ಅನ್ನ ತಿಂದು ತಾಲಿಬಾನಿಗಳ ಪರ ನಿಲ್ಲೋ ಭಾರತದ ಕೆಲವು ವಿಕೃತ ಮನಸ್ಥಿತಿಗಳ ವಿರುದ್ಧ ಹೋರಾಡೋದು. ಇವೆರಡೂ ಸಮಸ್ಯೆಗಳನ್ನ ದಿಟ್ಟವಾಗಿ ಎದುರಿಸೋ ತಾಕತ್ತು ಸದ್ಯಕ್ಕಿರೊ ಕೇಂದ್ರ ಸರ್ಕಾರಕ್ಕೆ ಇದೆ. ಇದನ್ನೂ ಮೀರಿ ಭಾರತದಲ್ಲಿ ಅನಾಹುತಗಳು ಜರುಗಿದ್ರೆ ಅದಕ್ಕೆ ನಮ್ಮಲ್ಲಿರೋ ತಾಲಿಬಾನಿ ಮನಸ್ಥಿತಿಗಳೇ ಕಾರಣ ಆಗಿರ್ತಾರೆ.

ಕ್ರೆಡಿಟ್ ಭಾರತೀಯ ಸೇನೆಗಾದ್ರೂ ಕೊಡಿ, ಗುಪ್ತಚರ ಇಲಾಖೆಗಾದ್ರೂ ಕೊಡಿ, ಅಥ್ವ ಕೇಂದ್ರ ಸರ್ಕಾರಕ್ಕಾದ್ರೂ ಕೊಡಿ. ಆದ್ರೆ ಸದ್ಯಕ್ಕಂತೂ ಭಾರತ ಸುರಕ್ಷಿತವಾದ ಕೈಗಳಲ್ಲಿ ಇರೋದಂತೂ ಸತ್ಯ.

ಕೋವಿಡ್ ಸಂಕಷ್ಟ ಕಾಲದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗಿರೋದು ಭಾರತದಲ್ಲಿ ಮಾತ್ರವೇ ಅಲ್ಲ. ಇಡೀ ಜಗತ್ತಿನ ಪರಿಸ್ಥಿತಿ ಅದು. ಅದಕ್ಕೂ ಮೋದಿಯನ್ನೇ ದೂಷಿಸ್ತಾರೆ ಅಂದ್ರೆ, ಅಂಥವರ ಮನಸ್ಥಿತಿಯ ಬಗ್ಗೆ ಯೋಚಿಸಿ. ಅವರೆಲ್ಲ ಜನರಿಂದ ತಿರಸ್ಕೃತರಾಗಲು ಲಾಯಕ್ಕು. ದೇಶದ ಜನರ ದಾರಿ ತಪ್ಪಿಸಲು ವಿಫಲ ಪ್ರಯತ್ನ ಮಾಡೋ ಮೂರ್ಖರವರು. ಅವರ ಯಾವುದೇ ಮಾತನ್ನ ಎಂದಿಗೂ ನಂಬಬೇಡಿ.

ಜೈ ಭಾರತ ಮಾತೆ

(ಇದು‌ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪೋಸ್ಟ್. ನಿಜವಾದ ದೇಶಭಕ್ತರೊಬ್ಬರು ಬರೆದಿದ್ದು. ಅವರಿಗೆ ನಮಸ್ಕಾರ).

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಗಾಜಿಯಾಬಾದ್: ತಾಯತದ ಜಗಳಕ್ಕಾಗಿ ಕೋಮುದ್ವೇಷ ಹರಡಿದ ಪತ್ರಕರ್ತರು, ಕಾಂಗ್ರೆಸ್ ಮುಖಂಡರ ವಿರುದ್ಧ ಕೇಸು
Next post ಭಾರತ ಮಾತೆಯ ಸುಪುತ್ರ ಕನ್ನಡಿಗರಿಗೆ ನಮಸ್ಕಾರ!

ಸುದ್ದಿ ಸಂಚಯ

ಇವುಗಳನ್ನೂ ನೋಡಿ