India Covid Figures: 15 ಲಕ್ಷ ದಾಟಿತು ಪೀಡಿತರ ಸಂಖ್ಯೆ
Read Time:1 Minute, 27 Second

India Covid Figures: 15 ಲಕ್ಷ ದಾಟಿತು ಪೀಡಿತರ ಸಂಖ್ಯೆ

0 0

ದೇಶದಲ್ಲಿ ಚೀನಾದಿಂದ ಹುಟ್ಟಿಕೊಂಡ ಕೊರೊನಾ ವೈರಸ್‌ನಿಂದ ಬರುವ ಕೋವಿಡ್-19 ಕಾಯಿಲೆ ಪೀಡಿತರಾಗುತ್ತಿರುವವರ ಸಂಖ್ಯೆ ಕಳೆದ ಕೆಲವು ದಿನಗಳಿಂದ ಪ್ರತಿ ದಿನ 50 ಸಾವಿರದ ಆಸುಪಾಸು ಇದೆ. ಬುಧವಾರ (ಜು.29) ಮಾಹಿತಿಯಂತೆ, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 48,512 ಜನರಲ್ಲಿ ಕೋವಿಡ್ ಕಾಯಿಲೆಯು ಪರೀಕ್ಷೆಯಿಂದ ದೃಢಪಟ್ಟಿದ್ದು, 768 ಮಂದಿ ಸಾವನ್ನಪ್ಪಿದ್ದಾರೆ.

ಇದರೊಂದಿಗೆ, ಭಾರತದಲ್ಲಿ ಕೋವಿಡ್-19 ಪೀಡಿತರ ಸಂಖ್ಯೆ 15 ಲಕ್ಷ ದಾಟಿದೆ. 15,31,669 ಕೇಸುಗಳು ಅಧಿಕೃತವಾಗಿ ವರದಿಯಾಗಿದ್ದು, ಅವರಲ್ಲಿ 9,88,029 ಮಂದಿ ಚೇತರಿಸಿಕೊಂಡಿದ್ದಾರೆ. 5,09,447 ಮಂದಿಯಲ್ಲಿ ಕೋವಿಡ್-19 ಇನ್ನೂ ಸಕ್ರಿಯವಾಗಿದೆ. 34,193 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಬುಧವಾರ ತಿಳಿಸಿದೆ.

ಮಹಾರಾಷ್ಟ್ರದಲ್ಲಿ 3,83,723 ಪೀಡಿತರಿದ್ದು, ತಮಿಳುನಾಡು (2,20,716), ದೆಹಲಿ (1,32,275) ಹಾಗೂ ಕರ್ನಾಟಕ (1,01,465) ನಂತರದ ಸ್ಥಾನಗಳಲ್ಲಿವೆ.

ಜುಲೈ 28ವರೆಗೆ, 1,77,43,740 ಮಂದಿಯ ತಪಾಸಣೆ ನಡೆಸಲಾಗಿದ್ದು, ಒಂದೇ ದಿನ 4,08,855 ಮಂದಿಯ ಪರೀಕ್ಷೆ ನಡೆಸಲಾಗಿದೆ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ರಕ್ಷಾ ಬಂಧನ: ವೀರ ಯೋಧ ಸಹೋದರರಿಗೆ ಅಂಚೆ ಮೂಲಕ ರಾಖಿ ಕಳುಹಿಸಿ
Next post Rafale ಸಮರ ವಿಮಾನಕ್ಕೆ ಆಕಾಶದಲ್ಲೇ ಇಂಧನ ತುಂಬಿಸಬಹುದು! ಹೇಗೆ, ಇಲ್ಲಿ ನೋಡಿ!

ಸುದ್ದಿ ಸಂಚಯ

ಇವುಗಳನ್ನೂ ನೋಡಿ