Read Time:4 Minute, 9 Second

ಸ್ನೇಹಿತರ ದಿನ | ಗೆಳೆಯರ ದಿನ | ಅಂತರರಾಷ್ಟ್ರೀಯ ಸ್ನೇಹ ದಿನ – ಏನಿದು ವಿಶೇಷ?

0 0

ಇದು ಸ್ನೇಹಿತರ ಮಹತ್ವವನ್ನು ನೆನಪಿಸುವ ದಿನ, ಸ್ನೇಹದ ಪಾವಿತ್ರ್ಯವನ್ನು ಸಾರುವ ದಿನ. ಸ್ನೇಹ ದಿನ ಅಥವಾ ಅಂತರರಾಷ್ಟ್ರೀಯ ಸ್ನೇಹಿತರ ದಿನವನ್ನು ಪ್ರತಿ ವರ್ಷದ ಜುಲೈ 30ರಂದು ಅಧಿಕೃತವಾಗಿ ಆಚರಿಸಲಾಗುತ್ತಿದೆ. ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಗೆಳೆತನ ದಿನವನ್ನಾಗಿ ಆಚರಿಸಲಾಗುತ್ತಿದೆ.

1930ರಲ್ಲಿ ಹಾಲ್‌ಮಾರ್ಕ್ಸ್ ಕಾರ್ಡ್‌ಗಳ ಸಂಸ್ಥಾಪಕ ಜಾಯ್ಸ್ ಹಾಲ್ ಎಂಬವರು ಆಗಸ್ಟ್ 2ರಂದು ಅಂತರರಾಷ್ಟ್ರೀಯ ಸ್ನೇಹ ದಿನವನ್ನು ಆಚರಿಸುವ ಸಲಹೆ ನೀಡಿದ್ದರು. ಇದಕ್ಕೂ ಮೊದಲೇ 1920ರಲ್ಲಿ, ರಾಷ್ಟ್ರೀಯ ಗ್ರೀಟಿಂಗ್ ಕಾರ್ಡ್ಸ್ ಒಕ್ಕೂಟವು ಈ ಯೋಜನೆಯ ಪ್ರಸ್ತಾಪ ಮುಂದಿಟ್ಟಿತ್ತಾದರೂ, ಅದು ವಾಣಿಜ್ಯಾತ್ಮಕವಾಗಿ ಪರಿವರ್ತನೆಯಾಗಬಹುದೆಂಬ ಕಾರಣಕ್ಕೆ ಅದಕ್ಕೆ ವಿರೋಧ ಎದುರಾಗಿತ್ತು. ಬಳಿಕ 1958ರಲ್ಲಿ ಪರಾಗ್ವೇಯಲ್ಲಿ International Friendship Day ಅಂತ ಆಚರಣೆ ಮೊದಲಾಯಿತು. 1998ರಲ್ಲಿ ಅಂದಿನ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯಾಗಿದ್ದ ಕೋಫಿ ಅನ್ನಾನ್ ಅವರ ಪತ್ನಿಯು ವಿನ್ನಿ ದ ಪೂ (Winnie the Pooh) ಎಂಬ ಗೊಂಬೆಯ ಪಾತ್ರವನ್ನು ಸ್ನೇಹದ ಬ್ರ್ಯಾಂಡ್ ರಾಯಭಾರಿಯಾಗಿ ಘೋಷಿಸಿದರು.

ಆರಂಭದಲ್ಲಿ ಸ್ನೇಹಿತರು ಗ್ರೀಟಿಂಗ್ ಕಾರ್ಡ್‌ಗಳ ಮೂಲಕ ಪರಸ್ಪರರಿಗೆ ಶುಭಾಶಯ ಕೋರುತ್ತಿದ್ದರು. ಆದರೆ ಈಗ ಇಂಟರ್ನೆಟ್ ಕ್ರಾಂತಿಯಾದ ಬಳಿಕ, ಸಾಮಾಜಿಕ ಜಾಲತಾಣಗಳಲ್ಲಿ ಈ ದಿನದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಕೆಲವು ಶುಭಾಶಯಗಳು, ಬೇರೆಯವರು ಮಾಡುತ್ತಿದ್ದಾರೆ, ನಾವೂ ಶುಭಾಶಯ ಕೋರೋಣ ಎಂಬ ಧಾಟಿಯಲ್ಲಿರುತ್ತವೆ. ಫ್ರೆಂಡ್‌ಶಿಪ್ ಬ್ಯಾಂಡ್‌ಗಳು, ಕಾರ್ಡ್‌ಗಳು, ಹೂವುಗಳ ಮೂಲಕವಷ್ಟೇ ಸ್ನೇಹಾಚಾರ ವಿನಿಮಯ ಮಾಡಿಕೊಳ್ಳುತ್ತಿದ್ದ ಹಿಂದಿನ ದಿನಗಳಿಗೂ, ಗಿಫ್ಟ್ ಕೊಡದಿದ್ದರೆ ಫ್ರೆಂಡ್‌ಶಿಪ್ಪೇ ಇಲ್ಲ ಎಂಬಷ್ಟರ ವಾಣಿಜ್ಯಾತ್ಮಕ ಮಟ್ಟಕ್ಕೆ ಈ ಸ್ನೇಹವೂ ಬದಲಾಗಿರುವುದು ವ್ಯವಸ್ಥೆಯ ದುರಂತವಷ್ಟೇ.

ನಿಜಮನದ ಗೆಳೆಯ ಗೆಳತಿಯರಿಗಾಗಿ ಪ್ರತಿಯೊಬ್ಬನ ಮನಸ್ಸೂ ಒಳಗಿಂದೊಳಗೆ ಹಂಬಲಿಸುತ್ತಲೇ ಇರುತ್ತದೆ. ಈ ನಿಜದ ಸ್ನೇಹಿತರಿಂದ ಮಾತ್ರವೇ ವ್ಯಕ್ತಿಯೊಬ್ಬನ ಬಾಳು ಸದಾ ಕಾಲ ಬೆಳಗುವುದು ಸಾಧ್ಯ. ಮನಸ್ಸು ಕುಗ್ಗಿದಾಗ ಸಂತೈಸುವ, ಹಿಗ್ಗಿದಾಗ ಸಂಭ್ರಮಿಸುವ ಸ್ನೇಹದ ಬಂಧ ಅಮೂಲ್ಯ. ಅದನ್ನು ಶುಭಾಶಯ ಕೋರಿಲ್ಲ ಅಥವಾ ಗಿಫ್ಟ್ ಕೊಟ್ಟಿಲ್ಲ ಎಂಬ ಬೆಲೆಯಿಂದ ಕಟ್ಟಿ ಹಾಕಲಾಗದು ಮತ್ತು ಇದು ಜು.30ರ ಒಂದು ದಿನಕ್ಕೆ ಮಾತ್ರ ಸೀಮಿತವೂ ಅಲ್ಲ.

ನಿಜ ಸ್ನೇಹ ಸದಾ ಕಾಲ ಪರಸ್ಪರರ ಸಹಾಯ, ಸಂತೈಕೆ, ಖುಷಿಗಾಗಿ ತುಡಿಯುವ ಮನದಿಂದ ಮಾತ್ರ ಸಾಧ್ಯ. ಪರಸ್ಪರರನ್ನು ಅರ್ಥೈಸಿಕೊಂಡರಷ್ಟೇ ಸ್ನೇಹ ಗಟ್ಟಿಯಾಗಿ, ವಜ್ರದಷ್ಟು ಕಠೋರವಾಗಿಯೂ, ಹೂವಿನಷ್ಟು ಮೃದುವಾಗಿಯೂ ಇರುವುದು ಸಾಧ್ಯ.

2011ರಲ್ಲಿ ವಿಶ್ವಸಂಸ್ಥೆಯು ಪ್ರತೀ ವರ್ಷದ ಜು.30ರಂದು ಅಂತರರಾಷ್ಟ್ರೀಯ ಫ್ರೆಂಡ್‌ಶಿಪ್ ಡೇ ಆಚರಣೆಗೆ ಘೋಷಣೆ ಹೊರಡಿಸಿತು. ಆದರೆ, ಎಲ್ಲ ದೇಶಗಳು ಈ ದಿನವೇ ಸ್ನೇಹಿತರ ದಿನವನ್ನು ಆಚರಿಸುವುದಿಲ್ಲ. ಭಾರತ, ಬಾಂಗ್ಲಾ, ಯುಎಇ, ಮಲೇಷ್ಯಾ ಮುಂತಾದ ದೇಶಗಳು ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ರಜಾದಿನವೆಂಬ ಕಾರಣಕ್ಕೆ, ಸ್ನೇಹಿತರ ದಿನವನ್ನಾಗಿ ಆಚರಿಸುತ್ತವೆ. ಸ್ಪೇನ್, ಬ್ರೆಜಿಲ್, ಅರ್ಜೆಂಟೀನಾ ಮುಂತಾದ ರಾಷ್ಟ್ರಗಳು ಜು.20ರಂದು ಆಚರಿಸುತ್ತವೆ. ಆದರೆ, ಅಂತರರಾಷ್ಟ್ರೀಯ ಸ್ನೇಹಿತರ ದಿನ ಎಂದರೆ ಅದು ಪ್ರತಿ ವರ್ಷದ ಜು.30 ಆಗಿರುತ್ತದೆ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post Rajasthan Development: ಗೆಹ್ಲೋಟ್ 3ನೇ ಮನವಿಯನ್ನೂ ತಿರಸ್ಕರಿಸಿದ ರಾಜ್ಯಪಾಲ
Next post ಥಾಮ್ಸನ್‌ನಿಂದ ಮೇಕ್ ಇನ್ ಇಂಡಿಯಾ ಆಂಡ್ರಾಯ್ಡ್ ಟಿವಿ

ಸುದ್ದಿ ಸಂಚಯ

ಇವುಗಳನ್ನೂ ನೋಡಿ