ಸ್ಯಾಮ್ಸಂಗ್ #MonsterShot ಎಂಬ ಅಭಿಯಾನದೊಂದಿಗೆ ಹೊಸದಾಗಿ ಗ್ಯಾಲಕ್ಸಿ ಎಂ31ಎಸ್ ಬಿಡುಗಡೆಗೊಳಿಸಿದ್ದು ಆಗಸ್ಟ್ 6ರಿಂದ ಮಾರಾಟಕ್ಕೆ ಲಭ್ಯವಿದೆ.
64 ಮಗಾಪಿಕ್ಸೆಲ್ನ ಇಂಟೆಲ್ಲಿ-ಕ್ಯಾಮ್ ತಂತ್ರಜ್ಞಾನದೊಂದಿಗೆ ಒಂದು ಶಾಟ್ನಲ್ಲಿ ಹಲವಾರು ಫೋಟೋ ಕ್ಲಿಕ್ ಮಾಡಬಲ್ಲ ಮತ್ತು ಅತ್ಯುತ್ತಮವಾದುದನ್ನಷ್ಟೇ ಉಳಿಸಿಕೊಳ್ಳಬಲ್ಲ ವೈಶಿಷ್ಟ್ಯ ಇದರಲ್ಲಿದೆ.
6ಜಿಬಿ+128ಜಿಬಿ ಫೋನ್ಗೆ 20499 ರೂ. ಹಾಗೂ 8ಜಿಬಿ+128ಜಿಬಿ ಮಾಡೆಲ್ಗೆ ರೂ.22499 ಬೆಲೆಯಿದ್ದು, ಗ್ಯಾಲಕ್ಸಿ ಎಂ ಸರಣಿಯಲ್ಲಿ ಮೊದಲ ಬಾರಿಗೆ 64 ಮೆಗಾಪಿಕ್ಸೆಲ್ ಇಂಟೆಲಿಕ್ಯಾಮ್, ಸೋನಿ ಸೆನ್ಸರ್ IMX682, ಎಸ್-ಅಮೋಲೆಡ್ ಇನ್ಫಿನಿಟಿ-ಒ ಡಿಸ್ಪ್ಲೇ ಇದ್ದು, 25W ಫಾಸ್ಟ್ ಚಾರ್ಜರ್ ಒಳಗೊಂಡಿದೆ.
#MonsterShot ಗಾಗಿ 64MP ಪ್ರಧಾನ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್, 12MP 123 ಡಿಗ್ರಿಯ ಅಲ್ಟ್ರಾ ವೈಡ್ ಸೆನ್ಸರ್ ಹಾಗೂ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಇರುವ ಕ್ಯಾಮೆರಾ ಸೆಟಪ್ ಇದೆ.
ಒಂದೇ ಟೇಕ್ನಲ್ಲಿ 10 ಶಾಟ್ಗಳು ದೊರೆಯಲಿದ್ದು, ಅತ್ಯುತ್ತಮ ಫೋಟೋವನ್ನು ಉಳಿಸಿಕೊಳ್ಳಬಹುದಾಗಿದೆ. 6000 mAh ಭರ್ಜರಿ ಬ್ಯಾಟರಿ ಇದರಲ್ಲಿದೆ. ಟೈಪ್ ಸಿ ರಿವರ್ಸ್ ಚಾರ್ಜಿಂಗ್ ಪೋರ್ಟ್ ಇದ್ದು, 6.5 ಇಂಚು (16.40 ಸೆಮೀ) FHD+ ಸೂಪರ್ ಅಮೋಲೆಡ್ ಡಿಸ್ಪ್ಲೇ ಅದ್ಭುತ ದೃಶ್ಯವನ್ನು ಒದಗಿಸಬಲ್ಲುದು.
ಎಕ್ಸಿನೋಸ್ 9611 2.3 ಗಿಗಾಹರ್ಟ್ಸ್ವರೆಗಿನ 8 ಕೋರ್ ಪ್ರೊಸೆಸರ್ ಇರುವ ಈ ಫೋನ್ 9.3 ಮಿಮೀ ತೆಳ್ಳಗಿದ್ದು, ಗೊರಿಲ್ಲಾ ಗ್ಲಾಸ್ 3 ಹೊಂದಿದೆ.

Average Rating