Read Time:2 Minute, 27 Second

ದೀರ್ಘ ಕಾಲದ ಕಾಂಗ್ರೆಸ್ಸೇತರ ಪ್ರಧಾನಿ: ನರೇಂದ್ರ ಮೋದಿಗೆ ಮತ್ತೊಂದು ದಾಖಲೆ

0 0

ನವದೆಹಲಿ: 2014ರಲ್ಲಿ ಪ್ರಧಾನ ಮಂತ್ರಿ ಪಟ್ಟಕ್ಕೇರಿ, ಪ್ರಧಾನ ಸೇವಕ ಎಂದು ಕರೆದುಕೊಂಡು, ದೇಶದಲ್ಲಿ ಬದಲಾವಣೆಯ ಶಕೆಗೆ ಕಾರಣವಾಗಿರುವ ನರೇಂದ್ರ ಮೋದಿ ಅವರು ಶನಿವಾರ ಹೊಸದೊಂದು ದಾಖಲೆ ಬರೆಯಲಿದ್ದಾರೆ.

2,272 ದಿನಗಳ ಕಾಲ ಪ್ರಧಾನಿ ಪಟ್ಟದಲ್ಲಿರುವ ಮೂಲಕ ಶುಕ್ರವಾರ ಅವರು ಅತಿ ದೀರ್ಘಾವಧಿ ಆಡಳಿತ ನಡೆಸಿದ ಕಾಂಗ್ರೆಸ್ಸೇತರ ಪ್ರಧಾನ ಮಂತ್ರಿ ಎಂಬ ವಾಜಪೇಯಿ ದಾಖಲೆಯನ್ನು ಸರಿಗಟ್ಟಿದರು. ದೇಶ ಕಂಡ ಪರಮೋಚ್ಚ ನಾಯಕ, ನವ ಭಾರತದ ರೂವಾರಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಒಟ್ಟು 2272 ದಿನಗಳ ಕಾಲ ಪ್ರಧಾನಿಯಾಗಿದ್ದರು.

ಮೊದಲ ಸ್ಥಾನದಲ್ಲಿ ಏಳು ದಶಕ ದೇಶವಾಳಿದ್ದ ಕಾಂಗ್ರೆಸ್ ಇದೆ. ಅದರಲ್ಲಿ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರು ಗರಿಷ್ಠ ಕಾಲ ಪ್ರಧಾನಿ ಪಟ್ಟದಲ್ಲಿರುವುದರ ಅನುಕ್ರಮ ಸ್ಥಾನದಲ್ಲಿದ್ದಾರೆ.

ನರೇಂದ್ರ ಮೋದಿ ಅವರು ಸ್ವತಂತ್ರ ಭಾರತದ 14ನೇ ಪ್ರಧಾನಿಯಾಗಿ 282 ಸ್ಥಾನ ಬಲದೊಂದಿಗೆ 2014ರ ಮೇ 26ರಂದು ಪ್ರಮಾಣವಚನ ಸ್ವೀಕರಿಸಿದ್ದರು. 2019ರ ಮೇ 30ರಂದು ಅವರು ಮರಳಿ ಎರಡನೇ ಬಾರಿಗೆ, 303 ಸಂಸದರ ಬಲದೊಂದಿಗೆ ಅದ್ಭುತ ಜನಾದೇಶ ಪಡೆದು ಪ್ರಧಾನಿ ಪಟ್ಟವೇರಿದ್ದರು.

ಒಟ್ಟಾರೆಯಾಗಿ ನರೇಂದ್ರ ಮೋದಿ ಅವರು ಗರಿಷ್ಠ ಕಾಲ ಆಳ್ವಿಕೆ ನಡೆಸಿದ ಪ್ರಧಾನಿಗಳಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಮೋದಿಯ ನಂತರದ ಸ್ಥಾನದಲ್ಲಿ ವಾಜಪೇಯಿ, ಕಾಂಗ್ರೆಸಿನ ರಾಜೀವ್ ಗಾಂಧಿ, ಪಿ.ವಿ.ನರಸಿಂಹ ರಾವ್ ಇದ್ದಾರೆ. 1000 ಕ್ಕೂ ಕಡಿಮೆ ದಿನ ಆಳ್ವಿಕೆ ನಡೆಸಿದ ಪ್ರಧಾನಿಗಳ ಪಟ್ಟಿಯಲ್ಲಿ ಮೊರಾರ್ಜಿ ದೇಸಾಯಿ, ಲಾಲ್ ಬಹಾದೂರ್ ಶಾಸ್ತ್ರಿ, ದೇವೇಗೌಡ ಇದ್ದಾರೆ.

ಪ್ರಧಾನಿಗಳುದಿನಗಳು
ಜವಾಹರಲಾಲ್ ನೆಹರು6,130
ಇಂದಿರಾ ಗಾಂಧಿ5,829
ಮನಮೋಹನ್ ಸಿಂಗ್3,656
ಅಟಲ್ ಬಿಹಾರಿ ವಾಜಪೇಯಿ2,272
ನರೇಂದ್ರ ಮೋದಿ2,272 *
ರಾಜೀವ್ ಗಾಂಧಿ1857
ಪಿ.ವಿ.ನರಸಿಂಹ ರಾವ್1791
ಮೊರಾರ್ಜಿ ದೇಸಾಯಿ856
ಲಾಲ್ ಬಹಾದುರ್ ಶಾಸ್ತ್ರಿ581
ವಿ.ಪಿ.ಸಿಂಗ್343
ಐ.ಕೆ.ಗುಜ್ರಾಲ್331
ಹೆಚ್.ಡಿ.ದೇವೇಗೌಡ324
ಚಂದ್ರಶೇಖರ್223
ಚರಣ್ ಸಿಂಗ್170
ಗುಲ್ಜಾರಿ ಲಾಲ್ ನಂದಾ26





Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಬೆಂಗಳೂರು ಹಿಂಸಾಚಾರ: ದೊಂಬಿಕೋರರಿಂದಲೇ ನಷ್ಟ ಭರ್ತಿಯ ಕಠಿಣ ಕ್ರಮಕ್ಕೆ ನೆಟ್ಟಿಗರ ಆಗ್ರಹ
Next post India Independence Day| ಧೃತಿಗೆಡದಿರಿ, ಭಾರತ ಬೆಳಗುತ್ತಿದೆ, ಸ್ವಾವಲಂಬಿಗಳಾಗೋಣ: ಧೈರ್ಯ ತುಂಬಿದ ಮೋದಿ

ಸುದ್ದಿ ಸಂಚಯ

ಇವುಗಳನ್ನೂ ನೋಡಿ