Read Time:2 Minute, 48 Second

Cricket | MS Dhoni, Raina Retires: ಧೋನಿ, ರೈನಾ ನಿವೃತ್ತಿ ಘೋಷಣೆ

0 0

ಭಾರತ ಕಂಡ ಶ್ರೇಷ್ಠ ಕ್ರಿಕೆಟ್ ನಾಯಕರಲ್ಲೊಬ್ಬರಾದ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಧೋನಿ ತಮ್ಮ ನಿರ್ಧಾರವನ್ನು ಶನಿವಾರ (ಆಗಸ್ಟ್ 15 2020) ಪ್ರಕಟಿಸಿದರು. ಕೆಲವೇ ಕ್ಷಣಗಳಲ್ಲಿ, ಅವರ ಸಹ ಆಟಗಾರ, ಸುರೇಶ್ ರೈನಾ ಕೂಡ, ತಾವೂ ಕ್ಯಾಪ್ಟನ್ ಧೋನಿಯನ್ನೇ ಅವರ ಪ್ರಯಾಣದಲ್ಲಿ ಹಿಂಬಾಲಿಸುವುದಾಗಿ ಘೋಷಿಸುವ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಮತ್ತೊಂದು ಆಘಾತ ನೀಡಿದ್ದಾರೆ.

ಕೋವಿಡ್ ಸಂಕಷ್ಟ ಆರಂಭಕ್ಕೂ ಮುನ್ನವೇ ಧೋನಿ ನಡುವೆ ನಿವೃತ್ತಿ ಬಗ್ಗೆ ಸಾಕಷ್ಟು ವಾದ-ವಿವಾದಗಳು ಆರಂಭವಾಗಿದ್ದವು.

ಇದೀಗ 39ರ ಹರೆಯದ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿದಿದ್ದು, ಟ್ವೆಂಟಿ 20ಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.

2007ರಿಂದ 2016ರವರೆಗೆ ಭಾರತ ಏಕದಿನ ತಂಡವನ್ನೂ, 2008ರಿಂದ 2014ರವರೆಗೆ ಟೆಸ್ಟ್ ತಂಡವನ್ನೂ ಮುನ್ನಡೆಸಿದ್ದರು. ಕ್ರಿಕೆಟ್‌ನ ಎಲ್ಲ ಮಾದರಿಗಳ ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ಕ್ರಿಕೆಟ್ ಕ್ಯಾಪ್ಟನ್ ಎಂಬ ಹೆಗ್ಗಳಿಕೆ ಅವರದು.

1981ರ ಜುಲೈ 07 ರಂದು ರಾಂಚಿಯಲ್ಲಿ ಜನಿಸಿದ ಅವರು ಭಾರತದ ಯಶಸ್ವೀ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. 2011 ರಲ್ಲಿ ಭಾರತಕ್ಕೆ ಎರಡನೇ ವಿಶ್ವಕಪ್ ಕೊಡಿಸಿದ್ದು, 2007ರ ಟ್ವೆಂಟಿ20 ಕ್ರಿಕೆಟ್ ಉದ್ಘಾಟನಾ ಸರಣಿಯ ವಿಶ್ವಕಪ್ ಭಾರತಕ್ಕೆ ತಂದಿದ್ದು ಅವರ ಹೆಗ್ಗಳಿಕೆ.

350 ಏಕದಿನ ಏಕದಿನ ಪಂದ್ಯಗಳಿಂದ 10,773 ರನ್ ಸಂಗ್ರಹಿಸಿರುವ ಧೋನಿ, 10 ಸೆಂಚುರಿ ಬಾರಿಸಿದ್ದರೆ, ವಿಕೆಟ್ ಕೀಪರ್ ಆಗಿ 321 ಕ್ಯಾಚ್‌ಗಳು ಮತ್ತು 123 ಸ್ಟಂಪ್ ಔಟ್ ಮಾಡಿದ್ದಾರೆ.

Instagram ನಲ್ಲಿ ಧೋನಿ ಬರೆದಿದ್ದು:
“Thanks a lot for ur love and support throughout.from 1929 hrs consider me as Retired.”
ಆಗಸ್ಟ್ 15 ರ ಸಂಜೆ 07:29.

ಧೋನಿ ನಿವೃತ್ತಿ ಘೋಷಣೆಯ ಬೆನ್ನಿಗೇ ಅವರ ಚೆನ್ನೈ ಟೀಂ ಸಹಯೋಗಿ, 33ರ ಹರೆಯದ ಸುರೇಶ್ ರೈನಾ ಕೂಡ ನಿವೃತ್ತಿ ಘೋಷಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲೇ ಸುರೇಶ್ ರೈನಾ ಬರೆದುಕೊಂಡಿರುವುದು ಹೀಗೆ:

“It was nothing but lovely playing with you, @mahi7781. With my heart full of pride, I choose to join you in your journey. Thank you India. Jai Hind.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post Contempt of Court: ಸ್ವತಃ ವಕೀಲರಾಗಿರೋ ಪ್ರಶಾಂತ್ ಭೂಷಣ್ ಮಾಡಿದ್ದೇನು? ಮುಂದೇನು?
Next post FB, WhatsApp ನಿಯಂತ್ರಣ | ಪಕ್ಷವನ್ನೇ ನಿಯಂತ್ರಿಸಲಾರದವರ ಹಳಹಳಿಕೆ: ರಾಹುಲ್ ಗಾಂಧಿಗೆ ಬಿಜೆಪಿ ಟಾಂಗ್ ಕೊಟ್ಟಿದ್ದು ಹೀಗೆ!

ಸುದ್ದಿ ಸಂಚಯ

ಇವುಗಳನ್ನೂ ನೋಡಿ