Read Time:4 Minute, 24 Second

Health Tips: ಧೂಮಪಾನಿಗಳಿಂದ Social Distance ಕಾಯ್ದುಕೊಳ್ಳಿ!

0 0

ಹೊಗೆ ಬತ್ತಿ ಸೇವನೆ ಕಡ್ಡಾಯವಾಗಿ ನಿಷೇಧಿಸಿದೆ ಎಂದು ಲಾಗಾಯ್ತಿನಿಂದಲೂ ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಕಾಣುತ್ತಿದ್ದೆವು. ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗ ಧೂಮಪಾನವನ್ನೂ ನಿಷೇಧಿಸಲಾಗಿದೆ. ಇದರ ಹಿಂದೆ ಕಾರಣವಿದೆ.

ಬೀಡಿ, ಸಿಗರೇಟು ಸೇದುವ ಚಟವಿರುವ ಧೂಮಪಾನಿಗಳು ತಮ್ಮ ಜೀವನವನ್ನಷ್ಟೇ ಸುಡುವುದಲ್ಲ, ಬದಲಾಗಿ, ಪಕ್ಕದಲ್ಲಿರುವವರ ಜೀವಕ್ಕೂ ಕಂಟಕಪ್ರಾಯರು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ. ಧೂಮಪಾನಿಯೊಬ್ಬ ಹತ್ತಿರ ಬಂದರೆ, ಬೀಡಿಯೋ, ಸಿಗರೇಟೋ ವಾಸನೆ ಬರುತ್ತಿದೆ ಎಂದಾದರೆ, ಆ ಕೆಟ್ಟ ಗಾಳಿ ನಮ್ಮ ಶ್ವಾಸಕೋಶಕ್ಕೂ ಹೊಕ್ಕುತ್ತಿದೆ ಎಂದೇ ಅರ್ಥ.

ಇದೀಗ ಕೊರೊನಾ ವೈರಸ್ ಕಾಲದಲ್ಲಿ ಧೂಮಪಾನಿಗಳ ಮೂಗು-ಬಾಯಿಂದ ಬರುವ ಕೆಟ್ಟ ವಾಸನೆ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಹೊಗೆಯಲ್ಲಿ ಕೊರೊನಾ ವೈರಸ್ ಇರುವಿಕೆಗೆ ಯಾವುದೇ ದೃಢೀಕೃತ ಸಾಕ್ಷಿ ಇಲ್ಲದಿದ್ದರೂ, ಸಮೀಪದಲ್ಲಿದ್ದ ವ್ಯಕ್ತಿಯಿಂದ ಸಿಗರೇಟು ವಾಸನೆ ಬರುತ್ತಿದೆ ಎಂದಾದರೆ, ಬೇರೆಯವರ ಶ್ವಾಸಕೋಶದೊಳಗಿನ ಗಾಳಿಯನ್ನು ನೀವೂ ಉಸಿರಾಡುತ್ತಿದ್ದೀರಿ ಎಂಬುದರ ಎಚ್ಚರಿಕೆ ಸಂಕೇತವೆಂದೇ ತಿಳಿಯಬೇಕು.

ಕ್ಯಾಲಿಫೋರ್ನಿಯಾ ವಿವಿಯ ಕೆಮಿಕಲ್ಎಂಜಿನಿಯರಿಂಗ್ ಪ್ರೊಫೆಸರ್ ವಿಲಿಯಮ್ ರಿಸ್ಟೆಂಪಾರ್ಟ್ ಅವರು ವಾಷಿಂಗ್ಟನ್ ಪೋಸ್ಟ್‌ನಲ್ಲಿ ಬರೆದಿರುವ ಲೇಖನವೊಂದರ ಪ್ರಕಾರ, ಸೆಕೆಂಡ್ ಹ್ಯಾಂಡ್ (ಧೂಮಪಾನಿಗಳ ಶ್ವಾಸಕೋಶದಿಂದ ಬರುವ) ಹೊಗೆಯಲ್ಲಿ ವೈರಸ್ ಇರುವ ಸಾಧ್ಯತೆಗಳು ಕಡಿಮೆ. ಕಾರಣವೆಂದರೆ, ಒಂದನೆಯದು ಸಿಗರೇಟಿನ ಬೆಂಕಿಯ ಬಿಸಿಗೆ ವೈರಸ್ ಸಾಯುವ ಸಾಧ್ಯತೆ ಇದೆ ಮತ್ತು ವೈರಸ್‌ನ ಅಂಶವಿದ್ದರೂ ಕೂಡ, ಅದು ಧೂಮಪಾನಿಯ ಶ್ವಾಸಕೋಶದೊಳಗೇ ಸೇರಿಕೊಂಡಾಗಿರುತ್ತದೆ. ಉಸಿರು ಬಿಡುವಾಗ ಅದು ಹೊರಬರುವ ಸಾಧ್ಯತೆಗಳು ಕಡಿಮೆ ಎನ್ನುತ್ತಾರವರು.

ಆದರೆ, ಬೇರೆಯವರು ಹೊರಬಿಟ್ಟ ಸಿಗರೇಟು ಹೊಗೆಯನ್ನು ನೀವು ಸೇವಿಸುವಾಗ ವೈರಸ್ ಅಥವಾ ಬೇರಾವುದೇ ರೋಗಕಾರಕ ವಸ್ತುಗಳು ವರ್ಗಾವಣೆಯಾಗುವುದರ ಬಗ್ಗೆ ಆತಂಕವಿದ್ದೇ ಇದೆ. ಯಾಕೆಂದರೆ, ಫ್ಯಾಶನ್‌ಗೆಂದೋ ಕೆಲವರು ಹೊಗೆಯನ್ನು ಬೇರೊಬ್ಬನ ಮುಖಕ್ಕೇ ಉಗುಳುತ್ತಾರಲ್ಲವೇ? ಆ ಸಂದರ್ಭದಲ್ಲಿ ಶ್ವಾಸಕೋಶದೊಳಗಿನ ಸೂಕ್ಷ್ಮ ಕಣಗಳು ಕೂಡ ಹೊರಬರುವ ಸಾಧ್ಯತೆಯಂತೂ ಇದ್ದೇ ಇದೆ. ಯಾಕೆಂದರೆ, ಈ ‘ಛಾಯಾ ಹೊಗೆಬತ್ತಿ ಸೇವನೆ’ ಪ್ರಕ್ರಿಯೆಯಲ್ಲಿ ನಾವು ಧೂಮಪಾನಿಯ ಶ್ವಾಸಕೋಶದೊಳಕ್ಕೆ ಹೋಗಿ ಬಂದ ಹೊಗೆಯನ್ನೇ ಸೇವಿಸುತ್ತೇವೆ! ಇದರಲ್ಲಿ ಸಿಗರೇಟಿನ ಬೂದಿಯ ಅಂಶಕ್ಕಿಂತಲೂ, ಶ್ವಾಸಕೋಶದೊಳಗಿನ ಮ್ಯೂಕೋಸಾ ಎಂಬ ದ್ರವೀಯ ವಸ್ತುವಿನೊಂದಿಗೆ ಸೂಕ್ಷ್ಮಾಣುಗಳು ಹೊರಬರುವ ಸಾಧ್ಯತೆಗಳಿರುತ್ತವೆ ಎಂದು ರಿಸ್ಟೆನ್‌ಪಾರ್ಟ್ ಹೇಳುತ್ತಾರೆ.

ಈ ಧೂಮಪಾನಿಗಳು ಹೊಗೆ ಬಿಡಬೇಕಾದರೆ, ತಾವು ಧರಿಸಿದ ಮಾಸ್ಕ್ ತೆಗೆಯಲೇಬೇಕಾಗುತ್ತದೆ. ಈ ಕಾರಣಕ್ಕಾಗಿಯೇ, ಧೂಮಪಾನಿಗಳ ಶ್ವಾಸಕೋಶದೊಳಗಿನ ಕಣಗಳು ನಮ್ಮ ದೇಹದೊಳಗೆ ಸೇರದಂತಿರಲು ಎಂಬುದಕ್ಕಾಗಿಯಾದರೂ ನಾವು ಮಾಸ್ಕ್ ಧರಿಸಲೇಬೇಕಾಗುತ್ತದೆ. ಕಾರಣವೆಂದರೆ, ಈ ಧೂಮಪಾನಿಗಳು ಸಾಮಾನ್ಯ ರೀತಿಯಲ್ಲಿ ನಿಶ್ವಾಸ ಮಾಡುವುದಿಲ್ಲ, ಅವರು ಜೋರಾಗಿಯೇ ಉಸಿರುಬಿಡುತ್ತಾರೆ. ಒರ್ಲಾಂಡೊದ ಶ್ವಾಸಕೋಶ ತಜ್ಞ ಹರ್ಮ್ ಗಟ್ಜಾಂಬೈಡ್ (Herman Gatzambide) ಹೇಳುವಂತೆ, ಧೂಮಪಾನ ಮಾಡದವರ ಉಸಿರಿನಿಂದ ಹೊರಬೀಳುವ ಸೂಕ್ಷ್ಮಾಣುಗಳು 6 ಅಡಿ ದೂರದವರೆಗೆ ಮಾತ್ರ ರಾಚಬಲ್ಲುದು, ಆದರೆ ಧೂಮಪಾನಿಗಳು ಸಹಜವಾಗಿ ಬಿಡುವಾದ ಜೋರಾದ ಉಸಿರಿನಿಂದ ಸೂಕ್ಷ್ಮಕಣಗಳು 10ರಿಂದ 12 ಅಡಿವರೆಗೂ ಹರಡಬಲ್ಲವು!

ಹೀಗಾಗಿ, ಧೂಮಪಾನಿಗಳಿಂದ ಅಂತರ ಕಾಯ್ದುಕೊಳ್ಳುವುದು ಅತೀ ಮುಖ್ಯ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post Ganesh Chaturthi: ಸರಳ ಪೂಜೆಗೆ ಒಲಿಯುವಾತ ಕೊರೊನಾ ಕಾಲದಲ್ಲಿ ಕಲಿಸಿದ ಪಾಠ
Next post Prashant Bhushan: ನ್ಯಾಯಾಂಗ ನಿಂದನೆ ಕೇಸಿಗೆ ಬೆಂಬಲಿಸುತ್ತಿದ್ದ ವಕೀಲ!

ಸುದ್ದಿ ಸಂಚಯ

ಇವುಗಳನ್ನೂ ನೋಡಿ