ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸುವ ಏಕೈಕ ಕಾರಣಕ್ಕೆ ಉಜ್ವಲ ಭವಿಷ್ಯಕ್ಕೆ ಹಾತೊರೆಯುತ್ತಿರುವ ಯುವ ಜನರ, ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಲು ಹೊರಟಿವೆ ವಿರೋಧ ಪಕ್ಷಗಳು. ಹೊಂಗನಸು ಕಾಣುತ್ತಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಒಂದು ಅಮೂಲ್ಯ ವರ್ಷವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಯುವಜನ ವಿರೋಧಿ ನಡೆ ತೋರಿಸುತ್ತಿರುವ ಪ್ರತಿಪಕ್ಷಗಳು ತಮ್ಮ ಜವಾಬ್ದಾರಿ ಮರೆತು, ಕೇವಲ ಮೋದಿ ವಿರೋಧಕ್ಕಾಗಿ ಪರೀಕ್ಷೆ ವಿರೋಧಿಸುತ್ತಿವೆ ಎಂಬುದು ಸ್ಪಷ್ಟ.
ವಿದೇಶೀ ಶಕ್ತಿಗಳೂ ಭಾರತದ ಪ್ರತಿಭೆಯ ಕೊಳವನ್ನು ಕಲುಷಿತಗೊಳಿಸಲು ಯತ್ನಿಸುತ್ತಿವೆ ಎಂಬುದಕ್ಕೆ ಗ್ರೆಟಾ ಥನ್‌ಬರ್ಗ್ ಎಂಬ ದಾರಿತಪ್ಪಿದ ಬಾಲಕಿ ಸಾಕ್ಷಿ.
ಏನೋ ಒಂದು ಪರಿಸರ ರಕ್ಷಣೆಯ ಹೇಳಿಕೊಟ್ಟ ಹೇಳಿಕೆಯನ್ನು ಹೇಳಿದಾಕ್ಷಣ ಬುದ್ಧಿಜೀವಿಯಾಗಲು ಹೊರಟಿರುವ ಈ ಗ್ರೆಟಾ ಥನ್‌ಬರ್ಗ್, ತಾನು ಶಾಲೆಗೆ ಮತ್ತೆ ಮರಳುವುದರ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾ, ಭಾರತದ ವಿದ್ಯಾರ್ಥಿಗಳ ವಿದ್ಯಾರ್ಜನೆಯ ತುಡಿತನ್ನು ವಿರೋಧಿಸುತ್ತಾಳೆ ಎಂದರೆ ಎಂಥಾ ಹಿಪಾಕ್ರಸಿ ಆಕೆಯದು. ಅದವಳ ತಪ್ಪಲ್ಲ, ಅವಳಿಗಿನ್ನೂ ಪ್ರಪಂಚವೆಂದರೇನೆಂದು ತಿಳಿಯದು. ಆಕೆಯ ದಾರಿ ತಪ್ಪಿಸಲಾಗಿದೆ ಎಂದಷ್ಟೇ ಭಾವಿಸಬಹುದು.
ಕೋವಿಡ್-19 ಕಾಯಿಲೆ ಕೂಡ ಹರಡುವುದನ್ನು ತಡೆಯಲು ಸರ್ಕಾರಗಳು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಜನರ ಸಹಕಾರ ಕಡಿಮೆಯಾದ ಕಾರಣ, ಹೇಳಿದ ಮಾತು ಕೇಳದೆ, ತನಗೇನೂ ಆಗುವುದಿಲ್ಲ ಎಂದು ಬೇಕಾಬಿಟ್ಟಿಯಾಗಿ ಓಡಾಡುತ್ತಿರುವವರು, ಕ್ವಾರಂಟೈನ್ ತಪ್ಪಿಸಿ ಅಡಗುವವರು, ಸೀಲ್‌ಡೌನ್ ಮಾಡಿದರೂ ಬೇಲಿ ಹಾರಿ ಊರೆಲ್ಲಾ ಸುತ್ತಿ ಬರುವವರು ಇರುವ ಕಡೆ, ಕೋವಿಡ್ ನಿಯಂತ್ರಣಕ್ಕೆ ಬರುವುದಾದರೂ ಹೇಗೆ ಎಂಬುದು ಸಾಮಾನ್ಯ ಜ್ಞಾನ.
ಓದಿ: NEET, JEE ಪರೀಕ್ಷೆ ಮುಂದೂಡಿಕೆಗೆ ದಾರಿತಪ್ಪಿದ ಬಾಲಕಿ ಗ್ರೆಟಾ ಥನ್‌ಬರ್ಗ್ ಅನಗತ್ಯ ಧ್ವನಿ
ಇಂಥ ಸಂದರ್ಭದಲ್ಲಿ, ಇದಕ್ಕೆಲ್ಲಾ ಮೋದಿಯೇ ಕಾರಣ ಎಂದು ದೂಷಿಸುವ ವರ್ಗಕ್ಕೆ, ದೇಶದ್ರೋಹಿಗಳು ಆಡುವ ಆಟದ ಹಿಂದಿನ ಕಾಣದ ಕೈಗಳ ಅರಿವಿಲ್ಲ.
ಕರ್ನಾಟಕದಲ್ಲೇ ನೋಡಿ, ಯಾವುದೇ ದೊಡ್ಡ ಸಮಸ್ಯೆಯಿಲ್ಲದೆಯೇ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳನ್ನಷ್ಟೇ ಅಲ್ಲದೆ ಸಿಇಟಿಯನ್ನೂ ನಡೆಸಿಲ್ಲವೇ? ಸೂಕ್ತ ಮುನ್ನೆಚ್ಚರಿಕೆ ಕೈಗೊಂಡು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಪಾಯವಾಗದಂತೆ ನೋಡಿಕೊಂಡ ಒಳ್ಳೆಯ ಕೆಲಸ ಮಾಡಿರುವ ಸರ್ಕಾರವನ್ನೂ ಟೀಕಿಸುವವರಿದ್ದಾರೆ ಎಂದರೆ, ಇವರ ರಕ್ತದಲ್ಲಿ ಮೋದಿ ದ್ವೇಷವೋ, ಬಿಜೆಪಿ ದ್ವೇಷವೋ ಎಷ್ಟಿದೆ ಎಂಬುದರ ಅರಿವಾಗಬಹುದು.
ಮೋದಿ ಅಥವಾ ಬಿಜೆಪಿ ಆಳ್ವಿಕೆಯಲ್ಲಿ ದೇಶಕ್ಕೆ ಸಿಗುತ್ತಿರುವ ಒಳ್ಳೆಯ ಹೆಸರು ಕೆಡಿಸುವ ದೇಶದ್ರೋಹಿ ಮನಸ್ಥಿತಿಯವರ ಪಾಡು ನೋಡಬೇಕಾಗಿದೆ. ಏನೇ ಒಳ್ಳೆಯ ಕೆಲಸ ಮಾಡಿದರೂ, ದೇಶಕ್ಕೆ ಒಳ್ಳೆಯದೇ ಆದರೂ ಒಪ್ಪಿಕೊಳ್ಳುವ ಪ್ರಾಮಾಣಿಕತೆ ಇವರಲ್ಲಿಲ್ಲ. ಹೇಗೆಂದರೆ, ಒಂದೂರಿನ ಶೇ.80ರಷ್ಟು ಬಡವರಿಗೆ ಉಣ್ಣಲು ಅಶನ, ಉಡಲು ವಸನ ಸಿಕ್ಕಿದೆ ಎಂದಾದರೆ, ಮೋದಿ ಆ ಉಳಿದ ಶೇ.20 ಮಂದಿಗೆ ಏನೂ ಕೊಟ್ಟಿಲ್ಲ ಎಂಬ ಕೊಂಕು ನುಡಿಯುವ ಜಾತಿಯವರು ಅವರು! ಇಂಥ ಕೆಟ್ಟ ವ್ರಣಗಳು ಸಮಾಜವನ್ನು ಕಾಂಡಕೊರಕನಂತೆ ಕೊರೆಯುತ್ತಿವೆ. ಇವುಗಳನ್ನು ಗುರುತಿಸಿ ದೂರವಿರುವುದೇ ಲೇಸು ಅನ್ನಿಸುವುದಿಲ್ಲವೇ?
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy .

Average Rating