Read Time:2 Minute, 31 Second

ಅಂತಿಮ ಪರೀಕ್ಷೆಯಿಲ್ಲದೆ ಪದವಿ ಇಲ್ಲ: ಯುಜಿಸಿ ನಿಲುವಿಗೆ ಸುಪ್ರೀಂ ಕೋರ್ಟ್ ಮುದ್ರೆ

0 0

ನವದೆಹೆಲಿ: ವಿಶ್ವವಿದ್ಯಾಲಯಗಳು ಸೆಪ್ಟೆಂಬರ್ 30ರೊಳಗೆ ಅಂತಿಮ ಪದವಿ ಪರೀಕ್ಷೆಗಳನ್ನು ಪೂರ್ಣಗೊಳಿಸಬೇಕೆಂಬ ಯುಜಿಸಿ ಸುತ್ತೋಲೆಯ ಮಾನ್ಯತೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ.

ಅಂತಿಮ ಪರೀಕ್ಷೆ ಮಾಡದೆ ಯಾವುದೇ ರಾಜ್ಯ ಸರ್ಕಾರವೂ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಸುಭಾಷ್ ರೆಡ್ಡಿ ಹಾಗೂ ಎಂ.ಆರ್.ಶಾ ಅವರನ್ನೊಳಗೊಂಡ ನ್ಯಾಯಪೀಠವು ಹೇಳಿತು.

ಇದರೊಂದಿಗೆ, ಪರೀಕ್ಷೆಯಿಲ್ಲದೆ ಪದವಿಯಿಲ್ಲ ಎಂಬ ಯುಜಿಸಿ ನಿಲುವಿಗೆ ಮಾನ್ಯತೆ ಸಿಕ್ಕಂತಾಗಿದೆ.

ಆದರೆ, ಕೋವಿಡ್-19 ಪಿಡುಗಿನ ತೀವ್ರತೆಯ ಕಾರಣ ಅಥವಾ ಯುಜಿಸಿಯಿಂದ ಒಪ್ಪಿಗೆ ಬೇರಾವುದೇ ಕಾರಣಗಳ ಆಧಾರದಲ್ಲಿ ರಾಜ್ಯ ಪ್ರಕೋಪ ನಿರ್ವಹಣಾ ಪ್ರಾಧಿಕಾರವು (ಎನ್‌ಡಿಆರ್‌ಎಫ್) ಪರೀಕ್ಷೆಗಳ ಮುಂದೂಡಿಕೆ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಬಹುದು ಎಂದೂ ನ್ಯಾಯಾಲಯ ಹೇಳಿದೆ.

ಹಿಂದಿನ ವರ್ಷಗಳ ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವುದು ನ್ಯಾಯಾಲಯದ ವ್ಯಾಪ್ತಿಯ ಹೊರಗಿದೆ ಎಂದು ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನೆನಪಿಸಿತು.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy.

ಜು.16ರಂದು ಯುಜಿಸಿ ಸುತ್ತೋಲೆಯಲ್ಲಿ ಪರೀಕ್ಷೆಗಳನ್ನು ನಡೆಸುವಂತೆ ವಿವಿಗಳಿಗೆ ಸೂಚಿಸಲಾಗಿತ್ತು. ಇದನ್ನು ಪ್ರಶ್ನಿಸಿ, ಕೋವಿಡ್ ಹಾಗೂ ಪ್ರವಾಹದ ಕಾರಣಗಳಿಂದಾಗಿ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ಬೆಂಗಳೂರಿನ ಪ್ರಣೀತ್ ಕೆ. ಹಾಗೂ ಇತರರು ಸಲ್ಲಿಸಿದ್ದ ಅರ್ಜಿಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದಿದೆ. ಆಗಸ್ಟ್ 18ರಂದು ನ್ಯಾಯಾಲಯವು ತೀರ್ಪು ಕಾಯ್ದಿರಿಸಿತ್ತು.

ಯುಜಿಸಿಯ ನಿರ್ದೇಶನವನ್ನು ಮಹಾರಾಷ್ಟ್ರ, ದೆಹಲಿ ಹಾಗೂ ಒಡಿಶಾ ಮುಂತಾದ ಸರ್ಕಾರಗಳು ಬಲವಾಗಿ ವಿರೋಧಿಸಿದ್ದವು.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post Right To Education: ಶಾಲೆಗಳಿಲ್ಲದೆ ಮಕ್ಕಳ ಹಕ್ಕುಗಳ ಚ್ಯುತಿಯಾಗಿದೆಯೇ?
Next post ಪತ್ರ ಬರೆದವರಿಗೆ ಸ್ಪಷ್ಟ ಸಂದೇಶ: ಯುವ ನಾಯಕರಿಗೆ ಮಣೆ ಹಾಕಿದ ಕಾಂಗ್ರೆಸ್

ಸುದ್ದಿ ಸಂಚಯ

ಇವುಗಳನ್ನೂ ನೋಡಿ