ನವದೆಹಲಿ: ನ್ಯಾಯಾಂಗವನ್ನು, ನ್ಯಾಯಮೂರ್ತಿಗಳನ್ನು ನೇರವಾಗಿ ಟಾರ್ಗೆಟ್ ಮಾಡಿ ನಿಂದಿಸಿದ್ದರೂ, ಹಾಗೆ ಮಾಡಿಲ್ಲ, ಕ್ಷಮೆ ಕೇಳುವುದಿಲ್ಲ ಎಂದು ಪಟ್ಟು ಹಿಡಿಯುತ್ತಾ, ದೇಶದ ಪರಮೋಚ್ಚ ನ್ಯಾಯಾಲಯದ ಅಮೂಲ್ಯ ಸಮಯವನ್ನೂ ಹಾಳು ಮಾಡಿದ ‘ಹೋರಾಟಗಾರ’ ಪ್ರಶಾಂತ್ ಭೂಷಣ್‌ಗೆ ಸುಪ್ರೀಂ ಕೋರ್ಟ್ ಕರುಣೆ ತೋರಿ, ಒಂದು ರೂಪಾಯಿ ದಂಡ ವಿಧಿಸಿತ್ತು. ಇದೀಗ ದಂಡ ಪಾವತಿಸಿದ ಭೂಷಣ್, ಆದರೂ ಅಸಮಾಧಾನ ಹೊರಗೆಡಹುವುದರಿಂದ ತಪ್ಪಿಸಲಾಗಲಿಲ್ಲ.
ದಂಡವನ್ನು ಸೆ.15ರೊಳಗೆ ಪಾವತಿಸಲು ವಿಫಲವಾದಲ್ಲಿ, ಮೂರು ತಿಂಗಳ ಸಾದಾ ಕಾರಾಗೃಹ ವಾಸ ಶಿಕ್ಷೆ ಮತ್ತು ಹಾಗೂ ಮೂರು ವರ್ಷ ಕಾನೂನು ಪ್ರಾಕ್ಟೀಸ್ ಮಾಡದಂತೆ ನಿಷೇಧ ಶಿಕ್ಷೆ ಎದುರಿಸುವಂತೆ ತೀರ್ಪು ನೀಡಿರುವುದು, ನ್ಯಾಯಾಂಗ ನಿಂದಿಸುವವರಿಗೆ ಸೂಕ್ತ ಎಚ್ಚರಿಕೆಯೂ ಆಗಿದೆ. ನ್ಯಾಯಾಂಗ ನಿಂದನೆ ಮಾಡಿದವರೆಲ್ಲರೂ ಒಂದು ರೂಪಾಯಿ ದಂಡ ಕಟ್ಟಿದರಾಯಿತು ಎಂಬ ಸಂದೇಶವೇನೂ ಇಲ್ಲಿಲ್ಲ. ಆದರೆ ಎಚ್ಚರಿಕೆಯ ಪಾಠವಿದೆ.
ನ್ಯಾಯಾಂಗವನ್ನು ನಿಂದಿಸಿ ಮಾಡಿದ್ದ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ 82 ಪುಟಗಳ ತೀರ್ಪಿನಲ್ಲಿ ಸೋಮವಾರ ಶಿಕ್ಷೆ ಪ್ರಕಟಿಸಲಾಗಿದ್ದು, ಇದು ಉದ್ದೇಶಪೂರ್ವಕ ಟೀಕೆಯೂ ಅಲ್ಲ, ಸಾರ್ವಜನಿಕ ಹಿತಾಸಕ್ತಿಯದೂ ಅಲ್ಲ ಎಂಬ ಭೂಷಣ್ ಅವರ ನೆಪವನ್ನು ನ್ಯಾಯಾಲಯ ತಿರಸ್ಕರಿಸಿದೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy .
ಹೆಚ್ಚೇನೂ ವಾದ ಮಾಡದೆ ಭೂಷಣ್ ಅವರು 1 ರೂಪಾಯಿ ದಂಡ ಕಟ್ಟಿರುವುದು ಒಳ್ಳೆಯ ಬೆಳವಣಿಗೆಯಾದರೂ, ಆ ಬಳಿಕ ನೀಡಿದ ಹೇಳಿಕೆಯು ಅವರೊಳಗಿನ ಅಹಂಗೆ ಏಟು ಬಿದ್ದಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಶಿಕ್ಷೆ ತೀರ್ಪಿನ ಮರುಪರಿಶೀಲನೆ ಬಗ್ಗೆ ಯೋಚಿಸುವೆ. ಇದು ‘ಅಭಿವ್ಯಕ್ತಿ ಸ್ವಾತಂತ್ರ್ಯದ’ ಐತಿಹಾಸಿಕ ಕ್ಷಣ ಎಂದರು. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಆದರೆ ಮುಂದಿನ ಮಾತುಗಳಲ್ಲಿ ಅವರ ಮನಸ್ಥಿತಿ ಎದ್ದು ಕಾಣುತ್ತಿತ್ತು. ಅವರಂದಿದ್ದು, “ಪ್ರತಿಯೊಬ್ಬ ಭಾರತೀಯನೂ ಪ್ರಬಲ ಮತ್ತು ಸ್ವತಂತ್ರ ನ್ಯಾಯಾಂಗವನ್ನು ಬಯಸುತ್ತಿದ್ದಾನೆ” ಹಾಗೂ “ನ್ಯಾಯಾಲಯವೇ ದುರ್ಬಲವಾದರೆ, ಅದು ಪ್ರಜಾಸತ್ತೆಯನ್ನೇ ದುರ್ಬಲಗೊಳಿಸಬಹುದು”.
ಪ್ರಸ್ತುತ ಮುಖ್ಯ ನ್ಯಾಯಮೂರ್ತಿಗಳಾದ ಎಸ್.ಎ.ಬೊಬಡೆ ಅವರು 50 ಲಕ್ಷದ ಮೋಟಾರ್ ಬೈಕ್ ಓಡಿಸುವ ಚಿತ್ರದೊಂದಿಗೆ ಒಂದು ಟ್ವೀಟ್ ಹಾಗೂ ಮಾಜಿ ಸಿಜೆಐಗಳು ಭಾರತೀಯ ಪ್ರಜಾಸತ್ತೆಗೆ ಹಾನಿ ಉಂಟು ಮಾಡಿದ್ದಾರೆಂದು ಆರೋಪಿಸಿದ ಮತ್ತೊಂದು ಟ್ವೀಟ್ ಭಾರಿ ವಿವಾದಕ್ಕೆ ಕಾರಣವಾಗಿತ್ತು.
ನ್ಯಾಯಾಂಗ ನಿಂದನೆ: ಕ್ಷಮೆ ಕೇಳಿದ್ರೆ ‘ಅಪ್ರಾಮಾಣಿಕ’ ಆಗ್ತೀನಿ, ಕೇಳಲ್ಲ ಎಂದಿದ್ದ ಪ್ರಶಾಂತ್ ಭೂಷಣ್
ಇದೇ ವೇಳೆ, 2009ರಲ್ಲಿ ತೆಹಲ್ಕಾ ಎಂಬ ಮ್ಯಾಗಜಿನ್‌ಗೆ ನೀಡಿದ್ದ ಸಂದರ್ಶನದಲ್ಲಿಯೂ ಭೂಷಣ್ ನ್ಯಾಯಾಂಗ ನಿಂದನೆಯ ಕೇಸು ಎದುರಿಸುತ್ತಿದ್ದು, ಅದರ ವಿಚಾರಣೆಯನ್ನು ಬೇರೆಯೇ ಪೀಠವು ಸೆ.10ರಂದು ನಡೆಸಲಿದೆ.

Average Rating