ಕಳೆದ ವಾರವಷ್ಟೇ ತಾವು ಆಕ್ರಮಿಸಿಕೊಂಡ ಎತ್ತರದ ಪ್ರದೇಶ ಈಗ ತಮ್ಮ ಕೈಬಿಟ್ಟು ಹೋಗಿದೆ. ಅಲ್ಲಿ ಭಾರತೀಯ ಪಡೆಗಳು ಝಂಡಾ ಹೂಡಿವೆ ಎಂಬ ಕಾರಣಕ್ಕಾಗಿಯೇ ಚೀನಾ ಅಷ್ಟೊಂದು ಕೆರಳಿ ಕೆಂಡವಾಗಿ, ಭಾರತ ಅತಿಕ್ರಮಣ ಮಾಡುತ್ತಿದೆ, ಪ್ರಚೋದನೆ ನೀಡುತ್ತಿದೆ ಎಂದೆಲ್ಲಾ ಬಂಬಡಾ ಬಜಾಯಿಸಿದ್ದು.
ಕಳೆದ ಮೂರ್ನಾಲ್ಕು ತಿಂಗಳಲ್ಲಿ ಚೀನಾಕ್ಕೆ ಇಷ್ಟೊಂದು ಕೋಪ ಇದುವರೆಗೂ ಬಂದದ್ದಿಲ್ಲ. ಇದಕ್ಕೆ ಕಾರಣ, ಭಾರತೀಯ ಕೆಚ್ಚೆದೆಯ ಸೇನಾ ಪಡೆ ಹಾಗೂ ಸ್ಪೆಶಲ್ ಫ್ರಾಂಟಿಯರ್ ಫೋರ್ಸ್ (SFF) ಸೇರಿಕೊಂಡು ಆಗಸ್ಟ್ 29ರ ಮಧ್ಯರಾತ್ರಿ ಪಾಂಗಾಂಗ್ ಸರೋವರದ ಅತ್ಯಂತ ಎತ್ತರದ ಪ್ರದೇಶದಲ್ಲಿ ತಮ್ಮ ಝಂಡಾ ಊರಿದ್ದು.
ಈ ಸ್ಪೆಶಲ್ ಫ್ರಾಂಟಿಯರ್ ಫೋರ್ಸ್ ಎಂಬುದು, ಚೀನಾದಿಂದ ದೌರ್ಜನ್ಯಕ್ಕೀಡಾದ ಟಿಬೆಟ್ ನಿರಾಶ್ರಿತರೇ ಇರುವ ಪಡೆ. ಭಾರತದ ಗುಪ್ತಚರ ಇಲಾಖೆಯಾಗಿರುವ ‘ರಾ’ ಅಡಿಯಲ್ಲಿ ಕೆಲಸ ಮಾಡುವ ದಿಟ್ಟ ಯೋಧರು ಇದರಲ್ಲಿದ್ದಾರೆ. ಅದರ ಕಾರ್ಯಾಚರಣೆಯೂ ರಹಸ್ಯವಾಗಿಯೇ ಇರುತ್ತದೆ ಎಂಬುದನ್ನರಿಯಬೇಕು.
ಇದನ್ನೂ ಓದಿ: ಲಡಾಖ್ನಲ್ಲಿ ಟಿಬೆಟ್ ರಹಸ್ಯ ಕಮಾಂಡೋಗಳ ಶೌರ್ಯ: ಚೀನಾಕ್ಕೆ ದೊಡ್ಡ ಶಾಕ್!
ಏನಿದು ಫಿಂಗರ್?
ಲಡಾಖ್ ಗಡಿ ಭಾಗದಲ್ಲಿ ಭಾರತ ಹಾಗೂ ಚೀನಾಕ್ಕೆ ಎರಡಕ್ಕೂ ವಾಸ್ತವ ಗಡಿ ನಿಯಂತ್ರಣ ರೇಖೆ (Line Of Actual Control) ಇದೆ. ಭಾರತದ ಭಾಗದ ಗಡಿ ಹಾಗೂ ಚೀನಾ ಭಾಗದ ಗಡಿಯ ನಡುವೆ, ಯಾರಿಗೂ ಸೇರದ ಜಾಗವಿದು.
ಪಾಂಗಾಂಗ್ ಸರೋವರದ ಸುತ್ತ ಒಟ್ಟು 8 ಪ್ರಮುಖ ದಿಬ್ಬ ಅಥವಾ ಶಿಖರಗಳಿವೆ. ಇವುಗಳನ್ನು ಫಿಂಗರ್ 1ರಿಂದ ಫಿಂಗರ್ 8ರವರೆಗೆ ಗುರುತಿಸಲಾಗುತ್ತದೆ.
ಪಾಂಗಾಂಗ್ ತ್ಸೊ ಅಥವಾ ಸರೋವರದ ಉತ್ತರ ದಂಡೆಯಲ್ಲಿರುವ ಫಿಂಗರ್ 4 ದಿಬ್ಬವು ಯುದ್ಧ ಸಂಬಂಧಿತ ಕಾರ್ಯವ್ಯೂಹಗಳಿಗೆ ಅತ್ಯಂತ ಪ್ರಮುಖವಾದ ಶಿಖರ. ಯಾಕೆಂದರೆ ಅತೀ ಎತ್ತರದ ಬೆಟ್ಟವಿದು. ಇದನ್ನೇರಿದರೆ, ಸುತ್ತಮುತ್ತ ಎಲ್ಲ ಚಲನವಲನಗಳ ಮೇಲೆ ಹದ್ದಿನ ಕಣ್ಣಿರಿಸಬಹುದಾಗಿದೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ. ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy .
ಈ ಹಿಂದೆ ಈ ಬೆಟ್ಟಗಳಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಪಡೆಗಳು ಬೀಡು ಬಿಟ್ಟಿದ್ದವು. ಜೂನ್ ತಿಂಗಳಲ್ಲಿ ಭಾರತೀಯ ಪಡೆಗಳ ಚಲನವಲನಗಳನ್ನು ನೋಡಿ, ದಾಳಿ ಮಾಡಿ ನಮ್ಮ ಸೈನಿಕರ ದುರಂತ ಬಲಿದಾನಕ್ಕೆ ಕಾರಣವಾಗಿದ್ದು ಈ ದಿಬ್ಬದ ಮೇಲೆ ಚೀನಾ ಸೈನಿಕರು ಬೀಡುಬಿಟ್ಟ ಕಾರಣದಿಂದಾಗಿಯೇ.
ಮೇ ತಿಂಗಳ ಆದಿಭಾಗದಿಂದ ಚೀನಾದ ಪಿಎಲ್ಎ ಸೈನಿಕರು ಫಿಂಗರ್ 4ರಿಂದ ಫಿಂಗರ್ 8ರವರೆಗಿನ ಬೆಟ್ಟಗಳಲ್ಲಿ ಆಕ್ರಮಿಸಿಕೊಂಡು, ಪೂರ್ವದ ಕಡೆಗೆ ಹಿಂದಕ್ಕೊತ್ತಿ ಹೋಗಲು ನಿರಾಕರಿಸಿದ್ದರು.
ಈಗ ಚೀನಾಕ್ಕೆ ಕೋಪ ಬಂದಿರುವುದೇಕೆಂದರೆ ಫಿಂಗರ್ 4ನಲ್ಲಿ ಭಾರತವು ತನ್ನ ಅಧಿಕಾರ ಸ್ಥಾಪಿಸಿಕೊಂಡಿದೆ. ಈ ಬೆಟ್ಟವೇರಿದಲ್ಲಿ, ಬೆಟ್ಟದಾಚೆಯಿಂದ ಚೀನಾ ಏನೆಲ್ಲಾ ದುಸ್ಸಾಹಸಕ್ಕೆ ಸಿದ್ಧತೆ ಮಾಡುತ್ತಿದೆ ಎಂಬುದನ್ನೆಲ್ಲಾ ಶೇ.100ರಷ್ಟು ನೋಡಬಹುದಾಗಿದೆ. ಭಾರತೀಯ ಸೈನಿಕರು ಸರ್ವಬಲ ಸಂಪನ್ನರಾಗಿ ಈ ಬೆಟ್ಟಗಳನ್ನೇರಿ ಕುಳಿತಿದ್ದಾರೆ ಈಗ.
ಭಾರತದ ಲಡಾಖ್ಗೆ ಆಕ್ರಮಣ ಮಾಡಲು ಇರುವ ದಾರಿಗಳಲ್ಲಿ ರೆಕಿನ್ ಲಾ ಅಥವಾ ರೆಂಚಿನ್ ಬೆಟ್ಟದ ಕಣಿವೆಯು ಪ್ರಮುಖ ಮಾರ್ಗಗಳಲ್ಲೊಂದು. 1962ರ ಯುದ್ಧದ ಬಳಿಕ ಯಾರೂ ಆಕ್ರಮಿಸದೇ ಇದ್ದ ಈ ಬೆಟ್ಟ ಪ್ರದೇಶವು ಸ್ಪಾಂಗೂರ್ ಗ್ಯಾಪ್ಗೆ ತೀರಾ ಹತ್ತಿರವಿದೆ. PLA ತನ್ನ ಸೈನಿಕರನ್ನು ನಿಯೋಜಿಸಿದ ಮೋಲ್ಡೋ ಸೇನಾ ನೆಲೆಯು ಇಲ್ಲಿಂದ ಚೆನ್ನಾಗಿ ಕಾಣಿಸುತ್ತದೆ.
ಇದನ್ನೂ ಓದಿ: ಚೀನಾಕ್ಕೆ ಭಾರತ ಮತ್ತೆ ಶಾಕ್: PUBG, WeChat, Baidu ಸಹಿತ 118 ಆ್ಯಪ್ ನಿರ್ಬಂಧ (Full List)
ವಾಸ್ತವ ಗಡಿ ನಿಯಂತ್ರಣ ರೇಖೆಯ ನಮ್ಮ ಭಾಗದಲ್ಲೇ ಇರುವ ಎತ್ತರದ ಬೆಟ್ಟಗಳಲ್ಲಿ ನಮ್ಮ ಸೈನಿಕರು ಈಗ, ಎಲ್ಲ ಟ್ಯಾಂಕ್ ನಿರೋಧಕ ಕ್ಷಿಪಣಿಗಳು ಮತ್ತಿತರ ರಕ್ಷಣಾ ಸಾಮಗ್ರಿಗಳೊಂದಿಗೆ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ಹೇಳಿದ್ದು, ಚೀನಾಕ್ಕೆ ಆಗಿರುವ ಆತಂಕದ ಸೂಚಕವಿದು.
ಅರ್ಥವಾಗಿಲ್ಲವೇ?
1962ರಲ್ಲಿ ಭಾರತ-ಚೀನಾ ಯುದ್ಧದ ಬಳಿಕ ಚೀನಾವು ಅಕ್ಸಯ್ ಚಿನ್ ಭಾಗದಲ್ಲಿ ಭಾರತದ ಭೂಭಾಗದ ಬಹುತೇಕ ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು. ಆದರೆ, ಭಾರತಕ್ಕೆ ಅದು ತನ್ನದೇ ನೆಲ. ಹೀಗಾಗಿ, ಚೀನಾ ಸೇನೆಯು ಪದೇ ಪದೇ ಒಳ ನುಸುಳುತ್ತಿದೆ ಎಂದು ಭಾರತ ಹೇಳುತ್ತಲೇ ಇದೆ.
Line of Actual Control (LAC) ಎಲ್ಲೆಲ್ಲಾ ಹಾದು ಹೋಗುತ್ತದೆಯೋ ಅದನ್ನು ಚೀನಾ ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದೆ. ಈ ಕಾರಣದಿಂದಾಗಿ ಗಡಿಯಲ್ಲಿ, ವಿಶೇಷವಾಗಿ ಗಸ್ತು ಪಡೆಗಳ ಮಧ್ಯೆ ಸಂಘರ್ಷ ಏರ್ಪಡುತ್ತಲೇ ಇದೆ.
ಚಿತ್ರ ನೋಡಿದರೆ ತಿಳಿಯಬಹುದು. ಸರೋವರದ ಉತ್ತರ ದಂಡೆಯಲ್ಲಿ ಕೈಬೆರಳುಗಳ ರೀತಿಯಲ್ಲಿ ಎಂಟು ಎತ್ತರದ ದಿಬ್ಬ ಅಥವಾ ಕಿರುಬೆಟ್ಟಗಳಿವೆ.
ಭಾರತವು LAC ಅಂತ ಪರಿಗಣಿಸುವುದು ಫಿಂಗರ್ 7 ಹಾಗೂ 8ರ ನಡುವಿನ ರೇಖೆಯನ್ನು. ಆದರೆ, ಚೀನಾ ಪರಿಗಣಿಸುವುದು ಫಿಂಗರ್ 3 ಮತ್ತು 4 ನಡುವಿರುವ ರೇಖೆಯನ್ನು.
ಹಲವಾರು ತಿಂಗಳಿಂದ ಚೀನಾವು ಪೂರ್ವ ಲಡಾಖ್ನ ಈ ಪ್ರದೇಶದಲ್ಲಿ ಯಥಾಸ್ಥಿತಿಯನ್ನು ಬದಲಿಸಲು ಪ್ರಯತ್ನಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಚೋದನಾಕಾರಿ ಕ್ರಮಗಳನ್ನು ಕೈಗೊಂಡಿತ್ತು.
ಆ.29ರ ರಾತ್ರಿಯೂ ದುಸ್ಸಾಹಸಕ್ಕಿಳಿದಿದ್ದ ಚೀನಾ ಸೈನಿಕರನ್ನು ಭಾರತೀಯ ಯೋಧರು ಹಿಮ್ಮೆಟ್ಟಿಸಿದ್ದರು, ಮತ್ತಷ್ಟು ಮುಂದಕ್ಕೆ ಹೋಗಿ, ಅತ್ಯಂತ ಎತ್ತರದ ಪರ್ವತೀಯ ಪ್ರದೇಶದಲ್ಲಿ ತಮ್ಮ ನೆಲೆ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದರು. ಇದುವೇ ಚೀನಾದ ಕೆಂಗಣ್ಣಿಗೆ ಕಾರಣ.
ಜೂ.15ರಂದು ಗಾಲ್ವನ್ ಕಣಿವೆಯಲ್ಲಿ ಚೀನಾ ದುಸ್ಸಾಹಸದ ಪರಿಣಾಮವಾಗಿ ಭಾರಿ ಸಂಘರ್ಷ ಏರ್ಪಟ್ಟಿದ್ದು, ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಇದನ್ನು ಭಾರತ ಒಪ್ಪಿಕೊಂಡಿತ್ತಾದರೂ, ಚೀನಾದ ಕಡೆಯಲ್ಲೂ ಸಾಕಷ್ಟು ಸಾವು ನೋವು ಸಂಭವಿಸಿದರೂ, ಅದು ಮಾಹಿತಿಯನ್ನು ಬಚ್ಚಿಟ್ಟಿದೆ. ಆದರೆ ಅಮೆರಿಕದ ಗುಪ್ತಚರ ಇಲಾಖೆ ವರದಿ ಪ್ರಕಾರ ಚೀನಾದ 35 ಸೈನಿಕರು ಸಾವನ್ನಪ್ಪಿದ್ದಾರೆ.
ಫಿಂಗರ್ 8ರಲ್ಲಿದ್ದ ಚೀನಾ ಸೈನಿಕರು, ಫಿಂಗರ್ 2ರವರೆಗೂ ನಮ್ಮ ಭೂಭಾಗ ಅಂತ ಹೇಳಿಕೊಂಡಿದ್ದರು. ಅಂದರೆ, ಭಾರತವು ಫಿಂಗರ್ 2ವರೆಗೂ ಹಿಂದೆ ಸರಿಯಬೇಕೆಂಬುದು ಅದರ ಒತ್ತಾಯ.
ಈ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯು ಸುಖೊಯ್ 30 ಎಂಕೆಐ, ಜಾಗುವಾರ್ ಹಾಗೂ ಮಿರಾಜ್ 2000 ಸಮರ ವಿಮಾನಗಳನ್ನು ಪೂರ್ವ ಲಡಾಖ್ ಮತ್ತಿತರ ಭಾಗಗಳಲ್ಲಿ ನಿಯೋಜಿಸಿದೆ.

Average Rating