Read Time:5 Minute, 43 Second

iPhone SE 2020 Review: ಭಾರತೀಯರಿಗಿನ್ನೂ ದುಬಾರಿ, ಆದರೂ ಕ್ಯೂಟ್!

0 0

ಭಾರತದಂತಹಾ ದರ-ಸಂವೇದೀ ಮಾರುಕಟ್ಟೆಗಳಲ್ಲಿಯೂ ಛಾಪು ಮೂಡಿಸುವ ನಿಟ್ಟಿನಲ್ಲಿ iPhone SE (ಸ್ಪೆಶಲ್ ಎಡಿಶನ್) ಮಾದರಿಯನ್ನು ಆ್ಯಪಲ್ ಪರಿಚಯಿಸಿತ್ತು. ರಿವ್ಯೂಗಾಗಿ ಬಂದಿರುವ ಐಫೋನ್ ಎಸ್‌ಇ 2020 ಮಾಡೆಲ್ ಹೇಗಿದೆ? ಇಲ್ಲಿದೆ ವಿವರ.

ವಿನ್ಯಾಸ:

ಸ್ಲಿಮ್ ಡಿಸೈನ್ ಮತ್ತು ಈಗಿನ ದೊಡ್ಡ ಸ್ಕ್ರೀನ್ ಫೋನ್‌ಗಳ ಯುಗದಲ್ಲಿ ಪುಟ್ಟ ಗಾತ್ರದ ಅಂದರೆ 4.7 ಸ್ಕ್ರೀನ್‌ನ ಈ ಸಾಧನ, ಹಗುರವೂ ಇದ್ದು, ಗಾಜು-ಅಲ್ಯುಮೀನಿಯಂನ ಕವಚ ಆಕರ್ಷಕವಾಗಿದೆ. ರಿವ್ಯೂಗೆ ಬಂದಿರುವುದು 256 ಜಿಬಿ ಸ್ಟೋರೇಜ್ ಸಾಮರ್ಥ್ಯದ ಫೋನ್. ಸ್ಕ್ರೀನ್‌ನಲ್ಲಿ ಬೆಝೆಲ್ (ಅಂಚುಗಳು) ಇಲ್ಲದಿರುವ ಜಮಾನದಲ್ಲಿ ಐಫೋನ್ ಎಸ್ಇ ಮಾಡೆಲ್‌ನಲ್ಲಿ ಮೇಲ್ಭಾಗ, ಕೆಳಭಾಗದಲ್ಲಿ ದಪ್ಪನೆಯ ಬೆಝೆಲ್ ಇರುವುದು ಅಚ್ಚರಿ ಮೂಡಿಸುತ್ತದೆ.

ಕಾರ್ಯಾಚರಣೆ ಹೇಗಿದೆ?:

ಐಫೋನ್ 8ನ್ನು ಹೋಲುವ, 148 ಗ್ರಾಂ ತೂಕ, 7.33 ಮಿಮೀ ದಪ್ಪ ಇರುವ ಫೋನ್‌ನ ಬಿಲ್ಡ್ ಚೆನ್ನಾಗಿದ್ದು, ಐಫೋನ್ 11 ಮತ್ತು 11 ಪ್ರೋ ಮಾದರಿಯಲ್ಲಿರುವಂತಹಾ ಅತ್ಯಾಧುನಿಕ, ಶಕ್ತಿಶಾಲಿ ಎ13 ಬಯೋನಿಕ್ ಪ್ರೊಸೆಸರ್ ಇದೆ. ವೇಗದ ಗೇಮ್ಸ್, ವೇಗದ ಬ್ರೌಸಿಂಗ್, ಕ್ಯಾಮೆರಾ ಹಾಗೂ ಬ್ಯಾಟರಿ ಕ್ಷಮತೆ, ಮೆಷಿನ್ ಲರ್ನಿಂಗ್ ತಂತ್ರಜ್ಞಾನಕ್ಕಿದು ಪೂರಕ. 3ಜಿಬಿ RAM ಇದ್ದರೂ ಆಂಡ್ರಾಯ್ಡ್‌ನ 6GB RAM ಇರುವ ಸಾಧನದಷ್ಟೇ ವೇಗವಾಗಿ, ಸುಲಲಿತವಾಗಿ ಕೆಲಸ ಮಾಡುವುದು ಈ ಚಿಪ್‌ನಿಂದಾಗಿಯೇ. ರಿವ್ಯೂ ಮಾಡುವ ಸಮಯಕ್ಕೆ ಇದು ಐಒಎಸ್ 13.7ಕ್ಕೆ ಅಪ್‌ಗ್ರೇಡ್ ಆಗಿದೆ.

ವೈರ್‌ಲೆಸ್ ಚಾರ್ಜಿಂಗ್ ಇದರ ಪ್ಲಸ್ ಪಾಯಿಂಟ್. ಕೇವಲ 1821 mAh ಸಾಮರ್ಥ್ಯದ ಬ್ಯಾಟರಿ ಇದ್ದು, ದಿನಪೂರ್ತಿ ಬಳಕೆಗೆ ಬ್ಯಾಟರಿ ಬೆಂಬಲಿಸುವುದು ಇದರ ಅತ್ಯಾಧುನಿಕ ಹಾರ್ಡ್‌ವೇರ್ ಸಾಮರ್ಥ್ಯದಿಂದ. LCD ಡಿಸ್‌ಪ್ಲೇ ಸ್ಕ್ರೀನ್ OLED ನಷ್ಟು ನಿಖರವಾಗಿಲ್ಲದಿದ್ದರೂ, ಸ್ಪಷ್ಟವಾಗಿದೆ. ಐಫೋನ್ 5ಎಸ್ ಬಳಸಿದ ಅನುಭವದ ಆಧಾರದಲ್ಲಿ ಹೇಳುವುದಾದರೆ, ಇದರ ಟಚ್ ಸೆನ್ಸರ್ ಅದ್ಭುತವಾಗಿದೆ.

ಕ್ಯಾಮೆರಾ:

ನಾಲ್ಕು ಕ್ಯಾಮೆರಾ ಸೆನ್ಸರ್‌ಗಳಿರುವ ಕಾಲದಲ್ಲಿ ಒಂದೇ ಕ್ಯಾಮೆರಾ ಇರುವ ಬಗ್ಗೆ ಅಚ್ಚರಿಯಾದರೂ, ಬಯೋನಿಕ್ ಚಿಪ್ ಬೆಂಬಲದಿಂದಾಗಿ ಸೂಕ್ತ ಬೆಳಕಿನಲ್ಲಿ ತೆಗೆದ ಚಿತ್ರ, 4ಕೆ ವಿಡಿಯೊಗಳಂತೂ ಅತ್ಯುತ್ತಮ ಸ್ಪಷ್ಟತೆಯನ್ನು ತೋರಿಸಿವೆ. ಸ್ಲೋ-ಮೋಶನ್, ಟೈಮ್ ಲ್ಯಾಪ್ಸ್ ಹಾಗೂ ಪೋರ್ಟ್ರೇಟ್ ಮೋಡ್‌ಗಳಿದ್ದು, ‘ಲೈವ್’ ವೈಶಿಷ್ಟ್ಯ ಬಳಸಿ ಯಾವುದೇ ಚಲನಶೀಲ ವಸ್ತುವಿನ ಹಲವು ಶಾಟ್ ತೆಗೆದು, ಉತ್ತಮವಾದುದನ್ನು ಸೇವ್ ಮಾಡಿಟ್ಟುಕೊಳ್ಳಬಹುದು. ಕ್ಯಾಮೆರಾದಲ್ಲಿ ನೈಟ್ ಮೋಡ್ ಇಲ್ಲ. ಫೋಟೋ ಮೋಡ್‌ನಲ್ಲೇ ಕ್ಯಾಮೆರಾ ಬಟನ್ ಒತ್ತಿಹಿಡಿದುಕೊಂಡರೆ ವಿಡಿಯೊ ರೆಕಾರ್ಡ್ ಆಗಬಲ್ಲುದು. ಒಟ್ಟಾರೆ ಹೇಳುವುದಾದರೆ, ಆಂಡ್ರಾಯ್ಡ್‌ನ 10 ಸಾವಿರ ರೂ. ಆಸುಪಾಸಿವ ಫೋನುಗಳಲ್ಲೇ ನಾಲ್ಕು ಕ್ಯಾಮೆರಾ ಹಾಗೂ ಸ್ಪಷ್ಟವಾದ ಚಿತ್ರಗಳನ್ನು ತೆಗೆಯಲು ಸಾಧ್ಯವಿರುವಾಗ, ಒಂದು ಕ್ಯಾಮೆರಾದ ಐಫೋನ್ ಸೂಕ್ತವೇ? ಎಂಬುದು ಯೋಚಿಸಬಹುದು.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy .

ಕನ್ನಡದಲ್ಲಿ ಇನ್‌ಸ್ಕ್ರಿಪ್ಟ್ ಶೈಲಿಯ ಕೀಲಿಮಣೆ ವಿನ್ಯಾಸವಿದ್ದು, ಟೈಪ್ ಮಾಡುವುದು ಕಷ್ಟವೆಂದಾದರೆ, ಗೂಗಲ್ ಜಿಬೋರ್ಡ್ ಬಳಸಬಹುದು. ವೆಬ್ ತಾಣಗಳಲ್ಲಿ ಕನ್ನಡದ ಅಕ್ಷರದ ರೆಂಡರಿಂಗ್ ತುಂಬಾ ಸುಧಾರಿಸಿದೆ.

ರಿವ್ಯೂಗೆ ದೊರೆತ 256 ಜಿಬಿ ಸಾಧನದ ಬಾಕ್ಸ್ ಬೆಲೆ 58,300 ರೂ. ಇದೆ. ತೆರಿಗೆ, ಸುಂಕ ಇತ್ಯಾದಿಗಳಿಂದ ಇಷ್ಟು ದುಬಾರಿ ಅನ್ನಿಸುತ್ತದೆ. ಇನ್ನು ಮುಂದೆ ಬೆಂಗಳೂರಿನಲ್ಲೇ ಐಫೋನ್ ಅಸೆಂಬ್ಲಿಂಗ್ ಘಟಕ ಆರಂಭವಾಗುವುದರಿಂದ, ಬೆಲೆ ಮತ್ತಷ್ಟು ಕೈಗೆಟಕುವ ಸಾಧ್ಯತೆಗಳಿವೆ. ಜೊತೆಗೆ ಮಾರಾಟಗಾರರ ಡಿಸ್ಕೌಂಟ್, ಹಬ್ಬದ ಡಿಸ್ಕೌಂಟಿಗೆ ಕಾದು ನೋಡಬಹುದು.

ದೊಡ್ಡ ಬೆಝೆಲ್‌ಗಳು ಸಮಸ್ಯೆಯಲ್ಲ, ಕೈಗೊಂದು ಕ್ಯೂಟ್ ಆ್ಯಪಲ್ ಫೋನ್ ಬೇಕೆನ್ನುವವರಿಗೆ ಮತ್ತು ಪ್ರತಿಷ್ಠೆಯ ವಿಷಯ, ಸುರಕ್ಷತೆಯೇ ಮುಖ್ಯ ಎಂದುಕೊಳ್ಳುವವರಿಗೆ ಐಫೋನ್ SE 2020 ಸೂಕ್ತ.

Features of iPhone SE 2020 Version

  • iOS 13.7 ಆವೃತ್ತಿಯ ಕಾರ್ಯಾಚರಣಾ ವ್ಯವಸ್ಥೆ
  • ಗಾತ್ರ: 138.4 x 67.3 x 7.3 ಮಿಮೀ
  • ತೂಕ: 148 ಗ್ರಾಂ
  • ಸ್ಕ್ರೀನ್ ಗಾತ್ರ: 4.7 ಇಂಚು IPS LCD ಡಿಸ್‌ಪ್ಲೇ
  • ಟಚ್ ಐಡಿ ಫಿಂಗರ್ ಪ್ರಿಂಟ್ ಸೆನ್ಸರ್
  • IP67 ಜಲ ಹಾಗೂ ಧೂಳು ನಿರೋಧಕ ಅಲ್ಯೂಮೀನಿಯಂ ಚಾಸಿ
  • ಲೈಟ್ನಿಂಗ್ ಚಾರ್ಜಿಂಗ್
  • ಆ್ಯಪಲ್ 13 ಬಯೋನಿಕ್ ಪ್ರೊಸೆಸರ್
  • 3 GB RAM
  • 64 ನಿಂದ 256 GB ಸ್ಟೋರೇಜ್ (ವಿಸ್ತರಿಸಲಾಗದು)
  • 1,821 mAh ಬ್ಯಾಟರಿ
  • 18 W ವೇಗದ ಚಾರ್ಜಿಂಗ್
  • 12 MP ಹಿಂಭಾಗದ (ಪ್ರಧಾನ) ಕ್ಯಾಮೆರಾ
  • 7 MP ಸೆಲ್ಫೀ ಕ್ಯಾಮೆರಾ
Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ವಿದೇಶಕ್ಕೆ ಹಾರಿದ ಸೋನಿಯಾ, ರಾಹುಲ್: ಸಂಸತ್ ಅಧಿವೇಶನಕ್ಕೆ ಗೈರು
Next post ವೃದ್ಧ ಸೇನಾಧಿಕಾರಿ ಮೇಲೆ ಶಿವಸೇನಾ ಗೂಂಡಾಗಳಿಂದ ಹಲ್ಲೆ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯ

ಸುದ್ದಿ ಸಂಚಯ

ಇವುಗಳನ್ನೂ ನೋಡಿ