ನವದೆಹಲಿ: ಹೊಸ ಕಾಯ್ದೆಗಳಿಂದಾಗಿ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವುದಿಲ್ಲ, ರೈತರಿಗೆ ವಿರುದ್ಧವಾಗಿದೆ ಇದು ಎಂಬ ಕಾಂಗ್ರೆಸ್ ಸಹಿತ ವಿವಿಧ ವಿರೋಧ ಪಕ್ಷಗಳ ಕೂಗಾಟಕ್ಕೆ ಉತ್ತರಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ವಿಧೇಯಕದ ಕುರಿತು ಅಪಪ್ರಚಾರ ಮಾಡಲಾಗುತ್ತಿರುವುದರ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ರೈತರ ದಾರಿ ತಪ್ಪಿಸಲಾಗುತ್ತಿದೆ. ಆದರೆ ಈ ಐತಿಹಾಸಿಕ ಕಾನೂನುಗಳಿಂದಾಗಿ ತಮ್ಮದೇ ಉತ್ಪನ್ನಗಳ ಮಾರಾಟಕ್ಕೆ ಇರುವ ಅಡೆತಡೆಗಳು ನಿವಾರಣೆಯಾಗಲಿವೆ. ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುವುದಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದು, “ಈ ರೀತಿ ಅಪಪ್ರಚಾರ ಮಾಡುವವರು, ನಮ್ಮ ದೇಶದ ರೈತರಲ್ಲಿ ಎಷ್ಟರ ಮಟ್ಟಿಗೆ ಜಾಗೃತಿ ಮೂಡಿದೆ ಎಂಬುದು ಗೊತ್ತಿಲ್ಲ” ಎಂದು ಬಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಹೇಳಿದರು.
ಕೃಷಿಯಲ್ಲಿ ರೈತರಿಗೆ ಈಗ ಹೊಸದಾಗಿ ಸ್ವಾತಂತ್ರ್ಯ ದೊರೆಯುತ್ತಿದೆ. ತಮ್ಮ ಉತ್ಪನ್ನಗಳ ಮಾರಾಟಕ್ಕೆ ಅವರಿಗೆ ಹೆಚ್ಚು ಆಯ್ಕೆಗಳು, ಅವಕಾಶಗಳು ದೊರೆಯುತ್ತವೆ. ಈಗ ವಿಧೇಯಕವು ಅಂಗೀಕಾರಗೊಂಡಿರುವುದಕ್ಕೆ ಅವರನ್ನು ನಾನು ಅಭಿನಂದಿಸುತ್ತೇನೆ. ಈ ಕಾಯ್ದೆಯು ರೈತರಿಗೆ ಮಧ್ಯವರ್ತಿಗಳಿಂದ ಗುರಾಣಿಯಿದ್ದಂತೆ. ಕನಿಷ್ಠ ಬೆಂಬಲ ಬೆಲೆಯ ಮೂಲಕ ರೈತರಿಗೆ ಅವರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ನರೇಂದ್ರ ಮೋದಿ ಸವಿಸ್ತಾರವಾಗಿ ಭರವಸೆ ನೀಡಿದರು.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy .
ದಶಕಗಳ ಕಾಲ ಈ ದೇಶವನ್ನಾಳಿದವರು, ಅಧಿಕಾರದ ಸವಿಯುಂಡವರು ಈ ವಿಷಯದಲ್ಲಿ ರೈತರ ದಾರಿ ತಪ್ಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಎಂದಿನಂತೆ ರೈತರಿಗೆ ಸುಳ್ಳು ಹೇಳುತ್ತಲೇ ಇದ್ದಾರೆ ಎಂದು ಮೋದಿ ಛೇಡಿಸಿದರು.
ಗೋಧಿ, ಅಕ್ಕಿಯನ್ನು ರೈತರಿಂದ ಸರ್ಕಾರಿ ಏಜೆನ್ಸಿಗಳು ಖರೀದಿಸುವುದಿಲ್ಲ ಎಂಬ ಬಗ್ಗೆ ಫೇಕ್ ನ್ಯೂಸ್ ಕೂಡ ಹರಡಲಾಗುತ್ತಿದೆ. ಇದು ಕಟ್ಟಾ ಸುಳ್ಳು ಮತ್ತು ರೈತರನ್ನು ವಂಚಿಸುವ ಪ್ರಯತ್ನ ಎಂದೂ ಮೋದಿ ಹೇಳಿದರು.
ಈ ಮೂರು ಶಾಸನಗಳು ರೈತರು ಮತ್ತು ಕೃಷಿ ವಹಿವಾಟುದಾರರಿಗೆ, ನಿರ್ದಿಷ್ಟ ಮಂಡಿಗಳ ಹೊರಗೂ ಮಾರಾಟ ಮತ್ತು ಖರೀದಿಗೆ ಅವಕಾಶ ಮಾಡಿಕೊಡುತ್ತದೆ. ರೈತರು ಮತ್ತು ಖರೀದಿದಾರರ ನಡುವಿನ ಒಪ್ಪಂದಕ್ಕೆ ಉತ್ತೇಜಿಸಿ, ಕೆಲವು ಕೃಷಿ ಉತ್ಪನ್ನಗಳನ್ನು ಅಗತ್ಯವಸ್ತುಗಳ ಕಾಯ್ದೆಯಿಂದ ಹೊರಗಿಡಲಾಗುತ್ತದೆ (ಭಾರಿ ಬೆಲೆ ಏರಿಕೆ ಅಥವಾ ಭಾರಿ ಇಳಿಕೆಯ ಸಂದರ್ಭಗಳ ಹೊರತಾಗಿ). ಇದು ಕೃಷಿ ಉತ್ಪನ್ನಗಳ ದಾಸ್ತಾನು ಮಾಡುವ ಅತಿಯಾಸೆಗೆ ತೊಡಗದಂತೆ ನೆರವಾಗುತ್ತದೆ.
ಇದನ್ನೂ ನೋಡಿ: Farm Bill | ಅಪಪ್ರಚಾರ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ದುರ್ವರ್ತನೆಗೆ ಕಾರಣ ಇಲ್ಲಿದೆ!
ಆದರೆ, ವಿರೋಧ ಪಕ್ಷಗಳ ಅಪಪ್ರಚಾರದಿಂದಾಗಿ ಈ ಕಾಯ್ದೆಯನ್ನು ವಿರೋಧಿಸಿ ಪಂಜಾಬ್, ಹರ್ಯಾಣ, ತೆಲಂಗಾಣದಲ್ಲಿ ರೈತರು ಕೆಲವೆಡೆ ಪ್ರತಿಭಟನೆ ಮಾಡುತ್ತಿದ್ದಾರೆ.

Average Rating