ಲಖ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೈಗೊಂಡ ಕೆಲವೊಂದು ಕಟ್ಟು ನಿಟ್ಟಿನ ಕ್ರಮಗಳಿಂದಾಗಿ ದಂಗೆಕೋರರಿಗೆ ಕಡಿವಾಣ ಹಾಕಲಾಗಿದೆಯಷ್ಟೇ ಅಲ್ಲದೆ, ಕೋವಿಡ್-19 ಪ್ರಸಾರದ ತಡೆಗೂ ಅವರು ಕೈಗೊಂಡ ಕ್ರಮಗಳು ವಿರೋಧಕ್ಕಾಗಿ ವಿರೋಧಿಸುವವರಿಂದ ಮಾತ್ರ ಟೀಕೆಗಳಿಗೆ ಕಾರಣವಾಗಿತ್ತು.
ಅದೇ ರೀತಿ ವಲಸೆ ಕಾರ್ಮಿಕರ ಜೀವನಸ್ಥಿತಿ ಸುಧಾರಿಸಲು ಅವರು ಕೈಗೊಂಡ ಕ್ರಮಗಳು ಕೂಡ ಸಾಕಷ್ಟು ಶ್ಲಾಘನೆಗೆ ಕಾರಣವಾಗಿವೆ. ಈ ಮಧ್ಯೆ, ಲಾಕ್‌ಡೌನ್ ದಿನಗಳಲ್ಲಿ ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದಲ್ಲಿ ಗರಿಷ್ಠ ಮಂದಿಗೆ ಉದ್ಯೋಗ ಒದಗಿಸಲಾಗಿದೆ ಎಂಬ ಅಂಶವೀಗ ಯೋಗಿ ಆಡಳಿತದ ಸಾಮರ್ಥ್ಯವನ್ನು ಮತ್ತೆ ಎತ್ತಿ ತೋರಿಸಿದೆ.
ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (PMEGP) ಅಡಿಯಲ್ಲಿ ಚೀನಾ ವೈರಸ್‌ನಿಂದಾದ ಲಾಕ್‌ಡೌನ್ ಅನಿವಾರ್ಯತೆಯ ದಿನಗಳಲ್ಲಿ ದೇಶಾದ್ಯಂತ 1.10 ಲಕ್ಷ ಮಂದಿಗೆ ಉದ್ಯೋಗ ನೀಡಲಾಗಿದೆ ಎಂದು ‘ಲೈವ್ ಹಿಂದುಸ್ತಾನಿ’ ವರದಿ ಮಾಡಿದೆ.
ಈ ಅವಧಿಯಲ್ಲಿ, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ಕ್ಷೇತ್ರದಲ್ಲಿ ಗರಿಷ್ಠ ಸಂಖ್ಯೆಯ ಅಂದರೆ 14,616 ಜನರಿಗೆ ಉದ್ಯೋಗವು ಉತ್ತರ ಪ್ರದೇಶದಲ್ಲಿಯೇ ದೊರೆತಿದೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy
ಗರಿಷ್ಠ ಉದ್ಯೋಗ ಸೃಷ್ಟಿಸಿದ ರಾಜ್ಯಗಳಲ್ಲಿ ಜಮ್ಮು ಮತ್ತು ಕಾಶ್ಮೀರವು ಎರಡನೇ ಸ್ಥಾನದಲ್ಲಿದ್ದು, ಇಲ್ಲಿ, 11,064 ಮಂದಿ ಉದ್ಯೋಗ ಪಡೆದಿದ್ದಾರೆ. ಆಗಸ್ಟ್ 31ರವರೆಗಿನ ಅವಧಿಯಲ್ಲಿ ಪ್ರಧಾನಮಂತ್ರಿ ಉದ್ಯೋಗ ಯೋಜನೆಯಡಿ ಹೆಚ್ಚು ಉದ್ಯೋಗ ಪಡೆದ ರಾಜ್ಯಗಳಲ್ಲಿ ನಂತರದ ಸ್ಥಾನಗಳಲ್ಲಿ ಬಿಹಾರ ಇದೆ. ಇಲ್ಲಿ 3,168 ಮಂದಿಗೆ ಉದ್ಯೋಗ ದೊರೆತಿದ್ದರೆ, ಹರ್ಯಾಣ 3008, ಉತ್ತರಾಖಂಡ 2344, ಜಾರ್ಖಂಡ್ 1336 ಹಾಗೂ ದೆಹಲಿ 72 ಮಂದಿಗೆ ಉದ್ಯೋಗ ದೊರೆತಿದೆ.
ಇದು ಕೇವಲ ಪ್ರಧಾನಮಂತ್ರಿ ಉದ್ಯೋಗ ಯೋಜನೆಯಡಿ ದಾಖಲಾದ ಉದ್ಯೋಗದ ಸಂಖ್ಯೆಗಳಷ್ಟೇ. ಉಳಿದ ಖಾಸಗಿ ಹಾಗೂ ದಿನಗೂಲಿ ಉದ್ಯೋಗಗಳ ಸಂಖ್ಯೆ ಇನ್ನೂ ಸಾಕಷ್ಟಿದೆ.
ಈ ಅಂಕಿ ಅಂಶಗಳು ದೊರೆತಿದ್ದು ಕೇಂದ್ರ MSME ಸಚಿವಾಲಯದ ಮೂಲಕವೇ. ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಕೇಳಲಾದ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಸಚಿವಾಲಯವು ಈ ಅಂಕಿ ಅಂಶಗಳನ್ನು ನೀಡಿದೆ.
2020-21 ಹಣಕಾಸು ವರ್ಷದಲ್ಲಿ ಬಹುಪಾಲು ಭಾಗವನ್ನು ಲಾಕ್‌ಡೌನ್ ಆಕ್ರಮಿಸಿದ್ದರೂ, 1,10,000 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಕಳೆದ ಹಣಕಾಸು ವರ್ಷದ 12 ತಿಂಗಳಲ್ಲಿ 5.33 ಲಕ್ಷ ಅದಕ್ಕೂ ಹಿಂದಿನ ಎರಡು ವರ್ಷಗಳಲ್ಲಿ ಅನುಕ್ರಮವಾಗಿ 5.87 ಲಕ್ಷ ಹಾಗೂ 3.87 ಲಕ್ಷ ಮಂದಿ ಪ್ರಧಾನಮಂತ್ರಿ ಯೋಜನೆಯಡಿ ಉದ್ಯೋಗ ಪಡೆದಿದ್ದಾರೆ.
ಇದನ್ನೂ ಓದಿ: HBDNaMo: ನೈಜ ಜನಸೇವಕ ನರೇಂದ್ರ ಮೋದಿ ಜನ್ಮದಿನಕ್ಕೆ ಶುಭ ಹಾರೈಸದಿದ್ದರೆ ಹೇಗೆ?
ಇತ್ತೀಚೆಗೆ ಪ್ರಧಾನ ಮಂತ್ರಿ ಮೋದಿ ಮಾಡುತ್ತಿರುವ ಜನೋಪಯೋಗಿ ಕಾರ್ಯಕ್ರಮಗಳಿಂದ ಅವರ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಸಹಿಸಲಾರದೆ ಕಾಂಗ್ರೆಸ್ ಮತ್ತಿತರರು ವಿದೇಶೀ ಬೆಂಬಲಿಗರ ನೆರವು ಪಡೆದು, ಮೋದಿ ಜನ್ಮದಿನದಂದು ದೇಶದ ಪ್ರಧಾನಿಗೆ ಶುಭಾಶಯ ಕೋರುವ ಬದಲು, ‘ರಾಷ್ಟ್ರೀಯ ನಿರುದ್ಯೋಗ ದಿನ’ ಎಂದು ಕುಹಕವಾಡಿ ಟ್ವಿಟರ್ ಅಭಿಯಾನ ನಡೆಸಿ ತಮ್ಮ ರಕ್ತದಲ್ಲೇ ಇರುವ ಮೋದಿ ವಿರೋಧವನ್ನು ಹೊರಗೆಡಹಿದ್ದರು.
ವಾಸ್ತವ ವಿಷಯಗಳ ಅರಿವಿದ್ದರೂ, ಮೋದಿ ಎಂಬ ಕಾರಣಕ್ಕಾಗಿಯೇ ವಿರೋಧಿಸುವಂತೆ ಪ್ರಚೋದಿಸುವ ಪಕ್ಷಗಳ ಅಪಪ್ರಚಾರ ಆಂದೋಲನದಲ್ಲಿ ಸಿಲುಕಿರುವ ಈ ಮಂದಿ, ನಿಜ ಸ್ಥಿತಿಯ ಅರಿವಿರುವ ಮಂದಿಯಿಂದ ಅಪಹಾಸ್ಯಕ್ಕೀಡಾಗುತ್ತಲೇ ಇದ್ದಾರೆ.

Average Rating