Read Time:1 Minute, 58 Second

Love Jihad: ಉತ್ತರ ಪ್ರದೇಶ ಬಳಿಕ ಹರ್ಯಾಣದಲ್ಲೂ ಕಠಿಣ ಕಾನೂನಿಗೆ ಚಿಂತನೆ

0 0

ಹರ್ಯಾಣ: ಉತ್ತರ ಪ್ರದೇಶ ಸರ್ಕಾರವು ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ತರುವುದಾಗಿ ಎಚ್ಚರಿಕೆ ನೀಡಿದ ಬೆನ್ನಿಗೇ, ಈ ಪಿಡುಗು ತಡೆಯುವ ನಿಟ್ಟಿನಲ್ಲಿ ಯೋಗಿ ಆದಿತ್ಯನಾಥ್ ಹಾದಿಯಲ್ಲಿ ಹೆಜ್ಜೆ ಇಟ್ಟಿದೆ ಹರ್ಯಾಣ.

ಲವ್ ಜಿಹಾದ್ ವಿರುದ್ಧದ ಕಾನೂನಿನ ಕುರಿತು ಮುಖ್ಯಮಂತ್ರಿ ಎಂ.ಎಲ್.ಖಟ್ಟರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಅಲ್ಲಿನ ಗೃಹ ಸಚಿವ ಅನಿಲ್ ವಿಜ್ ಅವರು ಭಾನುವಾರ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಕಳೆದ ಸೋಮವಾರ ಬಲ್ಲಬ್‌ಘರ್ ಎಂಬಲ್ಲಿ 21ರ ಹರೆಯದ ನಿಕಿತಾ ತೋಮರ್ ಎಂಬಾಕೆಯನ್ನು ತೌಸೀಫ್ ಎಂಬಾತ ಹಾಡಹಗಲೇ ಕಾಲೇಜಿನ ಹೊರಗೆ ಗುಂಡಿಕ್ಕಿ ಕೊಂದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆಕೆ ಪರೀಕ್ಷೆ ಬರೆದು ಮನೆಗೆ ಮರಳುತ್ತಿದ್ದಳು. ಹುಡುಗಿಯ ಕುಟುಂಬದ ವಿರೋಧದ ಹೊರತಾಗಿಯೂ ತೌಸೀಫ್ ಎಂಬ ಆರೋಪಿಯು ಪ್ರೇಮದ ನಾಟಕವಾಡಿ, ಆಕೆಯನ್ನು ತನ್ನ ವಾಹನದಲ್ಲಿ ಅಪಹರಿಸಲು ಯತ್ನಿಸಿದ್ದ.

ಪ್ರತಿಭಟಿಸಿದ ಆಕೆಗೆ ಗುಂಡಿಟ್ಟು ಕೊಂದಿದ್ದ ಸುದ್ದಿಯು ದೇಶಾದ್ಯಂತ ಸದ್ದು ಮಾಡಿತ್ತಾದರೂ, ಹಾಥರಸ್‌ನಲ್ಲಿ ಹುಡುಗಿಯೊಬ್ಬಳ ಸಾವಿಗೆ ಕಂಬನಿ ಮಿಡಿದವರ್ಯಾರೂ ಈ ಬಗ್ಗೆ ಚಕಾರ ಎತ್ತಿರಲಿಲ್ಲ. ಈಗ ತೌಸೀಫ್ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy
Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post Love Jihad ನಿಲ್ಲಿಸಿ, ಇಲ್ಲವೇ ‘ರಾಮ್ ನಾಮ್ ಸತ್ಯ ಹೈ’ ಪ್ರಯಾಣಕ್ಕೆ ಸಿದ್ಧರಾಗಿ: ಮತಾಂತರಿಗಳಿಗೆ ಯೋಗಿ ಕಟು ಎಚ್ಚರಿಕೆ
Next post ಜಗತ್ತಿನ ಮುಸ್ಲಿಂ ರಾಷ್ಟ್ರಗಳ ಆಕ್ರೋಶಕ್ಕೆ ಕಾರಣವಾಗಿದೆ ಫ್ರೆಂಚ್ ‘ಜಾತ್ಯತೀತತೆ’: ಅಲ್ಲೇನಾಗುತ್ತಿದೆ?

ಸುದ್ದಿ ಸಂಚಯ

ಇವುಗಳನ್ನೂ ನೋಡಿ