ಮಥುರಾ (ಉ.ಪ್ರ.): ಶುಕ್ರವಾರದ ನಮಾಜ್ ಮಾಡಲು ಈ ಮುಸ್ಲಿಂ ಹುಡುಗರು ಆಯ್ಕೆ ಮಾಡಿಕೊಂಡಿದ್ದು ಹಿಂದುಗಳ ಪವಿತ್ರ ಮಂದಿರವನ್ನು. ಫೈಜಲ್ ಖಾನ್ ಮತ್ತು ಮೊಹಮದ್ ಚಾಂದ್ ಎಂಬ ಇಬ್ಬರು ಯುವಕರು ಅ.30ರಂದು ಮಥುರಾದ ನಂದಗಾಂವ್ ಪ್ರದೇಶದ ನಂದ ಬಾಬಾ ಮಂದಿರದೊಳಗೆ ಬಂದು ನಮಾಜ್ ಮಾಡಿದ್ದಾರೆ.
ಇದು ಸ್ಥಳೀಯರನ್ನು ಕೆರಳಿಸಿದ್ದು, ನಂಬಿಕೆಯ ಕೇಂದ್ರವಾಗಿರುವ ದೇವಸ್ಥಾನಗಳಿಗೆ ನುಗ್ಗಿ ಈ ರೀತಿ ಮಾಡುವುದು ಎಷ್ಟು ಸರಿ ಎಂಬುದು ಸಹಿಷ್ಣು ಹಿಂದುಗಳ ಪ್ರಶ್ನೆ. ಇದಲ್ಲದೆ, ಅವರ ಮಸೀದಿಯೊಳಗೆ ಹೋಗಿ ಪೂಜೆ, ಆರತಿ ಮಾಡಿದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂದೂ ಹಿಂದೂಗಳು ಪ್ರಶ್ನಿಸಿದ್ದಾರೆ.
ಅನ್ಯ ಧರ್ಮೀಯರ ಪೂಜಾ ಕೇಂದ್ರಕ್ಕೆ ಅನುಮತಿಯನ್ನೂ ಪಡೆಯದೆ ಏಕಾಏಕಿ ನುಗ್ಗಿ, ನಮಾಜ್ ಮಾಡಿದ್ದಕ್ಕಾಗಿ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದಕ್ಕಾಗಿ ಫೈಜಲ್ ಮತ್ತು ಚಾಂದ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಭಾರತೀಯ ದಂಡ ಸಂಹಿತೆಯ ಪ್ರಕಾರ ಕೇಸು ದಾಖಲಿಸಿದ್ದಾರೆ. ಇಷ್ಟಲ್ಲದೆ, ಈ ರೀತಿ ದಾರ್ಷ್ಟ್ಯ ತೋರಿದ್ದನ್ನೇ ಫೋಟೋ, ವಿಡಿಯೊ ತೆಗೆದು ಸಾಮಾಜಿಕ ಮಾಧ್ಯಮಗಳಿಗೆ ಹಾಕಿದ ಇನ್ನೂ ಇಬ್ಬರ ಮೇಲೂ ಕೇಸು ದಾಖಲಾಗಿದೆ.
ಅನ್ಯ ಕೋಮಿನ ಯುವಕರು ದೇವಸ್ಥಾನದೊಳಕ್ಕೆ ನುಗ್ಗಿ ಅಪವಿತ್ರಗೊಳಿಸಿದ್ದರಿಂದ ಆಕ್ರೋಶಗೊಂಡು, ಕೋಪ ನುಂಗಿಕೊಂಡು, ಯಾವುದೇ ಹಿಂಸಾಚಾರಕ್ಕಿಳಿಯದ ನಿಜವಾದ ಶಾಂತಿಪ್ರಿಯ ಹಿಂದೂ ಧರ್ಮೀಯರು, ಇದೀಗ ಹವನ, ಪೂಜೆ, ಕಲಶಾಭಿಷೇಕಗಳ ಮೂಲಕ ತಮ್ಮ ಧಾರ್ಮಿಕ ಕೇಂದ್ರವನ್ನು ಪವಿತ್ರಗೊಳಿಸಿ ಸುಮ್ಮನಾಗಿದ್ದಾರೆ.
ಈ ಘಟನೆ ಬಗ್ಗೆ ಸಹಿಷ್ಣುಗಳಾದ ಹಿಂದುಗಳು ಯಾವುದೇ ರೀತಿಯಲ್ಲೂ ಪ್ರತಿಭಟನೆ, ಹಿಂಸಾಚಾರ, ದೊಂಬಿ, ಗಲಭೆ ನಡೆಸಿಲ್ಲ. ಕಾನೂನನ್ನು ಕೈಗೆತ್ತಿಕೊಳ್ಳದೆ ಅವರು ಘಟನೆಯನ್ನು ಖಂಡಿಸಿದ್ದಾರಷ್ಟೇ ಅಲ್ಲದೆ, ಕಾನೂನೇ ನೋಡಿಕೊಳ್ಳಲಿ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಅವರು ಪ್ರತಿಕ್ರಿಯಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದನ್ನು ಎಲ್ಲರೂ ಒಗ್ಗೂಡಿ ಪ್ರತಿಭಟಿಸಬೇಕು. ಇದೇನೂ ರಾಜಕೀಯ ವಿಚಾರವಲ್ಲ. ನಮ್ಮ ನಂಬಿಕೆಯ, ನಮ್ಮ ಧರ್ಮದ ವಿಚಾರ ಎಂದು ರಿಪಬ್ಲಿಕ್ ಟಿವಿ ಜೊತೆಗೆ ಮಾತನಾಡುತ್ತಾ ಅವರು ಆಕ್ರೋಶ ಹೊರಗೆಡಹಿದ್ದಾರೆ. ಯಾವುದೇ ರೀತಿಯಲ್ಲೂ ಶಾಂತಿ ಕದಡಿ, ದೊಂಬಿ ಮಾಡಿ, ಗಲಭೆ ಮಾಡಿ, ಬೆಂಕಿ ಹಚ್ಚಿ, ಹಿಂಸಾತ್ಮಕ ಪ್ರತಿಭಟನೆ ಮಾಡಿ ಅಂತ ಅವರು ಕರೆ ನೀಡದೆ, ಹಿಂದು ಧರ್ಮ ಸದಾ ಕಾಲ ಬೋಧಿಸುವ ಶಾಂತಿಯ ಸಂಸ್ಕಾರವನ್ನು ಮೆರೆದಿದ್ದಾರೆ.
ಉತ್ತರ ಪ್ರದೇಶ ಶಾಸಕ, ಬಿಜೆಪಿ ಮುಖಂಡ ಶ್ರೀಕಾಂತ್ ಶರ್ಮಾ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, “ಉತ್ತರ ಪ್ರದೇಶದಲ್ಲಿ ಸಾಮರಸ್ಯ ಕದಡುವ ಕೆಲಸಗಳನ್ನು ಕೆಲವರು ಮಾಡುತ್ತಲೇ ಇದ್ದಾರೆ. ನಾವು ಕೆಲಸ ಮಾಡುವ ರೀತಿಯನ್ನು ನೋಡಿ ಅವರಿಗೆ ಸಹಿಸಲಾಗುತ್ತಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದಿದ್ದಾರೆ ಅವರು.
ಈಗಾಗಲೇ ತಮ್ಮ ಮೂಲ ಧರ್ಮ ಮರೆಮಾಚಿ, ನಕಲಿ ಹಿಂದೂ ಹೆಸರಿಟ್ಟುಕೊಂಡು ಹಿಂದೂ ಹುಡುಗಿಯರೊಂದಿಗೆ ಪ್ರೀತಿಯ ನಾಟಕವಾಡುತ್ತಾ ಅವರನ್ನು ಮತಾಂತರ ಮಾಡುವ ಹುನ್ನಾರದ ಲವ್ ಜಿಹಾದ್ ವಿರುದ್ಧ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಕಠಿಣ ಕಾನೂನು ಜಾರಿಗೊಳಿಸುತ್ತೇವೆ ಎಂದು ಹೇಳಿರುವುದು ಇಲ್ಲಿ ಉಲ್ಲೇಖಾರ್ಹ. (ಇಲ್ಲಿ ಓದಿ)
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating