Read Time:4 Minute, 28 Second

Election Result 2020 | ಬಿಹಾರದಲ್ಲಿ ಬಿಜೆಪಿ ಭರ್ಜರಿ ಬೇಟೆ, ದೇಶದೆಲ್ಲೆಡೆ 59ರಲ್ಲಿ 40 ಸ್ಥಾನ: ಮೋದಿಗೆ ಸ್ಪಷ್ಟ ಜನಾದೇಶ

0 0

ನವದೆಹಲಿ: ದೇಶದಾದ್ಯಂತ ಬಿಹಾರದ ಕದನ ಕಣದ ಜೊತೆಗೆ ಕರ್ನಾಟಕ ಸಹಿತವಾಗಿ ವಿವಿಧ ರಾಜ್ಯಗಳಲ್ಲಿ ಉಪಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಗಳಿಸಿದೆ. ಬಿಹಾರದಲ್ಲಿ ಭಾರಿ ಮತಬೇಟೆ ನಡೆಸಿರುವ ಬಿಜೆಪಿಯು, ಪಾಲುದಾರ ಪಕ್ಷ ಜೆಡಿಯುಗೆ ಹಿನ್ನಡೆಯಾದರೂ, ತನ್ನ ಪ್ರವರ್ಧಮಾನದಿಂದಾಗಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದರೊಂದಿಗೆ, ಕೇಂದ್ರದ ನರೇಂದ್ರ ಮೋದಿ ಆಡಳಿತಕ್ಕೆ ಜನ ಮೆಚ್ಚುಗೆ ಸಿಕ್ಕಂತಾಗಿದ್ದರೆ, ಸುಳ್ಳುಗಳು, ಅಪಪ್ರಚಾರಕ್ಕೆ ವಿರೋಧ ಪಕ್ಷಗಳು ಬೆಲೆ ತೆರಬೇಕಾಗಿಬಂದಿದೆ.

ಅಂತಿಮ ಬಲಾಬಲ ಹೀಗಿದೆ:

ಅಂತಿಮ ಫಲಿತಾಂಶ (ಆವರಣದಲ್ಲಿರುವುದು 2015ರ ಫಲಿತಾಂಶ)
ಎನ್‌ಡಿಎ – 125 (58)
ಬಿಜೆಪಿ – 74 (53)
ಜೆಡಿಯು – 43 (71)
ಎಲ್‌ಜೆಪಿ 1 (2)

ಮಹಾ ಗಠಬಂಧನ – 110 (178, ನಂತರ ಜೆಡಿಯು ಎನ್‌ಡಿಎ ತೆಕ್ಕೆಗೆ ಮರಳಿತ್ತು)
ಆರ್‌ಜೆಡಿ – 75 (80)
ಕಾಂಗ್ರೆಸ್ – 19 (27)
ಎಡಪಕ್ಷಗಳು 13 (3)
ಇತರರು 15 (7)

11 ರಾಜ್ಯಗಳ 59 ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಅವುಗಳಲ್ಲಿ 40 ಸ್ಥಾನಗಳಲ್ಲಿ ಬಿಜೆಪಿ ವಿಜಯ ಮಾಲೆ ಕೊರಳಿಗೆ ಹಾಕಿಕೊಂಡಿದೆ.

ಬಿಹಾರದಲ್ಲಿ ಮುಖ್ಯ ಚುನಾವಣೆ ನಡೆದಿದ್ದು, 243 ಸ್ಥಾನಗಳಲ್ಲಿ, ಎನ್‌ಡಿಎ 125 ಹಾಗೂ ಮಹಾಗಠಬಂಧನ್ ಕೂಟವು 110 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಆದರೆ 75 ಸ್ಥಾನಗಳೊಂದಿಗೆ ಆರ್‌ಜೆಡಿ ಏಕೈಕ ಅತಿದೊಡ್ಡ ಪಕ್ಷವಾಗಿ ಸಾಧನೆ ಮಾಡಿದೆ. ಮೈತ್ರಿಕೂಟದ ಪಾಲುದಾರ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯುಗೆ ಭಾರಿ ಹಿನ್ನಡೆಯಾಗಿದೆ.

NDA ನಲ್ಲಿ ಬಿಜೆಪಿ 74, ಜೆಡಿಯು 43 ಹಾಗೂ ಮಹಾಗಠಬಂಧನದಲ್ಲಿ ಆರ್‌ಜೆಡಿ 75, ಕಾಂಗ್ರೆಸ್ 19, ಎಡ ಪಕ್ಷಗಳು 13 ಸ್ಥಾನ ಗೆದ್ದುಕೊಂಡಿವೆ.

ಮಧ್ಯಪ್ರದೇಶದ 28ರಲ್ಲಿ 19 ಸ್ಥಾನಗಳಲ್ಲಿ ಬಿಜೆಪಿ ಭರ್ಜರಿ ವಿಜಯ ಸಾಧಿಸಿ, ಬಹುಮತ ಪಡೆದು ಅಧಿಕಾರ ಗಟ್ಟಿ ಮಾಡಿಕೊಂಡಿದೆ. ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಕಾಂಗ್ರೆಸ್ ಸೇರಿದ್ದ 23 ಶಾಸಕರಲ್ಲಿ 19 ಮಂದಿ ಬಿಜೆಪಿಯಿಂದ ಗೆದ್ದಿದ್ದಾರೆ. ಇಲ್ಲಿ ಕಾಂಗ್ರೆಸ್ 8, ಬಿಎಸ್ಪಿ 1 ಸ್ಥಾನ ಪಡೆದಿವೆ.

ಗುಜರಾತ್‌ನ 8 ಕ್ಷೇತ್ರಗಳಲ್ಲಿ ಎಲ್ಲವನ್ನೂ ಗೆದ್ದುಕೊಳ್ಳುವ ಮೂಲಕ ಕಾಂಗ್ರೆಸಿಗೆ ಪಾಠ ಕಲಿಸಿದೆ ಬಿಜೆಪಿ.

ಉತ್ತರ ಪ್ರದೇಶದ 7 ಸ್ಥಾನಗಳಲ್ಲಿ ಬಿಜೆಪಿ 6ರಲ್ಲಿ ವಿಜಯಿಯಾಗಿದ್ದರೆ, ಒಂದು ಸ್ಥಾನ ಸಮಾಜವಾದಿ ಪಕ್ಷಕ್ಕೆ.

ಕರ್ನಾಟಕದ ಎರಡು ಕ್ಷೇತ್ರಗಳಾದ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿಯ ಮುನಿರತ್ನ ಹಾಗೂ ಶಿರಾ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಶ್ ಗೌಡ ವಿಜಯ ಸಾಧಿಸಿದ್ದಾರೆ.

ಜಾರ್ಖಂಡ್‌ನ ದುಮ್ಕಾ ಹಾಗೂ ಬರ್ಮೋ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿದೆ.

ತೆಲಂಗಾಣದ ದುಬ್ಬಕ್ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಮಣಿಪುರದ 5 ರಲ್ಲಿ 4 ಬಿಜೆಪಿ ಪಾಲಾಗಿದ್ದರೆ, ತೆಲಂಗಾಣದಲ್ಲಿಯೂ 1ರಲ್ಲಿ 1 ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿದೆ.

ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ಸುಳ್ಳು ಹೇಳಿಕೆಗಳು, ಅಪಪ್ರಚಾರಗಳ ಮೂಲಕವೇ ಸುದ್ದಿ ಮಾಡಲು, ಸದ್ದು ಮಾಡಲು ಮತ್ತು ಮತ ಗೆಲ್ಲಲು ಹೊರಟ ಪಕ್ಷಗಳಿಗೆ ಪ್ರಜ್ಞಾವಂತ, ಬುದ್ಧಿವಂತ ಮತದಾರ ಸುಳ್ಳನ್ನು ನಂಬದೆ ಸತ್ಯವನ್ನು ತಿಳಿದು ಮತ ಚಲಾಯಿಸಿದ್ದಾನೆ ಎಂಬುದು ಮತ್ತೆ ಸಾಬೀತಾಗಿದೆ.

ದೇಶಾದ್ಯಂತ ನಡೆದಿರುವ 59 ಉಪಚುನಾವಣೆಗಳಲ್ಲಿ 40 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದ್ದರೆ, ಕೇವಲ 11 ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಇತರರು 8 ಸ್ಥಾನ ಗಳಿಸಿಕೊಂಡಿದ್ದಾರೆ.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy
Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಸುಳ್ಳು ಹರಡುತ್ತಾ ಬೈಡನ್ ಗೆಲುವಿಗೂ ಮೋದಿ ವಿರುದ್ಧ ದ್ವೇಷ ಕಾರಿದ ಕಾಂಗ್ರೆಸ್
Next post Results 2020 | ಚಂದ್ರನನ್ನೇ ನಿಯಂತ್ರಿಸಬಹುದು, ಇವಿಎಂ ಯಾವ ಲೆಕ್ಕ?: ಮತ್ತೆ EVM ದೂರಿದ ಕಾಂಗ್ರೆಸ್

ಸುದ್ದಿ ಸಂಚಯ

ಇವುಗಳನ್ನೂ ನೋಡಿ