Read Time:5 Minute, 12 Second

China App Ban | ಮೋದಿ ಹೊಡೆತಕ್ಕೆ ಕಂಗಾಲಾದ ಚೀನಾ: ಮತ್ತಷ್ಟು ಹಾನಿ ತಪ್ಪಿಸಲು ಮೊರೆ

0 0

ಬೀಜಿಂಗ್: ಪಾಪಿ ಪಾಕಿಸ್ತಾನಕ್ಕೆ ಸದಾ ಬೆಂಬಲ ನೀಡುತ್ತಾ, ತಾನೂ ಮತಿಭ್ರಷ್ಟನಾಗಿ ಮಾತಿಗೆ ತಪ್ಪುತ್ತಾ ಭಾರತವನ್ನು ಕೆಣಕುತ್ತಲೇ ಇರುವ ಚೀನಾಕ್ಕೆ ನರೇಂದ್ರ ಮೋದಿ ಸರ್ಕಾರವು ಆಗಾಗ್ಗೆ ಚುರುಕು ಮುಟ್ಟಿಸುತ್ತಲೇ ಇರುತ್ತದೆ.

ರಾಷ್ಟ್ರೀಯ ಭದ್ರತೆಯ ಆಧಾರದಲ್ಲಿ ಇನ್ನೂ 43 ಚೀನೀ ಆ್ಯಪ್‌ಗಳನ್ನು ಭಾರತವು ನಿಷೇಧಿಸುವ ಮೂಲಕ, ಚೀನಾ ಮೂಲದ 267 ಆ್ಯಪ್‌ಗಳು ಭಾರತೀಯ ಬಳಕೆದಾರರಿಂದ ದೂರವಾಗಿವೆ. ಅವುಗಳಲ್ಲಿ ಕೆಲವಂತೂ ನಮ್ಮ ಜನರ ಬುದ್ಧಿವಂತಿಕೆಯನ್ನು ಕಸಿದು, ಅವರನ್ನು ಉದಾಸೀನದ ಮುದ್ದೆಗಳನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದವು ಮತ್ತು ಭವ್ಯ ಭವಿಷ್ಯದ ಪ್ರಜೆಗಳಾದ ಮಕ್ಕಳು ಕೂಡ ಕಲಿಕೆಯತ್ತ ಗಮನ ಹರಿಸದಂತೆ ಮಾಡುವಲ್ಲಿ ಸಫಲವಾಗಿದ್ದವು ಎಂಬುದನ್ನು ನಾವು ಗಮನಿಸಬೇಕು.

ಹಿಂದೆ ಪ್ರಮುಖವಾಗಿ ಚೀನಾದ ಟೆನ್ಸೆಂಟ್ ಹಾಗೂ ಬೈಟ್‌ಡ್ಯಾನ್ಸ್ ಕಂಪನಿಗಳ ಆ್ಯಪ್‌ಗಳನ್ನು ನಿಷೇಧಿಸಿದಾಗ ಚೀನಾ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿತ್ತು. ಆದರೆ, ಭಾರತದ ಕಾಂಗ್ರೆಸ್ ಪಕ್ಷವು ನರೇಂದ್ರ ಮೋದಿಯನ್ನು ಟೀಕಿಸುವ ಭರದಲ್ಲಿ, ಹೀಗೆಲ್ಲ ಮಾಡಿ ಏನೂ ಪ್ರಯೋಜನವಿಲ್ಲ ಎಂದು ಕಟಕಿಯಾಡಿತ್ತು.

ಇದನ್ನೂ ಓದಿ: Ban China Items | ಭಾರತದಲ್ಲಿ 72,000 ರೂ. ದೀಪಾವಳಿ ವಹಿವಾಟು: ಚೀನಾಕ್ಕಾಗಿರುವ ನಷ್ಟವೆಷ್ಟು ಗೊತ್ತೇ?

ಈಗ ಅಲಿಬಾಬಾ ಗ್ರೂಪ್ ಹೋಲ್ಡಿಂಗ್‌ನ ಅಲಿ ಎಕ್ಸ್‌ಪ್ರೆಸ್, ಅಲಿವರ್ಕ್‌ಬೆಂಚ್, ಅಲಿಪೇ ಕ್ಯಾಶಿಯರ್, ಅಲಿಸಪ್ಲಯರ್ ಮೊಬೈಲ್ ಮುಂತಾದವುಗಳನ್ನು ನಿಷೇಧಿಸಿರುವುದು ಚೀನಾಕ್ಕೆ ಮತ್ತಷ್ಟು ದೊಡ್ಡ ಹೊಡೆತ ನೀಡಿದೆ. ಇದಕ್ಕಾಗಿಯೇ ಚೀನಾ ಕಿಡಿಕಿಡಿಯಾಗಿದೆ.

ಚೀನಾ ರಾಯಭಾರ ಕಚೇರಿಯು ತನ್ನ ಪ್ರತಿಭಟನೆ ದಾಖಲಿಸಿದ್ದು, ಇದು ವಿಶ್ವ ವ್ಯಾಪಾರ ಸಂಘಟನೆಯ ನಿಯಮಗಳ ಉಲ್ಲಂಘನೆ ಎಂದೆಲ್ಲಾ ಬೋಂಗು ಬಿಟ್ಟಿದೆ. ಅಷ್ಟೇ ಅಲ್ಲದೆ, ನಿರ್ಧಾರ ಹಿಂತೆಗೆದುಕೊಳ್ಳುವಂತೆಯೂ, ಇದರಿಂದ ಎರಡೂ ರಾಷ್ಟ್ರಗಳಿಗೆ ಕ್ಷೇಮ ಎಂದೂ ಹೇಳಿಕೊಂಡಿದೆ.

ಲಡಾಕ್ ಗಡಿಯಲ್ಲಿ ಚೀನಾ ದುಸ್ಸಾಹಸ ಮಾಡಿ, ಭಾರತದ 20 ವೀರ ಯೋಧರ ಹತ್ಯೆಗೆ ಕಾರಣವಾಗಿದ್ದ ಚೀನಾ ವಿರುದ್ಧ ಭಾರತವು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟಗಳಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ.

ಇದನ್ನೂ ಓದಿ: Indo-China Border | ಲಡಾಖ್‌ನಲ್ಲಿ ಟಿಬೆಟ್ ರಹಸ್ಯ ಕಮಾಂಡೋಗಳ ಶೌರ್ಯ: ಚೀನಾಕ್ಕೆ ದೊಡ್ಡ ಶಾಕ್!

ಭಾರತ ಸರ್ಕಾರವು ಚೀನಾ ಆ್ಯಪ್‌ಗಳ ವಿರುದ್ಧ ಪದೇ ಪದೇ ರಾಷ್ಟ್ರೀಯ ಭದ್ರತೆ ವಿಚಾರ ಪ್ರಯೋಗಿಸುವುದನ್ನು ಚೀನಾ ಪ್ರತಿಭಟಿಸುತ್ತದೆ. ಎರಡೂ ರಾಷ್ಟ್ರಗಳು ಪರಸ್ಪರರ ಅಭಿವೃದ್ಧಿಯಲ್ಲಿ ಜತೆಯಾಗಬೇಕು. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು, ಇನ್ನಷ್ಟು ಹಾನಿಯಾಗುವುದನ್ನು ತಪ್ಪಿಸಬೇಕು ಎಂದು ಚೀನಾ ರಾಯಭಾರ ಕಚೇರಿ ವಕ್ತಾರ ಜಿ. ರೊಂಗ್ ಅವರು ಹೇಳಿದ್ದಾರೆ.

ಇದುವರೆಗೆ ನಿಷೇಧಿತವಾದ ಆ್ಯಪ್‌ಗಳಲ್ಲಿ ಪಬ್‌ಜಿ, ಟಿಕ್‌ಟಾಕ್, ಶೇರ್‌ಇಟ್, ಯುಸಿ ಬ್ರೌಸರ್ ಸಹಿತವಾಗಿ ಡೇಟಿಂಗ್, ವ್ಯಸನಕಾರಿ ಗೇಮ್ಸ್, ವ್ಯಸನಕಾರಿ ವಿಡಿಯೊಗಳ ಆ್ಯಪ್‌ಗಳೂ ಇದ್ದವು. ಇವೆಲ್ಲವೂ ಭಾರತೀಯ ಬಳಕೆದಾರರ ಖಾಸಗಿ ಮಾಹಿತಿಯನ್ನು ಸಂಗ್ರಹಿಸಿ, ಚೀನಾಕ್ಕೆ ರವಾನಿಸುತ್ತಿದ್ದವು. ಜೂನ್ ತಿಂಗಳ 29ರಂದು 59, ಸೆ.2ರಂದು 118 ಆ್ಯಪ್‌ಗಳನ್ನು ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಮೊದಲು ನಿಷೇಧಿಸಲಾಗಿತ್ತು.

ಚೀನಾದಲ್ಲಿಯೂ ವಿದೇಶಾಂಗ ಸಚಿವಾಲಯ ವಕ್ತಾರ ಜಾವೊ ಲಿಜಿಯನ್ ಅವರು ಮಾಧ್ಯಮದೊಂದಿಗೆ ಮಾತನಾಡಿ, ‘ಈ ವರ್ಷದ ಜೂನ್‌ನಿಂದೀಚೆಗೆ ಭಾರತವು ನಾಲ್ಕು ಬಾರಿ ನಮ್ಮ ಸ್ಮಾರ್ಟ್ ಫೋನ್ ಆ್ಯಪ್‌ಗಳನ್ನು ರಾಷ್ಟ್ರೀಯ ಭದ್ರತೆ ಹೆಸರಲ್ಲಿ ನಿಷೇಧಿಸಿತ್ತು. ಇದು ಚೀನಾ ಕಂಪನಿಗಳ ನ್ಯಾಯಮದ್ಧ ಹಕ್ಕು ಮತ್ತು ಹಿತಾಸಕ್ತಿಗಳಿಗೆ ಧಕ್ಕೆ ತರುತ್ತಿದೆ. ಚೀನಾ ಇದನ್ನು ವಿರೋಧಿಸುತ್ತದೆ.’ ಎಂದಿದ್ದಾರೆ.

ಚೀನಾದ ಅಧಿಕೃತ ಮಾಧ್ಯಮ ಗ್ಲೋಬಲ್ ಟೈಮ್ಸ್ ಈ ಹಿಂದೆ ವರದಿ ಮಾಡಿದ ಪ್ರಕಾರ, ಟಿಕ್‌ಟಾಕ್ ಮತ್ತು ಹೆಲೋ ಎಂಬ ಆ್ಯಪ್‌ಗಳ ವಹಿವಾಟು ನಡೆಸುತ್ತಿದ್ದ ಬೈಟ್ ಡ್ಯಾನ್ಸ್ ಕಂಪನಿಗೆ ಆ್ಯಪ್ ನಿಷೇಧದಿಂದಾಗಿ 600 ಕೋಟಿ ಡಾಲರ್ ನಷ್ಟವಾಗಿದೆ.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy
Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ನೋಟು ಅಮಾನ್ಯವಾದ ಬಳಿಕ 106 ಕೋಟಿ ಬಂದಿದ್ದೆಲ್ಲಿಂದ?: ಕಾಂಗ್ರೆಸ್‌ಗೆ IT ತನಿಖೆಯ ಶಾಕ್
Next post 26/11 Mumbai Terror Attack | ಪಾಕ್ ಉಗ್ರರು ಮಾಡಿದ ಗಾಯ ಮರೆಯಲಾರೆವು: ನರೇಂದ್ರ ಮೋದಿ

ಸುದ್ದಿ ಸಂಚಯ

ಇವುಗಳನ್ನೂ ನೋಡಿ