Read Time:4 Minute, 18 Second

J&K ಚುನಾವಣೆ ಹೊಸ್ತಿಲಲ್ಲಿ ಸುಳ್ಳು: ಮೆಹಬೂಬಾ ಮುಫ್ತಿ ನಾಟಕ ಬಯಲಿಗೆಳೆದ ಪೊಲೀಸರು

0 0

ಶ್ರೀನಗರ: 370ನೇ ವಿಧಿಯಡಿಯಲ್ಲಿ ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ತನ್ನದೇ ಏಳಿಗೆಗೆ ಮಾಡಿಕೊಂಡಿದ್ದ ಕಾನೂನುಗಳ ಹುಳುಕುಗಳೆಲ್ಲ ಬಯಲಾಗುತ್ತಿದ್ದು, ಈಗ ಅದು ರದ್ದಾದಾಗ ಒಂದೊಂದೇ ಹುಳಗಳು ಹೊರ ಬರಲಾರಂಭಿಸಿವೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ನರೇಂದ್ರ ಮೋದಿ ಸರ್ಕಾರವು ರದ್ದುಗೊಳಿಸುವ ಮೂಲಕ ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಭರವಸೆಯನ್ನು ಈಡೇರಿಸಿತ್ತು.

ಇದೀಗ, ಈ ವಿಧಿ ರದ್ದಾದ ಬಳಿಕ ಮೊದಲ ಬಾರಿ ಅಲ್ಲಿ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ. ಇದುವರೆಗೆ ಜನರಿಗೆ ಸುಳ್ಳು ಹೇಳುತ್ತಲೇ ಯಾಮಾರಿಸುತ್ತಾ ಅಧಿಕಾರಕ್ಕೆ ಬಂದಿದ್ದ ಪಿಡಿಪಿ ಮುಖ್ಯಸ್ಥೆಯ ಬಂಡವಾಳವನ್ನು ಪೊಲೀಸರು ಮತ್ತೆ ಬಯಲು ಮಾಡಿದ್ದಾರೆ.

ಭಾರಿ ಚಳಿಯ ನಡುವೆಯೂ ಶನಿವಾರ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಗಳಿಗೆ ಚುನಾವಣೆ ಆರಂಭವಾಗಿದೆ.

ಮಾಜಿ ಮುಖ್ಯಮಂತ್ರಿಯೊಬ್ಬರು ಸುಳ್ಳು ಹೇಳಿರುವುದನ್ನು ಪೊಲೀಸರು ಬಯಲಿಗೆಳೆದಿದ್ದು, ಆಕೆಯನ್ನು ಬಂಧಿಸಿಯೇ ಇಲ್ಲ, ಆಕೆಗೆ ಭದ್ರತೆ ನೀಡಲು ಸಾಕಷ್ಟು ಸಿಬ್ಬಂದಿಗಳು ಇಲ್ಲದಿರುವುದರಿಂದಾಗಿ ಅವರ ಪುಲ್ವಾಮಾ ಭೇಟಿಯನ್ನು ಮುಂದೂಡಲು ವಿನಂತಿಸಿದ್ದೇವಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸ್ಥಾನಮಾನ ಮರುಸ್ಥಾಪನೆ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ರಾಜ್ಯವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಲೆಂದೇ ಗುಪ್ಕಾರ್ ಘೋಷಣೆ ಮಾಡಿದ್ದ ಮೈತ್ರಿಕೂಟಜ ಉಪಾಧ್ಯಕ್ಷೆಯೂ ಆಗಿದ್ದಾರೆ ಮೆಹಬೂಬಾ ಮುಫ್ತಿ.

ಇಡೀ ಕಾಶ್ಮೀರವನ್ನೇ ಪೊಲೀಸರು ಜೈಲನ್ನಾಗಿ ಪರಿವರ್ತಿಸಿದ್ದಾರೆ. ನನ್ನನ್ನು ಪುನಃ ಅಕ್ರಮವಾಗಿ ಬಂಧಿಸಲಾಗಿದೆ. ಎರಡು ದಿನಗಳಿಂದ ಪುಲ್ವಾಮಾದಲ್ಲಿರುವ ವಹೀದ್ ಪಾರಾ ಕುಟುಂಬ ಭೇಟಿಗೆ ಅವಕಾಶ ನೀಡುತ್ತಿಲ್ಲ. ಬಿಜೆಪಿ ಮಂತ್ರಿಗಳು ಮತ್ತವರ ಕೈಗೊಂಬೆಗಳಿಗೆ ಕಾಶ್ಮೀರದ ಮೂಲೆ ಮೂಲೆಗೆ ತಿರುಗಾಡಲು ಅವಕಾಶ ನೀಡಲಾಗುತ್ತಿದೆ. ಆದರೆ ನನಗೆ ಮಾತ್ರ ಭದ್ರತೆಯ ನೆಪ ಒಡ್ಡಲಾಗುತ್ತಿದೆ ಎಂದು ಮೆಹಬೂಬಾ ಟ್ವೀಟ್ ಮಾಡಿದ್ದರು.

ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪಿಡಿಪಿ ಯುವ ಘಟಕದ ಅಧ್ಯಕ್ಷ ಪಾರಾನನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬಂಧಿಸಿ, 15 ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿತ್ತು.

ಆದರೆ, ಆತನನ್ನು ಅಕ್ರಮವಾಗಿ ಬಂಧಿಸಲಾಗಿದೆ. ಕುಟುಂಬಕ್ಕೆ ಸಾಂತ್ವನ ಹೇಳಲೂ ಬಿಡುತ್ತಿಲ್ಲ. ನನ್ನ ಮಗಳು ಇಲ್ತಿಜಾಳನ್ನೂ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಮೆಹಬೂಬಾ ಆರೋಪಿಸಿದ್ದರೆ, ಮಗಳು ಇಲ್ತಿಜಾ ಕೂಡ ವಿಡಿಯೊ ಶೇರ್ ಮಾಡಿ, ತನ್ನ ತಾಯಿಯನ್ನು ಗೃಹ ಬಂಧನದಲ್ಲಿರಿಸಿದ್ದಾರೆ, ಪಿಡಿಪಿ ಮುಖಂಡನ ಭೇಟಿಗೆ ತನಗೂ ಅವಕಾಶ ನೀಡುತ್ತಿಲ್ಲ ಎಂದಿದ್ದಾರೆ.

ಪಿಡಿಪಿ ಮುಖಂಡ ಪಾರಾನನ್ನು ಬುಧವಾರ ಬಂಧಿಸಲಾಗಿತ್ತು. 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿಗಳ ಬೆಂಬಲ ಪಡೆಯಲು ಆತ ಸಂಚು ರೂಪಿಸಿದ್ದ ಎಂಬ ಆಘಾತಕಾರಿ ಆರೋಪಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿತ್ತು. ಹಿಜ್ಬುಲ್ ಉಗ್ರಗಾಮಿ ಇರ್ಫಾನ್ ಶಾಫಿ ಮಿರ್, ‘ವಾಂಟೆಡ್’ ಕಮಾಂಡರ್ ನವೀದ್ ಬಾಬು ಮತ್ತಿತರರ ಬಂಧನದಿಂದ ದೊರೆತ ಮಾಹಿತಿ ಆಧಾರದಲ್ಲಿ ಆತನನ್ನು ಬಂಧಿಸಲಾಗಿತ್ತು.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy
Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಪಾಕಿಸ್ತಾನದಲ್ಲಿ ಕಠಿಣ ಕಾನೂನು: ಅತ್ಯಾಚಾರಿಗಳಿಗೆ ‘ಬೀಜಹರಣ’ ಶಿಕ್ಷೆ, ಇಲ್ಲವೇ ಮರಣ ದಂಡನೆ!
Next post Farmers Protest ನಡುವೆ ಸಮಾಜಘಾತುಕ ಶಕ್ತಿಗಳು: ಮೋದಿ ಹತ್ಯೆ ಬೆದರಿಕೆ ಘೋಷಣೆ – ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಸುದ್ದಿ ಸಂಚಯ

ಇವುಗಳನ್ನೂ ನೋಡಿ