ಗ್ವಾಲಿಯರ್: ರೈತರ ಹೋರಾಟದ ಹಿಂದೆ ಚೀನಾ ಮತ್ತು ಪಾಕಿಸ್ತಾನದ ದುಷ್ಟ ಶಕ್ತಿಗಳ ಕೈವಾಡವಿದೆ ಎಂದು ಶಂಕಿಸಿರುವ ಕೇಂದ್ರ ಸಚಿವರ ಮನೆಗೆ ನುಗ್ಗಿ ಬಡಿಯಬೇಕು ಎಂದು ಮಹಾರಾಷ್ಟ್ರ ಸಚಿವರು ಕೆಂಡ ಕಾರಿದ್ದಾರೆಯಲ್ಲದೆ, ಶಿವಸೇನಾ ಮುಖಂಡ ಸಂಜಯ್ ರಾವತ್ ಕೂಡ ಕಿಡಿಕಿಡಿಯಾಗಿದ್ದಾರೆ.
ಹಿಂದೆಯೂ ಅವರು ಇದೇ ರೀತಿಯ ಹೇಳಿಕೆ ನೀಡಿದ್ದರು. ನಾವು ಆವಾಗ ಅವರ ಮನೆಗೆ ಘೇರಾವ್ ಮಾಡಿದ್ದೆವು. ಈಗ, ರೈತರ ಹೋರಾಟದ ಹಿಂದೆ ಪಾಕಿಸ್ತಾನ, ಚೀನಾಗಳ ಕೈವಾಡವಿದೆ ಎಂದಿರುವ ಕೇಂದ್ರ ಸಚಿವ ರಾವ್ಸಾಹೆಬ್ ದನ್ವೆ ಅವರ ಮನೆಗೆ ನುಗ್ಗಿ ಬಡಿಯಬೇಕಾಗಿದೆ ಎಂದು ಮಹಾರಾಷ್ಟ್ರ ಸಚಿವ ಬಚ್ಚು ಕಡು ಹೇಳಿದ್ದಾರೆ.
ಇದನ್ನೂ ಓದಿ: ರೈತ ಪ್ರತಿಭಟನೆಯ ಮತ್ತೊಂದು ಮುಖ ಬಯಲು: ವರವರ ರಾವ್ ಸಹಿತ ‘ಅರ್ಬನ್ ನಕ್ಸಲರ’ ಬಿಡುಗಡೆಯೂ ರೈತರ ಬೇಡಿಕೆಗಳಲ್ಲೊಂದು!
ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಸಚಿವ ದನ್ವೆ ಅವರು ಬುಧವಾರ ಮಾತನಾಡುತ್ತಾ, ಕೇಂದ್ರವು ರೈತರ ಹಿತಕ್ಕಾಗಿ ಜಾರಿಗೆ ತಂದಿರುವ ಕಾನೂನುಗಳನ್ನು ವಿರೋಧಿಸಿ, ಪ್ರತಿಭಟನೆ ನಡೆಸುತ್ತಿರುವ ರೈತರ ಹಿಂದೆ ಪಾಕಿಸ್ತಾನ ಮತ್ತು ಚೀನಾದ ಶಕ್ತಿಗಳಿರುವ ಶಂಕೆಯಿದೆ. ದೆಹಲಿಯಲ್ಲಿ ಆಗುತ್ತಿರುವ ಈ ಪ್ರತಿಭಟನೆಯು ರೈತರ ಹಿತಕ್ಕಾಗಿಯಲ್ಲ ಎಂದು ಹೇಳಿದ್ದರು.
ರೈತರಿಗೆ ಹೆಚ್ಚು ಲಾಭ ಮಾಡಿಕೊಡುವುದಷ್ಟೇ ಕೇಂದ್ರ ಸರ್ಕಾರದ ಉದ್ದೇಶ ಎಂದವರು ಸ್ಪಷ್ಟಪಡಿಸಿದ್ದರು. ಮಹಾರಾಷ್ಟ್ರದ ಆಡಳಿತಾರೂಢ ಕಾಂಗ್ರೆಸ್-ಶಿವಸೇನೆ ಮೈತ್ರಿಕೂಟವು ಇದನ್ನು ಕಟುವಾಗಿ ವಿರೋಧಿಸಿದೆ.
ಇದನ್ನೂ ಓದಿ: ಆಗ ಬೆಂಬಲ, ಈಗ ವಿರೋಧ: ಸಿದ್ದರಾಮಯ್ಯ, ಶರದ್ ಪವಾರ್ ಪತ್ರಗಳಿಂದ ಬೆತ್ತಲಾದ ಕಾಂಗ್ರೆಸ್ ಇಬ್ಬಗೆ ನೀತಿ
ಶಿವಸೇನಾ ಮುಖಂಡ ಸಂಜಯ್ ರಾವತ್ ಮಾತನಾಡಿ, ರೈತರ ಪ್ರತಿಭಟನೆಯಲ್ಲಿ ಚೀನಾ ಮತ್ತು ಪಾಕಿಸ್ತಾನದ ಕೈವಾಡವಿರುವುದು ಖಚಿತವಾಗಿದ್ದರೆ, ಅಲ್ಲಿ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಲಿ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ರೈತರೇಕೆ ಹೋರಾಡುತ್ತಿದ್ದಾರೆ? ಸ್ವಾರ್ಥಕ್ಕಾಗಿ ಕುಮ್ಮಕ್ಕು ನೀಡಿದ ಕಾಂಗ್ರೆಸ್ ಹುನ್ನಾರವೇನು? ಇಲ್ಲಿದೆ ನೋಡಿ ಕಂಪ್ಲೀಟ್ ವಿವರ

Average Rating