ನವದೆಹಲಿ: ಇಂಥವರನ್ನೆಲ್ಲಾ ಕೆಲವು ಮಂದಿ ತಮ್ಮ ಭವಿಷ್ಯದ ನಾಯಕಿ ಎಂದೂ, ಭವಿಷ್ಯದ ಪ್ರಧಾನಿ ಎಂದೂ ಕೈಮುಗಿಯುತ್ತಾರೆ. ಹಲವಾರು ಸಂದರ್ಭಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ಒಳ್ಳೆಯ ಕೆಲಸಗಳ ಬಗ್ಗೆ ಸುಳ್ಳು ಅಪಪ್ರಚಾರವನ್ನೇ ಮಾಡುತ್ತಿದ್ದ ಕಾಂಗ್ರೆಸ್ ಮತ್ತೊಂದು ಸುಳ್ಳನ್ನು ಹರಡಲು ಮಾಡಿದ ಪ್ರಯತ್ನಕ್ಕೆ ಸ್ವತಃ ಫೇಸ್‌ಬುಕ್ ತಡೆ ನೀಡಿದೆ.
ಇದುವರೆಗೆ ಪೌರತ್ವ ತಿದ್ದುಪಡಿ ಕಾಯ್ದೆ, ರೈತರ ಪರವಾಗಿರುವ ಕೃಷಿ ಕಾಯ್ದೆ ಹಾಗೂ ಹಿಂದಿನ ರಫೇಲ್ ಯುದ್ಧ ವಿಮಾನ ಖರೀದಿ ಮುಂತಾದವುಗಳ ಬಗ್ಗೆ ಕಾಂಗ್ರೆಸ್ ಲಾಗಾಯ್ತಿನಿಂದಲೂ ಅಪಪ್ರಚಾರ ಮಾಡುತ್ತಾ, ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿತ್ತು. ಇದೀಗ, ಭಾರತೀಯ ರೈಲ್ವೇಯನ್ನು ಮೋದಿ ಸರ್ಕಾರವು ಖಾಸಗೀಕರಣ ಮಾಡಲು ನಿಶ್ಚಯಿಸಿದ್ದು, ಅದನ್ನು ಅದಾನಿ ಗ್ರೂಪ್‌ಗೆ ಒಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ನ ‘ಜನಪ್ರಿಯ ನಾಯಕಿ’ ಪ್ರಿಯಾಂಕಾ ವಾದ್ರಾ ಅವರು ಫೇಸ್‌ಬುಕ್‌ನಲ್ಲಿ ಅಪಪ್ರಚಾರ ಮಾಡಿದ್ದರು.
ಇದು ದಾರಿ ತಪ್ಪಿಸುವ ವಿಷಯ ಎಂದು ಸ್ವತಃ ಫೇಸ್‌ಬುಕ್ ಎಚ್ಚರಿಕೆ ನೀಡಿದ ಬಳಿಕ ಅವರು ತಮ್ಮ ಪೋಸ್ಟನ್ನು ಅಳಿಸಬೇಕಾಗಿಬಂದಿದೆ.
ದೇಶದ ಕೋಟ್ಯಂತರ ಜನರು ಪರಿಶ್ರಮದಿಂದ ಕಟ್ಟಿದ ಭಾರತೀಯ ರೈಲ್ವೇಯನ್ನು ಬಿಜೆಪಿ ಸರ್ಕಾರವು ತಮ್ಮ ಕೋಟ್ಯಧಿಪತಿ ಮಿತ್ರ ಅಡಾನಿಗೆ ಒಪ್ಪಿಸುತ್ತಿದೆ ಎಂದು ಪ್ರಿಯಾಂಕಾ ಬರೆದು ವಿಡಿಯೊ ಕೂಡ ಪೋಸ್ಟ್ ಮಾಡಿದ್ದರು.
ಜೊತೆಗೆ, ನಿಧಾನವಾಗಿ ರೈಲ್ವೇ ಇಲಾಖೆಯ ದೊಡ್ಡ ಭಾಗವು ಮೋದೀಜೀ ಅವರ ಕೋಟ್ಯಧಿಪತಿ ಮಿತ್ರರ ಕೈಗೆ ಹೋಗಲಿದೆ. ರೈತರು ಕೂಡ ಕೃಷಿ ವ್ಯವಸ್ಥೆಯು ಮೋದಿಜೀಯವರ ಕೋಟ್ಯಧಿಪತಿ ಮಿತ್ರರ ತೆಕ್ಕೆಗೆ ಹೋಗದಂತೆ ಹೋರಾಡುತ್ತಿದ್ದಾರೆ ಎಂಬ ಸುಳ್ಳನ್ನೂ ಸೇರಿಸಿದ್ದರು.
ಅದು ತುಂಬಾ ಕಡೆ ಶೇರ್ ಆಗಿದ್ದು, ಈಗ ‘ಮಿಸ್ಸಿಂಗ್ ಕಂಟೆಂಟ್’ ಅಂತ ತೋರಿಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಫೇಸ್ ಸುದ್ದಿ ಹರಡುವುದರ ವಿರುದ್ಧ ಫೇಸ್‌ಬುಕ್ ಕೂಡ ಕಠಿಣ ಕ್ರಮ ಕೈಗೊಳ್ಳಲಾರಂಭಿಸಿದ್ದು, ಸ್ವತಂತ್ರವಾಗಿ ಕೆಲಸ ಮಾಡುವ ಸತ್ಯ ಶೋಧಕರ ತಂಡವು, ವಾದ್ರಾ ಪೋಸ್ಟನ್ನು ಸುಳ್ಳು ಮತ್ತು ದಾರಿ ತಪ್ಪಿಸುವ ಮಾಹಿತಿ ಅಂತ ಗುರುತಿಸಿದೆ.
ಇಷ್ಟಲ್ಲದೆ, ಈ ರೀತಿಯಾಗಿ ಸರ್ಕಾರದ ಯೋಜನೆಗಳು, ನೀತಿಗಳ ಬಗ್ಗೆ ಹರಡಲಾಗುತ್ತಿರುವ ಫೇಕ್ ಸುದ್ದಿಗಳ ಹಿಂದಿನ ಸತ್ಯಾಂಶವನ್ನು ತಿಳಿಸಲೆಂದೇ ಇರುವ ಸರ್ಕಾರದ ಪಿಐಬಿ ಫ್ಯಾಕ್ಟ್ ಚೆಕ್ ಕೂಡ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಪೋಸ್ಟನ್ನು ದಾರಿತಪ್ಪಿಸುವ ಪೋಸ್ಟ್ ಅಂತ ಸ್ಪಷ್ಟಪಡಿಸಿದೆ.
ಖಾಸಗಿ ಕಂಪನಿಯೊಂದರ ಮುದ್ರೆಯನ್ನು ರೈಲಿಗೆ ಹಾಕಿ, ಈ ರೀತಿ ಸುಳ್ಳು ಹರಡಲಾಗುತ್ತಿದೆ ಎಂದು ಸರ್ಕಾರದ ಸಾರ್ವಜನಿಕ ಸಂಪರ್ಕ ಇಲಾಖೆ (ಪಿಐಬಿ) ಸ್ಪಷ್ಟಪಡಿಸಿದೆ.
ರೈಲಿನ ಎಂಜಿನ್ ಮೇಲೆ ‘ಅಡಾನಿ ವಿಲ್‌ಮಾರ್’ ಎಂದು ಬರೆಯಲಾಗಿದ್ದ ವಿಡಿಯೊವೊಂದನ್ನು ಪ್ರಿಯಾಂಕಾ ವಾದ್ರಾ ಡಿ.14ರಂದು ಶೇರ್ ಮಾಡಿದ್ದರು.
ಫೇಸ್‌ಬುಕ್‌ನಲ್ಲಿ ಪ್ರಿಯಾಂಕಾ ಈ ಪೋಸ್ಟನ್ನು ಅಳಿಸಿದ್ದರೆ, ಟ್ವಿಟರ್‌ನಲ್ಲಿ ಇದೇ ಸುಳ್ಳನ್ನು ಮತ್ತೆ ಹರಡುತ್ತಿದ್ದಾರೆ. ಗುಜರಾತ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಮಾಡಿದ ಟ್ವೀಟನ್ನು ಅವರು ರೀಟ್ವೀಟ್ ಮಾಡಿದ್ದಾರೆ.
ಆದರೆ, ಸುಳ್ಳು ಹರಡುತ್ತಿರುವುದನ್ನು ಫೇಸ್‌ಬುಕ್ಕೇ ಪತ್ತೆ ಮಾಡಿ, ಅದನ್ನು ಅಳಿಸಿರುವುದು ತೀರಾ ಅಪರೂಪದ ವಿದ್ಯಮಾನ. ಕಾಂಗ್ರೆಸ್ ಪಕ್ಷವಂತೂ ಪ್ರತಿ ದಿನ ಎಂಬಂತೆ ಈ ರೀತಿಯ ಸುಳ್ಳುಗಳನ್ನು ಹರಡುತ್ತಲೇ ಇರುವುದು ಈಗಾಗಲೇ ಓದುಗರ ಗಮನಕ್ಕೆ ಬಂದಿದೆ.
ಕಾಂಗ್ರೆಸ್‌ನ ಮತ್ತೊಬ್ಬ ಭಾವಿ ಪ್ರಧಾನಿ ರಾಹುಲ್ ಗಾಂಧಿ ತಮ್ಮ ರಾಜಕೀಯ ವೃತ್ತಿಯನ್ನು ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ತಪ್ಪು ಮಾಹಿತಿ, ಅಪಪ್ರಚಾರ, ಫೇಕ್ ಸುದ್ದಿಗಳ ಮೂಲಕವೇ ಬೆಳೆಸುತ್ತಿರುವ ವಿಚಾರವಂತೂ ಹಲವಾರು ಸಂದರ್ಭಗಳಲ್ಲಿ ಶ್ರುತಪಟ್ಟಿದೆ. ಈ ಬಗ್ಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವರು ಕಿಡಿ ಕಾರಿದ್ದಾರೆ.
ಕೆಲವು ಸ್ಯಾಂಪಲ್ ಇಲ್ಲಿ ಮತ್ತು ಇಲ್ಲಿ ಇದೆ.
ವಲಸೆ ಕಾರ್ಮಿಕರು ಅಂತ ಸುಳ್ಳು ಪೋಸ್ ನೀಡಿದ್ದು ಕೂಡ ಬಯಲಾದ ವಿಚಾರ ಇಲ್ಲಿದೆ.

Average Rating