ಜೈಪುರ: ಆಘಾತಕಾರಿ ಘಟನೆಯೊಂದರಲ್ಲಿ, ಉದ್ಯಮಿಯೊಬ್ಬನ ಕೊಲೆಗೆಂದು ಬಂದ ಐವರು, ತಾವು ಉಳಿದುಕೊಂಡಿದ್ದ ಹೋಟೆಲ್‌ನ ಇಬ್ಬರು ಮಹಿಳಾ ಸಿಬ್ಬಂದಿ ಮೇಲೆ ಸರಣಿ ಅತ್ಯಾಚಾರ ನಡೆಸಿರುವ ಘಟನೆ ಶುಕ್ರವಾರ ವರದಿಯಾಗಿದೆ.
ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಈ ಪರಿ ಮಹಿಳೆಯರ ಮೇಲೆ ದೌರ್ಜನ್ಯವಾಗುತ್ತಿದ್ದ ಸಂದರ್ಭದಲ್ಲಿ ಭರ್ಜರಿ ಕೂಗಾಟ, ಹಾರಾಟ, ಹೋರಾಟ ನಡೆಸಿದ್ದವರು ಈಗ ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಿರುವ ರಾಜಸ್ಥಾನದಲ್ಲಿ ನಡೆದ ಈ ಕೃತ್ಯದ ಬಗ್ಗೆ ಮೌನ ತಾಳಿದ್ದಾರೆ.
ಇದನ್ನೂ ಓದಿ: Hathras Rape: ಬಯಲಾಯಿತು ಒತ್ತಡ ಹೇರುವ ಫೋನ್ ಸಂಭಾಷಣೆ, ಕಾಂಗ್ರೆಸ್ – ಇಂಡಿಯಾ ಟುಡೇ ತಂತ್ರಗಾರಿಕೆ
ಆರೋಪಿಗಳು ಆಳ್ವಾರ್ ಜಿಲ್ಲೆಯ ನೀಮ್ರಾನಾ ಎಂಬಲ್ಲಿನ ಹೋಟೆಲಲ್ಲಿ ಉಳಿದುಕೊಂಡಿದ್ದರು. ಅವರು ಉದ್ಯಮಿಯೊಬ್ಬರ ಕೊಲೆಗೆಂದು ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಗನ್ ಹೊಂದಿದ್ದರು.
ಮಹಿಳಾ ಸಿಬ್ಬಂದಿಯ ಕೊಠಡಿಗೆ ನುಗ್ಗಿದ ಈ ಹಂತಕರು, ಇದೇ ಗನ್ ತೋರಿಸಿ ಇಬ್ಬರು ಮಹಿಳೆಯರ ಮೇಲೆ ಬಲಾತ್ಕಾರ ಎಸಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವಿಷಯ ಗೊತ್ತಾದ ತಕ್ಷಣ ತ್ರೀಸ್ಟಾರ್ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಭಿವಂಡಿ ಎಸ್ಪಿ ರಾಮಮೂರ್ತಿ ಜೋಷಿ ನೇತೃತ್ವದಲ್ಲಿ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಹೋಟೆಲ್‌ಗೆ ದಾಳಿ ಮಾಡಿ ಐವರನ್ನೂ ಬಂಧಿಸಿದ್ದಾರೆ. ವಿಚಾರಣೆಯ ವೇಳೆ, ಉದ್ಯಮಿ ನರೇಶ್ ಜಾಟ್ ಎಂಬವರಿಗೆ 20 ಲಕ್ಷ ಕೊಡುವಂತೆ ಬೇಡಿಕೆ ಒಡ್ಡಿದ್ದು, ತಪ್ಪಿದಲ್ಲಿ ಆತನ ಹತ್ಯೆಗೆ ಸಿದ್ಧತೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ.
ನರೇಶ್ ಗುಜ್ಜರ್,ಲೋಕೇಶ್, ರಾಹುಲ್, ದಾನವೀರ್ ಮತ್ತು ಪ್ರಿನ್ಸ್ ತಿವಾರಿ ಎಂಬವರನ್ನು ಬಂಧಿಸಲಾಗಿದ್ದು, ಎರಡು ಪಿಸ್ತೂಲು ಹಾಗೂ ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: We Want Justice | ಮಹಿಳೆಯ ಪರ ಹೋರಾಟಕ್ಕೆ ರಾಜಕೀಯದ ಹಂಗೇಕೆ?

Average Rating