ಚಂಡೀಗಢ: ತಮ್ಮ ಪರವಾಗಿರುವ ಕಾನೂನಿನ ವಿರುದ್ಧವೇ ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳ ಪ್ರಚೋದನೆಯಿಂದ ಕಳೆದ 25 ದಿನಗಳಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಲ ಏನೆಂಬುದು ನಿಧಾನವಾಗಿ ತಿಳಿಯಲಾರಂಭಿಸಿದೆ.
ಪಂಜಾಬಿನ ಪ್ರಮುಖ ಸಂಘಟನೆ, ಕೃಷಿ ಕಾಯ್ದೆಗಿಂತಲೂ ಹೆಚ್ಚಾಗಿ ಮೋದಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಈ ಹೋರಾಟದ ಮುಂಚೂಣಿಯಲ್ಲಿರುವ ಭಾರತೀಯ ಕಿಸಾನ್ ಯೂನಿಯನ್ (ಉಗ್ರಹಣ್) (BKU) ಸಂಘಟನೆಗೆ ವಿದೇಶದಿಂದ ಹಣಕಾಸು ನೆರವು ಹರಿದು ಬರುತ್ತಿರುವುದು ಬೆಳಕಿಗೆ ಬಂದಿದೆ. BKU ಸಂಘಟನೆಯು ನೀತಿ ನಿಯಮಗಳನ್ನು ಉಲ್ಲಂಘಿಸಿ ಈ ಹಣ ಪಡೆಯುತ್ತಿದೆ ಎಂಬ ಆರೋಪವಿದೆ.
ಇದನ್ನೂ ಓದಿ: ಕೃಷಿ ಕಾಯ್ದೆ ಹೋರಾಟ ಹೆಸರಲ್ಲಿ ಭಾರತ-ವಿರೋಧಿ ಬ್ರಿಗೇಡ್ಗೆ ನಾವೇಕೆ ಸುಲಭವಾಗಿ ಬಲಿಯಾಗಬೇಕು?: ಕಂಗನಾ ಪ್ರಶ್ನೆ
ಎರಡು ತಿಂಗಳಲ್ಲಿ 8ರಿಂದ 9 ಲಕ್ಷ ರೂ. ಹಣವು ವಿದೇಶದಿಂದ ಹರಿದುಬಂದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರತಿಭಟನಾ ನಿರತ ರೈತರು, ತಾವು ಪ್ರತಿಭಟನೆ ನಡೆಸುತ್ತಿರುವಲ್ಲೇ ವಾಷಿಂಗ್ ಮೆಷಿನ್, ಊಟ ಉಪಾಹಾರ ಮತ್ತಿತರ ಮೂಲ ಸೌಕರ್ಯಗಳಿಗಂತೂ ಲಕ್ಷಾಂತರ ರೂಪಾಯಿ ಅಗತ್ಯವಿರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ.
ಇದೀಗ, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ನಲ್ಲಿರುವ ಖಾತೆಗೆ ಅಪಾರ ಪ್ರಮಾಣದ ಹಣಕಾಸು ನೆರವು ಬರುತ್ತಿರುವ ಬಗ್ಗೆ ಬ್ಯಾಂಕು ಅಧಿಕಾರಿಗಳು ಈ ಸಂಘಟನೆಗೆ ಎಚ್ಚರಿಸಿದ್ದು, ತಕ್ಷಣವೇ ಸಂಘಟನೆಯನ್ನು ಕಡ್ಡಾಯವಾಗಿ ನೋಂದಾವಣೆ ಮಾಡಿಸಿಕೊಳ್ಳುವಂತೆ ಸೂಚಿಸಿದೆ.
ಇದನ್ನೂ ಓದಿ: ಕಾಯ್ದೆಯಿಂದ ರೈತರಿಗೆ ಲಾಭ, ಕಾಂಗ್ರೆಸ್ ಸುಳ್ಳುಗಳನ್ನು ನಂಬಬೇಡಿ ಅಂದಿದ್ದೇಕೆ ಮೋದಿ? ಇಲ್ಲಿದೆ ಡೀಟೇಲ್ಸ್!
ಈ ಕುರಿತು ವಿದೇಶೀ ವಿನಿಮಯ ಇಲಾಖೆಯಿಂದ ಬಂದಿರುವ ಸೂಚನೆಯನ್ನು ಭಾರತೀಯ ಕಿಸಾನ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಕೋಕ್ರಿ ಕಲನ್ ಅವರು ಖಚಿತಪಡಿಸಿದ್ದಾರೆ.
‘ಇದು ವಿದೇಶದಲ್ಲಿರುವ ಪಂಜಾಬಿ ಎನ್ಆರ್ಐಗಳು ನಮಗೆ ಮಾಡುತ್ತಿರುವ ಸಹಾಯ. ಇದರಲ್ಲೇನು ದೊಡ್ಡ ಸಂಗತಿ? ನಾವೇನೂ ಅರ್ಥಿಯಾಗಳಿಂದ (ಕಮಿಶನ್ ಏಜೆಂಟರು) ಸಹಾಯ ಪಡೆಯುತ್ತಿಲ್ಲ.’ ಎಂದು ಪ್ರತಿಕ್ರಿಯಿಸಿದ್ದಾರೆ ಬಿಕೆಯು ಮುಖ್ಯಸ್ಥ ಜೋಗಿಂದರ್ ಉಗ್ರಹಣ್.
ಇದನ್ನೂ ಓದಿ: ತಿಂಗಳ ಹಿಂದಷ್ಟೇ ಕೃಷಿ ಕಾಯ್ದೆಗೆ ಅಸ್ತು ಹೇಳಿ, ಈಗ ಕಾಯ್ದೆ ಪ್ರತಿ ಹರಿದು ‘ನಾಟಕ’ ಮಾಡಿದ ಕೇಜ್ರಿವಾಲ್ಗೆ ಭಾರಿ ಮುಜುಗರ
ದೇಶದಲ್ಲಿ ಭಾರಿ ಎಂಬ ಮಟ್ಟದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ವಿದೇಶದಿಂದ ಎನ್ಜಿಒ ಹೆಸರಲ್ಲಿ ಹಣಕಾಸು ನೆರವು ಹರಿದುಬರುತ್ತಿದೆ ಎಂಬ ಗುಪ್ತಚರ ಮಾಹಿತಿಗಳ ಹಿನ್ನೆಲೆಯಲ್ಲಿ ಎನ್ಡಿಎ ಸರ್ಕಾರವು ಕಳೆದ ಕೆಲವು ವರ್ಷಗಳ ಹಿಂದೆಯೇ ವಿದೇಶೀ ದೇಣಿಗೆ ನಿಯಂತ್ರಣ ಕಾಯ್ದೆಯನ್ನು ಬಲಪಡಿಸಿತ್ತು.
ಅರ್ಥಿಯಾಗಳು ಅಥವಾ ಕಮಿಶನ್ ಏಜೆಂಟರು ರೈತರ ಹೋರಾಟವನ್ನು ಬಲವಾಗಿ ಬೆಂಬಲಿಸುತ್ತಾರೆ. ಯಾಕೆಂದರೆ, ಎಪಿಎಂಸಿ ಕಾಯ್ದೆ ತಿದ್ದುಪಡಿಯಲ್ಲಿ ಮಧ್ಯವರ್ತಿಗಳಾಗಿರುವ ಈ ಕಮಿಶನ್ ಏಜೆಂಟರ ದಂಧೆಗೆ ಕುತ್ತು ಬಂದಿದೆ. ಅವರು ರೈತರಿಗೆ ಸಿಗುವ ಹಣದಲ್ಲಿ ಹೆಚ್ಚಿನ ಪಾಲು ಪಡೆಯುವ ಕಾರಣ, ಫಸಲು ಬೆಳೆದ ರೈತರಿಗೆ ಸೂಕ್ತ ಬೆಲೆ ಸಿಗುತ್ತಿರಲಿಲ್ಲ. ಕಾಯ್ದೆ ತಿದ್ದುಪಡಿ ಮೂಲಕ ನರೇಂದ್ರ ಮೋದಿ ಸರ್ಕಾರವು ಮಧ್ಯವರ್ತಿಗಳ ಬದಲಾಗಿ ಹಣವು ನೇರವಾಗಿ ರೈತರನ್ನು ತಲುಪುವಂತೆ ಕ್ರಮ ಕೈಗೊಂಡಿತ್ತು.
ಇದೇ ಕಾರಣಕ್ಕಾಗಿ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಹಾಗೂ ಕಮಿಶನ್ ಏಜೆಂಟರು ಈ ರೈತರ ಪ್ರತಿಭಟನೆಯನ್ನು ಪ್ರಚೋದಿಸಿ, ಬೆಂಬಲಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಹಿಂದಿನಿಂದಲೂ ಆರೋಪಿಸುತ್ತಲೇ ಬಂದಿದ್ದರು.
ಇದನ್ನೂ ಓದಿ: ರೈತ ಹೋರಾಟದಲ್ಲಿ ವಿದ್ರೋಹಿ ಶಕ್ತಿಗಳು: ಮೋದಿ, ಬಿಜೆಪಿ ಗಮನಿಸಬೇಕಿದೆ

Average Rating