Read Time:3 Minute, 0 Second

Hindi Diwas: ಜವಾಹರಲಾಲ್ ನೆಹರು ಮುದ್ರೆ ನೀಡಿದ ಭಾಷಾ ದಿನಾಚರಣೆ

0 0

ಪ್ರತಿ ವರ್ಷ ಸೆಪ್ಟೆಂಬರ್ 14ರಂದು ಹಿಂದಿ ದಿವಸ ಅಥವಾ ಹಿಂದಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಜಗತ್ತಿನಲ್ಲಿ ಇಂಗ್ಲಿಷ್, ಸ್ಪ್ಯಾನಿಷ್ ಮತ್ತು ಮ್ಯಾಂಡರಿನ್ ಬಳಿಕ, ಅತೀ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಹಿಂದಿಯ ಸ್ಥಾನ 4ನೆಯದು.

ಈ ವಿಶೇಷತೆಯೊಂದಿಗೆ, ಭಾರತದ ಉತ್ತರ ಭಾಗದಲ್ಲಿ ಹಿಂದಿಯೇ ಪ್ರಧಾನ ಸಂವಹನ ಭಾಷೆ. ದೇವನಾಗರಿ ಲಿಪಿಯಲ್ಲಿರುವ ಹಿಂದಿಯು ಕನ್ನಡದಂತೆಯೇ ದೇಶದ ಅಧಿಕೃತ ಭಾಷೆಗಳಲ್ಲೊಂದಾಗಿದೆ. ಇದರ ಆಚರಣೆ ಆರಂಭವಾಗಿದ್ದು ದೇಶದ ಏಕತೆಯನ್ನು ಬಲಪಡಿಸುವುದಕ್ಕಾಗಿಯೇ ಹೊರತು, ಭಾಷೆಯ ಹೆಸರಿನಲ್ಲಿ ದೇಶದ ಜನರ ಮಧ್ಯೆ ವಿಷ ಬೀಜ ಬಿತ್ತುವುದಕ್ಕಲ್ಲ.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy .

ಇತಿಹಾಸ
1949ರ ಸೆಪ್ಟೆಂಬರ್ 14ರಂದು ಭಾರತವು ಹಿಂದಿಯನ್ನು ಅಧಿಕೃತ ಭಾಷೆ ಎಂದು ಅಂಗೀಕರಿಸಿತು. 1950ರ ಜನವರಿ 26ರಂದು ಈ ನಿರ್ಧಾರವು ಭಾರತ ಸಂವಿಧಾನದ ಭಾಗವಾಯಿತು. ಮೊದಲ ಬಾರಿ ಹಿಂದಿ ದಿವಸವನ್ನು ಆಚರಿಸಿದ್ದು 1953ರಲ್ಲಿ.

ಬೇವಹರ ರಾಜೇಂದ್ರ ಸಿಂಹ, ಮೈಥಿಲಿ ಶರಣ ಗುಪ್ತ, ಸೇಠ್ ಗೋವಿಂದ ದಾಸ್, ಕಾಕಾ ಕಾಲೇಲ್ಕರ್, ಹಜಾರಿ ಪ್ರಸಾದ್ ದ್ವಿವೇದಿ ಮುಂತಾದವರು ಸೇರಿಕೊಂಡು, ಹಿಂದಿಯನ್ನು ಭಾರತದ ಅಧಿಕೃತ ಭಾಷೆಯನ್ನಾಗಿ ಮಾಡಲು ಹೋರಾಟ ಮಾಡಿದ್ದರು.

ಸೆಪ್ಟೆಂಬರ್ 14ರಂದು ಹಿಂದಿ ದಿವಸವನ್ನಾಗಿ ಆಚರಿಸಲು ನಿರ್ಧರಿಸಿದ್ದು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು. ಹೆಚ್ಚಿನ ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕುಗಳಲ್ಲಿ ಹಿಂದಿ ದಿವಸವನ್ನು ವಿವಿಧ ಸಾಹಿತ್ಯ ಸ್ಫರ್ಧೆಗಳ ಮೂಲಕ ಆಚರಿಸಲಾಗುತ್ತಿದೆ.

ಹಿಂದಿ ಮಾತ್ರವೇ ಅಲ್ಲ, ಕನ್ನಡ ಸೇರಿದಂತೆ 22 ಭಾಷೆಗಳು ಭಾರತದ ಅಧಿಕೃತ ಭಾಷೆಗಳಾಗಿದ್ದು, ಇದನ್ನು ಬಳಸಲು ಆಯಾ ರಾಜ್ಯಗಳಿಗೇ ಅಧಿಕಾರ ನೀಡಲಾಗಿದೆ.

ಇತರ ಅಧಿಕೃತ ಭಾಷೆಗಳೆಂದರೆ, ಕನ್ನಡ, ಅಸ್ಸಾಮಿ, ಬೆಂಗಾಳಿ, ಬೋಡೋ, ಡೋಗ್ರಿ, ಗುಜರಾತಿ, ಹಿಂದಿ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಮತ್ತು ಉರ್ದು.

ವಿಶೇಷವೆಂದರೆ, ಇಂಗ್ಲಿಷ್‌ಗೆ ಈ ಮಾನ್ಯತೆ ಇಲ್ಲ. ಆದರೂ, ಹಿಂದಿಯನ್ನು ವಿರೋಧಿಸುವವರು ಅಧಿಕೃತ ಭಾಷೆಯಲ್ಲದ ಇಂಗ್ಲಿಷನ್ನು ವಿರೋಧಿಸುತ್ತಿಲ್ಲ. ಹಿಂದಿ ವಿರೋಧಿಸುವ ಪರಿ ಈ ಕೆಳಗಿನ ವಿಡಿಯೊದಲ್ಲಿದೆ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ವೃದ್ಧ ಸೇನಾಧಿಕಾರಿ ಮೇಲೆ ಶಿವಸೇನಾ ಗೂಂಡಾಗಳಿಂದ ಹಲ್ಲೆ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯ
Next post ಸಿಎಎ ವಿರುದ್ಧ ಪ್ರತಿಭಟನೆ ದೊಂಬಿ: ಉಮರ್ ಖಾಲಿದ್ ವಿರುದ್ಧದ FIR ನಲ್ಲೇನಿದೆ?

ಸುದ್ದಿ ಸಂಚಯ

ಇವುಗಳನ್ನೂ ನೋಡಿ