Read Time:10 Minute, 21 Second

HBDNaMo: ನೈಜ ಜನಸೇವಕ ನರೇಂದ್ರ ಮೋದಿ ಜನ್ಮದಿನಕ್ಕೆ ಶುಭ ಹಾರೈಸದಿದ್ದರೆ ಹೇಗೆ?

0 0

ನರೇಂದ್ರ ಮೋದಿ

ಈ ನಿಸ್ವಾರ್ಥಿ ನೇತಾರನೊಬ್ಬ ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಪರಿಯೇ ವಿಶೇಷ. ತನಗಾಗಿ ಏನೂ ಮಾಡದೆ, ಎಲ್ಲರೂ ತನ್ನಂತೆಯೇ ಬೆಳಗಬೇಕು ಎಂದು ಎಲ್ಲರನ್ನೂ ಜತೆಗೆ ಎಳೆದೊಯ್ಯುತ್ತಾ ಸಾಗುತ್ತಿರುವ ಈ ಮಹಾನ್ ಸಂತನ ಕಾಲದಲ್ಲಿ ನಾವಿದ್ದೇವೆ ಎಂಬುದು ನಮಗೆಷ್ಟು ಹೆಮ್ಮೆಯೋ, ಅಂಥವನೊಬ್ಬ ನಮಗೆ ನಾಯಕನಾಗಿ, ನೇತಾರನಾಗಿ, ಮುಂದಾಳುವಾಗಿ ದೊರೆತಿದ್ದಾನೆ ಎಂಬುದು ನಮ್ಮ ಪುಣ್ಯವೇ ಸರಿ.

ನಮ್ಮದೇ ತೆರಿಗೆ ಹಣದಲ್ಲಿ ಮೆರೆಯುತ್ತಿರುವ ಸ್ವಾರ್ಥಿ, ಲಾಲಸಿ, ಸ್ವಜನಪಕ್ಷಪಾತಿ, ಓಟಿಗಾಗಿ ಓಲೈಕೆ ಮಾಡುತ್ತಲೇ ಬಂದಿರುವ ರಾಜಕಾರಣಿಗಳ ಮಧ್ಯೆ, ನರೇಂದ್ರ ಮೋದಿ ಎಂಬುದೊಂದು ಶಕ್ತಿ. ಇದು ಕಾರಿರುಳ ಆಗಸದಿ ಬೆಳಗುತ್ತಾ, ದಾರಿ ಕಾಣದೆ ಕಂಗಾಲಾಗಿರುವ ಪ್ರಜಾವರ್ಗಕ್ಕೆ ದಾರಿ ತೋರಿಸಿ ಮುನ್ನಡೆಸುವ ಪ್ರಖರ ನಕ್ಷತ್ರ.

ನರೇಂದ್ರ ಮೋದಿ ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಕೇಳುವ ಬದಲಾಗಿ, ಏನು ಮಾಡಿಲ್ಲ ಎಂಬುದು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ. ಏಳಕ್ಕೂ ಹೆಚ್ಚು ದಶಕಗಳ ಕಾಲದಿಂದ ದಿಕ್ಕುತಪ್ಪಿದ, ಅಂಕುಶವಿಲ್ಲದೆ ಓಲಾಡುತ್ತಿದ್ದ ದೇಶವನ್ನು ಆತ್ಮನಿರ್ಭರವಾಗುವಂತೆ, ಸ್ವಾಭಿಮಾನಿಯಾಗುವಂತೆ ಬೆಳೆಸುತ್ತಿರುವ ಪಥದಲ್ಲಿ ಸಾಗಿಸುತ್ತಿರುವ ನೇತಾರ ನರೇಂದ್ರ ಮೋದಿ.

ನಿಷ್ಕಳಂಕ ಸೇವೆಯೊಂದಿಗೆ ಭಾರತ ಮಾತೆಯ ಮಾನ ಕಾಪಾಡಲು ಕಟಿಬದ್ಧನಾಗಿ, ಹಗಲು ರಾತ್ರಿ ದುಡಿಯುತ್ತಾ, ದೇಶದ ಪ್ರಜೆಗಳಿಗೂ ಈ ಪರಿ ದುಡಿಯಲು ಪ್ರೇರೇಪಿಸುತ್ತಿರುವ ನಿಜ ಅರ್ಥದ ನಾಯಕ ನರೇಂದ್ರ ಮೋದಿ.

ಈ ರೀತಿಯಾಗಿ, ದೇಶದ ಪ್ರಜೆಗಳ ತೆರಿಗೆ ಹಣ ಹಾಳಾಗದಂತೆ ಕಾಯುತ್ತಿರುವ ದೇಶದ ಕಾವಲುಗಾರ ನರೇಂದ್ರ ಮೋದಿಗೆ 70ರ ಜನ್ಮದಿನ ಇಂದು. ಒಂದು ಚಿಕ್ಕ ಶುಭಾಶಯ ಕೋರದಿದ್ದರೆ ನಾವು ಇದ್ದೂ ಪ್ರಯೋಜನವಿಲ್ಲ ಎಂಬುದಂತೂ ಸತ್ಯ.

ಬೀದಿ ನಾಯಿಗಳು ಎಷ್ಟೇ ಬೊಗಳಿದರೂ ದೇವಲೋಕ ಹಾಳಾಗುತ್ತದೆಯೇ? ಇಲ್ಲದ ಕಳಂಕ ಹಚ್ಚಲು ಪ್ರಯತ್ನಿಸುತ್ತಿರುವ ದುಷ್ಟ ಶಕ್ತಿಗಳು, ಇದಕ್ಕಾಗಿ ದೇಶದ ಹೆಸರಿಗೇ ಮಸಿ ಬಳಿಯುವ ಪ್ರಯತ್ನಗಳಿಗೆ ಕೈಹಾಕಿದ ನಿದರ್ಶನಗಳು ಒಂದೇ ಎರಡೇ? ಲೆಕ್ಕವಿಲ್ಲದಷ್ಟು!

ಸಣ್ಣ ಉದಾಹರಣೆ, ಗುಜರಾತ್ ಗಲಭೆಯದ್ದು. ನಿಷ್ಪಾಪಿ ಕರಸೇವಕರನ್ನು ರೈಲಿನಲ್ಲಿ ಸುಟ್ಟು ಹಾಕಿರುವುದನ್ನು ನೋಡಿಯೂ ಯಾರಾದರೂ ಸುಮ್ಮನುಳಿಯುವರೇ? ಕರಸೇವಕರನ್ನು ಅನ್ಯಾಯವಾಗಿ ಕೊಲೆ ಮಾಡಿರುವುದನ್ನು ತಡೆದುಕೊಳ್ಳಲಾಗದ ಆಕ್ರೋಶಕ್ಕೆ ಧ್ವನಿಯೆತ್ತಿದಾಗ, ಗುಜರಾತ್ ಹೊತ್ತಿ ಉರಿದದ್ದು ಇತಿಹಾಸ. ಇದಕ್ಕೂ ಮೋದಿಯ ಮೇಲೆಯೇ ಗೂಬೆ ಕೂರಿಸಲಾಯಿತು.

ಅದೆಲ್ಲ ಬಿಡಿ, ತೀರಾ ಇತ್ತೀಚಿನ ಉದಾಹರಣೆ. ದೇಶದ ಜನರಿಗೆ ಎಲ್ಲ ರೀತಿಯಲ್ಲೂ ರಕ್ಷಣೆ ನೀಡಬಲ್ಲ ಪೌರತ್ವ ಕಾಯಿದೆಯ ತಿದ್ದುಪಡಿ (ಸಿಎಎ). ಇದನ್ನು ನರೇಂದ್ರ ಮೋದಿಯ ವಿರುದ್ಧ ಎತ್ತಿ ಕಟ್ಟಲೆಂದೇ ಬೀದಿ ನಾಯಿಗಳು ಅಪಪ್ರಚಾರ ಮಾಡುತ್ತಾ ಮಾಡುತ್ತಾ, ದೇಶಾದ್ಯಂತ ದಂಗೆ, ದೊಂಬಿ ಎಬ್ಬಿಸಿದವು. ಸಿಎಎ ಎಂಬುದರಿಂದ ಭಾರತೀಯ ಪ್ರಜೆಗಳಿಗೆ ಒಂದಿನಿತೂ ತೊಂದರೆಯಿಲ್ಲ ಎಂದು ಗೊತ್ತಿದ್ದರೂ, ದುಷ್ಕರ್ಮಿಗಳು ಗಲಭೆ, ದೊಂಬಿಗೆ ಪ್ರಚೋದಿಸಿ, ದೇಶದ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸಿದವು.

ಈ ದುಷ್ಟ ಶಕ್ತಿಗಳ ಆಟದಿಂದಾಗಿ ಓಲೈಕೆ ರಾಜಕಾರಣದ ಹೆಸರಿನಲ್ಲಿ ಇದುವರೆಗೂ ಅನ್ಯಾಯಕ್ಕೀಡಾಗುತ್ತಲೇ ಬಂದರೂ, ಬುದ್ಧಿ ಗೋಚರವಾಗದ ಒಂದಷ್ಟು ಮಂದಿ, ಮೋದಿಯನ್ನು ವಿರೋಧಿಸಲೇಬೇಕು ಎಂಬ ಕಾರಣಕ್ಕೆ ಎಲ್ಲವನ್ನೂ ವಿರೋಧಿಸಲಾರಂಭಿಸಿದರು. ದುಷ್ಟ ಶಕ್ತಿಗಳ ರಾಜಕೀಯ ಬಲೆಗೆ ಬಿದ್ದು, ತಾವು ಕೆಟ್ಟಿದ್ದಲ್ಲದೆ, ಸುತ್ತಮುತ್ತಲಿನವರನ್ನೂ ಕೆಡಿಸಿ, ಬೀದಿಗೆ ಬಂದು ನಿಂತು ಬೀದಿ ಪಾಲಾಗುವ ಹಂತ ತಲುಪಿದರು. ಇದೆಲ್ಲವೂ ಕಣ್ಣೆದುರು ಕಾಣುವ ಸತ್ಯಗಳಷ್ಟೇ.

ದೇಶದ ಒಳಿತಿಗಾಗಿ, ದೇಶದ ಸುರಕ್ಷತೆಗಾಗಿ, ದೇಶದ ಏಳಿಗೆಗಾಗಿ, ಬಡ ಜನರು, ರೈತರು, ನಿಜವಾದ ದೀನರು, ದಲಿತರ ಏಳಿಗೆಗಾಗಿಯೇ ಪ್ರತಿಯೊಂದೂ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡುತ್ತಿರುವ ನರೇಂದ್ರ ಮೋದಿಯ ಪ್ರತಿಯೊಂದು ಹೆಜ್ಜೆಗೂ ಕಳಂಕ ಹಚ್ಚುವ, ಜನರಲ್ಲಿ ಅಪಪ್ರಚಾರ ಮಾಡುತ್ತಾ ಅವರಲ್ಲಿ ಅಪನಂಬಿಕೆ ಮೂಡಿಸುವ ವ್ಯರ್ಥ ಪ್ರಯತ್ನಗಳು ನಡೆಯುತ್ತಲೇ ಇವೆ. ಕೊರೊನಾ ವೈರಸ್ ತಡೆಗಾಗಿ ಮಾಡಿದ ಲಾಕ್‌ಡೌನ್ ವಿರೋಧಿಸಿದರು, ಲಾಕ್‌ಡೌನ್ ತೆರವುಗೊಳಿಸಿದಾಗ ಮತ್ತೆ ಎಗರಾಡಿದರು. ಆದರೆ, Mind it, ಮೋದಿಯ ಸ್ಥಾನದಲ್ಲಿ ಯಾರದ್ದೋ ತಾಳಕ್ಕೆ ಕುಣಿಯುವಂಥ ಪ್ರಧಾನಿ ಏನಾದರೂ ಇದ್ದಿದ್ದರೆ, ಇಂದು ಭಾರತವು ಈ ಚೀನಾ ವೈರಸ್‌ನಿಂದಾಗಿ ನಿರ್ನಾಮವೇ ಆಗಿ ಹೋಗುತ್ತಿತ್ತು! ಪ್ರತಿ ಕ್ಷಣದಲ್ಲೂ ನರೇಂದ್ರ ಮೋದಿ ಅವರು ದೇಶವಾಸಿಗಳೊಂದಿಗೆ ಟಿವಿ, ರೇಡಿಯೋ ಮೂಲಕ ಸಂಪರ್ಕದಲ್ಲಿದ್ದು, ಧೈರ್ಯಗುಂದದಂತೆ ಪ್ರೋತ್ಸಾಹಿಸುತ್ತಲೇ ಇದ್ದರು ಎಂಬುದು ಗಮನಿಸಬೇಕಾದ ವಿಚಾರ.

ಆದರೆ, ಸರ್ಕಾರದ ನೀತಿಗಳಿಂದಾಗಿಯೇ ನಿಜ ಸ್ಥಿತಿಯ ಅರಿವಾಗಲು ಈಗ ಆರಂಭವಾಗಿದೆ. ಇದರಿಂದ ಎಚ್ಚೆತ್ತುಕೊಂಡವರು, ಮಾಹಿತಿ ಇದ್ದವರು ಈ ದುಷ್ಟಕೂಟದ ಮಸಲತ್ತಿಗೆ, ಅವರು ತೋಡಿದ ಖೆಡ್ಡಾಕ್ಕೆ ಬೀಳದೆ, ಯಾವುದು ಸರಿ, ಯಾವುದು ತಪ್ಪು ಎಂಬ ಸ್ವಂತ ನಿರ್ಧಾರ ಕೈಗೊಳ್ಳುವ ಶಕ್ತಿ ಉಳ್ಳವರು, ನಿಷ್ಕಳಂಕ ಸೇವೆ ನೀಡುತ್ತಿರುವ ನರೇಂದ್ರ ಮೋದಿಯನ್ನು ಮನಸಾ ಪ್ರೀತಿಸಲಾರಂಭಿಸಿದರು.

ಏಳು ದಶಕಗಳಿಂದ ಆಳಿಸಿಕೊಂಡು ಬಂದು, ಸೂಕ್ತ ಶಿಕ್ಷಣ ಪಡೆಯದೆ, ಬಡತನ ನಿವಾರಣೆಯಾಗದೇ ಇನ್ನೂ ಕೂಪದಲ್ಲೇ ಇರುವವರು (ಇದಕ್ಕೂ ಕಾರಣ, ಸರ್ಕಾರದ ಯೋಜನೆಗಳೆಲ್ಲವೂ ಅಧಿಕಾರಸ್ಥರ ಉದ್ಧಾರಕ್ಕಾಗಿಯೇ ಬಳಕೆಯಾದ ಕಾರಣ), ಏನೂ ತಿಳಿಯದೆ, ಈ ದುಷ್ಟ ಶಕ್ತಿಗಳು ಕಟ್ಟಿದ ಕೋಟೆಯೊಳಗೆ ಸಿಲುಕಿ ಒದ್ದಾಡಿದರು. ಅವರು ಹೇಳಿದ ಸುಳ್ಳುಗಳನ್ನೇ ಸತ್ಯ ಎಂದು ತಿಳಿದುಕೊಂಡರು. ಮೋದಿಯನ್ನು ವಿರೋಧಿಸಿದರು.

ಹೊಲ ಉಳುತ್ತಾ ತನ್ನ ಕಾಯಕವನ್ನು ಮಾಡುತ್ತಾ ಇರುವ ಎತ್ತುಗಳಿಗೆ ಅದರ ಮಾಲೀಕ ಬೈಯುತ್ತಾನೆ, ಬಡಿಯುತ್ತಾನೆ. ಹಾಗಂತ, ಎತ್ತುಗಳೇನೋ ಒಳಗೊಳಗೇ ವೇದನೆಪಡುತ್ತಿದ್ದರೂ, ಉಳುವ ಕಾಯಕ ನಿಲ್ಲಿಸುವುದಿಲ್ಲ. ಇದೇ ಮಾತು ನಮ್ಮ ನಾಯಕನಿಗೂ ಅನ್ವಯವಾಗುತ್ತದೆ.

ಮೂಕ ಎತ್ತಿನಂತೆ ದುಡಿಯುತ್ತಿರುವ ಈ ನಾಯಕ, ತನ್ನ ಸ್ವಂತಕ್ಕಾಗಿ ಏನು ಮಾಡಿಕೊಂಡ? ಅಂತ ಕೆದಕಿ ಕೆದಕಿ ನೋಡಿದವರಿಗೆ ಸಿಕ್ಕಿದ್ದು ಮಣ್ಣು. ಮೋದಿ ಯಾವಾಗ ಏನು ಮಾಡುತ್ತಾರೆ ಅಂತ ಕಣ್ಣಿಗೆ ಎಣ್ಣೆ ಹಚ್ಚಿಕೊಂಡು ಕಾದದ್ದೇ ಬಂತು. ಎಲ್ಲ ರೀತಿಯಲ್ಲೂ ದುಷ್ಟ ಜಾಲಗಳು ಮೋದಿ ಎಂಬ ಶಕ್ತಿಯನ್ನು ಮಣಿಸಲು ಯಂತ್ರ, ತಂತ್ರ, ಕುತಂತ್ರ, ಪರತಂತ್ರ – ಎಲ್ಲ ಅಸ್ತ್ರಗಳನ್ನೂ ಪ್ರಯೋಗಿಸಲಾಯಿತು. ಸ್ವಾತಂತ್ರ್ಯ ಸಿಕ್ಕರೂ, ವಿದೇಶೀ ಶಕ್ತಿಗಳ ಪುಂಗಿಗಳಾಗಿರುವ ವಿದೇಶೀ ಮಾಧ್ಯಮಗಳಲ್ಲಿಯೂ ದೇಶದ ಹೆಸರು ಕೆಡಿಸುವ ಸಾಕಷ್ಟು ಪ್ರಯತ್ನಗಳನ್ನು ನಡೆಸಲಾಯಿತು.

ದುಡಿಯುವ ಎತ್ತು ಎಷ್ಟೇ ನೋವಾದರೂ ಮರುತ್ತರ ಇಲ್ಲ. ತಾನಾಯಿತು, ತನ್ನ ಕಾಯಕವಾಯಿತು. ಹೊಲವಂತೂ ಹಸನಾಗುತ್ತದೆ, ಹೊಲವನ್ನು ಅವಲಂಬಿಸುವವರ ಬಾಳು ಸುಖವಾಗುತ್ತದೆ ಎಂಬುದಷ್ಟೇ ಧ್ಯೇಯದೊಂದಿಗೆ ಕಾಯಕ ಮುಂದುವರಿಯುತ್ತಿದೆ.

ಈ ಕಾಯಕ ಯೋಗಿಗೆ ಬೆನ್ನೆಲುಬಾಗೋಣ. ಈ ನಿಸ್ವಾರ್ಥ ದುಡಿತಕ್ಕಾಗಿ ನಾವಂತೂ ಏನನ್ನೂ ಕೊಡಲಾರದ ಸ್ಥಿತಿಯಲ್ಲಿದ್ದೇವೆ. ಆದರೆ, ಆತನ ಎಲ್ಲ ಒಳ್ಳೆಯ ಕೆಲಸಗಳಿಗೆ ಒಂದಷ್ಟು ಮೆಚ್ಚುಗೆ ಸೂಸುತ್ತಾ, ಬಾವಿಯೊಳಗಿರುವ ಕಪ್ಪೆಗಳಂತೆ ಬಾಳುತ್ತಿರುವವರಿಗೆ ಸಾಧ್ಯವಾದಷ್ಟು ತಿಳಿಹೇಳುತ್ತಾ, ಈ ದೇಶವು ನಿಸ್ವಾರ್ಥಿ ನಾಯಕನ ಕೈಯಲ್ಲಿ ಸುಭದ್ರವಾಗಿದೆ ಎಂದು ತಿಳಿಹೇಳೋಣ.

ಸೀಳುನಾಯಿಗಳಂತೂ ತಮ್ಮ ಏನೂ ಅರಿಯದ ಮುಗ್ಧ ಮಕ್ಕಳಿಗೂ ‘ಹಂ ಮೋದೀ ಕೋ ಮಾರ್ ದೇಂಗೇ’ ಎಂಬಂಥ ಭಾಷೆ ಕಲಿಸುತ್ತಾ, ದ್ವೇಷದ ಮತ್ತು ದೇಶದ್ರೋಹಿ ಭವಿಷ್ಯವೊಂದನ್ನು ರೂಪಿಸುತ್ತಿವೆ. ಇದನ್ನೆಲ್ಲ ಮೆಟ್ಟಿ ನಿಲ್ಲುವ ಶಕ್ತಿಯನ್ನು ಭಗವಂತನು ನಮ್ಮ ನಾಯಕನಿಗೆ ನೀಡಲಿ.

ಯಾರು ಬೊಗಳಿದರೂ ಭಾರತಾಂಬೆಯ ದೇವಲೋಕಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವ ಬದ್ಧತೆ ಮಾತ್ರ ಭಾರತೀಯರಾದ ನಮಗಿದೆ. ಮಾಡಿದ ಬಹುಶಃ ಒಳ್ಳೆಯ ಕೆಲಸಕ್ಕಾಗಿ ಗರಿಷ್ಠ ಟೀಕೆಗೆ ಒಳಗಾದ ಏಕೈಕ ನೇತಾರ ಎಂದರೆ ಪ್ರಧಾನಿ ನರೇಂದ್ರ ಮೋದಿ. ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಮೋದಿಯನ್ನು ಟೀಕಿಸುವುದಕ್ಕೂ ಒಂದು ಅರ್ಹತೆ ಬೇಕಾಗುತ್ತದೆ. ಗಟಾರದಲ್ಲಿ ಬಿದ್ದುಕೊಂಡು ಯಾರು ಬೇಕಿದ್ದರೂ ಟೀಕಿಸಬಹುದು ಎಂಬುದು ಅರಿಯಬೇಕಾದ ಸತ್ಯ.

ದೇಶಕ್ಕಾಗಿಯೇ ಜೀವ ಸವೆಸುತ್ತಿರುವ ನಮ್ಮ ಕಾಲದ ನಿಜ ಮಹಾತ್ಮನಿಗೊಂದು ಆಯುಷ್ಯ, ಆರೋಗ್ಯ ಮತ್ತು ದೇಶದ್ರೋಹಿಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದೇವರು ದಯಪಾಲಿಸಲಿ.

ಜೈ ಭಾರತ್, ಜೇ ನರೇಂದ್ರ ಮೋದಿ

-Team iDefy (Defying all the misinformation)

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

2 thoughts on “HBDNaMo: ನೈಜ ಜನಸೇವಕ ನರೇಂದ್ರ ಮೋದಿ ಜನ್ಮದಿನಕ್ಕೆ ಶುಭ ಹಾರೈಸದಿದ್ದರೆ ಹೇಗೆ?

  1. ನಾಯಿ ಬೊಗಳಿದರೆ ದೇವಲೋಕ ಖಂಡಿತಾ ಹಾಳಾಗುವುದಿಲ್ಲ. ಪ್ರಧಾನಿ ಮಾಡುತ್ತಿರುವ ಕೆಲಸ ಪ್ರಶ್ನಿಸುವವರು, ತಮಗೆ ತಾವೇ ಕೇಳಿಕೊಳ್ಳಲಿ, ಪ್ರಧಾನಿಯವರು ತಮಗಾಗಿ ಎಷ್ಟು ಮಾಡಿಕೊಂಡಿದ್ದಾರೆ ಹಾಗೂ ಬೇರೆಯವರಿಗಾಗಿ ಎಷ್ಟು ಮಾಡಿದರು ಅಂತ.

Leave a Reply

Your email address will not be published. Required fields are marked *

Previous post ಸಿಎಎ ವಿರುದ್ಧ ಪ್ರತಿಭಟನೆ ದೊಂಬಿ: ಉಮರ್ ಖಾಲಿದ್ ವಿರುದ್ಧದ FIR ನಲ್ಲೇನಿದೆ?
Next post ಆನ್‌ಲೈನ್ ಜೂಜಾಟಕ್ಕೆ ಪ್ರಚೋದನೆ: Play Store ನಿಂದ Paytm ಕಿತ್ತು ಹಾಕಿದ Google

ಸುದ್ದಿ ಸಂಚಯ

ಇವುಗಳನ್ನೂ ನೋಡಿ