Read Time:6 Minute, 16 Second

Coronavirus ವಿರುದ್ಧ ‘ದಿಗ್ವಿಜಯ’ ಸಾಧಿಸಿದ ‘Kerala Model’ ಬಗ್ಗೆ ಈಗ್ಯಾರೂ ತುಟಿ ಪಿಟಕ್ ಅನ್ನುತ್ತಿಲ್ಲ!

0 0

ಬಂಡವಾಳಶಾಹಿಗಳ ಕೈಯಲ್ಲಿರುವ ಎಡಪಂಥೀಯ ಒಲವಿನ ವಿದೇಶೀ ಪತ್ರಿಕೆಗಳು, ಭಾರತದಲ್ಲಿರುವ ವಾಮಪಂಥೀಯರನ್ನು, ಅವರ ಕೆಲಸಗಳನ್ನು ಮೆಚ್ಚುವ ಕಾರ್ಯಗಳನ್ನು ನಡೆಸುತ್ತಲೇ ಬಂದಿವೆ.

ಇದಕ್ಕೆ ದೊಡ್ಡ ಉದಾಹರಣೆಯೆಂದರೆ, ಇತ್ತೀಚಿನದೇ. ಕೋವಿಡ್ ಸಂಕಷ್ಟ ಕಾಲದಲ್ಲಿ ಕೇರಳದ ಕಮ್ಯೂನಿಸ್ಟ್ ಸರ್ಕಾರವು ಕರ್ನಾಟಕದ ಗಡಿ ಬಂದ್ ಮಾಡಿರುವ ಕರ್ನಾಟಕದ ವಿರುದ್ಧ ಕೇಂದ್ರಕ್ಕೆ, ಸುಪ್ರೀಂ ಕೋರ್ಟಿಗೆಲ್ಲಾ ದೂರು ಕೊಟ್ಟಿತ್ತು.

ಕರ್ನಾಟಕವು ಕೋವಿಡ್-19 ಆರಂಭಿಕ ದಿನಗಳಲ್ಲಿ ಅದರ ಪ್ರಸಾರ ತಡೆಯುವ ನಿಟ್ಟಿನಲ್ಲಿ ತನ್ನ ಗಡಿಯನ್ನು ಸಹಜವಾಗಿ ಬಂದ್ ಮಾಡಿತ್ತು. ಆದರೆ, ಉದ್ಧಟ ಕೇರಳವು ಏನೇನೋ ಕಸರತ್ತು ನಡೆಸಿ, ಗಡಿ ತೆರವು ಮಾಡಿಸಿ, ಮಂಗಳೂರಿಗೆ ಚಿಕಿತ್ಸೆಗೆ ಹೋಗುವವರಿಗೆ ತೊಂದರೆಯಾಗುತ್ತಿದೆ ಅಂತೆಲ್ಲಾ ಜಾಗತಿಕವಾಗಿ ಹುಯಿಲೆಬ್ಬಿಸಿತು.

ಕೇರಳ-ಮಂಗಳೂರು ಮಧ್ಯೆ ಗಡಿಯಿರುವುದು ತಲಪಾಡಿಯಲ್ಲಿ. ಇಲ್ಲಿ ಕೇರಳದಿಂದ ಆ್ಯಂಬುಲೆನ್ಸ್‌ನಲ್ಲಿಯೂ ಗಾಂಜಾ, ತಂಬಾಕು ಮತ್ತಿತರ ಮಾದಕ ವಸ್ತುಗಳು ಎಗ್ಗಿಲ್ಲದೆ ಸಾಗುತ್ತಿದ್ದವು. ಇದರ ಜೊತೆಗೆ, ಆರಂಭಿಕ ದಿನಗಳಲ್ಲಿ ಕೊರೊನಾ ವೈರಸ್ ಪೀಡಿತರು ಕೂಡ ಕೇರಳದಲ್ಲೇ ಹೆಚ್ಚಿದ್ದರು.

ಇದಕ್ಕಾಗಿ ಕರ್ನಾಟಕ ಸರ್ಕಾರವು ಗಡಿ ಮುಚ್ಚಿತ್ತು. ಇದಕ್ಕೆ ಕರ್ನಾಟಕವನ್ನು ಟೀಕಿಸಲಾಯಿತು. ಅದೇ ಸಂದರ್ಭದಲ್ಲಿ ಕೊರೊನಾ ವೈರಸ್ ಹಾವಳಿ ತಡೆಗೆ ‘ಕೇರಳವೇ ಮಾದರಿ’ ಅಂತ ವಿದೇಶೀ ಮಾಧ್ಯಮಗಳಲ್ಲಿ ದೊಡ್ಡ ದೊಡ್ಡ ತಲೆಬರಹಗಳಲ್ಲಿ ಪ್ರಕಟವಾಯಿತು. ಅದನ್ನೇ ಭಾರತದ ಕೆಲವು ಎಡ ಪತ್ರಿಕೆಗಳು ಕೂಡ ಪ್ರಕಟಿಸಿದವು.

ಇದೆಲ್ಲವೂ ಮೋದಿ ಸರ್ಕಾರವನ್ನು ಟೀಕಿಸುವುದಕ್ಕಾಗಿ ಮತ್ತು ಮೋದಿಗಿಂತ ನಾವು ಶ್ರೇಷ್ಠರು ಎಂದು ಎಡಪಂಥೀಯರನ್ನು, ಪ್ರತಿಪಕ್ಷಗಳ ಸರ್ಕಾರಗಳನ್ನು ಬಿಂಬಿಸುವುದಕ್ಕಾಗಿ ಮಾಡಿದ ತಂತ್ರಗಾರಿಕೆ ಎಂಬುದು ಆ ಬಳಿಕ ನಿಧಾನವಾಗಿ ಅರಿವಿಗೆ ಬರುತ್ತಿದೆ.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

ಇದಕ್ಕೆ ಕಾರಣವೆಂದರೆ, ಅಂದು ಕಮ್ಯೂನಿಸ್ಟ್ ಚೀನಾದಿಂದ ಬಂದಿರುವ ಕೊರೊನಾ ವೈರಸ್ ಪ್ರಸಾರ ತಡೆಗೆ ‘ಕೇರಳ ಮಾದರಿ ರಾಜ್ಯ, ಕೇರಳವೇ ಸಕಲರ ಸಂರಕ್ಷಕ, ಎಲ್ಲರೂ ಅದನ್ನು ಅನುಸರಿಸಿ’ ಅಂತೆಲ್ಲಾ ಕೇಳಿಬರುತ್ತಿದ್ದ ಮಾತುಗಳು ಈಗ ಬಂದ್ ಆಗಿವೆ. ಕೇರಳ ಮಾದರಿ ವಿಷಯವನ್ನು ಈಗ ಯಾರೂ ಮಾತನಾಡುತ್ತಿಲ್ಲ.

ಇದಕ್ಕೆ ಕಾರಣ, ಕೇರಳ ಸರ್ಕಾರದ ವೈಫಲ್ಯ. ಅಂದು ಸುಮ್ಮನೇ ಪ್ರಚಾರ ಪಡೆದಿದ್ದ ಕೇರಳ ರಾಜ್ಯದಲ್ಲಿ, ಕೊರೊನಾ ವೈರಸ್ ಅನಿಯಂತ್ರಿತವಾಗಿ ಹರಡುತ್ತಿದೆ. ಇದಕ್ಕೆ ಆಡಳಿತ ಕೈಗೊಂಡಿರುವ ಕ್ರಮಗಳ ವೈಫಲ್ಯಗಳೇ ಕಾರಣ.

2020ರ ಮೇ 14ರಂದು ಇಂಗ್ಲೆಂಡ್‌ನ ಗಾರ್ಡಿಯನ್ ಪತ್ರಿಕೆಯು ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾರನ್ನು ‘ಕೊರೊನಾ ವೈರಸ್ ಹಂತಕಿ, ರಾಕ್ ಸ್ಟಾರ್’ ಅಂತೆಲ್ಲ ಕರೆದಿತ್ತು.

ತಲೆಬರಹದಲ್ಲೇ ‘The Coronavirus Slayer! How Kerala’s Rock Star health minister helped save it from Covid-19’ ಅಂತ ಘಂಟಾಘೋಷವಾಗಿ ಸಾರಿತ್ತು.

ಅಷ್ಟೇ ಅಲ್ಲ, ಜನವರಿ ತಿಂಗಳಲ್ಲೇ ಈ ಅಪಾಯಕಾರಿ ವೈರಸ್ಸನ್ನು ಗುರುತಿಸಿದ್ದ ಶೈಲಜಾ, 14 ಮೇ ವೇಳೆಗೆ ರಾಜ್ಯದಲ್ಲಿ ಕೇವಲ 524 ಕೊರೊನಾ ವೈರಸ್ ಕೇಸುಗಳಷ್ಟೇ ಇರುವಂತಾಯಿತು ಎಂದೆಲ್ಲಾ ಹಾಡಿ ಹೊಗಳಿತು.

ಕೊರೊನಾ ವೈರಸ್ ಮೇಲಿನ ‘ದಿಗ್ವಿಜಯ’ ಸಾಧಿಸಿದ ನಾಲ್ಕು ತಿಂಗಳ ಬಳಿಕ, ಕೇರಳದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ 1.67 ಲಕ್ಷ ತಲುಪಿದ್ದರೆ, ಸುಮಾರು 656 ಮಂದಿ ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರುತ್ತಲೇ ಇದೆ. ಈಗ ಇಡೀ ದೇಶದಲ್ಲಿ ಚೀನಾ ವೈರಸ್ ಪೀಡಿತ ರಾಜ್ಯಗಳ ಪೈಕಿ ಕೇರಳಕ್ಕೆ 5ನೇ ಸ್ಥಾನವಿದೆ. ಇಂದು ಕೂಡ ಭಾರಿ ಏರಿಕೆಯಾಗುತ್ತಿದೆ. ಇಲ್ಲಿದೆ ನೋಡಿ ವಿವರ.

ಮಹಾರಾಷ್ಟ್ರವೂ ಸೇರಿದಂತೆ ಅತೀ ಹೆಚ್ಚು ಬಾಧೆಗೊಳಗಾದ ಬೇರೆ ರಾಜ್ಯಗಳ ಚೇತರಿಕೆ ಪ್ರಮಾಣವು ಏರುತ್ತಿದ್ದರೆ, ಕೇರಳದಲ್ಲಿ ಹೊಸ ಪ್ರಕರಣಗಳ ಸಂಖ್ಯೆಯೇ ಏರುತ್ತಿದೆ. ಅದು, ಕೂಡ ಅಲ್ಲಿ ಇದುವರೆಗೆ ಪರೀಕ್ಷೆ ಮಾಡಿದ್ದೇ 27.2 ಲಕ್ಷ ಮಂದಿಗೆ ಮಾತ್ರ.

ಸೆಪ್ಟೆಂಬರ್ 1ರಂದು 22,512 ಕೇಸುಗಳಷ್ಟೇ ಇದ್ದ ಕೇರಳದಲ್ಲಿ, ಸೆ.27ರ ಮಾಹಿತಿಯ ಪ್ರಕಾರ, ಸಕ್ರಿಯ ಪ್ರಕರಣಗಳ ಸಂಖ್ಯೆ ಬಹುತೇಕ ದುಪ್ಪಟ್ಟಾಗಿದೆ, ಎಂದರೆ 52,753 ಇದೆ.

ವಾಸ್ತವವಾಗಿ, ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಕೇರಳವು ಪರೀಕ್ಷೆ ನಡೆಸುವುದನ್ನು ಕಡಿಮೆ ಮಾಡಿದೆ. ಸೆ.25ರ ಶುಕ್ರವಾರ 59610 ಮಂದಿಗೆ ತಪಾಸಣೆ ನಡೆಸಲಾಗಿತ್ತು.

ಅಂಕಿ ಅಂಶಗಳೇ ಹೇಳುತ್ತವೆ, ಅಲ್ಲಿ ಟೆಸ್ಟಿಂಗ್ ಎಷ್ಟಿದೆ, ಚೇತರಿಕೆ ಪ್ರಮಾಣ ಎಷ್ಟು, ಪತ್ತೆ ಪ್ರಮಾಣ ಎಷ್ಟೆಂಬುದನ್ನು. ಆದರೂ, ಯಾರು ಕೂಡ ಕೇರಳ ಮಾಡೆಲ್ ಬಗ್ಗೆ ಈಗ ತುಟಿ ಬಿಚ್ಚುತ್ತಿಲ್ಲ. ಪರೀಕ್ಷೆ ಮಾಡಿದರಲ್ಲವೇ ಹೊಸ ಕೇಸುಗಳು ಪತ್ತೆಯಾಗುವುದು?

ಇನ್ನೂ ಒಂದು ವಿಶೇಷವಿದೆ. ಕರ್ನಾಟಕದ ಗಡಿಯನ್ನು ಸ್ವತಃ ಕೇರಳವೇ ಈಗ ಮುಚ್ಚಿಕೊಂಡಿದೆ! ಈಗ ಗಡಿ ತೆರೆಸಲು ಕೋರ್ಟಿಗೂ ಯಾರೂ ಹೋಗುವುದಿಲ್ಲ!

ಟೆಸ್ಟಿಂಗ್ ಕೂಡ ಕಡಿಮೆಯಾದರೆ, ಹೊಸ ಕೇಸುಗಳು ಪತ್ತೆಯಾಗುವುದು ಕಡಿಮೆಯಾಗುತ್ತದೆ, ದೇವರ ನಾಡಿನಲ್ಲಿ ಎಲ್ಲವೂ ಚೆನ್ನಾಗಿದೆ! ಕಮ್ಯೂನಿಸ್ಟ್ ಚೀನಾದ ಮಾದರಿಯಲ್ಲೇ!

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post Farmer Protest | ಯುಪಿಎ ಕಾಲದ ರೈತರ ಚಿತ್ರ ಬಳಸಿ ಮೋದಿ ಕೃಷಿ ನೀತಿ ಟೀಕಿಸುತ್ತಿದೆ ಕಾಂಗ್ರೆಸ್
Next post ಪಂಜಾಬಿನಲ್ಲಿ ಸುಟ್ಟ ಟ್ರ್ಯಾಕ್ಟರನ್ನೇ ದೆಹಲಿಯಲ್ಲೂ ತಂದು ಸುಟ್ಟ ಕಾಂಗ್ರೆಸ್: ದೇಶಕ್ಕೆ ಅವಮಾನ ಎಂದ ಬಿಜೆಪಿ

ಸುದ್ದಿ ಸಂಚಯ

ಇವುಗಳನ್ನೂ ನೋಡಿ