Read Time:4 Minute, 54 Second

ಮೋದಿ ವಿರುದ್ಧ ಮಹಾ ಗಠಬಂಧನವೆಂಬ ಪ್ರಹಸನ: ಮಿತ್ರ ಪಕ್ಷಗಳಿಗೆ ಈಗ ಕಾಂಗ್ರೆಸ್ ಗುಮ್ಮ

0 0

2020 ಬಿಹಾರ ಹಾಗೂ ದೇಶದ ಇತರೆಡೆ ನಡೆದ ಉಪಚುನಾವಣೆಗಳಲ್ಲಿ, ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅಪಪ್ರಚಾರಗಳು, ಸುಳ್ಳುಗಳಿಂದಲೇ ಪ್ರಚಾರ ನಡೆಸಿದ್ದ ಕಾಂಗ್ರೆಸ್‌ಗೆ ಮರಳಿ ಮುಖಭಂಗವಾಗಿದೆ. ಬಿಹಾರದಲ್ಲಿ 2015ರಲ್ಲಿ 27 ಸ್ಥಾನ ಗಳಿಸಿದ್ದ ಕಾಂಗ್ರೆಸ್, ಈ ಬಾರಿ 70 ಸ್ಥಾನಗಳಲ್ಲಿ ಸ್ಫರ್ಧಿಸಿ ಕೇವಲ 19ಕ್ಕೆ ತೃಪ್ತಿಪಡಬೇಕಾಗಿದೆ.

ಇದೀಗ, ಬಿಹಾರ, ಉತ್ತರ ಪ್ರದೇಶ ಮತ್ತು ತೆಲಂಗಾಣದಲ್ಲಿ ರಾಹುಲ್ ಗಾಂಧಿಯಿಂದಲೇ ಕಾಂಗ್ರೆಸ್ ಮೈತ್ರಿಕೂಟದ ಹಾದಿ ತಪ್ಪಿದೆಯೇ ಎಂದು ಬಿಜೆಪಿ ಮುಖಂಡ ಆರ್.ಪಿ.ಸಿಂಗ್ ಪ್ರಶ್ನಿಸಿದ್ದಾರೆ.

ಈ ಮಹಾ ಗಠಬಂಧನವೆಂಬ ಪ್ರಹಸನ ಶುರುವಾಗಲು ಕಾರಣವೇ ಮೋದಿ, ಅಂದರೆ ಮೋದಿ ದ್ವೇಷ. 2015ರಲ್ಲಿ ಬಿಹಾರ ಚುನಾವಣೆಗಳಲ್ಲಿ ಜೆಡಿಯುನ ನಿತೀಶ್ ಕುಮಾರ್ ತಮ್ಮ ಬದ್ಧ ರಾಜಕೀಯ ವೈರಿ ಲಾಲು ಯಾದವ್ ಅವರ ಆರ್‌ಜೆಡಿಯೊಂದಿಗೆ ಕೈಜೋಡಿಸಿದ್ದರು. ಇದೂ ಹುಟ್ಟಿಕೊಂಡಿದ್ದು ಮೋದಿ ದ್ವೇಷದಿಂದ. ಬಿಹಾರಿ Vs ಬಹಾರಿ (ಗುಜರಾತಿನಿಂದ ಬಂದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಗುರಿಯಾಗಿರಿಸಿಕೊಂಡು) ಎಂಬ ಘೋಷಾ ವಾಕ್ಯದಡಿ ಸ್ಫರ್ಧೆ ನಡೆದಿತ್ತು. ಫಲ ನೀಡಿತು. ನಿತೀಶ್ ನಿಷ್ಠೆ ಬದಲಿಸಿದರು, ಮುಖ್ಯಮಂತ್ರಿಯಾದರು.

2020 Bihar Results (ಆವರಣದಲ್ಲಿರುವುದು 2015ರ ಫಲಿತಾಂಶ)
ಎನ್‌ಡಿಎ – 125 (58)
ಬಿಜೆಪಿ – 74 (53)
ಜೆಡಿಯು – 43 (71)
ಎಲ್‌ಜೆಪಿ 1 (2)

ಮಹಾ ಗಠಬಂಧನ – 110 (178, ನಂತರ ಜೆಡಿಯು ಎನ್‌ಡಿಎ ತೆಕ್ಕೆಗೆ ಮರಳಿತ್ತು)
ಆರ್‌ಜೆಡಿ – 75 (80)
ಕಾಂಗ್ರೆಸ್ – 19 (27)
ಎಡಪಕ್ಷಗಳು 13 (3)
ಇತರರು 15 (7)

ಇದನ್ನೂ ಓದಿ: Election Result 2020 | ಬಿಹಾರದಲ್ಲಿ ಬಿಜೆಪಿ ಭರ್ಜರಿ ಬೇಟೆ, ದೇಶದೆಲ್ಲೆಡೆ 59ರಲ್ಲಿ 40 ಸ್ಥಾನ: ಮೋದಿಗೆ ಸ್ಪಷ್ಟ ಜನಾದೇಶ

ನಂತರ 2017ರಲ್ಲಿ ಬಿಜೆಪಿಯನ್ನು ಸೋಲಿಸುವ ಏಕೈಕ ಉದ್ದೇಶದಿಂದ ಉತ್ತರ ಪ್ರದೇಶದಲ್ಲಿ ಬದ್ಧ ವಿರೋಧಿಗಳಾದ ಕಾಂಗ್ರೆಸ್, ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಹಾಗೂ ಸಮಾಜವಾದಿ ಪಕ್ಷ (ಎಸ್ಪಿ) ಒಟ್ಟು ಸೇರಿ ಮಹಾ ಗಠಬಂಧನ ಮಾಡಿಕೊಂಡಿದ್ದವು. ಆದರೆ ಫಲ ನೀಡಲಿಲ್ಲ.

ಕಾಂಗ್ರೆಸ್ ಜೊತೆ ಕೈಜೋಡಿಸಿದ ಎಸ್ಪಿ ಸೋತಿತಷ್ಟೇ ಅಲ್ಲ, ಹೀನಾಯ ಸೋಲು ಕಂಡಿತು. ಎಷ್ಟರ ಮಟ್ಟಿಗೆ ಎಂದರೆ 2012ರಲ್ಲಿ 252 ಸ್ಥಾನ ಗೆದ್ದಿದ್ದ ಎಸ್ಪಿಗೆ 2017ರಲ್ಲಿ ದಕ್ಕಿದ್ದು 54 ಸ್ಥಾನ ಮಾತ್ರ.

ಆದರೆ ಈ ಗಠ ಬಂಧನದ ವಿರುದ್ಧ ಬಿಜೆಪಿ ಮೈತ್ರಿಕೂಟವು 47 ಇದ್ದ ಸ್ಥಾನವನ್ನು ಭರ್ಜರಿಯಾಗಿ 312ಕ್ಕೆ ಏರಿಸಿಕೊಂಡು, ಯೋಗಿ ಆದಿತ್ಯನಾಥ್ ಸರ್ಕಾರ ಸ್ಥಾಪನೆಯಾಯಿತು.

ಸಮಾಜವಾದಿ ಪಕ್ಷವು ಕಾಂಗ್ರೆಸಿಗೆ ಅಂದು 100 ಸ್ಥಾನಗಳಲ್ಲಿ ಸ್ಫರ್ಧೆಗೆ ಅವಕಾಶ ನೀಡಿತ್ತಾದರೂ, ಕಾಂಗ್ರೆಸ್ ಗೆದ್ದಿದ್ದು ಕೇವಲ 7. 298ರಲ್ಲಿ ಸ್ಫರ್ಧಿಸಿದ್ದ ಎಸ್ಪಿ ಜಯಿಸಿದ್ದು 47 ಮಾತ್ರ. ಪಾಠ ಕಲಿತ ಎಸ್ಪಿ, 2019ರ ಮಹಾ ಚುನಾವಣೆಗೆ ಏಕಾಂಗಿಯಾಗಿ ಸ್ಫರ್ಧಿಸಿ, ಕಾಂಗ್ರೆಸ್‌ನತ್ತ ತಲೆ ಹಾಕದೆ ಮಲಗಿತು.

2020ರ ಬಿಹಾರ ಚುನಾವಣೆಗಳಲ್ಲೂ ಪರಿಸ್ಥಿತಿ ಭಿನ್ನವೇನಲ್ಲ. ಸ್ಥಳೀಯರ ಮಾತು ಕೇಳದೆ ಟಿಕೆಟ್ ನೀಡಿದ್ದರಿಂದಾಗಿ ಕಾಂಗ್ರೆಸ್ ಹಲವು ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಯಿತು, ಜೊತೆಗೆ ಮಿತ್ರರಿಗೂ ಹಿನ್ನಡೆಯಾಯಿತು.

ಗುಜರಾತ್, ಮಣಿಪುರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಉಪಚುನಾವಣೆಗಳಲ್ಲಿಯೂ ಬಿಜೆಪಿ ಭರ್ಜರಿ ಬೇಟೆಯಾಡಿದರೆ, ಕಾಂಗ್ರೆಸ್ ತನ್ನ ಮೈತ್ರಿಕೂಟದೊಂದಿಗೆ ಸೊರಗಿತು.

ಇದೀಗ ಕಾಂಗ್ರೆಸ್ ಜೊತೆ ಕೈಜೋಡಿಸಬೇಕಿದ್ದರೆ ಮಿತ್ರಪಕ್ಷಗಳು ಮತ್ತೊಮ್ಮೆ ಯೋಚನೆ ಮಾಡಬೇಕಾದ ಹಂತಕ್ಕೆ ತಲುಪಿವೆ. ತಾನು ಮುಳುಗುವುದಲ್ಲದೆ, ತನ್ನೊಂದಿಗೆ ಬಂದ ಇತರರನ್ನೂ ಮುಳುಗಿಸುವ ಪರಿಪಾಠ ಮುಂದುವರಿಯುವ ಭೀತಿ ಈ ಪ್ರಾದೇಶಿಕ ಪಕ್ಷಗಳಿಗೆ ಇವೆ. ಈ ಕಾರಣಕ್ಕಾಗಿಯೇ, ವರದಿಯೊಂದರ ಪ್ರಕಾರ, ತಮಿಳುನಾಡಿನಲ್ಲಿ ಈಗ ಡಿಎಂಕೆ ಕೂಡ ಕಾಂಗ್ರೆಸ್ ಜೊತೆಗೆ ಮೈತ್ರಿ ಮುಂದುವರಿಸುವ ಬಗ್ಗೆ ಪುನರವಲೋಕನ ನಡೆಸಲಿದೆ ಎಂದು ತಿಳಿದುಬಂದಿದೆ.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy
Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post Results 2020 | ಚಂದ್ರನನ್ನೇ ನಿಯಂತ್ರಿಸಬಹುದು, ಇವಿಎಂ ಯಾವ ಲೆಕ್ಕ?: ಮತ್ತೆ EVM ದೂರಿದ ಕಾಂಗ್ರೆಸ್
Next post ಅರ್ನಬ್ ಬಿಡುಗಡೆ: ‘ಆತ್ಮಹತ್ಯೆ ಮಾಡಿಕೊಂಡವರು ಸರ್ಕಾರವೇ ಹೊಣೆ ಎಂದು ಬರೆದಿಟ್ಟರೆ, ಮುಖ್ಯಮಂತ್ರಿಯನ್ನು ಬಂಧಿಸಬೇಕೇ?’

ಸುದ್ದಿ ಸಂಚಯ

ಇವುಗಳನ್ನೂ ನೋಡಿ