ವ್ಯಾಕ್ಸಿನ್ ವಿರೋಧಿಗಳ ಮಾತು ಕೇಳಬೇಡಿ. ಕೋವಿಡ್ ನಿರ್ವಹಣೆಯಲ್ಲಿ ಭಾರತವೇ ಶ್ರೇಷ್ಠ. ಈ ಬಗ್ಗೆ ಹೆಮ್ಮೆ ಪಡಬೇಕು ನಾವು. ಭಾರತ ವಿರೋಧಿ ವಿದೇಶೀ ಶಕ್ತಿಗಳ ಕೈಗೊಂಬೆಯಾಗಿರುವ ವಿರೋಧ ಪಕ್ಷಗಳ ಮಾತಿಗೆ ಬೆಲೆ ಕೊಡಬೇಡಿ. ನನ್ನ ದೇಶ ನನ್ನ ಹೆಮ್ಮೆ.
ಇದನ್ನು ಯಾಕೆ ಹೇಳಬೇಕಾಗುತ್ತದೆ? ವಿವರ ನೀವೇ ಓದಿ ನೋಡಿ.
138 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಜೂ.01, 2021ರ ಅಂಕಿ ಅಂಶದ ಪ್ರಕಾರ, 21.6 ಕೋಟಿ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಅಂದರೆ, ಇದು ಬ್ರೆಜಿಲ್ ಎಂಬ ದೇಶದ ಜನಸಂಖ್ಯೆಗೆ ಹೋಲಿಸಿದರೆ ಆ ದೇಶದ ಎಲ್ಲರಿಗೂ ಲಸಿಕೆ ನೀಡಿದಂತಹಾ ಸಾಧನೆ ಈ ಭಾರತದ್ದು! ಹೆಮ್ಮೆ ಪಡಬೇಡವೇ?
ಅದು ಕೂಡ, ಲಸಿಕೆ ವಿರುದ್ಧ ವಿರೋಧ ಪಕ್ಷಗಳು ಅಪಪ್ರಚಾರದ ಅಭಿಯಾನ ಮಾಡಿದ ಹೊರತಾಗಿಯೂ! ಉತ್ತರ ಪ್ರದೇಶದಲ್ಲಿ ಲಸಿಕೆ ನೀಡುವುದನ್ನು ತಪ್ಪಿಸಿಕೊಳ್ಳಲು ನದಿಗೆ ಹಾರಿ ಓಡಿ ಹೋದ ಸುದ್ದಿ ಓದಿದ್ದೇವಲ್ಲ, ಇಂಥದ್ದನ್ನೇ ಈ ವಿರೋಧ ಪಕ್ಷಗಳ ಸಾಧಿಸಿ ತೋರಿಸುತ್ತಿರುವುದು. ವಿರೋಧಕ್ಕಾಗಿ, ಪ್ರಧಾನಿ ಮೋದಿಯವರ ಪ್ರತಿಯೊಂದು ನಡೆಯನ್ನೂ ವಿರೋಧಿಸುವುದಕ್ಕಾಗಿಯೇ ಇವೆ ಈ ವಿರೋಧಿ ಪಕ್ಷಗಳು! ಮೋದಿ ಮಾಡಿದ ಒಂದಾದರೂ ಒಳ್ಳೆಯ ಕೆಲಸವನ್ನು ಪ್ರಸ್ತಾಪಿಸಿವೆಯೇ ಅಂತ ನೀವೇ ಆಲೋಚನೆ ಮಾಡಿ ನೋಡಿ. ಯಾರನ್ನು ಈ ಜನ್ಮದಲ್ಲಿ ಬೆಂಬಲಿಸಲೇಬಾರದು ಎಂಬುದು ನಿಮ್ಮ ಅರಿವಿಗೇ ಬರುತ್ತದೆ.
ಇದು ಓದಿ: Congress Toolkit: ಮೋದಿ, ಹಿಂದುತ್ವ ಹೆಸರಿಗೆ ಕಳಂಕ ತರಲು ಕಾಂಗ್ರೆಸ್ ಟೂಲ್ಕಿಟ್ – ಬಿಜೆಪಿ ಕೆಂಡಾಮಂಡಲ
ಭಾರತವು ಲಸಿಕೆ ನೀಡುವುದಕ್ಕೆ ಆರಂಭಿಸಿದ್ದು 2021ರ ಫೆಬ್ರವರಿ ತಿಂಗಳ ಆಸುಪಾಸಿನಲ್ಲಿ. ಉಳಿದ ಶ್ರೀಮಂತ ಹಾಗೂ ಕಡಿಮೆ ಜನಸಂಖ್ಯೆಯಿರುವ ದೇಶಗಳೆಲ್ಲ ಬೇರೆ ಕಡೆಯಿಂದ ಆಮದು ಮಾಡಿಕೊಂಡ ಲಸಿಕೆ ಹಂಚುವ ಕೆಲಸ ಆರಂಭಿಸಿದ್ದವು. ಅದರೆ ಭಾರತವು ದೇಶೀ ಲಸಿಕೆ ಉತ್ಪಾದನೆಯತ್ತ ಗಮನ ಹರಿಸಿತು. ಅದು ಕೂಡ ಕೈಗೆಟಕುವ ದರದಲ್ಲಿ ದೊರೆತರೆ ಕೋವಿಡ್ ಕಾಲದಲ್ಲಿ ದೇಶದಲ್ಲಿ ಕುಸಿಯುತ್ತಿರುವ ಆರ್ಥಿಕತೆಗೆ ಬಲ ನೀಡುವ ಉದಾತ್ತವಾದ ಮತ್ತು ದೂರಾಲೋಚನೆಯ ನಿರ್ಧಾರವಾಗಿತ್ತದು. ಭಾರತವು ವಿದೇಶೀ ಲಸಿಕೆಯನ್ನು ಅವಲಂಬಿಸದೆ, ನಮ್ಮದೇ ಲಸಿಕೆಯನ್ನು ಅಗ್ಗದ ದರದಲ್ಲಿ ಉತ್ಪಾದಿಸಲಾರಂಭಿಸಿತು.
ಲಸಿಕೆ ರಫ್ತು ಮಾಡಿದ್ದೇಕೆ?
ಲಸಿಕೆ ವಿರೋಧಿ ಅಪಪ್ರಚಾರ ಅಭಿಯಾನ ನಡೆಸಿದ ವಿರೋಧ ಪಕ್ಷಗಳಿಂದಾಗಿ, ತಯಾರಾದ ಲಸಿಕೆಗಳು ವ್ಯರ್ಥವಾಗುವ ಭಯವಿತ್ತು. ಇದಕ್ಕೆ ಕಾರಣ ತಯಾರಾದ ಲಸಿಕೆಗೂ ಶೆಲ್ಫ್ ಲೈಫ್ ಇದೆಯಲ್ಲ. ಹಾಳಾಗುವುದರೊಳಗೆ ಬಳಕೆಯಾಗಬೇಕಾಗುತ್ತದೆ.
ಅಷ್ಟಲ್ಲದೆ, ಆ ಹಂತದಲ್ಲಿ ನಮ್ಮ ದೇಶದಲ್ಲಿ ಕೋವಿಡ್ ಎರಡನೇ ಅಲೆಯಿನ್ನೂ ಕಾಡಿರಲಿಲ್ಲ. ಕೋವಿಡ್ ನಿಯಂತ್ರಣದಲ್ಲೂ ಇತ್ತು. ಕೋವಿಡ್ನಿಂದ ಪಾರಾದೆವು ಅಂತಲೇ ಎಲ್ಲರೂ ಅಂದುಕೊಂಡೆವು. ಆದರೆ ವಿದೇಶಗಳಲ್ಲಿ ಕೋವಿಡ್ ಪ್ರಮಾಣ ಜಾಸ್ತಿಯಾಗಿತ್ತು. ಹೀಗಾಗಿ, ಅವುಗಳಿಗೆ ನೆರವು ನೀಡುವ ಉದ್ದೇಶದಿಂದ ಹಾಗೂ ತಯಾರಾದ ಲಸಿಕೆ ವ್ಯರ್ಥವಾಗದಂತೆ ಮತ್ತು ಲಸಿಕೆಗೆ ಕಚ್ಚಾವಸ್ತು ನೀಡಬೇಕಿದ್ದರೆ ಆ ದೇಶಗಳೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಅನುಸಾರವೇ ಅಲ್ಪ ಪ್ರಮಾಣದ ಲಸಿಕೆಯನ್ನು ರಫ್ತು ಮಾಡಲಾಯಿತು.
ಇದು ಓದಿ: ಕೋವಿಡ್ ನಿಯಂತ್ರಣಕ್ಕೆ ನರೇಂದ್ರ ಮೋದಿ ಏನೂ ಮಾಡಿಲ್ಲವೇ?: ಇಲ್ಲಿದೆ ಪ್ರಶ್ನೆಗಳಿಗೆ ಉತ್ತರ
ಇದರಲ್ಲಿ ಯಾವುದೇ ತಪ್ಪಿರಲಿಲ್ಲ. ಆದರೆ ಅಂದು ಕೆಲವಾರು ಲಕ್ಷ ಲಸಿಕೆಗಳನ್ನು ವಿದೇಶಕ್ಕೆ ಕಳಿಸಿದ್ದನ್ನೇ ಈ ವಿರೋಧ ಪಕ್ಷಗಳು ಈಗಲೂ ಅರಚಾಡುತ್ತಾ, ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಮಾರಿದ್ದು ಯಾಕೆ ಅಂತ ಮತ್ತೊಂದು ಕುಹಕದ, ಅನಗತ್ಯ, ಅಪಪ್ರಚಾರದ ಅಭಿಯಾನವನ್ನು ಆರಂಭಿಸಿದವು. ಲಸಿಕೆ ರಫ್ತು ಈಗ ನಡೆಯುತ್ತಿಲ್ಲ, ರಾಜತಾಂತ್ರಿಕ ಒಪ್ಪಂದದ ರಫ್ತಷ್ಟೇ ಆಗುತ್ತಿದೆ ಎಂದು ಗೊತ್ತಿದ್ದರೂ ಕೂಡ!
ಲಸಿಕೆಯಲ್ಲಿ ಭಾರತವೇ ಮೇಲು
ಆದರೆ, ಗಮನಿಸಬೇಕಾದ್ದೆಂದರೆ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅದಾಗಲೇ ಲಸಿಕಾ ಉತ್ಸವ ಆರಂಭಿಸಿಬಿಟ್ಟಿದ್ದರು. ಲಸಿಕೆ ಪಡೆಯಲು ವಿರೋಧ ಪಕ್ಷಗಳ ಅಪಪ್ರಚಾರದಿಂದಾಗಿ ಹಿಂಜರಿದವರ ಮನವೊಲಿಕೆಯೇ ದೊಡ್ಡ ಸವಾಲಾಗಿತ್ತು. ಅಭಿಯಾನ ಒಂದು ಕಡೆಯಿಂದ ನಡೆಯುತ್ತಲೇ ಇತ್ತು.
ಆ ಕಾಲದಲ್ಲಿಯೇ ಜಾಗತಿಕ ಟ್ರೆಂಡ್ಗೆ ಅನುಗುಣವಾಗಿ ಭಾರತವು ಲಸಿಕೆ ನೀಡಿಕೆಯಲ್ಲಿ ಮುಂದುವರಿದಿತ್ತು. ಒಳ್ಳೆ ಕೆಲಸಕ್ಕೆಲ್ಲಾ ಕಡ್ಡಿಯಾಡಿಸುವ ವಿರೋಧ ಪಕ್ಷಗಳ ಕಾಟ, ತೊಂದರೆ, ಅಡ್ಡಿ, ಹೀಗಳಿಕೆ, ಕೋರ್ಟು ಕೇಸು, ಧಾರ್ಷ್ಟ್ಯ ಪ್ರದರ್ಶನ… ಇವೆಲ್ಲವುಗಳ ನಡುವೆಯೂ ಲಸಿಕೆ ಅಭಿಯಾನವೊಂದು ಸದ್ದಿಲ್ಲದೇ ನಡೆಯುತ್ತಿರುವ ಬಗ್ಗೆ ಭಾರತೀಯರೆಲ್ಲರೂ ಹೆಮ್ಮೆ ಪಡಬೇಕು. ಬೇರೆ ದೇಶಗಳೆಲ್ಲಾ ವಿದೇಶದಿಂದ ಲಸಿಕೆ ಆಮದು ಮಾಡಿಕೊಳ್ಳುತ್ತಿದ್ದರೆ, ಭಾರತವು ತನ್ನಲ್ಲೇ ಲಸಿಕೆ ಉತ್ಪಾದಿಸುತ್ತಾ ಈ ಸಾಧನೆ ಮಾಡಿತ್ತು!
ಲಸಿಕೆ ವಿತರಣೆಯಲ್ಲಿ ನಮ್ಮಿಂದ ಮುಂದೆ ಇರುವುದು ನಮಗಿಂತ ಏಳು ಪಟ್ಟು ಜಿಡಿಪಿ ಹೆಚ್ಚಿರುವ ಅಮೆರಿಕ ಮಾತ್ರ. ಆದರೆ, ವಿದೇಶೀ ಶಕ್ತಿಗಳ ಕೈಗೊಂಬೆಗಳಂತಾದ ಕೆಲವು ಮಾಧ್ಯಮಗಳು, ವಿರೋಧ ಪಕ್ಷಗಳ ಟೂಲ್ ಕಿಟ್ ಅಭಿಯಾನಕ್ಕೆ ಬಲಿಯಾಗಿ, ಲಕ್ಷ ಪ್ರಕರಣಗಳಲ್ಲೊಂದರಂತೆ ಎಲ್ಲೋ ಒಂದು ಕಡೆಯಾದ ಸಮಸ್ಯೆಗಳನ್ನೇ ದೊಡ್ಡದಾಗಿ ತೋರಿಸತೊಡಗಿದವು.
ಇದು ಓದಿ: ಚೀನಾ ವೈರಸ್: ಈಗ ಇಂಡಿಯನ್ ವೈರಸ್ ಎನ್ನುತ್ತಾ, ಮೋದಿ, ಭಾರತದ ಹೆಸರಿಗೆ ಮಸಿ ಬಳಿಯುವ ಅಂತರರಾಷ್ಟ್ರೀಯ ಸಂಚು
ಆದರೆ, ನಾವೀಗ ಜೂನ್ಗೆ ಬಂದಿದ್ದೇವೆ. ಟ್ರೆಂಡ್ ಇದೇ ರೀತಿ ಮುಂದುವರಿದರೆ ಜುಲೈ ಅಂತ್ಯದೊಳಗೆ ಅಮೆರಿಕವನ್ನು ಹಿಂದಿಕ್ಕುತ್ತೇವೆ ನಾವು. ಅದು ಕೂಡ ಸ್ವದೇಶಿ ಲಸಿಕೆಯಿಂದಲೇ. ಮತ್ತು ಜಗತ್ತಿನಲ್ಲೇ ಅತೀ ಕಡಿಮೆ ದರದಲ್ಲಿ! ನಮ್ಮದೇ ದೇಶಿ ಲಸಿಕೆಯನ್ನು ಸುಮಾರು ಆರು ಭಾರತೀಯ ಫಾರ್ಮಾ ಕಂಪನಿಗಳು ವಿತರಿಸಲಿವೆ, ಅದು ಕೂಡ ಜಗತ್ತಿಲ್ಲೇ ಅತ್ಯಂತ ಕಡಿಮೆ ದರದಲ್ಲಿ! ಜೊತೆಗೆ ರಷ್ಯಾದ ಯೋಗ್ಯವಾದ ಸ್ಫುಟ್ನಿಕ್ ಲಸಿಕೆಯನ್ನೂ ತರಿಸಿಕೊಳ್ಳಲಾಗುತ್ತಿದೆ. ಇದನ್ನು ಹಣವಂತರು ಖರೀದಿಸಿ ಪಡೆಯಬಹುದಾಗಿದೆ.
ವಿದೇಶದಿಂದ ಕಮಿಷನ್ ಆಸೆ?
ವಿದೇಶಿ ಲಸಿಕೆಯನ್ನು ಭಾರತದೊಳಕ್ಕೆ ತರಿಸಲು, ಭಾರತದ ಆರ್ಥಿಕತೆಯಿಂದ ಅವುಗಳು ದುರ್ಲಾಭ ಪಡೆಯುವಂತೆ ಮಾಡಲು, ಭಾರತದ ಆರ್ಥಿಕತೆಗೆ ಕೊಡಲಿಯೇಟು ನೀಡುವಂತೆ ಮಾಡುವ ವಿದೇಶೀ ಶಕ್ತಿಗಳ ತಾಳಕ್ಕೆ ತಕ್ಕಂತೆ ಕುಣಿಯುವ ವಿರೋಧಿಗಳ ಮಾತಿಗೆ ಬೆಲೆ ಕೊಡಬೇಡಿ. ನಮ್ಮ ದೇಶದ ವಿಜ್ಞಾನಿಗಳ ಸಾಧನೆ ಬಗ್ಗೆ ಹೆಮ್ಮೆ ಪಡದೆ, ಮೋದಿ ನೇತೃತ್ವದಲ್ಲಿ ಭಾರತದ ಏಳಿಗೆಯನ್ನು ಸಹಿಸದವರನ್ನು ಮೂರ್ಖರೆಂದು ಪರಿಗಣಿಸಿ ಸುಮ್ಮನಿದ್ದುಬಿಡಿ. ನನ್ನ ದೇಶ, ನನ್ನ ಹೆಮ್ಮೆ.
ಅದೇ ರೀತಿ, ಜಾಗತಿಕ ಫಾರ್ಮಾ ಮಾಫಿಯಾ ಅಥವಾ ಲಾಬಿಯ ಕುತಂತ್ರಕ್ಕೂ ಕಿವಿಗೊಡಬೇಡಿ. ಅವರಿಗೆಲ್ಲ ಫೈಜರ್, ಮಾಡೆರ್ನಾ, ಜಾನ್ಸನ್ ಮುಂತಾದ ವಿದೇಶೀ ಫಾರ್ಮಾ ಕಂಪನಿಗಳು ಮತ್ತು ಚೀನಾದ ಲಸಿಕೆಯನ್ನು ಭಾರತಕ್ಕೆ ತರಿಸಲು ಬಿಡದೆ ಯತ್ನ ಮಾಡುತ್ತಿದ್ದಾರೆ. ಭಾರತಕ್ಕೆ ಅವುಗಳನ್ನು ತರುವಂತೆ ಮಾಡಿದರೆ ದೇಶದ ಕೆಲವು ರಾಜಕೀಯ ಮನೆತನಗಳಿಗೆ ಕೋಟಿ ಕೋಟಿ ಕಮಿಷನ್ ಸಿಗಬಹುದು!
ಇದುವರೆಗೆ 21 ಕೋಟಿಗೂ ಹೆಚ್ಚು ಭಾರತೀಯರು ಲಸಿಕೆ ಪಡೆದಿದ್ದಾರೆ. ನಮಗಿನ್ನೂ ಸುಮಾರು 125 ಕೋಟಿ ಮಂದಿಗೆ ಎರಡು ಡೋಸ್ (ಅಂದರೆ ಸುಮಾರು 250 ಕೋಟಿ ಡೋಸ್) ಲಸಿಕೆ ಅಗತ್ಯವಿದೆ. ಮತ್ತು ದೇಶದ ವಿವಿಧೆಡೆ ಹೆಚ್ಚಾಗಿ ಉಚಿತವಾಗಿಯೇ ಜನರಿಗೆ ಲಸಿಕೆ ನೀಡಲಾಗುತ್ತಿದೆ. ದುಡ್ಡಿದ್ದವರು ಮತ್ತು ಕಾಯಲು ಸಾಧ್ಯವಿಲ್ಲದವರು ದುಡ್ಡು ಕೊಟ್ಟು ಖರೀದಿಸಿದರೂ ಸಾವಿರ ರೂಪಾಯಿ ಆಸುಪಾಸಿನಲ್ಲಿ ಒಂದು ಡೋಸ್ ಸಿಗುತ್ತದೆ.
ಹೀಗಾಗಿ ವಿದೇಶೀ ಶಕ್ತಿಗಳಿಗೆ ಭಾರತದಲ್ಲಿ ಹಣ ಮಾಡಲು ಅವಕಾಶ ಸಿಗದಾಯಿತು. ಇದುವರೆಗೆ ಚೀನಾ ನಿರ್ಮಿತ ಟಿಕ್ಟಾಕ್ ಮತ್ತಿತರ ಆ್ಯಪ್ ಆಧಾರಿತ ಕಂಪನಿಗಳು ಭಾರತದಲ್ಲಿ ಸಿಕ್ಕಾಪಟ್ಟೆ ದುಡ್ಡು ಮಾಡುತ್ತಿದ್ದವು. ಇತ್ತೀಚೆಗೆ ಅವನ್ನು ಮೋದಿ ಸರ್ಕಾರವು ಭಾರತದಿಂದಲೇ ಹೊರಹಾಕಿದ್ದು, ಚೀನಾಕ್ಕೆ ದೊಡ್ಡ ಪೆಟ್ಟನ್ನೇ ಕೊಟ್ಟಿತ್ತು. ಈಗ ಲಸಿಕೆಯಲ್ಲೂ ದುಡ್ಡು ಮಾಡಲಾಗುತ್ತಿಲ್ಲ.
ಇದು ಓದಿ: ಮೋದಿ ವಿರೋಧಿಗಳು ಓದಲೇಬೇಕು: 140 ಕೋಟಿ ಮಂದಿಯನ್ನು ಮೋದಿ ರಕ್ಷಿಸಿದ್ದು ಹೀಗೆ!
250 ಕೋಟಿ ಡೋಸ್ಗೆ ತಲಾ 1 ಸಾವಿರ ರೂಪಾಯಿಯಾದರೂ, 2,50,000 ಕೋಟಿ ವ್ಯವಹಾರ. ಇದರಲ್ಲಿ 20 ಪರ್ಸೆಂಟ್ ಕಮಿಷನ್ ಸಿಕ್ಕರೂ ಸುಮಾರು 50 ಸಾವಿರ ಕೋಟಿ!
ಇದಕ್ಕಾಗಿಯೇ ಜಾಗತಿಕ ಫಾರ್ಮಾ ಕಂಪನಿಗಳು ಕೆಲವು ಪತ್ರಿಕೆ/ ಟಿವಿ ಮಾಧ್ಯಮಗಳು, ದೇಶವನ್ನು ವಿರೋಧಿಸುವ ಕೆಲವು ಪಕ್ಷಗಳು ಮತ್ತು ಮೋದಿ ವಿರೋಧಿ ಶಕ್ತಿಗಳ ನೆರವು ಪಡೆದು, ಮೋದಿ ಹಾಗೂ ಭಾರತದ ವಿರುದ್ಧ ಅಬ್ಬರದ ಅಪಪ್ರಚಾರದಲ್ಲಿ ತೊಡಗಿರುವುದರಲ್ಲಿ ಅಚ್ಚರಿಯೇ ಇಲ್ಲ.
ಅತ್ತ ಚೀನಾ ಕೈಕೈಹೊಸಕಿಕೊಳ್ಳುತ್ತಿರುವಾಗ ಇಲ್ಲಿನ ದ್ರೋಹಿಗಳಿಗೆ ಸುಮ್ಮನಿರಲಾಗುತ್ತಿಲ್ಲ. ಹೀಗಾಗಿ ಪ್ರತಿಯೊಂದಕ್ಕೂ ಕೋರ್ಟ್ಗೆ ಹೋಗಿ, ಕೋವಿಡ್ ಜೊತೆ ಹೋರಾಡುತ್ತಿರುವ ಸರ್ಕಾರ, ನ್ಯಾಯಾಲಯದಲ್ಲೂ ಹೋರಾಡುವಂತೆ ಮಾಡಿ, ಕೋವಿಡ್ ಪರಿಹಾರ ಕಾರ್ಯಕ್ಕೆ ಸಮಯ ಸಿಗದಂತೆ, ಕೈ ಕಟ್ಟಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಸಣ್ಣ ಉದಾಹರಣೆ, ಸೆಂಟ್ರಲ್ ವಿಸ್ತಾ ಯೋಜನೆ. ಯುಪಿಎ ಸರ್ಕಾರದ ಅವಧಿಯಲ್ಲಿ ಅನುಮೋದನೆ ಪಡೆದಿದ್ದ ಯೋಜನೆಯನ್ನು ಮೋದಿ ಸರ್ಕಾರ ಪೂರ್ಣಗೊಳಿಸುತ್ತಿದೆ, ಅದು ಕೂಡ ಉದ್ದೇಶಿತ ಅಂದಾಜು ವೆಚ್ಚಕ್ಕಿಂತ ಸಾವಿರಾರು ಕೋಟಿ ರೂ. ಕಡಿಮೆ ವೆಚ್ಚದಲ್ಲಿ!
ಇದುವೇ ವಿರೋಧಿಗಳ ಕಣ್ಣುರಿಗೆ ಪ್ರಧಾನ ಕಾರಣ. ಮಂಜೂರಾಗಿರುವ ಯೋಜನೆ ಸಾಗುತ್ತಾ ಇರುತ್ತದೆ, ಕೋವಿಡ್ ಕಾಲದಲ್ಲಿ ಸಾವಿರಾರು ಮಂದಿಗೆ ಉದ್ಯೋಗ ದೊರೆತು ಹೊಟ್ಟೆಬಟ್ಟೆಗೆ ಆಗುತ್ತದೆ. ಇದಕ್ಕೂ ಕಲ್ಲು ಹಾಕುತ್ತಿವೆ ವಿರೋಧ ಪಕ್ಷಗಳು. ಕೋರ್ಟಿಂದ ತಪರಾಕಿ ಸಿಕ್ಕಿದರೂ ಮೂಢರಿಗೆ ಬುದ್ಧಿ ಬರುತ್ತಿಲ್ಲ. ಇಂಥದ್ದೇ ಹಲವು ಅನಗತ್ಯ ಕೇಸುಗಳನ್ನು ಕೇಂದ್ರವು ಸಮಯವಿಲ್ಲದಿದ್ದರೂ ಹೋರಾಡುತ್ತಾ, ದೇಶವಾಸಿಗಳನ್ನು ಕೋವಿಡ್ ಮಾರಿಯಿಂದ ರಕ್ಷಿಸುವ ಕೆಲಸದಲ್ಲಿ ನಿರತವಾಗಿದೆ. ಅದರಲ್ಲೂ ಮಧ್ಯೆ ಈ ರೀತಿ ಸೊಳ್ಳೆ ಕಚ್ಚುವಿಕೆಗಳು!
ಪರ್ಸೆಂಟೇಜ್ ತೋರಿಸಿ ಕಣ್ಣಿಗೆ ಮಣ್ಣೆರಚುವ ತಂತ್ರ
ಈ ವಿರೋಧಿ ಪಕ್ಷದವರು ಭಾರತವೇ ಹೆಮ್ಮೆ ಪಡಬೇಕಾದ ಅಂಕಿ ಅಂಶಗಳವ್ನು ಪರ್ಸೆಂಟೇಜ್ ಲೆಕ್ಕದಲ್ಲಿ ತೋರಿಸುತ್ತಾರೆ? ಇಡೀ ಜಗತ್ತಿನಲ್ಲೇ ಭಾರತದ ಮಾನಮರ್ಯಾದೆ ಕಳೆಯುವುದಕ್ಕಾಗಿ. ಯಾಕೆಂದರೆ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಜನಸಂಖ್ಯೆಯೇ 140 ಕೋಟಿ. ಹೀಗಿರುವಾಗ 14 ಕೋಟಿ ಮಂದಿಗೆ ಲಸಿಕೆ ಕೊಟ್ಟರೂ ಕೇವಲ ಶೇ.10 ಅಂತ ಸುಲಭವಾಗಿ ಕೀಳಂದಾಜು ಮಾಡಿಯೇ ಹೇಳಬಹುದಲ್ಲ!
ಮೂರ್ಖರು ಆರೋಪಗಳನ್ನು ಮಾಡುತ್ತಲೇ ಇರುತ್ತಾರೆ. ಅವುಗಳಿಗೆ ಉತ್ತರಿಸಲು ಸಮಯವಿಲ್ಲದೆ, ಕೋವಿಡ್-19ರಿಂದ ಭಾರತೀಯರನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿರುವ ದೇಶದ ಸರ್ಕಾರವು, ಅಂಕಿ ಅಂಶಗಳನ್ನು ತೋರಿಸಿ, ಮೌನವಾಗಿ ತನ್ನ ಕೆಲಸ ತಾನು ಮಾಡುತ್ತಲೇ ಇರುತ್ತದೆ. ಇಲ್ಲಿದೆ ನೋಡಿ ಇಂದಿನ (ಜೂ.01, 2021ರ) ಸ್ಪಷ್ಟ ಮಾಹಿತಿ.
ಕೋವಿಡ್-19 ಲಸಿಕೆ ವಿತರಿಸಿದ ಒಟ್ಟು ಸಂಖ್ಯೆ 21.6 ಕೋಟಿ ಡೋಸ್ಗಳು. ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಕುಸಿತವಾಗಿದೆ, ಚೇತರಿಕೆ ಪ್ರಮಾಣ ಶೇ.92.09ಕ್ಕೆ ಹೆಚ್ಚಿದೆ. ಇಷ್ಟೇ ಸಾಕು, ಭಾರತೀಯ ಪ್ರಜೆಗೆ ಈ ಮೂರ್ಖ ಶಿಖಾಮಣಿಗಳ ಅಪಪ್ರಚಾರದ ಆಂದೋಲನವನ್ನು ಅರ್ಥ ಮಾಡಿಕೊಳ್ಳಲು!
ಮೇ 24ರಂದು ‘ಮಾನನೀಯ’ ಭಾವಿ ಪ್ರಧಾನಿ ರಾಹುಲ್ ಗಾಂಧಿಯವರು ಟ್ವೀಟ್ ಮಾಡಿ, ತೋರಿಸಿದ್ದು ಮಾತ್ರ ಯಾವುದನ್ನು ಅಂತ ಗೊತ್ತಾಗಲೇ ಇಲ್ಲ. ಲಸಿಕೆ ಹಾಕಿಸಿರುವುದು ಕೇವಲ ಶೇ.1.4 ಮಂದಿಗೆ ಮಾತ್ರ ಅಂದಿದ್ದರು ಅವರು ಅದೇನೋ ಗ್ರಾಫ್ ತೋರಿಸಿ.
ಅಂದಿನ ವಾಸ್ತವ ಲೆಕ್ಕಾಚಾರವೆಂದರೆ, ಭಾರತದಲ್ಲಿ ಆ ಹೊತ್ತಿಗೆ 15,23,01,505 (15.23 ಕೋಟಿ) ಮಂದಿ ಅದಾಗಲೇ ಮೊದಲ ಲಸಿಕೆ ಪಡೆದಿದ್ದರು ಮತ್ತು 4,18,64,206 ಮಂದಿ ಅದಾಗಲೇ ಎರಡನೇ ಡೋಸ್ ಕೂಡ ಪಡೆದಿದ್ದರು. ಇದು ಕೂಡ ಭಾರತದ ಜನಸಂಖ್ಯೆಗೆ ಹೋಲಿಸಿದರೆ ಶೇ.3.1 ಹೊರತು, ಶೇ.1.4 ಅಲ್ಲವೇ ಅಲ್ಲ! ಇದು ರಷ್ಯಾದ ಇಡೀ ಜನಸಂಖ್ಯೆಗೆ ಸಮ!
ಗಮನಿಸಿ, ಅಮೆರಿಕದ ಜನಸಂಖ್ಯೆ 33.10 ಕೋಟಿ, ಬ್ರೆಜಿಲ್ 21.25 ಕೋಟಿ, ರಷ್ಯಾ 14.59 ಕೋಟಿ, ಜರ್ಮನಿಯದು 8.38 ಕೋಟಿ, ಇಂಗ್ಲೆಂಡ್ (ಯುಕೆ) ಜನಸಂಖ್ಯೆ 6.79 ಕೋಟಿ, ಫ್ರಾನ್ಸ್ 6.75 ಕೋಟಿ. ಇಟಲಿಯದು 6.05 ಕೋಟಿ ಒಟ್ಟು ಜನಸಂಖ್ಯೆ. ಭಾರತದ್ದು? 138 ಕೋಟಿ. ಅಂದರೆ ಅಮೆರಿಕ, ಬ್ರೆಜಿಲ್, ರಷ್ಯಾ, ಯುಕೆ, ಇಟಲಿ, ಫ್ರಾನ್ಸ್ ಎಲ್ಲ ಸೇರಿದರೂ, ಭಾರತದಷ್ಟಿಲ್ಲ! ಈ ಟೂಲ್ ಕಿಟ್ ಪ್ರವರ್ತಕರಿಗೆ ಗೊತ್ತಿದ್ದರೂ ಮುಚ್ಚಿಡುವ ಸಂಗತಿ.
ಭಾರತದ ವ್ಯಾಕ್ಸಿನೇಶನ್ ಯಶಸ್ಸನ್ನು ಇಲ್ಲಿ ನೇರವಾಗಿಯೇ ನೋಡಬಹುದು.
ಭಾರತವು ಈಗಾಗಲೇ ಹೇಳಿದೆ, ಈ ಡಿಸೆಂಬರ್ ತಿಂಗಳೊಳಗೆ 216 ಕೋಟಿ ಡೋಸ್ ಲಸಿಕೆ ಉತ್ಪಾದನೆಯಾಗುತ್ತದೆ ಮತ್ತು 108 ಕೋಟಿ ಮಂದಿಗೆ ಲಸಿಕೆ ನೀಡುವ ನೀಲನಕ್ಷೆಯನ್ನೂ ನಮ್ಮ ಹೆಮ್ಮೆಯ ದೇಶ ನಮ್ಮ ಮುಂದಿಟ್ಟಿದೆ. ಇದನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಆಗಲೇ ದೇಶದ ಮುಂದಿಟ್ಟಿದ್ದಾರೆ. ಹೀಗಾಗಿ, ಟೂಲ್ ಕಿಟ್ ಹಿಡಿದುಕೊಂಡು, ಭಾರತ ಸರ್ಕಾರ ಮತ್ತು ನರೇಂದ್ರ ಮೋದಿ ಅವರ ಮೇಲೆ ದಾಳಿ ಮಾಡುವ ಹುನ್ನಾರವಂತೂ ನಡೆಯುತ್ತಲೇ ಇದೆ.
ಹೀಗೆ, ಪೇಯ್ಡ್ ಮೀಡಿಯಾ, ಪೇಯ್ಡ್ ರಾಜಕೀಯ ಪಕ್ಷಗಳ ಮಾತಿಗೆ ಕಿವಿಗೊಡದೆ, ಈ ದೇಶವನ್ನು ಹರಿದು ಮುಕ್ಕಲು ಹವಣಿಸುತ್ತಿರುವ ರಣಹದ್ದುಗಳಿಗೆ ಅವಕಾಶವನ್ನೇ ಕೊಡದೆ ದೇಶವನ್ನು ರಕ್ಷಿಸುತ್ತಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಬೆಂಬಲಿಸೋಣ. ಅಪಪ್ರಚಾರಕ್ಕೆ ಕಿವಿಗೊಡದೆ, ಭರ್ಜರಿ ಶಕ್ತಿಯಾಗಿ ರೂಪುಗೊಳ್ಳುತ್ತಿರುವ ಭಾರತಾಂಬೆಯ ಬಗ್ಗೆ ಹೆಮ್ಮೆ ಪಡೋಣ.

Average Rating