Breast Cancer | ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಹೊಸ ಆಶಾವಾದ!
Read Time:4 Minute, 8 Second

Breast Cancer | ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಹೊಸ ಆಶಾವಾದ!

0 0

ಸಾಂಪ್ರದಾಯಿಕ ಚಿಕಿತ್ಸೆಗೆ ಸ್ಪಂದಿಸದೇ ಇರುವ ಸ್ತನ ಕ್ಯಾನ್ಸರ್ ರೋಗಿಗಳಿಗೆ ಒಂದು ಆಶಾದಾಯಕ ಸುದ್ದಿ. ಈಸ್ಟ್ರೋಜೆನ್-ಸಂವೇದೀ ಸ್ತನ ಕ್ಯಾನ್ಸರ್‌ಗೆ ಕಡಿವಾಣ ಹಾಕಬಲ್ಲ ಅಣುವೊಂದನ್ನು ಸಂಶೋಧಕರು ಗುರುತಿಸಿದ್ದು, ಇದು ಸ್ತನ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಆಶಾದಾಯಕ ಬೆಳವಣಿಗೆ ಎಂದು ಸಂಶೋಧಕರು ಹೇಳಿದ್ದಾರೆ.

ಇದು ಫಸ್ಟ್-ಇನ್-ಕ್ಲಾಸ್ ವ್ಯಾಪ್ತಿಗೆ ಬರುವ ಜೀವಾಣು. ಅಂದರೆ, ಇದು ಕೆಲಸ ಮಾಡುವ ರೀತಿಯೇ ವಿಭಿನ್ನ. ಈ ರೋಗಕ್ಕೆ ಸಂಬಂಧಿಸಿ ಹೇಳುವುದಾದರೆ, ಗಡ್ಡೆಗಳ ಉತ್ಪತ್ತಿಗೆ ಕಾರಣವಾಗುವ ಜೀವಕೋಶಗಳಲ್ಲಿ ಈಸ್ಟ್ರೋಜೆನ್ ಪಡೆದುಕೊಳ್ಳುವ ಸಾಮರ್ಥ್ಯವಿರುವ ಜೀವಕಣದ ಪ್ರೊಟೀನನ್ನೇ ಗುರಿಯಾಗಿರಿಸಿ ಈ ಜೀವಾಣು ಕೆಲಸ ಮಾಡುತ್ತದೆ.

ಸಾಂಪ್ರದಾಯಿಕ ಚಿಕಿತ್ಸಾ ವಿಧಾನಕ್ಕೆ ಪ್ರತಿರೋಧ ತೋರುವ ದೇಹವಿರುವ ರೋಗಿಗಳ ಚಿಕಿತ್ಸೆಯಲ್ಲಿ ಈ ಹೊಸ ಔಷಧ ವ್ಯವಸ್ಥೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಭಾರತೀಯ-ಅಮೆರಿಕನ್ ಸಂಶೋಧಕರೂ ಸೇರಿದ, ಯುನಿವರ್ಸಿಟ್ ಆಫ್ ಟೆಕ್ಸಾಸ್ ಸೌತ್‌ವೆಸ್ಟರ್ನ್‌ನ ಸಿಮನ್ಸ್ ಕ್ಯಾನ್ಸರ್ ಕೇಂದ್ರದ ಸಂಶೋಧಕರು ಹೇಳಿದ್ದಾರೆ.

ಟೆಕ್ಸಾಸ್ ವಿವಿಯ ಭಾರತೀಯ ಮೂಲದ ಪ್ರೊಫೆಸರ್ ಗಣೇಶ್ ರಾಜ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಅದರ ಕ್ರಿಯಾವಿಧಾನದ ವಿಶಿಷ್ಟತೆಯೇ ಪ್ರಸ್ತುತ ಚಿಕಿತ್ಸಾ ವಿಧಾನಗಳಿಗಿರುವ ಮಿತಿಯನ್ನು ಮೆಟ್ಟಿ ನಿಲ್ಲುತ್ತದೆ ಎಂದಿದ್ದಾರೆ.

ಸ್ತನ ಕ್ಯಾನ್ಸರ್‌ಗಳು ಬೆಳೆಯುವುದಕ್ಕೆ ಈಸ್ಟ್ರೋಜೆನ್ ಬೇಕಾಗುತ್ತದೆಯೇ ಎಂದು ಎಲ್ಲ ಕೇಸುಗಳಲ್ಲಿಯೂ ಪರೀಕ್ಷೆ ಮಾಡಲಾಗುತ್ತದೆ. ಶೇ.80ರಷ್ಟು ಪ್ರಕರಣಗಳೂ ಈಸ್ಟ್ರೋಜೆನ್-ಸಂವೇದಿ ಎಂಬುದು ಪತ್ತೆಯಾಗಿವೆ ಎಂದಿದ್ದಾರೆ ಸಂಶೋಧಕರು.

ಟ್ಯಾಮೋಕ್ಸಿಫೆನ್‌ನಂತಹಾ ಹಾರ್ಮೋನ್ ಚಿಕಿತ್ಸಾ ವಿಧಾನದ ಮೂಲಕ ಈ ಕ್ಯಾನ್ಸರ್‌ಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸಬಹುದು. ಆದರೆ, ಇವುಗಳಲ್ಲಿ ಮೂರನೇ ಒಂದಂಶದಷ್ಟು ಪ್ರಕರಣಗಳು ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಂಡುಬಿಡುತ್ತವೆ. ಇಂಥವರಿಗಾಗಿ ಈ ಚಿಕಿತ್ಸಾ ಪದ್ಧತಿ ಅನುಕೂಲ ಎಂದಿದ್ದಾರೆ ಗಣೇಶ್ ರಾಜ್.

ಸಾಂಪ್ರದಾಯಿಕ ಹಾರ್ಮೋನ್ ಚಿಕಿತ್ಸೆಯಲ್ಲಿ, ಕ್ಯಾನ್ಸರ್ ಕೋಶಗಳಲ್ಲಿ ಈಸ್ಟ್ರೋಜನ್ ರಿಸೆಪ್ಟರ್ ಹೆಸರಿನ ಜೀವಕಣಕ್ಕೆ ಹಾರ್ಮೋನನ್ನು ಸೇರಿಸುವ ಮೂಲಕ, ಈಸ್ಟ್ರೋಜನ್ ಈ ರಿಸೆಪ್ಟರನ್ನು ಆವರಿಸಿಕೊಳ್ಳದಂತೆ ತಡೆಯುತ್ತದೆ. ಹೀಗೆ ಮಾಡಿದರೆ ಕ್ಯಾನ್ಸರ್ ಕೋಶಗಳು ವೃದ್ಧಿಯಾಗದಂತೆ ತಡೆಯಲಾಗುತ್ತದೆ.

ಆದರೆ, ಕಾಲ ಕಳೆದಂತೆ ಈಸ್ಟ್ರೋಜನ್ ರಿಸೆಪ್ಟರ್ ರೂಪಾಂತರಗೊಳ್ಳಬಹುದಾಗಿದೆ (ಮ್ಯುಟೇಟ್) ಮತ್ತು ತನ್ನ ಆಕಾರವನ್ನು ಬದಲಿಸಿ, ತನ್ನನ್ನು ಸಮರ್ಪಕವಾಗಿ ಆವರಿಸಿಕೊಳ್ಳದಂತೆ ಅಥವಾ ಮುಚ್ಚದಂತೆ ಈ ಹಾರ್ಮೋನ್‌ನ ದಾರಿ ತಪ್ಪಿಸಬಹುದಾಗಿದೆ. ಹೀಗಾದಾಗ, ಕ್ಯಾನ್ಸರ್ ಕೋಶಗಳು ಮತ್ತೆ ವೃದ್ಧಿಯಾಗುತ್ತವೆ.

ಗಡ್ಡೆಯ ಬೆಳವಣಿಗೆಗೆ ಕಾರಣವಾಗಬಲ್ಲ ಕೋ-ರೆಗ್ಯುಲೇಟರ್ ಪ್ರೊಟೀನ್‌ಗಳೊಂದಿಗೆ ಈಸ್ಟ್ರೋಜೆನ್ ರಿಸೆಪ್ಟರ್ ಸೇರಿಕೊಳ್ಳದಂತೆ ತಡೆಯುವ ಔಷಧಿ ಅಭಿವೃದ್ಧಿಪಡಿಸಲು ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಈ ರೀತಿಯ ಪ್ರೊಟೀನ್-ಪ್ರೊಟೀನ್ ಸಂವಹನವನ್ನು ತಡೆಯುವುದು ಕ್ಯಾನ್ಸರ್ ಸಂಶೋಧಕರ ದಶಕಗಳ ಕನಸು. ERX-11 ಎಂಬ ಹೆಸರಿನ ಈ ಹೊಸ ಜೀವಕಣವು ಪ್ರೊಟೀನ್‌ನ ಮೂಲ ಕಣವಾಗಿರುವ ಪೆಪ್ಟೈಡ್‌ನಂತೆಯೇ ಇರುತ್ತದೆ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post CWC Meet | ಕಾಂಗ್ರೆಸ್ ನಾಯಕತ್ವಕ್ಕೆ ಚುನಾವಣೆ: 23 ಹಿರಿಯ ಕಾಂಗ್ರೆಸಿಗರ ಪತ್ರ
Next post ಕಾಂಗ್ರೆಸ್ ನಾಯಕತ್ವ: ಸಿಡಬ್ಲ್ಯುಸಿ ಸಭೆ ಒಳಗೆ ಹೊರಗೆ ಬಿಸಿಬಿಸಿ ವಾಗ್ವಾದ: ಹಲವರ ರಾಜೀನಾಮೆ?

ಸುದ್ದಿ ಸಂಚಯ

ಇವುಗಳನ್ನೂ ನೋಡಿ