Read Time:8 Minute, 21 Second

ರೈತರೇಕೆ ಹೋರಾಡುತ್ತಿದ್ದಾರೆ? ಸ್ವಾರ್ಥಕ್ಕಾಗಿ ಕುಮ್ಮಕ್ಕು ನೀಡಿದ ಕಾಂಗ್ರೆಸ್ ಹುನ್ನಾರವೇನು? ಇಲ್ಲಿದೆ ನೋಡಿ ಕಂಪ್ಲೀಟ್ ವಿವರ

0 0

ರೈತರು ದೇಶಾದ್ಯಂತ ಇಂದು ಪ್ರತಿಭಟನೆಗೆ ಕರೆ ನೀಡಿ ಬಂದ್ ಆಚರಿಸಿದ್ದಾರೆ. ರೈತರ ಹೋರಾಟದಲ್ಲಿ ಎಲ್ಲೆಡೆ ಕೇಳಿಬಂದ ಏಕರೂಪದ ಘೋಷಣೆಯೆಂದರೆ, ರೈತ ವಿರೋಧಿ ಮೋದಿ ಸರ್ಕಾರಕ್ಕೆ ಧಿಕ್ಕಾರ ಎಂಬ ಕೂಗು.

ಈ ಘೋಷಣೆಯ ಬೆನ್ನು ಹತ್ತಿ ಹೋದರೆ, ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಯಾರು ಮತ್ತು ಭಾರತ ಬಂದ್ ಆಚರಿಸಿ, ರೈತರ ಕಣ್ಣಿಗೆ ಮಣ್ಣೆರಚುತ್ತಾ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದು ಯಾರು ಎಂಬುದು ಸ್ಪಷ್ಟವಾಗುತ್ತದೆ.

ಅಷ್ಟಕ್ಕೂ ರೈತರ ಹೋರಾಟಕ್ಕೆ ಕಾರಣವಾದ ಅಂಶಗಳು ಮತ್ತು ಅದಕ್ಕೆ ಸರ್ಕಾರ ಏನು ಹೇಳುತ್ತದೆ ಎಂಬುದನ್ನು ಓದಿದರೆ, ಯಾರಿಗಾದರೂ ತಿಳಿಯುತ್ತದೆ, ಇದೊಂದು ರಾಜಕೀಯ ಹೋರಾಟವಷ್ಟೇ ಮತ್ತು ರೈತರಿಗೆ ಸಿಗಬಹುದಾದ ಹೆಚ್ಚಿನ ಲಾಭವನ್ನು ತಪ್ಪಿಸುವ ಹುನ್ನಾರ ಎಂಬುದು.

ಇದನ್ನೂ ಓದಿ: Bharat Bandh: ಕೃಷಿ ಕಾಯ್ದೆ ಬಗ್ಗೆ ಕಾಂಗ್ರೆಸ್ ಬಣ್ಣ ಇಂಚಿಂಚೂ ಬಯಲು ಮಾಡಿದ ಬಿಜೆಪಿ

ಈ ಕಾನೂನಿನಲ್ಲಿ ನಿಜಕ್ಕೂ ಇರುವುದೇನು?
ದೇಶದಲ್ಲಿರುವ ರೈತರಲ್ಲಿ ಸುಮಾರು 86 ಶೇಕಡಾದಷ್ಟು ಮಂದಿ ಸಣ್ಣ ಮತ್ತು ಮಧ್ಯಮ ರೈತರು. ಅವರು ತಾವು ಬೆಳೆದ ಉತ್ಪನ್ನಗಳಿಗೆ ಹೆಚ್ಚು ಬೆಲೆ ಪಡೆಯಲು ಚೌಕಾಶಿ ಮಾಡುವ ಅಥವಾ ಉತ್ಪಾದನೆ ಹೆಚ್ಚಿಸಲು ತಮ್ಮ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುವ ಶಕ್ತಿ ಇಲ್ಲದವರು.

ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಾರುಕಟ್ಟೆ ಕುರಿತ ಕಾಯ್ದೆಯಲ್ಲಿ ಇದಕ್ಕೆ ಪರಿಹಾರವಿದೆ. ಎಪಿಎಂಸಿ ಮಂಡಿಗಳ ಹೊರಗೆ ಕೂಡ, ತಮಗೆ ಬೇಕಾದವರಿಗೆ, ಹೆಚ್ಚು ಹಣ ನೀಡುವವರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಈ ಕಾಯ್ದೆಯು ರೈತರಿಗೆ ಅನುವು ಮಾಡುತ್ತದೆ ಮತ್ತು ಅವರಿಗಿದು ಹೆಚ್ಚು ಬಲ ನೀಡಿದಂತೆ.

ತೋಟಕ್ಕೇ ಹೋಗಿ ಯಾರು ಬೇಕಿದ್ದರೂ ರೈತರಿಂದ ಉತ್ಪನ್ನಗಳನ್ನು ಖರೀದಿಸಬಹುದು.

ಇದರಿಂದೇನಾಗುತ್ತದೆಯೆಂದರೆ, ಮಂಡಿಗಳಲ್ಲಿ ತುಂಬಿಕೊಂಡಿರುವ ಕಮಿಶನ್ ಏಜೆಂಟರಿಗೆ ಹಣ ದಕ್ಕುವುದಿಲ್ಲ. ಅಂತೆಯೇ ಆಯಾ ರಾಜ್ಯ ಸರ್ಕಾರಗಳಿಗೆ ಮಂಡಿ ಶುಲ್ಕದ ರೂಪದಲ್ಲಿ ಬರುವ ಹಣವೂ ಸಿಗುವುದಿಲ್ಲ. ಎಲ್ಲ ಹಣವೂ ರೈತನಿಗೇ ದೊರೆತು, ಆತ ಸಬಲನಾಗುತ್ತಾನೆ.

ಈಗಿನ ಪ್ರತಿಭಟನೆಗೆ ಪ್ರಧಾನ ಕಾರಣವೇ ಈ ಅಂಶ. ದಲ್ಲಾಳಿಗಳಿಗೆ, ಮಧ್ಯವರ್ತಿಗಳಿಗೆ ಕಮಿಶನ್ ಸಿಗುವುದಿಲ್ಲ ಮತ್ತು ಸರ್ಕಾರಗಳಿಗೆ (ವಿಶೇಷವಾಗಿ ಕಾಂಗ್ರೆಸ್ ಆಳ್ವಿಕೆಯ ರಾಜ್ಯಗಳಿಗೆ) ಹಣ ಮಾಡಲು ಸಾಧ್ಯವಿಲ್ಲ ಎಂಬುದು ರಾಜಕೀಯ ಆತಂಕಕ್ಕೆ ಕಾರಣ. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ರೈತರನ್ನು ಬುಟ್ಟಿಗೆ ಹಾಕಿಕೊಂಡು, ಅವರ ಪರವಾಗಿರುವ ಕಾನೂನಿನ ವಿರುದ್ಧ ಅವರೇ ಹೋರಾಡುವಂತೆ ಮಾಡಿದೆ.

ಈ ಕಾಯ್ದೆ ಜಾರಿಗೆ ಬಂದರೆ, ರೈತರಿಗೆ ಸ್ಫರ್ಧಾತ್ಮಕ ದರ ಸಿಗುತ್ತದೆ ಮತ್ತು ಕೃಷಿ ಉತ್ಪನ್ನಗಳನ್ನು ಸಾಗಿಸಲು ಸಾರಿಗೆ ವೆಚ್ಚವನ್ನೂ ಕೊಡಬೇಕಾಗಿಲ್ಲ.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

ಮತ್ತೊಂದೆಡೆ, ಗುತ್ತಿಗೆ ಆಧಾರದ ಕೃಷಿ ಮೇಲಿನ ಕಾಯ್ದೆಯ ಅನುಸಾರ, ಕೃಷಿ ಉದ್ಯಮದಲ್ಲಿ ತೊಡಗಿರುವ ಕಂಪನಿಗಳೊಂದಿಗೆ ಅಥವಾ ದೊಡ್ಡ ಪ್ರಮಾಣದ ಚಿಲ್ಲರೆ ಮಾರಾಟ ಸಂಸ್ಥೆಗಳೊಂದಿಗೆ ಮೊದಲೇ ಒಪ್ಪಂದ ಮಾಡಿಕೊಂಡು, ತಮ್ಮ ಕೃಷಿಗೆ ಬೆಲೆ ನಿಗದಿಪಡಿಸಿಕೊಳ್ಳಬಹುದು.

ಮಾರುಕಟ್ಟೆಯಲ್ಲಿ ಊಹಿಸಲಾಗದ ಏರಿಳಿತಗಳಿಂದ ತತ್ತರಿಸಿ ಹೊಡೆತ ಅನುಭವಿಸುವ ಸಣ್ಣ ಮತ್ತು ಮಧ್ಯಮ ರೈತರಿಗೆ ಇದರಿಂದ ಅನುಕೂಲ. ಯಾಕೆಂದರೆ ಅವರ ಬೆಳೆಗಳಿಗೆ ಮೊದಲೇ ಬೆಲೆ ನಿಗದಿಯಾಗಿರುತ್ತದೆ.

ಮೂರನೇ ಕಾನೂನು ಬೇಳೆ ಕಾಳುಗಳು, ದ್ವಿದಳ ಧಾನ್ಯಗಳು, ಎಣ್ಣೆ ಬೀಜಗಳು, ಅಡುಗೆ ಎಣ್ಣೆ, ಈರುಳ್ಳಿ ಮತ್ತು ಆಲೂಗಡ್ಡೆ ಮುಂತಾದವುಗಳನ್ನು ಆವಶ್ಯಕ ವಸ್ತುಗಳ ಪಟ್ಟಿಯಿಂದ ಕೈಬಿಟ್ಟಿರುವುದು. ಹೀಗೆ ಮಾಡುವುದರಿಂದ, ಕೃಷಿಯಲ್ಲಿ ಖಾಸಗಿ ಮತ್ತು ವಿದೇಶೀ ನೇರ ಹೂಡಿಕೆಗೆ ಅನುಕೂಲವಾಗುತ್ತದೆ.

ರೈತರಿಗೂ ಆತಂಕವಿಲ್ಲದಿಲ್ಲ, ಆದರೆ ಏನು?
ಕನಿಷ್ಠ ಬೆಂಬಲ ಬೆಲೆ ಪದ್ಧತಿಯೇ ಅವಸಾನವಾಗುತ್ತದೆ ಎಂಬುದು ರೈತರ ಪ್ರಮುಖ ಆತಂಕ. ಖಂಡಿತಾ ಇಲ್ಲ ಎಂದು ಕೇಂದ್ರವು ಈಗಲೇ ಸ್ಪಷ್ಟಪಡಿಸಿದೆ.

ಸಮಯ ಕಳೆದಂತೆ, ದೊಡ್ಡ ಕಾರ್ಪೊರೇಟ್ ಕಂಪನಿಗಳೇ ಕೃಷಿಯ ಮೇಲೆ ಹಿಡಿತ ಸಾಧಿಸುತ್ತವೆ, ತಮ್ಮ ಬೆಳೆಗಳಿಗೆ ಕಡಿಮೆ ಬೆಲೆ ಸಿಗಬಹುದು ಎಂಬುದು ರೈತರ ಮತ್ತೊಂದು ಆತಂಕ.

ಇದನ್ನೂ ಓದಿ: Shocking | ರೈತ ಪ್ರತಿಭಟನೆಯ ನಡುವೆಯೇ ದೆಹಲಿಗೆ ಕಾಲಿಟ್ಟ ಖಲಿಸ್ತಾನ್ ಉಗ್ರರ ಸೆರೆ, ನೋಟು ರದ್ದತಿಯಿಂದ ಕಂಗೆಟ್ಟ ಉಗ್ರರಿಂದ ಡ್ರಗ್ಸ್ ದಂಧೆ ಬಯಲು

ಮಂಡಿ ವ್ಯವಸ್ಥೆಯನ್ನೂ ಮುಗಿಸಿಬಿಡಲಾಗುತ್ತದೆ ಎಂಬುದು ರೈತರ ಇನ್ನೊಂದು ಆತಂಕ. ಇದರ ಜೊತೆ ಸೇರಿಕೊಂಡಿದ್ದು ದಲ್ಲಾಳಿಗಳು. ಅವರಿಗೆ ಕಮಿಶನ್ ಸಿಗದೇ ಹೋಗುತ್ತದೆ. ಹೀಗಾಗಿ ತಮಗೆ ಸಾಲ ಕೊಡುತ್ತಿರುವ ಈ ದಲ್ಲಾಳಿಗಳಿಗೆ ಕೆಲಸವಿಲ್ಲದಂತಾದರೆ, ತಮಗೂ ತೊಂದರೆ ಎಂಬುದು ರೈತರ ಇನ್ನೊಂದು ಆತಂಕ.

ಈ ಕಾರಣಕ್ಕೆ ತಮ್ಮ ಉತ್ಪನ್ನಗಳ ಮಾರುಕಟ್ಟೆಯ ಮೇಲಿನ ನಿರ್ಬಂಧ ಸಡಿಲಿಕೆಯಾಗಿದೆ. ಅದನ್ನು ಸಡಿಲಿಸಬಾರದು, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಆಶ್ವಾಸನೆ ಬೇಕು, ದಲ್ಲಾಳಿಗಳಿಗೆ ಕೆಲಸವಿಲ್ಲದಂತೆ ಮಾಡಬಾರದು ಎಂಬುದು ಕೂಡ ಸೇರಿಕೊಂಡು, ರೈತರು, ಅವರ ಹೆಸರಿನಲ್ಲಿ ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳು ಹೋರಾಟ ನಡೆಸುತ್ತಿವೆ.

ಸರ್ಕಾರ ಏನು ಹೇಳುತ್ತಿದೆ?
ಕೃಷಿ ಕಾಯ್ದೆಯಲ್ಲಿರುವ ಈ ಅಂಶಗಳನ್ನು ಸ್ವತಃ ಕಾಂಗ್ರೆಸ್ ಪಕ್ಷವು ಚುನಾವಣೆಯ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿತ್ತು. ಆದರೆ, ಇದೀಗ ನರೇಂದ್ರ ಮೋದಿ ಸರ್ಕಾರವು ಇದನ್ನು ಜಾರಿಗೊಳಿಸಿರುವುದರಿಂದ, ವ್ಯಗ್ರಗೊಂಡು, ಅದರ ವಿರುದ್ಧವೇ ಹೋರಾಟ ನಡೆಸುತ್ತಿದೆ. ಈ ಹೋರಾಟಕ್ಕೆ ರೈತರನ್ನು ಬಳಸಿಕೊಳ್ಳುತ್ತಿದೆ ಎಂಬುದು ಕೇಂದ್ರ ಸರ್ಕಾರದ ಪ್ರಮುಖ ಆರೋಪ.

ಇದಕ್ಕೆ, ಯುಪಿಎ ಸರ್ಕಾರದ ಅವಧಿಯಲ್ಲಿ ಕೃಷಿ ಸಚಿವರಾಗಿದ್ದ ಶರದ್ ಪವಾರ್ (ಎನ್‌ಸಿಪಿ ಮುಖಂಡ) ಅವರು ಮುಖ್ಯಮಂತ್ರಿಗಳಿಗೆ ಬರೆದಿದ್ದ ಪತ್ರವನ್ನೂ ಬಿಜೆಪಿ ಈಗ ಬಯಲು ಮಾಡಿದೆ.

ಇದರ ಜೊತೆಗೆ,
ಈ ಹೊಸ ಕಾನೂನುಗಳಿಂದ, ಕೃಷಿ ಕ್ಷೇತ್ರದಲ್ಲಿ ಕೂಡ ಸುಧಾರಣೆಯಾಲಿದೆ. ಮಧ್ಯವರ್ತಿಗಳ ಹಾವಳಿ ತಡೆದು, ರೈತರು ತಮಗೆ ಬೇಕಿರುವ ದರಕ್ಕೆ ದೇಶದ ಯಾವುದೇ ಊರಿನಲ್ಲಿಯೂ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗುತ್ತದೆ ಎಂದಿದೆ ಕೇಂದ್ರ.

ಅಂದರೆ, 2020ರವರೆಗೂ ಕೃಷಿ ಉತ್ಪನ್ನಗಳ ಮೊದಲ ಮಾರಾಟವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಂಡಿಗಳಲ್ಲಿ ಮಾತ್ರವೇ ಮಾರಾಟ ಮಾಡಬಹುದಾಗಿದ್ದು, ಹೊಸ ರೈತರ ಉತ್ಪನ್ನ ವಹಿವಾಟು ಮತ್ತು ವಾಣಿಜ್ಯ (ಉತ್ತೇಜನ) ಕಾಯ್ದೆ 2020 ಅನುಸಾರ, ಎಪಿಎಂಸಿಯ ಹೊರಗಡೆಯೂ ರೈತರು ಉತ್ಪನ್ನಗಳನ್ನು ಮಾರಬಹುದು.

ಇದನ್ನು ತಿಳಿದೂ ರೈತರು, ಪ್ರತಿಭಟನೆ ಮಾಡುವುದು ಸಾಧ್ಯವೇ? ಎಂಬ ಪ್ರಶ್ನೆಗೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಉತ್ತರಿಸಬೇಕಿದೆ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post Bharat Bandh: ಕೃಷಿ ಕಾಯ್ದೆ ಬಗ್ಗೆ ಕಾಂಗ್ರೆಸ್ ಬಣ್ಣ ಇಂಚಿಂಚೂ ಬಯಲು ಮಾಡಿದ ಬಿಜೆಪಿ
Next post ಆಗ ಬೆಂಬಲ, ಈಗ ವಿರೋಧ: ಸಿದ್ದರಾಮಯ್ಯ, ಶರದ್ ಪವಾರ್ ಪತ್ರಗಳಿಂದ ಬೆತ್ತಲಾದ ಕಾಂಗ್ರೆಸ್ ಇಬ್ಬಗೆ ನೀತಿ

ಸುದ್ದಿ ಸಂಚಯ

ಇವುಗಳನ್ನೂ ನೋಡಿ