ಮುಂಬಯಿ: ಇದು ದೇಶದ ಮಾಧ್ಯಮ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಕರಾಳ ದಿನ. ಡ್ರಗ್ ಮಾಫಿಯಾ ಕುರಿತು ಎಳೆಎಳೆಯಾಗಿ ತನಿಖಾ ವರದಿಗಳ ಮೂಲಕ ಮಹಾರಾಷ್ಟ್ರದ ಶಿವಸೇನೆ-ಕಾಂಗ್ರೆಸ್ ವಿಕಾಸ್ ಅಘಾಡಿ ಸರ್ಕಾರದ ಅಕ್ರಮಗಳನ್ನು ಬಯಲಿಗೆಳೆಯುತ್ತಿದ್ದ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ. ಬಂಧಿಸಲು ಕಾರಣ, ಎರಡು ವರ್ಷಗಳ ಮುಂಬಯಿ ಪೊಲೀಸರೇ ತನಿಖೆ ನಡೆಸಿ, ಸಾಕ್ಷ್ಯವಿಲ್ಲದೆ ಕೈಬಿಟ್ಟಿದ್ದ ಪ್ರಕರಣ.
ಪೊಲೀಸರು ಬುಧವಾರ ಬೆಳಿಗ್ಗೆ ಅರ್ನಬ್ ನಿವಾಸಕ್ಕೆ ನುಗ್ಗಿ, ಅವರ ಕೂದಲು ಹಿಡಿದೆಳೆದು ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ರಿಪಬ್ಲಿಕ್ ಟಿವಿ ವರದಿ ಮಾಡಿದೆ. ಅದೇ ಪ್ರಕರಣಕ್ಕೆ ಪುನಃ ಜೀವ ನೀಡಿದೆ ಈಗ ಮಹಾರಾಷ್ಟ್ರ ಸರ್ಕಾರ.
ವಿಡಿಯೊ ಇಲ್ಲಿದೆ:
ತನಿಖಾ ವರದಿಗಳಿಂದ ಕಂಗೆಟ್ಟಿರುವ ಮುಖ್ಯಮಂತ್ರಿ ಉದ್ಧವ್ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಇದೀಗ ಪೊಲೀಸರ ಮೂಲಕ ದ್ವೇಷ ಸಾಧಿಸಲು ಹೊರಟಿದ್ದು, ಪತ್ರಿಕಾ ಸ್ವಾತಂತ್ರ್ಯ ದಮನಕ್ಕೆ ಮುಂದಾಗಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
8 ಪೊಲೀಸ್ ವಾಹನಗಳು ಹಾಗೂ ಸುಮಾರು 40-50 ಪೊಲೀಸ್ ಸಿಬ್ಬಂದಿಗಳ ಶಸ್ತ್ರಧಾರಿ ತಂಡವು ಅರ್ನಬ್ ನಿವಾಸವಿರುವ ಕಟ್ಟಡದ ಸುತ್ತ ನೆರೆದಿದ್ದು, ವರದಿಗೆ ತೆರಳಿದ್ದ ರಿಪಬ್ಲಿಕ್ ಟಿವಿಯ ಕಾರ್ಯನಿರ್ವಾಹಕ ಸಂಪಾದಕ ನಿರಂಜನ್ ನಾರಾಯಣ ಸ್ವಾಮಿ ಹಾಗೂ ಹಿರಿಯ ಸಹ-ಸಂಪಾದಕ ಸಂಜಯ್ ಪಾಠಕ್ ಅವರಿಗೆ ಪೊಲೀಸರು ತಡೆಯೊಡ್ಡಿದರು.
ಇದನ್ನೂ ಓದಿ: TRP Scam ಸಿಬಿಐಗೆ ವಹಿಸಿದ್ದು ಸುದ್ದಿಯಾಗಲಿಲ್ಲ: ಎಫ್ಐಆರ್‌ನಲ್ಲಿದ್ದುದು ರಿಪಬ್ಲಿಕ್ ಅಲ್ಲ, ಇಂಡಿಯಾ ಟುಡೇ ಹೆಸರು!
ಮುಂಬಯಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಇತ್ತೀಚೆಗೆ ಅರ್ನಬ್ ಅವರು ಮುಂಬಯಿಯ ಹವಾಲಾ ಆಪರೇಟರ್ ಎಂದು ಸುಳ್ಳು ಹೇಳಿದ್ದನ್ನು ರಿಪಬ್ಲಿಕ್ ಟಿವಿ ಸಾಕ್ಷ್ಯಾಧಾರ ಸಮೇತ ಖಂಡಿಸಿತ್ತು.
ಟಿಆರ್‌ಪಿ ಹಗರಣದ ಎಫ್ಐಆರ್‌ನಲ್ಲಿ ಇಂಡಿಯಾ ಟುಡೇ ಹೆಸರಿದ್ದರೂ, ಪರಮ್ ಬೀರ್ ಸಿಂಗ್ ಅವರು ರಿಪಬ್ಲಿಕ್ ಟಿವಿ ಹೆಸರಿದೆ ಎಂದು ಸುಳ್ಳು ಹೇಳಿದ್ದರು.
ಯಾವುದೇ ಕಾನೂನಾತ್ಮಕ ನೋಟಿಸ್ ತೋರಿಸದೆ, ತಂದೆಗೆ ಔಷಧಿ ಕೊಡುತ್ತಿದ್ದ ಅರ್ನಬ್ ಅವರನ್ನು ಎಳೆದಿದ್ದಲ್ಲದೆ, ಮಗನ ಮೇಲೂ ಹಲ್ಲೆ ನಡೆಸಿ, ಒಬ್ಬ ಕ್ರಿಮಿನಲ್‌ನಂತೆ ಅರ್ನಬ್ ಅವರನ್ನು ಬಿಂಬಿಸಿ ಎಳೆದೊಯ್ದರು ಎಂದು ರಿಪಬ್ಲಿಕ್ ಟಿವಿ ವರದಿ ಮಾಡಿದೆ.
ಅರ್ನಬ್ ಅವರನ್ನು ಬಂಧಿಸಿದ ರೀತಿಯು ಮುಂಬಯಿ ಪೊಲೀಸ್ ಹೆಸರಿಗೇ ಕಳಂಕ ತಂದಿದ್ದು, ಮಹಾರಾಷ್ಟ್ರದ ಜನತೆ ಭಯಭೀತರಾಗಿದ್ದಾರೆ. ತನಿಖೆಗೆ ಸಹಕರಿಸುವುದಾಗಿ ಹೇಳಿದರೂ ಅವರು ಹಲ್ಲೆ ನಡೆಸಿ ಎಳೆದೊಯ್ದಾಗ ಅರ್ನಬ್ ಅವರು, “ಅವರು ನನಗೆ ಥಳಿಸಿದ್ದಾರೆ, ಹಲ್ಲೆ ಮಾಡಿದ್ದಾರೆ. ಭಾರತೀಯರೇ ಸತ್ಯದ ಪರವಾಗಿರುವ ನಮಗಾಗಿ ಹೋರಾಡಿ ಅಂತ ಹೇಳಲಿಚ್ಛಿಸುತ್ತೇನೆ. ನನ್ನ ಮಗನಿಗೂ ಹೊಡೆದಿದ್ದಾರೆ” ಎಂದು ಹೇಳುತ್ತಿದ್ದರು.
ಬಂಧನದ ಕಾರಣವೇನು?
2018ರಲ್ಲಿ ಅರ್ನಬ್ ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವನ್ನು ದಾಖಲಿಸಲಾಗಿತ್ತು. ಅದನ್ನು ಮುಂಬಯಿ ಪೊಲೀಸರೇ ತನಿಖೆ ನಡೆಸಿದ್ದು, ಯಾವುದೇ ಸಾಕ್ಷ್ಯಾಧಾರವಿಲ್ಲದ ಈ ಪ್ರಕರಣವನ್ನು ಮುಂಬಯಿಯ ನ್ಯಾಯಾಲಯದಲ್ಲಿ ಮುಂಬಯಿ ಪೊಲೀಸರೇ ಮುಚ್ಚಿದ್ದರು.
ಇದೀಗ ಅತ್ಯಂತ ಬಲವಾದ ಐಪಿಸಿ ಸೆಕ್ಷನ್ 306ರ ಅಡಿ ಅರ್ನಬ್ ಮೇಲೆ ಮಹಾರಾಷ್ಟ್ರ ಸರ್ಕಾರ ಕೇಸು ಜಡಿದಿದೆ.
53 ವರ್ಷದ ಒಳಾಂಗಣ ವಿನ್ಯಾಸಕಾರ ಅನ್ವಯ್ ನಾಯ್ಕ್ ಎಂಬವರು 2018ರ ಮೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ರಿಪಬ್ಲಿಕ್ ಟಿವಿಗೆ ನೀಡಬೇಕಾಗಿದ್ದ ಬಾಕಿ ಹಣವನ್ನು ಅವರು ಪಾವತಿ ಮಾಡಿರಲಿಲ್ಲ. ಅವರ ಆತ್ಮಹತ್ಯೆಗೆ ಅರ್ನಬ್ ಕಾರಣ ಎಂದು ಪುತ್ರಿ ಅಜ್ಞಾ ನಾಯಕ್ ಆರೋಪಿಸಿ ದೂರು ದಾಖಲಿಸಿದ್ದರು.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating