ನಾಗ್ಪುರ: ನಾಯಕರು ಅಂತ ಕರೆಸಿಕೊಳ್ಳುವವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ‘ಜಾತಿ ಸಂಘಟನೆ’ ಅಂತೆಲ್ಲ ಟೀಕಿಸುತ್ತಾ ಕಾಲ ಕಳೆಯುತ್ತಿದ್ದರೆ, ಕೋವಿಡ್-19ರ ಸಂಕಷ್ಟ ಕಾಲದಲ್ಲಿ ಆರೆಸ್ಸೆಸ್ ಮಾಡುತ್ತಿರುವ ಕಾರ್ಯಗಳ ಬಗ್ಗೆ ಆಸ್ಟ್ರೇಲಿಯಾದ ಹೈಕಮಿಶನರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಸಂಕಷ್ಟ ಕಾಲದಲ್ಲಿ ಆರೆಸ್ಸೆಸ್ ಸಕ್ರಿಯವಾಗಿ ಸಮುದಾಯದ ನೆರವಿಗೆ ನಿಂತಿದೆ. ಈ ಸವಾಲಿನ ಕಾಲದಲ್ಲಿ ದೇಶದಾದ್ಯಂತ ಸಂಘವು ನಡೆಸುತ್ತಿರುವ ಸಂಕಷ್ಟ ಪರಿಹಾರ ಕಾರ್ಯಗಳ ಬಗ್ಗೆ ಆರೆಸ್ಸೆಸ್ ಸರಸಂಘಚಾಲಕ ಡಾ.ಮೋಹನ್ ಭಾಗ್ವತ್ ಅವರನ್ನು ಭೇಟಿಯಾಗಿ ತಿಳಿದುಕೊಂಡಿರುವುದಾಗಿ ಭಾರತದ ಆಸ್ಟ್ರೇಲಿಯಾ ಹೈಕಮಿಷನರ್ ಬ್ಯಾರೀ ಒಫಾರೆಲ್ ಅವರು ಟ್ವೀಟ್ ಮೂಲಕ ಶ್ಲಾಘಿಸಿದ್ದಾರೆ.
The @RSSorg has been actively supporting the community during #COVID19. I met with Sarsanghchalak Dr Mohan Bhagwat who shared the relief measures the organisation has adopted across 🇮🇳 during these challenging times. pic.twitter.com/2LhniF2ven
— Australian High Commission India (@AusHCIndia) November 15, 2020
ಭಾನುವಾರ ಮಾಡಿರುವ ಈ ಟ್ವೀಟ್‌ನಲ್ಲಿ ಅವರು ಆರೆಸ್ಸೆಸ್ ನಾಗ್ಪುರ ಕಚೇರಿಯ ಕೆಲವು ಚಿತ್ರಗಳನ್ನೂ ಪೋಸ್ಟ್ ಮಾಡಿದ್ದಾರೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating