Read Time:3 Minute, 58 Second

Ban China Items | ಭಾರತದಲ್ಲಿ 72,000 ರೂ. ದೀಪಾವಳಿ ವಹಿವಾಟು: ಚೀನಾಕ್ಕಾಗಿರುವ ನಷ್ಟವೆಷ್ಟು ಗೊತ್ತೇ?

0 0

ನವದೆಹಲಿ: ಭಾರತದ ಮನೆ ಮನೆಗೂ ನುಗ್ಗಿ, ತನ್ನ ಏನನ್ನಾದರೂ ಕಳಪೆ ಉತ್ಪನ್ನವನ್ನು ಮಾರಾಟ ಮಾಡಿ ದುಡ್ಡು ಮಾಡುತ್ತಿದ್ದ ಚೀನಾಕ್ಕೆ ಈ ದೀಪಾವಳಿಯಲ್ಲಿ ದೊಡ್ಡ ಶಾಕ್ ಆಗಿದೆ. ಮತ್ತು ಆತ್ಮನಿರ್ಭರ ಭಾರತ ಎಂಬ ಜಪ ಮಾಡುತ್ತಾ, ತಮ್ಮ ದೇಶದ ಉತ್ಪನ್ನಗಳಿಗೇ ಹೆಚ್ಚಿನ ಆದ್ಯತೆ ನೀಡುವ ಭಾರತೀಯರಿಗೆ ಭರ್ಜರಿ ಲಾಭವೂ ಆಗಿದೆ.

ಕಳಪೆ ವಸ್ತುಗಳನ್ನೆಲ್ಲ ಕಡಿಮೆ ಬೆಲೆ ಮಾರಾಟ ಮಾಡುತ್ತಾ, ಭಾರತೀಯರ ಮನಸ್ಥಿತಿಯನ್ನು ಅರಿತುಕೊಂಡು ತನ್ನ ಜೇಬು ತುಂಬಿಸಿಕೊಳ್ಳುತ್ತಿದ್ದ ಚೀನಾ ಈ ಬಾರಿ ದೀಪಾವಳಿಯಲ್ಲಿ ಲಾಭ ಮಾಡಿಕೊಳ್ಳುವಲ್ಲಿ ಎಡವಿದೆ.

ನವೆಂಬರ್ 15ರಂದು ಭಾರತೀಯ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಬಿಡುಗಡೆ ಮಾಡಿದ ವರದಿಯಲ್ಲಿ, ಈ ದೀಪಾವಳಿ ಹಬ್ಬದ ಋತುವಿನಲ್ಲಿ ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ 72 ಸಾವಿರ ಕೋಟಿ ರೂ. ಮೊತ್ತದ ವಹಿವಾಟು ನಡೆದಿದೆ.

ಗಡಿಯಲ್ಲಿ ಉದ್ಧಟತನ ತೋರುತ್ತಿರುವುದೇ ಅಲ್ಲದೆ, ಪಾಕಿಸ್ತಾನಕ್ಕೆ ಪ್ರಚೋದನೆ ನೀಡುತ್ತಾ ದುಸ್ಸಾಹಸ ಮೆರೆಯುತ್ತಿರುವ ಚೀನಾದ ವಸ್ತುಗಳನ್ನು ದೇಶದಾದ್ಯಂತ ನಿಷೇಧಿಸಬೇಕು ಎಂಬ ಕೂಗು ಹಿಂದಿನಿಂದಲೂ ಇತ್ತು.

ಈ ಕರೆಗೆ ಭಾರತೀಯ ವ್ಯಾಪಾರಿಗಳು ಉತ್ತಮವಾಗಿ ಸ್ಪಂದಿಸಿದ ಕಾರಣದಿಂದಾಗಿ, ಈ ದೀಪಾವಳಿ ಹಬ್ಬದ ಸೀಸನ್‌ನಲ್ಲಿ ಚೀನಾದ ರಫ್ತುದಾರರಿಗೆ ಏನಿಲ್ಲವೆಂದರೂ ಕನಿಷ್ಠ 40 ಸಾವಿರ ಕೋಟಿಯಾದರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಚೀನಾಕ್ಕೆ ಭಾರತ ಮತ್ತೆ ಶಾಕ್: PUBG, WeChat, Baidu ಸಹಿತ 118 ಆ್ಯಪ್ ನಿರ್ಬಂಧ (Full List)

ಪೂರ್ವ ಲಡಾಕ್‌ನ ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಭಾರತ-ಚೀನಾ ನಡುವೆ ಸಂಘರ್ಷ ಏರ್ಪಟ್ಟ ಸಂದರ್ಭದಲ್ಲಿ ಭಾರತೀಯ ವ್ಯಾಪಾರಿಗಳ ಒಕ್ಕೂಟವೇ ಚೀನಾ ವಸ್ತುಗಳನ್ನು ನಿಷೇಧಿಸುವಂತೆ ಕರೆ ಕೊಟ್ಟಿತ್ತು.

20 ನಗರಗಳಿಂದ ಬಂದಿರುವ ಮಾರಾಟದ ವರದಿಗಳನ್ನು ಆಧರಿಸಿ ಹೇಳುವುದಾದರೆ, ಈ ದೀಪಾವಳಿ ಹಬ್ಬದ ಸೀಸನ್ನಲ್ಲಿ 72,000 ಕೋಟಿ ರೂ. ವಹಿವಾಟು ನಡೆದಿದ್ದು, ಚೀನಾಕ್ಕೆ ಕನಿಷ್ಠ 40,000 ಕೋಟಿ ನಷ್ಟವಾಗಿರುವ ಸಾಧ್ಯತೆಯಿದೆ ಎಂದು ಸಿಎಐಟಿ ತಿಳಿಸಿದೆ.

ಇದನ್ನೂ ಓದಿ: ಎತ್ತರದ ಶಿಖರವೀಗ ಭಾರತದ ವಶದಲ್ಲಿ: ಚೀನಾ ಕೆರಳಿ ಕೆಂಡವಾಗಲು ಕಾರಣ ಇಲ್ಲಿದೆ

ಕ್ಷಿಪ್ರವಾಗಿ ಮಾರಾಟವಾಗುವ ಗ್ರಾಹಕ ವಸ್ತುಗಳು (ಎಫ್ಎಂಸಿಜಿ), ಇತರ ಗ್ರಾಹಕ ವಸ್ತುಗಳು, ಪಟಾಕಿ, ಆಟಿಕೆಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಅಡುಗೆಮನೆ ವಸ್ತುಗಳು, ಉಡುಗೊರೆಗಳು, ಸಿಹಿತಿಂಡಿಗಳು, ಗೃಹಾಲಂಕಾರ, ಗೃಹೋಪಯೋಗಿ ವಸ್ತುಗಳು, ಪಾತ್ರೆಗಳು, ತಿನ್ನ, ಆಭರಣ, ಪಾದರಕ್ಷೆ, ವಾಚು, ಉಡುಪುಗಳು, ಫ್ಯಾಶನ್ ಸಾಮಗ್ರಿಗಳು, ಬಟ್ಟೆ, ಜಗಮಗಿಸುವ ಬಲ್ಬ್ – ಇತ್ಯಾದಿಗಳೆಲ್ಲವನ್ನೂ ಭಾರತೀಯರು ಖರೀದಿಸುತ್ತಾರೆ.

ಇದುವರೆಗೆ ಚೀನಾದ ಐಟಂಗಳನ್ನು ಖರೀದಿಸಿ, ಚೀನಾಕ್ಕೆ ದುಡ್ಡು ಹಾಕುತ್ತಿದ್ದ ಭಾರತೀಯರು ಈ ಬಾರಿ ಬುದ್ಧಿವಂತಿಕೆ ಮೆರೆಯಲು ವ್ಯಾಪಾರಿಗಳ ಒಕ್ಕೂಟವು ನೆರವಾಗಿತ್ತು.

ಈ ಬಾರಿಯ ದೀಪಾವಳಿ ವಹಿವಾಟು ಗಮನಿಸಿದರೆ, ಉತ್ತಮ ಭವಿಷ್ಯಕ್ಕೆ ಇದು ಪೂರಕವಾಗಿದೆ ಎಂದು ವ್ಯಾಪಾರಿಗಳ ಒಕ್ಕೂಟ ಹೇಳಿದೆ.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post Narendra Modi Cabinet: ಕೇಂದ್ರದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ, ಸುಶೀಲ್ ಮೋದಿಗೆ ಮಣೆ ಸಾಧ್ಯತೆ
Next post ಕೋವಿಡ್ ಸಂಕಷ್ಟ ಕಾಲದಲ್ಲಿ ಆರೆಸ್ಸೆಸ್ ಸೇವಾ ಚಟುವಟಿಕೆಗೆ ಆಸ್ಟ್ರೇಲಿಯಾ ಮೆಚ್ಚುಗೆ

ಸುದ್ದಿ ಸಂಚಯ

ಇವುಗಳನ್ನೂ ನೋಡಿ