Read Time:3 Minute, 42 Second

Right To Education: ಶಾಲೆಗಳಿಲ್ಲದೆ ಮಕ್ಕಳ ಹಕ್ಕುಗಳ ಚ್ಯುತಿಯಾಗಿದೆಯೇ?

0 0

ನವದೆಹಲಿ: ಕೋವಿಡ್-19 ಜಾಗತಿಕ ಪಿಡುಗಿನಿಂದಾಗಿ ಮನೆಯಲ್ಲೇ ಕುಳಿತಿರಬೇಕಾದ ಮಕ್ಕಳು ಶಿಕ್ಷಣವೆಂಬ ಮೂಲಭೂತ ಹಕ್ಕನ್ನು ಕಳೆದುಕೊಂಡಿದ್ದಾರೆಯೇ?

ಕೋವಿಡ್ ಸಮಯದಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ನಡೆಸಬಹುದಾದ JEE, NEET ಪರೀಕ್ಷೆಗಳಿಗೇ ತಕರಾರು ಎಬ್ಬಿಸಿ, ಯವಜನರ ಆಶೋತ್ತರಗಳಿಗೆ ಕಡಿವಾಣ ಹಾಕುವವರಿರುವ ನಾಡಿನಲ್ಲಿ, ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸುವವರೂ ಇದ್ದಾರೆ ಎಂಬುದಕ್ಕೆ ಸಾಕ್ಷಿ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ.

ಶಾಲೆಗಳನ್ನು ಮುಚ್ಚಿರುವುದರಿಂದಾಗಿ ಮಕ್ಕಳು ಶಿಕ್ಷಣದ ಮೂಲಭೂತ ಹಕ್ಕು ಕಳೆದುಕೊಂಡಿದ್ದಾರೆ ಎಂದು ಈ ಅರ್ಜಿಯಲ್ಲಿ ಹೇಳಲಾಗಿದ್ದು, ಈ ಕುರಿತಾಗಿ ಸುಪ್ರೀಂ ಕೋರ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿದೆ.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy.

ಇನ್ನೂ ದೇಶದಲ್ಲಿ ಬಡವ-ಶ್ರೀಮಂತರ ಮಧ್ಯೆ ದೊಡ್ಡ ಕಂದಕವೇ ಇರುವಾಗ, ಮೊಬೈಲ್, ಲ್ಯಾಪ್‌ಟಾಪ್ ಇತ್ಯಾದಿಗಳ ಮೂಲಕ ನಡೆಯಬಹುದಾಗಿರುವ ಆನ್‌ಲೈನ್ ತರಗತಿಗಳಿಂದ ಎಲ್ಲ ಮಕ್ಕಳಿಗೆ ಡಿಜಿಟಲ್ ಭಾಗ್ಯ ಜೊತೆಗೆ ಸಂಪರ್ಕ ವ್ಯವಸ್ಥೆ ದೊರೆಯುವ ಸಾಧ್ಯತೆಗಳಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಈ ಮಧ್ಯೆ, ಕೋವಿಡ್ ಲಾಕ್‌ಡೌನ್‌ನಿಂದಾಗಿ ಭಾರತದಲ್ಲಿ ಸುಮಾರು 15 ಲಕ್ಷ ಶಾಲೆಗಳು ಮುಚ್ಚಿದ್ದು, 28.60 ಕೋಟಿ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ. ಇದರಲ್ಲಿ ಶೇ.49 ಪಾಲು ಬಾಲಕಿಯರದು. ಈಗಾಗಲೇ ಶಾಲೆಯಿಂದ ಹೊರಗುಳಿದಿರುವ 60 ಲಕ್ಷ ಮಂದಿಯೊಂದಿಗೆ ಈ ಸಂಖ್ಯೆಯೂ ಹೊಸದಾಗಿ ಸೇರ್ಪಡೆಯಾಗಿದೆ ಎಂದು ಯುನಿಸೆಫ್ ಗುರುವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಿದೆ.

ಆನ್‌ಲೈನ್ ಶಿಕ್ಷಣ ಪಡೆಯಬೇಕಿದ್ದರೆ ಮನೆಯಲ್ಲಿ ಇಂಟರ್ನೆಟ್ ಸಂಪರ್ಕ ಬೇಕು. ಭಾರತದಲ್ಲಿ ಶೇ.24ರಷ್ಚು ಮನೆಗಳಿಗೆ ಮಾತ್ರ ಈ ಸಂಪರ್ಕವಿದ್ದು, ಗ್ರಾಮಾಂತರ-ನಗರ ಪ್ರದೇಶಗಳು ಭೇದ, ಲಿಂಗ ಭೇದ ಕೂಡ ಸಮಸ್ಯೆಗೆ ಕಾರಣವಾಗಿದೆ ಎಂದಿದೆ ಈ ವರದಿ.

ನಿಜವಾಗಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಮಕ್ಕಳಿಗೆ ಕಲಿಕೆಯ ಹೊಸ ರೂಪಕ್ಕೆ ಒಗ್ಗಿಕೊಳ್ಳಲು ಸಮಸ್ಯೆಯಿದೆ. ಅಲ್ಲದೆ, ಮನೆಕೆಲಸದ ಅನಿವಾರ್ಯತೆ ಇತ್ಯಾದಿಗಳಿಂದಾಗಿ ಮನೆಯಿಂದಲೇ ತರಗತಿಗೆ ಹಾಜರಾಗುವುದಕ್ಕೂ ಕಷ್ಟವಾಗಬಹುದು. ಕಲಿಕೆಗೆ ಪೂರಕ ವಾತಾವರಣವೂ ಕೆಲವು ಕುಗ್ರಾಮಗಳಲ್ಲಿರುವುದಿಲ್ಲ. ಜೊತೆಗೆ ತಂತ್ರಜ್ಞಾನದ ಅರಿವು ಇರುವ ಸಾಧ್ಯತೆಗಳೂ ಕಡಿಮೆ. ಹೀಗಿರುವಾಗ ಕಲಿಕೆ ತೊಡಕಿರುವುದು ಸ್ಪಷ್ಟ.

ಲಾಕ್‌ಡೌನ್ ನಿರ್ಬಂಧಗಳು ಸಡಿಲವಾಗುತ್ತಿರುವಂತೆಯೇ, ಶಾಲೆಗಳು ಸುರಕ್ಷಿತವಾಗಿ ಪುನರಾರಂಭವಾಗುವಂತೆ ನೋಡಿಕೊಳ್ಳುವಂತೆ ಯುನಿಸೆಫ್ ಭಾರತದ ಸರ್ಕಾರಗಳಿಗೆ ಮನವಿ ಮಾಡಿಕೊಂಡಿದೆ.

ಇದೂ ಓದಿ: ಮೋದಿ ವಿರೋಧಕ್ಕಾಗಿ JEE, NEET ಗೆ ವಿರೋಧ: ಗ್ರೆಟಾ ಥುನ್‌ಬರ್ಗ್ ತಾನು ಶಾಲೆಗೆ ಮರಳಿದರೂ ಭಾರತದ ಚಿಂತೆ!

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post Google Chrome ಗೆ ಬರಲಿವೆ ಹೊಸ ವೈಶಿಷ್ಟ್ಯಗಳು: PDF ತಿದ್ದುಪಡಿ, QR ಕೋಡ್, ವೇಗದ ಟ್ಯಾಬ್
Next post ಅಂತಿಮ ಪರೀಕ್ಷೆಯಿಲ್ಲದೆ ಪದವಿ ಇಲ್ಲ: ಯುಜಿಸಿ ನಿಲುವಿಗೆ ಸುಪ್ರೀಂ ಕೋರ್ಟ್ ಮುದ್ರೆ

ಸುದ್ದಿ ಸಂಚಯ

ಇವುಗಳನ್ನೂ ನೋಡಿ