Read Time:7 Minute, 56 Second

ಕೊರೊನಾ ವೈರಸ್ ಎಂಬ ಜೈವಿಕ ಅಸ್ತ್ರ?: ಚೀನಾದ ದುಷ್ಟತನಕ್ಕೆ ಸಾಕ್ಷಿ ಸಿಕ್ತು!

0 0

ಬೀಜಿಂಗ್: ದುಷ್ಟ ಚೀನಾದ ದುಷ್ಟತನ ಮತ್ತೆ ಅನಾವರಣವಾಗಿದೆಯಾದರೂ, ನಮ್ಮದೇ ದೇಶದೊಳಗಿರುವ ಕಮ್ಯುನಿಸ್ಟ್ ಮನಸ್ಥಿತಿಯ ಮಂದಿಗೆ ಇವೆಲ್ಲ ಅರ್ಥವಾಗುವಾಗ ಭಾರತ ಸರ್ವನಾಶವಾಗಿರುತ್ತದೆ ಎಂಬ ಎಚ್ಚರಿಕೆ ಮೂಡಿಸುವ ಸುದ್ದಿಯೊಂದು ಚೀನಾದಿಂದಲೇ ಬಂದಿದೆ.

ಅಂದರೆ, ಈಗ ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾ ವೈರಸ್ಸನ್ನು ಚೀನಾವೇ ಸೃಷ್ಟಿಸಿ ಬಿಟ್ಟಿದೆಯೋ ಎಂಬ ಬಲವಾದ ಅನುಮಾನಗಳಿಗೆ ಪುಷ್ಟಿ ನೀಡುವ ಸುದ್ದಿ ಇದು.

2015ರಲ್ಲಿ ಸಾರ್ಸ್ ವೈರಸ್ ಇಡೀ ವಿಶ್ವವನ್ನೇ ಕಂಗೆಡಿಸಿದ್ದು ನೆನಪಿರಬಹುದು. ಆ ಸಂದರ್ಭದಲ್ಲಿ ಚೀನಾದ ವಿಜ್ಞಾನಿಗಳು ಮತ್ತು ಆರೋಗ್ಯ ಅಧಿಕಾರಿಗಳು ಬರೆದಿದ್ದ ದಾಖಲೆಯೊಂದು ಇದೀಗ ಬೆಳಕಿಗೆ ಬಂದಿದೆ. ”ಸಾರ್ಸ್ ಕೊರೊನಾ ವೈರಸ್ಸು ಅತ್ಯಾಧುನಿಕ ಜೈವಿಕ ಆಯುಧ” ಎಂದು ಅದರಲ್ಲಿ ಬಣ್ಣಿಸಲಾಗಿದ್ದು, ಇದನ್ನು ಕೃತಕವಾಗಿ ಮಾನವನ ರೋಗಕ್ಕೆ ಕಾರಣವಾಗಬಲ್ಲ ವೈರಸ್ ಅಂತೆಲ್ಲ ತಿರುಚಿ, ಜಾಗತಿಕ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುವ ಕುರಿತು ಈ ದಾಖಲೆಯಲ್ಲಿ ಮಾಹಿತಿ ಇತ್ತು. ಇದನ್ನು ‘ವೀಕೆಂಡ್ ಆಸ್ಟ್ರೇಲಿಯನ್’ ಇದೀಗ ವರದಿ ಮಾಡಿದೆ.

The Unnatural Origin of SARS and New Species of Man-Made Viruses as Genetic Bioweapons ಶೀರ್ಷಿಕೆಯಲ್ಲಿರುವ ಈ ದಾಖಲೆಯಲ್ಲಿ, ಮೂರನೇ ವಿಶ್ವಯುದ್ಧದಲ್ಲಿ ಜೈವಿಕ ಅಸ್ತ್ರಗಳೇ ಪ್ರಧಾನ ಪಾತ್ರ ವಹಿಸುತ್ತವೆ ಎಂದು ಹೇಳಲಾಗಿದೆ.

ಅಂದರೆ, ಚೀನಾದ ವುಹಾನ್ ಲ್ಯಾಬೊರೇಟರಿಯಿಂದ ಕೋವಿಡ್-19 ಜಾಗತಿಕ ಹೆಮ್ಮಾರಿ ಬರುವ ಐದು ವರ್ಷಗಳ ಮುನ್ನವೇ ಚೀನಾದ ಮಿಲಿಟರಿ ವಿಜ್ಞಾನಿಗಳು ಸಾರ್ಸ್ ಕೊರೊನಾ ವೈರಸ್‌ನ ಶಸ್ತ್ರೀಕರಣದ ಕುರಿತು ಚರ್ಚೆ ಮಾಡಿದ್ದರೆಂದಾಯಿತು.

ಚೀನಾದ ವುಹಾನ್‌ನಲ್ಲಿರುವ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಕೊರೊನಾ ವೈರಸ್‌ಗಳನ್ನು ಸಂಗ್ರಹಿಸಿಡುವುದಷ್ಟೇ ಅಲ್ಲದೆ, ಅವುಗಳ ವಿಭಿನ್ನ ತಳಿಗಳನ್ನೂ ಮಾಡಲಾಗುತ್ತದೆ. ಕೋವಿಡ್ ವೈರಸ್‌ಗೆ ಅತ್ಯಂತ ಸಮೀಪ ಎಂದು ಹೇಳಲಾಗುತ್ತಿರುವ ಬಾವಲಿಗಳ ವೈರಸ್ ಮೇಲೆ ವುಹಾನ್‌ನಲ್ಲಿ ಪ್ರಯೋಗ ನಡೆಸಲಾಗುತ್ತಿತ್ತು ಎಂಬುದು ಎಲ್ಲರಿಗೂ ತಿಳಿದ ವಿಚಾರ.

ಇದನ್ನೂ ಓದಿ: ಚೀನಾ ವೈರಸ್: ಈಗ ಇಂಡಿಯನ್ ವೈರಸ್ ಎನ್ನುತ್ತಾ, ಮೋದಿ, ಭಾರತದ ಹೆಸರಿಗೆ ಮಸಿ ಬಳಿಯುವ ಅಂತರರಾಷ್ಟ್ರೀಯ ಸಂಚು

ಕೋವಿಡ್ ವೈರಸ್‌ನ ವೈಜ್ಞಾನಿಕ ಹೆಸರೇ ಸಾರ್ಸ್-ಕೊವ್-2 ಎಂಬುದಾಗಿ. SARS-CoV-2 ಇದುವೇ ಬಾವಲಿಯಿಂದ ಬಂದಿದ್ದು, ಮಾನವನ ಮೇಲೂ ಪರಿಣಾಮ ಬೀರಲು ಸಶಕ್ತವಾಗಿದೆ.

ವಿಶ್ವದ ಅದೆಷ್ಟೋ ಪತ್ರಿಕೆಗಳು, ಸಂಶೋಧನಾ ವರದಿಗಳೆಲ್ಲವೂ ವುಹಾನ್ ಲ್ಯಾಬ್‌ನಿಂದಲೇ ವೈರಸ್ ಸೋರಿಕೆಯಾಗಿದೆ ಎಂದು ಹೇಳುತ್ತಿವೆ. ಆದರೂ, ಚೀನಾ ದುರುದ್ದೇಶದಿಂದ ಈ ವೈರಸ್ಸನ್ನು ತಯಾರಿಸಿದೆ ಎಂದು ಇವ್ಯಾವುವೂ ಹೇಳುತ್ತಿಲ್ಲ. ವುಹಾನ್ ಲ್ಯಾಬ್‌ನಲ್ಲಿ ಹಲವಾರು ವರ್ಷಗಳಿಂದ ಕೊರೊನಾ ವೈರಸ್ಸುಗಳ ಮೇಲೆ ಪ್ರಯೋಗ ನಡೆಯುತ್ತಿತ್ತು – ಭವಿಷ್ಯದಲ್ಲಿ ಜಾಗತಿಕ ಹೆಮ್ಮಾರಿಯಾಗಿ ಕಾಡುವ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಈ ಪ್ರಯೋಗ ನಡೆಸಲಾಗುತ್ತಿತ್ತು ಎಂಬುದಷ್ಟೇ ಈ ಪತ್ರಿಕೆಗಳ ವಾದ.

ಆದರೆ, ವುಹಾನ್‌ನಿಂದ ಈ ವೈರಸ್ ಹೊರಬಂದಿದ್ದು ಹೇಗೆ ಮತ್ತು ಯಾಕೆ ಎಂಬುದರ ಬಗ್ಗೆ ತನಿಖೆ ನಡೆಸಬೇಕೆಂಬ ಕೂಗು ಮತ್ತೊಂದೆಡೆಯಿಂದ ಕೇಳಿಬರುತ್ತಿದೆ. ಕಾರಣ? ಜಾಗತಿಕ ಹೆಮ್ಮಾರಿಯ ಕಾಟ ಈಗ ಅದರ ಮಾತೃಭೂಮಿಯಾದ ಚೀನಾದಲ್ಲಿ ಕಡಿಮೆಯಾಗಿದೆ. ಭಾರತ, ಅಮೆರಿಕದಂತಹಾ ಸಶಕ್ತ ರಾಷ್ಟ್ರಗಳ ಆರ್ಥಿಕತೆಗೆ ಧಕ್ಕೆ ತರುವಲ್ಲಿ ಯಶಸ್ವಿಯಾಗಿದೆ.

ಭಾರತದಲ್ಲಂತೂ ನರೇಂದ್ರ ಮೋದಿಯೇ ಎಲ್ಲಕ್ಕೂ ಕಾರಣ ಎಂದು ಮುಗಿಬೀಳುವುದಕ್ಕೆ ಕಮ್ಯುನಿಸ್ಟ್ ಮನಸ್ಥಿತಿಯ ಮತ್ತು ದೇಶ ವಿರೋಧಿ ಮನಸ್ಥಿತಿಯ ಮಂದಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಈ ಕಾರಣಕ್ಕಾಗಿಯೇ ನರೇಂದ್ರ ಮೋದಿ ಅವರು 140 ಕೋಟಿ ಜನಸಂಖ್ಯೆಯನ್ನು ಕೊರೊನಾ ವೈರಸ್ ಹಾವಳಿಯಿಂದ ರಕ್ಷಿಸಲು ತೆಗೆದುಕೊಂಡ ಪ್ರತಿಯೊಂದು ಕಾರ್ಯಕ್ಕೂ ತಗಾದೆ ಎತ್ತುತ್ತಿದ್ದಾರೆ.

ಇದನ್ನೂ ಓದಿ: ಸಂಕಷ್ಟ ಕಾಲದಲ್ಲಿ ಭಾರತೀಯರನ್ನು ಭ್ರಷ್ಟ ಭಾರತೀಯರೇ ಕೊಲ್ಲುತ್ತಿದ್ದಾರೆ!

ಈಗಾಗಲೇ 16 ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದೆ. ಇದು ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ದೇಶಗಳ ಒಟ್ಟು ಜನಸಂಖ್ಯೆಗೆ ಸಮ. ಇದು ದೇಶ ವಿರೋಧಿಗಳಿಗೆ ಅರ್ಥವೇ ಆಗುವುದಿಲ್ಲ. ಹೀಗಾಗಿ, ದೇಶದ ಹೆಸರಿಗೆ ಕಪ್ಪು ಮಸಿ ಬಳಿಯುವ ಕಾರ್ಯವು ನಿರಂತರವಾಗಿ ನಡೆಯುತ್ತಿದೆ. ಭಾರತವು ಸ್ಮಶಾನವಾಗಿದೆ, ಇದಕ್ಕೆ ಮೋದಿ ಕಾರಣ ಎಂದೆಲ್ಲಾ ಹುಯಿಲಿಡಲಾಗುತ್ತಿದೆ. ಅದು ಕೂಡ ಅಂತರರಾಷ್ಟ್ರೀಯ ಮಾಧ್ಯಮಗಳ ಬಳಿ ಹೋಗಿ, ಅವರಿಗೆ ಶವ ಸುಡುವ ಫೋಟೋಗಳನ್ನು, ನರಳಾಟದ ಚಿತ್ರ-ವಿಡಿಯೊಗಳನ್ನು ಕಳುಹಿಸಿ!

ವಾಸ್ತವವೆಂದರೆ, ನರೇಂದ್ರ ಮೋದಿ ಅವರು ಈ ದೇಶದಲ್ಲಿ ಕೊರೊನಾ ಅಷ್ಟೊಂದು ಬಲವಾಗಿ ಪರಿಣಾಮ ಬೀರದೇ ಇದ್ದ ಸಂದರ್ಭದಲ್ಲಿ ಲಸಿಕೆಗಳನ್ನು ಬೇರೆ ದೇಶಗಳಿಗೆ ಸಹಾಯ ರೂಪದಲ್ಲಿ ಕಳುಹಿಸಿದ್ದರು. ಇದರ ಪರಿಣಾಮ ಇಂದು 14 ರಾಷ್ಟ್ರಗಳು ಆಕ್ಸಿಜನ್ ಕೊರತೆಯಿಂದ ಬಾಧೆಗೀಡಾಗಿರುವ ಭಾರತದ ನೆರವಿಗೆ ಬಂದಿವೆ.

ಮೋದಿ ಸ್ವತಃ ಉಸ್ತುವಾರಿ ವಹಿಸಿ ಇವೆಲ್ಲವನ್ನೂ ಮಾಡಿದ್ದಾರೆ. ಇಂಥ ನಾಯಕನಿಗೆ ಬೆಂಬಲ ಕೊಡುವ ಬದಲು, ಲಾಕ್‌ಡೌನ್ ಮಾಡಿದರೂ ಮೋದಿಗೆ ಉಗಿಯುವ, ಮಾಡದೇ ಇದ್ದೂ ಬೈಯುವ ಮತ್ತು ಲಾಕ್‌ಡೌನ್ ಉಲ್ಲಂಘಿಸುವಂತೆ, ದಂಗೆ ಏಳುವಂತೆ ಪ್ರೇರಣೆ ನೀಡುವವರು ಇಂದು ವಿರೋಧ ಪಕ್ಷಗಳಲ್ಲಿ “ನಾಯಕರು” ಎಂದು ಕರೆಸಿಕೊಳ್ಳುತ್ತಿದ್ದಾರೆ. ದೇಶಕ್ಕೆ ಸಹಕಾರ ನೀಡುವುದು ಬಿಟ್ಟು, ಔಷಧಿ, ಆಕ್ಸಿಜನ್ ಕಳ್ಳ ದಾಸ್ತಾನಿಗೆ ಪ್ರೇರಣೆ ನೀಡುವ, ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಶಿಕ್ಷೆಯಾಗುವ ಬಗ್ಗೆ ಕೂಗಾಡುವ, ಎಲ್ಲದಕ್ಕೂ ಮೋದಿ ಕಾರಣ ಎಂದು ಊಳಿಡುವವರು ಹೆಚ್ಚಾಗುತ್ತಿದ್ದಾರೆ.

ಇದನ್ನೂ ಓದಿ: ಮೋದಿ ವಿರೋಧಿಗಳು ಓದಲೇಬೇಕು: 140 ಕೋಟಿ ಮಂದಿಯನ್ನು ಮೋದಿ ರಕ್ಷಿಸಿದ್ದು ಹೀಗೆ!

ಜನರು ಜವಾಬ್ದಾರಿ ಅರಿಯಬೇಕಿದೆ. ದೇಶಕ್ಕೆ ಎದುರಾದ ಕಂಟಕವನ್ನು ತಿಳಿಯಬೇಕಿದೆ. ಸರ್ಕಾರದ ಕ್ರಮಗಳಿಗೆ ಬೆಂಬಲಿಸಬೇಕಿದೆ. ವ್ಯಾಕ್ಸಿನ್ (ಲಸಿಕೆ) ತೆಗೆದುಕೊಳ್ಳಬೇಡಿ, ಅಡ್ಡ ಪರಿಣಾಮ ಇದೆ, ಹಾನಿ ಆಗುತ್ತದೆ ಎಂದೆಲ್ಲ ಅಪಪ್ರಚಾರ ಮಾಡಿ, ಜನರು ಅದನ್ನು ತೆಗೆದುಕೊಳ್ಳದಂತೆ ಭಯ ಬಿತ್ತಿ, ತಾವು ಮಾತ್ರ ರಹಸ್ಯವಾಗಿ ಲಸಿಕೆ ಹಾಕಿಕೊಂಡು ವೈರಸ್‌ನಿಂದ ರಕ್ಷಣೆ ಪಡೆಯುವ ಸೋಕಾಲ್ಡ್ ನಾಯಕರ ಬಗ್ಗೆ ಜನರು ತಿಳಿಯಬೇಕಿದೆ.

ಚೀನಾದ ಕುತಂತ್ರಕ್ಕೆ ಮತ್ತು ನಮ್ಮ ನಮ್ಮ ರಾಜಕೀಯಕ್ಕಾಗಿ ಇಡೀ ದೇಶವೇ ಬಲಿಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಸಂಕಷ್ಟ ಕಾಲದಲ್ಲಿ ಭಾರತೀಯರನ್ನು ಭ್ರಷ್ಟ ಭಾರತೀಯರೇ ಕೊಲ್ಲುತ್ತಿದ್ದಾರೆ!
Next post ಕೋವಿಡ್ ಅಪಪ್ರಚಾರ ನಿಲ್ಲಿಸಿ: ಸೋನಿಯಾಗೆ ಬಿಜೆಪಿಯ ನಡ್ಡಾ ನೇರ ತಿರುಗೇಟು

ಸುದ್ದಿ ಸಂಚಯ

ಇವುಗಳನ್ನೂ ನೋಡಿ