Read Time:3 Minute, 19 Second

Congress Toolkit: ಮೋದಿ, ಹಿಂದುತ್ವ ಹೆಸರಿಗೆ ಕಳಂಕ ತರಲು ಕಾಂಗ್ರೆಸ್ ಟೂಲ್‌ಕಿಟ್ – ಬಿಜೆಪಿ ಕೆಂಡಾಮಂಡಲ

0 0

ಐಡೆಫೀ ಹಲವಾರು ವರದಿಗಳಲ್ಲಿ ಹೇಳುತ್ತಿದ್ದಂತೆ, (ಇಲ್ಲಿ ಓದಿ) ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಕೆಡಿಸುವ ತಂತ್ರಗಾರಿಕೆಯಲ್ಲಿ ತೊಡಗಿದ್ದು, ಇದಕ್ಕಾಗಿಯೇ ಟೂಲ್ ಕಿಟ್ ಒಂದನ್ನು ಸಿದ್ಧಪಡಿಸಿದೆ. ಇದರಲ್ಲಿ, ಯಾವ ವಿಷಯದಲ್ಲಿ ನರೇಂದ್ರ ಮೋದಿ ಮೇಲೆ ಹೇಗೆ ಅಪಪ್ರಚಾರ ನಡೆಸಬೇಕೆಂಬ ಬಗ್ಗೆ ಪಟ್ಟಿಯನ್ನೇ ಮಾಡಲಾಗಿದೆ ಎಂದು ಬಿಜೆಪಿ ಮುಖಂಡರಾದ ಸಂಬಿತ್ ಪಾತ್ರಾ ಹಾಗೂ ಬಿ.ಎಲ್.ಸಂತೋಷ್ ಅವರು ದಾಖಲೆಗಳ ಸಮೇತ ಬಯಲು ಮಾಡಿದ್ದಾರೆ.

ಕಾಂಗ್ರೆಸ್‌ನ ಈ ಕುತಂತ್ರದ ವಿರುದ್ಧ ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಕೂಡ ಕಿಡಿ ಕಾರಿದ್ದಾರೆ.

ಸ್ಮೃತಿ ಇರಾನಿ ಅವರಂತೂ ರಾಹುಲ್ ಗಾಂಧಿಯನ್ನು ಹಿಗ್ಗಾ ಮುಗ್ಗಾ ಟೀಕಿಸಿದ್ದಾರೆ.

ಓಂ ಪ್ರಕಾಶ್ ಧನ್ಕರ್ ಅವರಂತೂ, ಹಿಂದುತ್ವಕ್ಕೆ ಕಳಂಕ ತರುವ ಕಾಂಗ್ರೆಸ್ ಪ್ರಯತ್ನದ ವಿರುದ್ಧ ಕಿಡಿ ಕಾರಿದ್ದಾರೆ.

ಇಡೀ ದೇಶವೇ ಸಂಕಷ್ಟದಲ್ಲಿ ಸಿಲುಕಿರುವಾಗ ಕಾಂಗ್ರೆಸ್ ಪಕ್ಷವು ಟೂಲ್ ಕಿಟ್ ತಯಾರಿಸಿ, ಫೇಕ್ ಸುದ್ದಿ ಹರಡುವ ಪ್ರಯತ್ನ ನಡೆಸುತ್ತಿದೆ ಎಂದು ಟೀಕಿಸಿದ್ದಾರೆ ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್.

ಕಾಂಗ್ರೆಸ್ ಪಕ್ಷವು ಪಾರದರ್ಶಕವಾಗಿರುವ ಪಿಎಂ ಕೇರ್ಸ್ ನಿಧಿ ಬಗ್ಗೆ ಸಂದೇಹ ವ್ಯಕ್ತಪಡಿಸಿತು, ವಿಜ್ಞಾನಿಗಳ ಸಾಧನೆಯನ್ನು ಸಂದೇಹಿಸಿತು, ಲಸಿಕೆ ತಯಾರಿಸಲು ಹಿಂಜರಿಕೆ ಸೃಷ್ಟಿ ಮಾಡಿತು, ವೆಂಟಿಲೇಟರ್ ವಿವಾದ, ಇನ್ನೂ ಏನೇನನ್ನೋ ಹುಟ್ಟು ಹಾಕಿತು. ಈ ದುಸ್ಸಾಹಸಕ್ಕೆ ಇತಿಹಾಸವೆಂದಿಗೂ ಕ್ಷಮಿಸುವುದಿಲ್ಲ ಎಂದಿದ್ದಾರೆ ಸಂತೋಷ್.

ಇದೀಗ ಬಿಜೆಪಿ ಬಯಲಿಗೆಳೆದ ಟೂಲ್ ಕಿಟ್ ಹಗರಣದ ಬಗ್ಗೆ ಕಾಂಗ್ರೆಸ್ ಕೆರಳಿ ಕೆಂಡವಾಗಿದೆ. ಇದು ಸುಳ್ಳು ಸುದ್ದಿ ಎಂದು ಹೇಳುತ್ತಾ, ಬಿಜೆಪಿ ಮುಖಂಡರ ವಿರುದ್ಧ ಕೇಸು ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಕೊರೊನಾ ಸಾವಿನ ಸಂಖ್ಯೆ ಹೆಚ್ಚಳಕ್ಕೆ ‘ಲಸಿಕೆ ಬಗ್ಗೆ ಭೀತಿ ಬಿತ್ತಿದ ಕಾಂಗ್ರೆಸ್ ಕಾರಣ’ ಅಂತ ಹೇಳಿದ್ದೇಕೆ ಬಿಜೆಪಿ?
Next post ಕೋವಿಡ್ ಲಸಿಕೆ: ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡದೆ ಭಾರತೀಯರೆಲ್ಲ ಹೆಮ್ಮೆ ಪಡಿ

ಸುದ್ದಿ ಸಂಚಯ

ಇವುಗಳನ್ನೂ ನೋಡಿ