ಮುಂಬಯಿ: ಕೋವಿಡ್-19 ಜಾಗತಿಕ ಮಹಾಮಾರಿ ವಕ್ಕರಿಸಿದಾಗಿನಿಂದ ವಂಚಕರು ಎಲ್ಲೆಲ್ಲ ದುಡ್ಡು ಮಾಡಲಾಗುತ್ತದೆ ಎಂದು ಬಾಯಿ ಬಿಟ್ಟುಕೊಂಡು ಕಾದಿರುತ್ತಾರೆ. ಈಗ ಸ್ಯಾನಿಟೈಸರ್ ಹೆಸರಿನಲ್ಲಿಯೂ ಪಾಪದ ಪ್ರಜೆಗಳಿಗೆ ಮೋಸ ಮಾಡುತ್ತಿರುವುದು ಪತ್ತೆಯಾಗಿದೆ.
ಭಾರತೀಯ ಗ್ರಾಹಕ ಮಾರ್ಗದರ್ಶನ ಸಮಾಜ (CGSI) ನಡೆಸಿರುವ ಅಧ್ಯಯನ ವರದಿಯ ಪ್ರಕಾರ, ಮಾರುಕಟ್ಟೆಯಲ್ಲಿರುವ ಶೇ.50ರಷ್ಟು ಸ್ಯಾನಿಟೈಸರ್ಗಳು ಕಲಬೆರಕೆಯಿಂದ ಕೂಡಿದ್ದು, ಶೇ.4ರಷ್ಟಂತೂ ವಿಷಕಾರಿಯಾದ ಮೀಥೈಲ್ ಆಲ್ಕೋಹಾಲ್ ಹೊಂದಿವೆ ಎಂದು ಎಚ್ಚರಿಸಿದೆ.
ದೀರ್ಘಾವಧಿಯ ಬಳಕೆಯಲ್ಲಿ ಮೀಥೈಲ್ ಆಲ್ಕೋಹಾಲ್ ಕಣ್ಣುಗಳಿಗೆ ತಗುಲಿದರೆ, ಅದು ಕಣ್ಣಿನ ನರಗಳಿಗ ಹಾನಿಯುಂಟು ಮಾಡಿ, ದೃಷ್ಟಿ ದೋಷ ಮತ್ತಿತರ ಸಮಸ್ಯೆಗಳಿಗೂ ಕಾರಣವಾಗಬಲ್ಲುದು ಎಂದು ಅದು ಎಚ್ಚರಿಸಿದೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy .
ಕಳೆದ ತಿಂಗಳು ಸುಮಾರು 120ರಷ್ಟು ಬ್ರ್ಯಾಂಡ್ಗಳ ಸ್ಯಾನಿಟೈಸರನ್ನು ಈ ಗ್ರಾಹಕ ಸ್ನೇಹಿ ಕಂಪನಿಯು ಪರೀಕ್ಷೆಗೆ ಒಳಪಡಿಸಿತ್ತು. ಅದರ ಅನುಸಾರ, ಶೇ.50ರಷ್ಟು ಮಾತ್ರವೇ ನಿರ್ದಿಷ್ಟಪಡಿಸಿದ ಗುಣಮಟ್ಟಕ್ಕೆ ಬದ್ಧವಾಗಿದ್ದವು.
ಮಿಥೆನಾಲ್ ನಿಷೇಧಿತ ವಸ್ತುವಾಗಿರುವುದರಿಂದ, ಮಿಥೆನಾಲ್ ಒಳಗೊಂಡಿರುವ ಸ್ಯಾನಿಟೈಸರ್ಗಳು ಬಳಕೆಗೆ ಅರ್ಹವಲ್ಲ ಎಂದೂ ಅದು ತಿಳಿಸಿದೆ.
ಪರೀಕ್ಷೆಗೊಳಪಡಿಸಿದ ಸ್ಯಾಂಪಲ್ಗಳಲ್ಲಿ 250 ಮಿ.ಲೀ.ಗೆ 75 ರೂ. ಇರುವ ಬ್ರ್ಯಾಂಡ್ನಲ್ಲಿ, ಆಲ್ಕೋಹಾಲ್ ಇರಲಿಲ್ಲ.
54 ವರ್ಷಗಳಷ್ಟು ಹಳೆಯ ಸಂಸ್ಥೆಯಾಗಿರುವ ಈ ಸೊಸೈಟಿಯು, ಈ ವರದಿಯನ್ನು ತಕ್ಷಣವೇ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಸಮಿತಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದೆ.
ಆನ್ಲೈನ್ ಗೋಷ್ಠಿಯಲ್ಲಿ ಸಿಜಿಎಸ್ಐ ಕಾರ್ಯದರ್ಶಿ ಡಾ.ಎಂ.ಎಸ್.ಕಾಮತ್ ಅವರು ಈ ಮಾಹಿತಿಯನ್ನು ಹೊರಗೆಡಹಿದ್ದರು.

Average Rating