ನವದೆಹಲಿ: “ನಾನೂ ತಿನ್ನುವುದಿಲ್ಲ, ನನ್ನವರೂ ತಿನ್ನಲು ಬಿಡುವುದಿಲ್ಲ” ಎಂಬ ಧ್ಯೇಯ ವಾಕ್ಯದೊಂದಿಗೇ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ನಿಸ್ವಾರ್ಥಿ ಮುಂದಾಳು ನರೇಂದ್ರ ಮೋದಿಯನ್ನು ವಿರೋಧಿಸಲೇಬೇಕೆಂದು ವಿರೋಧಿಸುತ್ತಿರುವ ಕಾಂಗ್ರೆಸ್ ಮತ್ತು ನಿಜಾರ್ಥದ ವಿರೋಧ ಪಕ್ಷಗಳ ಅಪಪ್ರಚಾರಾಂದೋಲನ ಮತ್ತೆ ಬಟಾ ಬಯಲಾಗಿದೆ.
ರೈತರಿಗೆ ಹೆಚ್ಚಿನ ಬಲ ಬರುತ್ತದೆ, ಅವರೂ ಸುಶಿಕ್ಷಿತರಾಗುತ್ತಾರೆ, ಇದರಿಂದ ತಮ್ಮವರಿಗೆ, ಮಧ್ಯವರ್ತಿಗಳಿಗೆ ಏನೂ ಸಿಗುವುದಿಲ್ಲ ಎಂಬುದರ ಜೊತೆಗೆ, ತಮ್ಮದೇ ಚುನಾವಣಾ ಪ್ರಣಾಳಿಕೆಯಲ್ಲಿದುದನ್ನು ನರೇಂದ್ರ ಮೋದಿ ಸರ್ಕಾರ ಮಾಡಿಬಿಟ್ಟಿತಲ್ಲಾ ಎಂಬ ಅಸೂಯೆ, ಆಕ್ರೋಶ, ಅಸಹಿಷ್ಣುತೆಗಳು ರಾಜ್ಯಸಭೆಯಲ್ಲಿ ಭಾನುವಾರ ಈ ವಿಧೇಯಕ ಅಂಗೀಕಾರವಾಗುವ ಸಂದರ್ಭ ಕಂಡುಬಂತು. ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಎಡಪಕ್ಷೀಯರು ಸೇರಿಕೊಂಡು ರಾಜ್ಯಸಭೆಗೆ, ಉಪಸಭಾಪತಿಗೆ ಅಗೌರವ ತೋರಿದರಲ್ಲದೆ, ಈ ಮೂಲಕ ತಮ್ಮ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಜಗಜ್ಜಾಹೀರುಪಡಿಸಿದವು. ಸದನದ ವೇದಿಕೆಯತ್ತ ಧಾವಿಸಿ, ಉಪಸಭಾಪತಿಯ ಮೈಕ್ ಕಿತ್ತುಕೊಂಡು, ರೂಲ್ ಬುಕ್ ಹರಿದೆಸೆಯಲಾಯಿತು.
2019ರಲ್ಲಿ ತನ್ನದೇ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ, ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸುತ್ತೇವೆ, ರೈತರು ನೇರವಾಗಿಯೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಂತೆ ಮಾಡುತ್ತೇವೆ ಎಂದೆಲ್ಲಾ ಬೊಗಳೆ ಬಿಟ್ಟಿದ್ದ ಕಾಂಗ್ರೆಸ್ ಪಕ್ಷವೀಗ, ರೈತರಿಗೆ ನಿಜಕ್ಕೂ ಲಾಭವಾಗುತ್ತದೆ, ತನ್ನ ಬಂಡವಾಳ ಬಯಲಾಗುತ್ತದೆ ಎಂದು ತಿಳಿದು ಅಪಪ್ರಚಾರ ಆಂದೋಲನ ನಡೆಸುತ್ತಿರುವುದನ್ನು ಸ್ವತಃ ಕಾಂಗ್ರೆಸ್ ಮುಖಂಡರಾಗಿದ್ದ, ಅದರ ಮುಖವಾಣಿಯಾಗಿದ್ದ ಸಂಜಯ್ ಝಾ ಎತ್ತಿ ತೋರಿಸಿದ್ದಾರೆ.
ನರೇಂದ್ರ ಮೋದಿ ಅವರದು ಏನಿದ್ದರೂ ದೇಶದ ಜನತೆಯ ಪರವಾಗಿ ಕೈಗೊಳ್ಳುವ ತೀರ್ಪು. ಅವರ ನಿರ್ಧಾರಗಳಿಂದ ದೇಶದ ಪ್ರಜೆಗಳಿಗೆ ಯಾವುದೇ ತೊಂದರೆಯಾಗದು ಮತ್ತು ಜನಸೇವೆಯ ನಿಜ ರೂಪವನ್ನು ಅವರು ತೋರಿಸುತ್ತಿದ್ದಾರೆ ಎಂಬುದನ್ನು ಮನಗಂಡಿರುವ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು, ರೈತರ ಏಳಿಗೆಗಾಗಿ ರೂಪಿಸಲಾಗಿದ್ದ ಎಪಿಎಂಸಿ ಕಾಯ್ದೆ ತಿದ್ದುಪಡಿ ಮತ್ತು ಕೃಷಿ ಸಂಬಂಧಿತ ಎರಡು ಹೊಸ ಕಾಯ್ದೆಗಳನ್ನು ವಿರೋಧಿಸುತ್ತಿವೆ. ಇದರಿಂದ ರೈತರಿಗೆ ಹಾನಿ ಎಂದು ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಅಪಪ್ರಚಾರ ನಡೆಸುತ್ತಿವೆ.
ಜನರು ಸುಶಿಕ್ಷಿತರಾಗುತ್ತಿದ್ದಾರೆ, ಏಳು ದಶಕಗಳ ಕಾಲ ಅಪಪ್ರಚಾರ ನಡೆಸುತ್ತಲೇ ದೇಶವಾಳುತ್ತಿದ್ದುದೆಲ್ಲವೂ ‘ಗರೀಬೀ ಹಟಾವೋ’ ಎಂಬ ಸ್ಲೋಗನ್ ಈಗಲೂ ಚಾಲ್ತಿಯಲ್ಲಿರುವುದಕ್ಕೂ ಇದೇ ಕಾರಣ ಎಂಬ ಸತ್ಯವೂ ಜನರಿಗೆ ಅರಿವಿಗೆ ಬರಲಾರಂಭಿಸಿದ್ದು, ಮೋದಿ ತರುತ್ತಿರುವ ಸುಧಾರಣಾ ಕ್ರಮಗಳನ್ನು ವಿರೋಧಿಸಲಾರಂಭಿಸಿವೆ. ಅಪಪ್ರಚಾರದಲ್ಲಿ ತೊಡಗಿವೆ ಎಂದು ಸ್ವತಃ ದೇಶದ ಪ್ರಧಾನಿಯೊಬ್ಬರು ಹೇಳಬೇಕಾದರೆ, ಮತ್ತು ರಾಜ್ಯಸಭೆಯ ಉಪಸಭಾಪತಿಯವರ ಮೇಲೆಯೇ ಹಲ್ಲೆ ನಡೆಸಲು ಹೋಗಿ, ರೂಲ್ ಬುಕ್ ಹರಿದೆಸೆದ ಕಾಂಗ್ರೆಸ್ನ ಅಸಹಿಷ್ಣುತೆ ಗುಣವೆಷ್ಟೆಂಬುದನ್ನು ಗಮನಿಸಬಹುದು.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy .
ವಾಸ್ತವವಾಗಿ, ಕೇಂದ್ರ ಸರ್ಕಾರವು ಕೃಷಿಕರಿಗೆ ಬಲ ನೀಡಲು, ರೈತಾಪಿ ವರ್ಗಕ್ಕೆ ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ಮಾಡಲು, ತಾನು ಬೆಳೆಯುವ ಬೆಳೆಗೆ ತಾನೇ ದರ ನಿಗದಿಪಡಿಸಲು, ತಮಗಿಷ್ಟ ಬಂದ ಕಡೆ ಮಾರಾಟ ಮಾಡಲು ಅನುವು ಮಾಡಿಕೊಡುವ ತಿದ್ದುಪಡಿ ವಿಧೇಯಕಗಳಿವು.
ಈ ಹೊಸ ತಿದ್ದುಪಡಿಯಿಂದ ಕನಿಷ್ಠ ಬೆಂಬಲ ಬೆಲೆಗೆ ಯಾವುದೇ ಧಕ್ಕೆ ಇಲ್ಲ, ಸರ್ಕಾರದಿಂದ ಖರೀದಿಗೂ ಯಾವುದೇ ಸಮಸ್ಯೆಯಿಲ್ಲ. ರೈತರಿಗಾಗಿಯೇ ಇರುವ ಕಾನೂನಿದು. ಅವರ ಬೆಂಬಲಕ್ಕಾಗಿ ಎಲ್ಲವನ್ನೂ ಮಾಡುತ್ತಿದ್ದೇವೆ. ಅವರ ಮುಂದಿನ ಪೀಳಿಗೆಗೂ ಉತ್ತಮ ಜೀವನ ನಡೆಸಲು ಸಾಧ್ಯವಾಗಿಸುತ್ತೇವೆ – ಇದು ಪ್ರಧಾನಿ ನರೇಂದ್ರ ಮೋದಿ ಸ್ವತಃ ನೀಡಿದ ಭರವಸೆ.
ದಶಕಗಳಿಂದಲೂ ಭಾರತೀಯ ರೈತನಿಗೆ ಸಾಕಷ್ಟು ತೊಂದರೆಗಳಿದ್ದವು (ಹಿಂದಿನ ಸರ್ಕಾರಗಳ ನೀತಿಗಳಿಂದಾಗಿ) ಮತ್ತು ಮಧ್ಯವರ್ತಿಗಳ ಹಾವಳಿಯಿಂದ. ಹೊಸ ಕಾನೂನುಗಳು ಈ ರೀತಿಯ ಸಮಸ್ಯೆಗಳಿಂದ ರೈತರನ್ನು ಮುಕ್ತರನ್ನಾಗಿಸುತ್ತವೆ. ಉತ್ಪಾದನೆ, ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ರೈತರ ಕೈಗೆ ಅತ್ಯಾಧುನಿಕ ತಂತ್ರಜ್ಞಾನ ದೊರೆಯುವಂತಾಗಬೇಕೆಂಬುದು ಸರ್ಕಾರದ ಉದ್ದೇಶ ಎಂದೂ ಸ್ವತಃ ಪ್ರಧಾನಿಯೇ ಹೇಳಬೇಕಾಯಿತು.
ತನ್ನ ಪ್ರಣಾಳಿಕೆಯಲ್ಲಿದ್ದುದನ್ನು ಮೋದಿ ಸಾಧಿಸಿಬಿಟ್ಟರಲ್ಲಾ ಎಂಬ ಮತ್ಸರದಿಂದಾಗಿಯೇ ಕಾಂಗ್ರೆಸ್ ಪಕ್ಷವು ಈ ರೀತಿಯ ದುರ್ವರ್ತನೆ, ಅಪಪ್ರಚಾರೋಂದಲನದಲ್ಲಿ ತೊಡಗುತ್ತಿದೆಯೇ?
ಕಟ್ಟಾ ಕಾಂಗ್ರೆಸಿಗನಾಗಿ, ಪಕ್ಷವನ್ನು ಪ್ರತೀ ಹಂತದಲ್ಲೂ ಬೆಂಬಲಿಸುತ್ತಾ ಬಂದಿದ್ದ ಸಂಜಯ್ ಝಾ ಏನು ಹೇಳಿದ್ದಾರೆ ನೋಡಿ:
ಸ್ವತಃ ನಿಸ್ವಾರ್ಥಿ ಜನಸೇವಕ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯೇ ಭರವಸೆ ತುಂಬ್ತಿದಾರೆ
ನಮ್ಮ ಹಣಕಾಸು ಸಚಿವರೇ ಹೇಳ್ತಿದಾರೆ, ಭರವಸೆ ನೀಡ್ತಿದಾರೆ, ಓದಿ.
ರೈತರಿಗೆ ಹೆಚ್ಚು ಶಕ್ತಿ ತುಂಬುವ, ಅವರ ಉತ್ಪನ್ನಗಳ ಮೇಲೆ ಅವರಿಗೇ ಹಿಡಿತ ಕಲ್ಪಿಸಬಲ್ಲ, ಮಧ್ಯವರ್ತಿಗಳಿಲ್ಲದೆಯೇ ತಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸಲು ಸಾಧ್ಯವಾಗುವ, ಒಂದು ಒಳ್ಳೆಯ ಯೋಜನೆಯನ್ನೂ ವಿರೋಧಿಸುತ್ತಾರೆ ಎಂದಾದರೆ, ವಿರೋಧಪಕ್ಷಗಳ ಪರಿಸ್ಥಿತಿ ಜೀವನಪೂರ್ತಿ ಅಪಪ್ರಚಾರದಲ್ಲೇ ಕಳೆಯುವಂತಾಗಲಿದೆ ಎನ್ನಬಹುದು.

Average Rating