Read Time:5 Minute, 13 Second

ರೈತ ಪ್ರತಿಭಟನೆಯ ಮತ್ತೊಂದು ಮುಖ ಬಯಲು: ವರವರ ರಾವ್ ಸಹಿತ ‘ಅರ್ಬನ್ ನಕ್ಸಲರ’ ಬಿಡುಗಡೆಯೂ ರೈತರ ಬೇಡಿಕೆಗಳಲ್ಲೊಂದು!

0 0

ನವದೆಹಲಿ: ದೇಶದಾದ್ಯಂತ ನಕ್ಸಲ್ ಚಳವಳಿಯು ಯಾವತ್ತಿಗೂ ರೈತರ ಆಂದೋಲನವಾಗಿಯೇ ನಡೆಯುತ್ತಿದೆ. ಈಗ ಆಂತರಿಕ ಭದ್ರತಾ ಕಾಯ್ದೆಯಡಿ ಬಂಧಿತರಾಗಿರುವವರನ್ನು ಬಿಡುಗಡೆ ಮಾಡಬೇಕೆಂಬುದು ನಮ್ಮ ಬೇಡಿಕೆಗಳಲ್ಲೊಂದು. ಕೃಷಿ ಕಾಯ್ದೆ ಕುರಿತಾದ ಪ್ರತಿಭಟನೆ ಹಿಂತೆಗೆತದ ನಮ್ಮ ಮನವಿ ಪತ್ರದಲ್ಲಿ ಇದೂ ಸೇರಿದೆ ಎಂದು ರೈತ ಸಂಘಟನೆಯು ಬಹಿರಂಗವಾಗಿ ಹೇಳುವ ಮೂಲಕ, ನರೇಂದ್ರ ಮೋದಿ ಸರ್ಕಾರದ ವಿರುದ್ಧ ಇವರೇಕೆ ಇಷ್ಟು ತೀವ್ರವಾಗಿ ಹೋರಾಡುತ್ತಿದ್ದಾರೆಂಬುದು ಒಂದೊಂದಾಗಿ ಬೆಳಕಿಗೆ ಬರತೊಡಗಿದೆ.

ಈ ಪ್ರತಿಭಟನೆಯನ್ನು ಖಲಿಸ್ತಾನಿ ಮೂಲಭೂತವಾದಿಗಳು ಹೇಗೆ ಹೈಜಾಕ್ ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಹೋರಾಟಗಳಲ್ಲಿ ಟುಕ್ಡೇ ಟುಕ್ಡೇ ಗ್ಯಾಂಗ್ ಕೂಡ ಸಕ್ರಿಯವಾಗಿ ಪಾಲ್ಗೊಂಡಿರುವ ದೃಶ್ಯಾವಳಿಗಳೂ ಸಿಗುತ್ತಿವೆ. ಇದೀಗ ರೈತ ಹೋರಾಟದ ಹಿಂದಿನ ಅಸಲಿಯತ್ತು ಒಂದೊಂದಾಗಿ ಬೆಳಕಿಗೆ ಬರುತ್ತಿದೆ.

ನಗರದ ನಕ್ಸಲರು (ಅರ್ಬನ್ ನಕ್ಸಲ್ಸ್) ಎಂದು ಕರೆಯಲಾಗುತ್ತಿರುವ ನಕ್ಸಲ್‌ವಾದಿಗಳಾದ ವರವರ ರಾವ್, ಸುಧಾ ಭಾರದ್ವಾಜ್, ಗೌತಮ್ ನವಲಖಾ, ವೆರ್ನಾನ್ ಗೊನ್ಸಾಲ್ವಿಸ್ ಮತ್ತು ಅರುಣ್ ಫೆರೇರಾ ಮುಂತಾದ 20ಕ್ಕೂ ಹೆಚ್ಚು ಮಂದಿಯನ್ನು ಕಠಿಣವಾದ ಕಾನೂನು ವಿರೋಧಿ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿಸಲಾಗಿದೆ. ಅವರನ್ನು ಬಿಡುಗಡೆ ಮಾಡಬೇಕೆಂಬುದು ಇದೇ ರೈತರ ಬೇಡಿಕೆಗಳಲ್ಲೊಂದಾಗಿರುವುದು ಆಘಾತಕ್ಕೆ ಕಾರಣವಾಗಿದೆ.

ತಮ್ಮದು ರಾಜಕೀಯೇತರ ಹೋರಾಟ ಎಂದು ಹೇಳಿಕೊಳ್ಳುತ್ತಿದ್ದ ರೈತರಿಗೆ ಕಾಂಗ್ರೆಸ್ ಕೂಡ, ನರೇಂದ್ರ ಮೋದಿ ಸರ್ಕಾರದ ವಿರುದ್ಧ ಬೆಂಬಲ ನೀಡುತ್ತಿದೆ. ತಮ್ಮ ಪ್ರಣಾಳಿಕೆಯಲ್ಲಿದ್ದ ರೈತರ ಪರವಾಗಿರುವ ಕಾನೂನುಗಳನ್ನು ಮೋದಿ ಜಾರಿಗೊಳಿಸಿದ್ದಾರಲ್ಲ ಎಂಬ ಏಕೈಕ ಕಾರಣಕ್ಕೆ ಕಾಂಗ್ರೆಸ್ ಈಗ ತಾನೇ ಬೆಂಬಲಿಸಿದ್ದ ಕಾನೂನಿನ ವಿರುದ್ಧ ಹೋರಾಡುತ್ತಾ ರೈತರ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನದಲ್ಲಿದೆ ಎಂದು ಈಗಾಗಲೇ ಬಿಜೆಪಿ ಮಂದಿ ಆರೋಪಿಸಿದ್ದಾರೆ.

ರೈತರ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವ ಪಂಜಾಬಿನ ಭಾರತೀಯ ಕಿಸಾನ್ ಯೂನಿಯನ್ (ಉಗ್ರಹಣ್) ಈಗ ಬೇಡಿಕೆ ಮುಂದಿಟ್ಟಿದ್ದು, ಈ ಬುದ್ಧಿಜೀವಿಗಳು ಮತ್ತು ‘ಮಾನವ ಹಕ್ಕು’ ಹೋರಾಟಗಾರರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಈ ಕೈದಿಗಳ ಬಿಡುಗಡೆಗಾಗಿ ನಮ್ಮ ಚಳವಳಿಯ ಲಾಗಾಯ್ತಿನಿಂದಲೂ ನಾವು ಆಗ್ರಹಿಸುತ್ತಾ ಬಂದಿದ್ದೇವೆ. ಮೋದಿ ಸರ್ಕಾರವು ಫ್ಯಾಸಿಸ್ಟ್ ಅಜೆಂಡಾ ಹೊಂದಿದೆ. ಅದಾನಿ, ಅಂಬಾನಿಯನ್ನು ಬೆಂಬಲಿಸುತ್ತಿರುವ ಈ ಸರ್ಕಾರ, ಮತ್ತೊಂದೆಡೆ ಬುದ್ಧಿಜೀವಿಗಳನ್ನು, ಹೋರಾಟಗಾರರನ್ನು ಜೈಲಿಗಟ್ಟುತ್ತಿದೆ. ಭೀಮಾ ಕೋರೇಗಾಂವ್ ಹತ್ಯಾ ಪ್ರಕರಣ ಮತ್ತು ದೆಹಲಿ ದಂಗೆಗಳಿಗೆ ಸಂಬಂಧಿಸಿದಂತೆ ಎರಡು ಡಜನ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಬಿಕೆಯು ಉಪಾಧ್ಯಕ್ಷ ಝಂಡಾ ಸಿಂಗ್ ಜಟೂಕೆ ಹೇಳಿದ್ದಾರೆ.

ಲಾಕಪ್‌ನಲ್ಲಿರುವ ಇವರ ಬಿಡುಗಡೆಯಾಗಬೇಕೆಂಬುದು ರೈತ ಹೋರಾಟದ ಮೊದಲ ದಿನದಿಂದಲೇ ನಮ್ಮ ಆಗ್ರಹವಾಗಿತ್ತು. ರೈತ ಚಳುವಳಿಯನ್ನು ಅರ್ಬನ್ ನಕ್ಸಲರು, ಕಾಂಗ್ರೆಸ್ ಮತ್ತು ಖಲಿಸ್ತಾನ್‌ವಾದಿಗಳೇ ಪ್ರಚೋದಿಸುತ್ತಿದ್ದಾರೆಂದು ಸರ್ಕಾರ ಹೇಳುತ್ತಿದೆ. ಪಂಜಾಬ್‌ನಲ್ಲಿ ಜನರು ಸರ್ಕಾರಿ ಭಯೋತ್ಪಾದನೆ ಮತ್ತು ಭಯೋತ್ಪಾದಕರ ಮಧ್ಯೆ ಸ್ಯಾಂಡ್‌ವಿಚ್ ಆಗಿದ್ದಾರೆ. ನಕ್ಸಲಿಸಂನಿಂದಾಗಿ ಬುಡಕಟ್ಟು ಜನರಿಗೆ ತಮ್ಮ ಹಕ್ಕುಗಳನ್ನು ಪಡೆಯುವುದು ಸಾಧ್ಯವಾಗಿದೆ ಎಂದು ಬಿಕೆಯು ಸಂಘಟನೆಯ ವಕೀಲ ಎನ್.ಕೆ.ಜೀತ್ ಹೇಳಿದ್ದಾರೆ.

ಅವರ ಐಡಿಯಾಲಜಿ ಬೆಂಬಲಿಸುವುದಿಲ್ಲ. ನಕ್ಸಲ್ ಆಂದೋಲನವು ಯಾವತ್ತಿಗೂ ದೇಶದ ರೈತರ ಆಂದೋಲನದ ಭಾಗವಾಗಿದೆ. ಇದರಲ್ಲಿ ಖಲಿಸ್ತಾನಿಗಳು ಇಲ್ಲ. ಈ ಆರೋಪಿಗಳ ಬಿಡುಗಡೆಯಾಗಬೇಕೆಂಬುದು ಬಿಕೆಯು ಆಗ್ರಹವಾಗಿದೆ. ರೈತರ ಕಾನೂನುಗಳಿಗೆ ಸಂಬಂಧಿಸಿದಂತೆ ನಾವು ಸರ್ಕಾರಕ್ಕೆ ಸಲ್ಲಿಸಿರುವ ಮನವಿ ಪತ್ರದಲ್ಲಿಯೂ ಈ ಬೇಡಿಕೆ ಮುಂದಿಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy
Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಆಗ ಬೆಂಬಲ, ಈಗ ವಿರೋಧ: ಸಿದ್ದರಾಮಯ್ಯ, ಶರದ್ ಪವಾರ್ ಪತ್ರಗಳಿಂದ ಬೆತ್ತಲಾದ ಕಾಂಗ್ರೆಸ್ ಇಬ್ಬಗೆ ನೀತಿ
Next post ರೈತರ ಹಿತಕ್ಕಾಗಿರುವ ಕಾಯ್ದೆ ವಿರುದ್ಧ ಹೋರಾಟದ ಹಿಂದೆ ಪಾಕ್, ಚೀನಾ ಕೈವಾಡ ಎಂದ ಕೇಂದ್ರ ಸಚಿವರಿಗೆ ಮಹಾರಾಷ್ಟ್ರ ಸಚಿವರ ಧಮಕಿ!

ಸುದ್ದಿ ಸಂಚಯ

ಇವುಗಳನ್ನೂ ನೋಡಿ