Read Time:9 Minute, 20 Second

Farmers Protest ನಡುವೆ ಸಮಾಜಘಾತುಕ ಶಕ್ತಿಗಳು: ಮೋದಿ ಹತ್ಯೆ ಬೆದರಿಕೆ ಘೋಷಣೆ – ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

0 0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಟಾರ್ಗೆಟ್ ಮಾಡಿ ಕಾಂಗ್ರೆಸ್ ನೇತೃತ್ವದ ರೈತರು ಪಂಜಾಬ್, ಹರ್ಯಾಣ, ದೆಹಲಿಗಳಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ನಡೆಸುತ್ತಿರುವ ಕೆಲವೊಂದು ಕೆಲಸಗಳು ಈಗ ಆತಂಕಕ್ಕೆ ಕಾರಣವಾಗಿದೆ. ಈ ರೀತಿಯ ರಾಜಕೀಯ ಆಟವು ಮುಗ್ಧ ರೈತರ ಹೆಸರಿಗೂ ಮಸಿ ಬಳಿಯುವ ಪ್ರಯತ್ನವೆಂದು ವಿಶ್ಲೇಷಿಸಲಾಗುತ್ತಿದೆ.

ಮಧ್ಯವರ್ತಿಗಳ ಕಾಟವಿಲ್ಲದೆ ರೈತರು ತಾವು ಬೆಳೆದ ಉತ್ಪನ್ನಗಳನ್ನು ನೇರವಾಗಿ ಮಾರುಕಟ್ಟೆಗೆ ಒಯ್ದರೆ ಅವರಿಗೇ ಲಾಭ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕೃಷಿ ಕಾನೂನಿನಲ್ಲಿ ತಿದ್ದುಪಡಿ ತಂದಿದ್ದು, ಇದನ್ನು ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳು ವಿರೋಧಿಸಿ, ರೈತರ ಪ್ರತಿಭಟನೆಗೆ ಸಾಥ್ ನೀಡಿವೆ.

ಪ್ರತಿಭಟನಾ ನಿರತ ರೈತರ ವೇಷದಲ್ಲಿ ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿಯನ್ನೇ ಹತ್ಯೆ ಮಾಡಿದ್ದ ಖಲಿಸ್ತಾನ್ ಸಂಘಟನೆಯ ಉಗ್ರರೂ ಸೇರಿಕೊಂಡಿರುವ ಶಂಕೆಗಳೂ ವ್ಯಕ್ತವಾಗಿದ್ದು, ಖಲಿಸ್ತಾನ್ ಸಂಘಟನೆಯ ಮುಖಂಡರೂ ರೈತರ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆಂಬ ಮಾಹಿತಿಯನ್ನು ಬಿಜೆಪಿ ಪತ್ತೆ ಹಚ್ಚಿದೆ. ಖಲಿಸ್ತಾನ್ ಜಿಂದಾಬಾದ್ ಘೋಷಣೆಗಳು, ಇಂದಿರಾ ಗತಿಯೇ ಮೋದಿಗೂ ಆಗಲಿದೆ ಎಂಬ ಬೆದರಿಕೆಯ ಮಾತುಗಳೂ ಈ ರೈತ ಪ್ರತಿಭಟನಾಕಾರರ ನಡುವಿನಿಂದ ಕೇಳಿಬಂದಿದೆ.

ಪ್ರಧಾನಿ ನರೇಂದ್ರ ಮೋದಿಯ ಹತ್ಯೆಯ ಕುರಿತಾಗಿನ ಘೋಷಣೆಗಳೂ ಕೇಳಿಬಂದಿದ್ದು, ನರೇಂದ್ರ ಮೋದಿಯ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ, ಈಗ ಮೋದಿ ವಿರೋಧಕ್ಕಾಗಿ ಕಾಂಗ್ರೆಸ್ ಪಕ್ಷವು ಬೆಂಕಿಯೊಂದಿಗೆ ಆಟವಾಡುತ್ತಿದೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.

ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾನೂನುಗಳನ್ನು ವಿರೋಧಿಸುವ ನೆಪದಲ್ಲಿ ಸಾವಿರಾರು ರೈತರು ಪ್ರತಿಭಟನೆಯ ಕಿಚ್ಚು ತೀವ್ರಗೊಳಿಸಿದ್ದಾರೆ.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

ಈ ಹಿಂದೆಯೂ, ದೇಶದ ಮುಸಲ್ಮಾನರಿಗೆ ಯಾವುದೇ ಸಮಸ್ಯೆಯಾಗದಿದ್ದರೂ ಸುಖಾಸುಮ್ಮನೆ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿಸುವಂತೆ ಮುಸ್ಲಿಮರನ್ನು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ನರೇಂದ್ರ ಮೋದಿ ವಿರುದ್ಧ ಎತ್ತಿ ಕಟ್ಟಿದ್ದವು. ಈ ಬಗ್ಗೆ ದೆಹಲಿಯ ಶಾಹೀನ್‌ಬಾಗ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕೂಡ ಸಮಾಜಘಾತುಕ ಶಕ್ತಿಗಳಾದ ಪಿಎಫ್ಐ ಸಹಿತ ಹಲವು ಸಂಘಟನೆಗಳ ಪ್ರಚೋದನೆ, ಕೈವಾಡ ಬಯಲಾಗಿತ್ತು.

ತಮ್ಮದೇ ನಾಯಕಿ ಇಂದಿರಾ ಗಾಂಧಿಯನ್ನು ಹತ್ಯೆಗೈದಿದ್ದ ಖಲಿಸ್ತಾನಿ ಉಗ್ರರ ಜೊತೆಗೆ ಈಗ ಕೈಜೋಡಿಸಿ, ನರೇಂದ್ರ ಮೋದಿ ವಿರುದ್ಧ ರೈತರನ್ನು ಎತ್ತಿಕಟ್ಟುತ್ತಿರುವ ಕಾಂಗ್ರೆಸ್ ವಿರುದ್ಧ ಜಾಗೃತ ಪ್ರಜೆಗಳು ಅಂತರಜಾಲದಲ್ಲಿ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಪಂಜಾಬ್ ಉಗ್ರವಾದದ ಬೇರು ಆಗಿರುವ ಖಲಿಸ್ತಾನ್ ಸಂಘಟನೆಯ ಪರವಾಗಿರುವ ವ್ಯಕ್ತಿಯೂ ರೈತರ ಹೆಸರಿನಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದಾನೆ. ದೆಹಲಿಯ ಗೋಡೆಗಳಲ್ಲಿ ಖಲಿಸ್ತಾನ್ ಜಿಂದಾಬಾದ್ ಎಂಬ ಬರಹಗಳು ಕಂಡುಬಂದಿವೆ. ಇದರ ನಡುವೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಯೋಗ ಮಾಡಬೇಕಾಗಿಬಂದಾಗ, ‘ರೈತರು’ ಎಂದು ಕರೆಸಿಕೊಳ್ಳುತ್ತಿರುವವರು ಪ್ರತಿಭಟನೆಗೆ ತಂದಿದ್ದ ಟ್ರ್ಯಾಕ್ಟರನ್ನು ಪೊಲೀಸರ ಮೇಲೆಯೇ ಚಲಾಯಿಸಿ ಕೊಲ್ಲಲು ಪ್ರಯತ್ನಿಸುವ ವಿಡಿಯೊಗಳು ಕೂಡ ಈಗ ಅಂತರಜಾಲದಲ್ಲಿ ಭಾರಿ ಸದ್ದು ಮಾಡುತ್ತಿವೆ.

ಇದೆಂಥಾ ಪ್ರತಿಭಟನೆ? ಪಂಜಾಬ್‌ನ ಕಾಂಗ್ರೆಸ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಬೆಂಕಿಯೊಂದಿಗೆ ಆಟವಾಡುತ್ತಿದ್ದಾರೆಯೇ? ದುಷ್ಟ ಶಕ್ತಿಗಳೊಂದಿಗೆ ಕೈಜೋಡಿಸಿದರೆ ಆಗುವ ಅಪಾಯಗಳ ಬಗ್ಗೆ ಕಾಂಗ್ರೆಸ್ ಯಾವಾಗ ಅರ್ಥ ಮಾಡಿಕೊಳ್ಳುತ್ತದೆ ಎಂದು ಬಿಜೆಪಿ ಮುಖಂಡ ಅಮಿತ್ ಮಾಳವೀಯ ಸಾಕ್ಷ್ಯಾಧಾರ ಸಮೇತ ವಿಡಿಯೋ ಹಾಕಿ, ಪ್ರಶ್ನಿಸಿದ್ದಾರೆ.

ಪ್ರಮುಖ ಕಾರಣವೆಂದರೆ, ಪ್ರತಿಭಟನಾ ನಿರತರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದ ಫೋಟೋವನ್ನು ಕಾಂಗ್ರೆಸ್ ನೇತಾರ, ‘ಭವಿಷ್ಯದ ಪ್ರಧಾನಿ’ ರಾಹುಲ್ ಗಾಂಧಿಯೂ ಶೇರ್ ಮಾಡಿ, ಮೋದಿ ಸರ್ಕಾರ ರೈತರಿಗೆ ಹೊಡೆಯುತ್ತಿದೆ ಎಂದು ಸುಳ್ಳು ಹರಡಿದ್ದರು. ವಾಸ್ತವವಾಗಿ ಪೊಲೀಸರು ಎಂದಿನಂತೆ ಗುಂಪು ಚದುರಿಸಲು ಬೀಸುವಂತೆ ಲಾಠಿಯನ್ನು ಬೀಸಿದ್ದರಷ್ಟೇ. ಈ ರೀತಿಯ ಸುಳ್ಳುಗಳಿಂದಲೇ ಕಾಂಗ್ರೆಸ್ ಪಕ್ಷವು ರಾಜಕೀಯ ಮಾಡುತ್ತಿರುವುದು, ಎಲ್ಲೆಡೆ ಆಗುತ್ತಿರುವ ಸೋಲಿನ ಹತಾಶೆಯ ಪರಿಣಾಮ ಎಂದು ನೆಟ್ಟಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್ 3ರಂದು ನಡೆಯುವ ಮಾತುಕತೆಯಲ್ಲಿ ತಮ್ಮ ಸಮಸ್ಯೆಗೆ ಪರಿಹಾರ ದೊರೆಯದೇ ಇದ್ದರೆ, ಇಂದಿರಾ ಗಾಂಧಿಯನ್ನು ಹತ್ಯೆಯನ್ನು ಉಲ್ಲೇಖಿಸುತ್ತಾ, ಪ್ರಧಾನಿ ನರೇಂದ್ರ ಮೋದಿಗೆ ಬೆದರಿಕೆಯೊಡ್ಡಿರುವ ವಿಡಿಯೊ ಸಾಕಷ್ಟು ಆತಂಕ ಮೂಡಿಸಿದೆ. ಕಾಂಗ್ರೆಸ್ ಪಕ್ಷವು ತನ್ನ ರಾಜಕೀಯಕ್ಕಾಗಿ ಈ ಪ್ರತಿಭಟನಾಕಾರರೊಂದಿಗೆ ಕೈಜೋಡಿಸುತ್ತಿರುವುದು ಕೂಡ ನೆಟ್ಟಿಗರನ್ನು ಕೆರಳಿಸಿದೆ.

ಕಾಂಗ್ರೆಸ್ ನೇತೃತ್ವದ ರೈತರ ಚಳುವಳಿಯನ್ನು ಉಗ್ರಗಾಮಿಗಳು, ಎಡಪಂಥೀಯರು, ಖಲಿಸ್ತಾನಿಗಳು, ಇಸ್ಲಾಂವಾದಿಗಳು ರೈಜಾಕ್ ಮಾಡಲು ಯತ್ನಿಸುತ್ತಿರುವ ಬಗ್ಗೆಯೂ ಸಾಕಷ್ಟು ಆತಂಕಗಳು ವ್ಯಕ್ತವಾಗುತ್ತಿವೆ.

ಈ ಮಧ್ಯೆ, ರಾಜಧಾನಿ ದೆಹಲಿಗೆ ಮುತ್ತಿಗೆ ಹಾಕುವ ರೈತರ ಪ್ರಯತ್ನಗಳ ನಡುವೆ, ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರೂ ಈ ಪ್ರತಿಭಟನೆಯ ಒಳಸಂಚಿನ ಬಗ್ಗೆ ಶನಿವಾರ ಆತಂಕ ವ್ಯಕ್ತಪಡಿಸಿದ್ದಾರೆ. ಈಗಲೂ ಪ್ರತಿಭಟನೆಯ ಹೆಸರಿನಲ್ಲಿ ರೈತರು ಜಮಾವಣೆಗೊಂಡಿದ್ದು, ಅವರ ಮಧ್ಯೆ ಸಮಾಜಘಾತುಕ ಶಕ್ತಿಗಳು ನುಸುಳಿರುವ ಬಗ್ಗೆ ಮಾಹಿತಿ ಇರುವುದಾಗಿ ಹರ್ಯಾಣ ಮುಖ್ಯಮಂತ್ರಿ ಖಟ್ಟರ್ ಹೇಳಿದ್ದಾರೆ.

ಈ ಕುರಿತು ನಮಗೆ ಮಾಹಿತಿ ಲಭ್ಯವಾಗಿದೆ. ಪ್ರಬಲ ಸಾಕ್ಷ್ಯಾಧಾರ ಸಿಕ್ಕ ಬಳಿಕ ನಾವಿದನ್ನು ಬಹಿರಂಗಪಡಿಸುತ್ತೇವೆ. ರೈತರ ವೇಷದಲ್ಲಿರುವ ಪ್ರತಿಭಟನಾಕಾರರು ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಅಷ್ಟೇ ಅಲ್ಲ ‘ಜಬ್ ಇಂದಿರಾ ಗಾಂಧಿ ಕೋ ಯೇ ಕರ್ ಸಕ್ತೇ ಹೈಂ, ತೋ ಮೋದಿ ಕೋ ಕ್ಯೂಂ ನಹೀಂ ಕರ್ ಸಕ್ತೇ’ ಎಂದೆಲ್ಲಾ ಕೂಗಿದ ಬಗ್ಗೆ ವಿಡಿಯೊಗಳು ಲಭ್ಯವಾಗಿವೆ ಎಂದು ಖಟ್ಟರ್ ಹೇಳಿದ್ದಾರೆ.

https://twitter.com/SUNNYTAMAK/status/1332705595531567105

ಅಂದರೆ, ಇಂದಿರಾ ಗಾಂಧಿಯನ್ನು ಹತ್ಯೆ ಮಾಡಲಾಗಿತ್ತು, ಮೋದಿಯನ್ನೇಕೆ ಮಾಡಬಾರದು ಎಂಬರ್ಥದಲ್ಲಿ ಈ ಘೋಷಣೆ ಮೂಡಿಬಂದಿದೆ. ಇಂದಿರಾ ಹತ್ಯೆಗೆ ಕಾರಣವಾಗಿದ್ದ ಖಲಿಸ್ತಾನಿ ಉಗ್ರಗಾಮಿಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಕುರಿತು ವರದಿಗಳಿವೆಯಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಈಗಾಗಲೇ ಪ್ರತಿಭಟನಾನಿರತ ರೈತರಿಗೆ ಡಿ.3ರಂದು ಮಾತುಕತೆಗೆ ಅಹ್ವಾನಿಸಿದ್ದು, ರೈತರ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟುಬಿಡುವಂತೆ ಎಲ್ಲ ಪಕ್ಷಗಳಿಗೆ ವಿನಂತಿಸಿಕೊಂಡಿದ್ದಾರೆ.

ದೆಹಲಿ ತಲುಪಿದ ರೈತರು, ತಮ್ಮದೇ ಕೈಯಲ್ಲಿ ದಂಡಗಳನ್ನು ಹಿಡಿದುಕೊಂಡು ಪೊಲೀಸರಿಗೆ ಅಟ್ಟಾಡಿಸುತ್ತಿರುವ ದೃಶ್ಯದೊಂದಿಗೆ, ಟ್ರ್ಯಾಕ್ಟರ್ ಹರಿಸಿ ಪೊಲೀಸರನ್ನೇ ಕೊಲ್ಲಲು ಪ್ರಯತ್ನಿಸುವ ದೃಶ್ಯಗಳನ್ನು ಕೂಡ ಉತ್ತರ ಭಾರತದ ಮಾಧ್ಯಮಗಳು ಪದೇ ಪದೇ ತೋರಿಸುತ್ತಿದ್ದು, ರೈತರ ಪ್ರತಿಭಟನೆಯೊಳಗೆ ಸಮಾಜಘಾತುಕ ಶಕ್ತಿಗಳು ನುಸುಳಿರುವುದಕ್ಕೆ ಪುಷ್ಟಿ ನೀಡುತ್ತಿದೆ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post J&K ಚುನಾವಣೆ ಹೊಸ್ತಿಲಲ್ಲಿ ಸುಳ್ಳು: ಮೆಹಬೂಬಾ ಮುಫ್ತಿ ನಾಟಕ ಬಯಲಿಗೆಳೆದ ಪೊಲೀಸರು
Next post ರೈತ ಹೋರಾಟದಲ್ಲಿ ವಿದ್ರೋಹಿ ಶಕ್ತಿಗಳು: ಮೋದಿ, ಬಿಜೆಪಿ ಗಮನಿಸಬೇಕಿದೆ

ಸುದ್ದಿ ಸಂಚಯ

ಇವುಗಳನ್ನೂ ನೋಡಿ