Read Time:2 Minute, 37 Second

ಕೃಷಿ ಕಾಯ್ದೆ ಬೆಂಬಲಿಸಿದ ರೈತರು | 20 ಸಾವಿರಕ್ಕೂ ಹೆಚ್ಚು ಮಂದಿಯ ಟ್ರ್ಯಾಕ್ಟರ್ ರ‍್ಯಾಲಿ

0 0

ಲಖನೌ: ರೈತರಿಗೆ ಭರ್ಜರಿ ಲಾಭ ತಂದುಕೊಡಲು ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿದ ಕೃಷಿ ಕಾಯ್ದೆಗಳ ವಿರುದ್ಧ ಅತ್ತ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಾ ಒಂದೆಡೆ ರೈತರ ಪ್ರತಿಭಟನೆಗೆ ಪ್ರಚೋದನೆ, ಬೆಂಬಲ ನೀಡಿದ್ದರೆ, ಲಾಭವನ್ನು ಅರಿತುಕೊಂಡ ರೈತರು ಟ್ರ್ಯಾಕ್ಟರ್ ರ‍್ಯಾಲಿ ನಡೆಸಿ ಈ ಕಾಯ್ದೆಗಳಿಗೆ ಬೆಂಬಲ ಸೂಚಿಸಿದ್ದಾರೆ.

20 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ರೈತರು ಟ್ರ್ಯಾಕ್ಟರ್‌ಗಳ ರ‍್ಯಾಲಿ ನಡೆಸಿ, ನಿಜವಾದ ಶ್ರಮಜೀವಿ ರೈತರ ದಾರಿ ತಪ್ಪಿಸುವವರಿಗೆ ಹಿಡಿಶಾಪ ಹಾಕಿದರು.

ಇದನ್ನೂ ಓದಿ: ಕಾಯ್ದೆಯಿಂದ ರೈತರಿಗೆ ಲಾಭ, ಕಾಂಗ್ರೆಸ್ ಸುಳ್ಳುಗಳನ್ನು ನಂಬಬೇಡಿ ಅಂದಿದ್ದೇಕೆ ಮೋದಿ? ಇಲ್ಲಿದೆ ಡೀಟೇಲ್ಸ್!

ಮೀರತ್‌ನಿಂದ ಆರಂಭವಾದ ಟ್ರ್ಯಾಕ್ಟರ್ ರ‍್ಯಾಲಿ ಉತ್ತರ ಪ್ರದೇಶದ ಗಾಜಿಯಾಬಾದ್‌ವರೆಗೂ ನಡೆಯಿತು ಎಂದು ದೇಶದ ರಾಷ್ಟ್ರನಿಷ್ಠ ಹಾಗೂ ನಂಬರ್ 1 ಸುದ್ದಿ ಚಾನೆಲ್ ರಿಪಬ್ಲಿಕ್ ಟಿವಿ ವರದಿ ಮಾಡಿದೆ. ದೇಶಾದ್ಯಂತ ವಿರೋಧ ಪಕ್ಷ ಪ್ರಚೋದಿತ ರೈತರು ಈ ಕಾಯ್ದೆಗಳ ಅನುಕೂಲಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಮೋದಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಈ ರೈತರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: Farmers Protest ನಡುವೆ ಸಮಾಜಘಾತುಕ ಶಕ್ತಿಗಳು: ಮೋದಿ ಹತ್ಯೆ ಬೆದರಿಕೆ ಘೋಷಣೆ – ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಫಲಕಗಳನ್ನು ಹಿಡಿದು, ಕೃಷಿ ಕಾಯ್ದೆಯನ್ನು ಬೆಂಬಲಿಸುವ ಘೋಷಣೆಯೊಂದಿಗೆ ರೈತರು ಮೆರವಣಿಗೆ ನಡೆಸಿದರು. ಕನಿಷ್ಠ ಬೆಂಬಲ ಬೆಲೆಯೂ ಇರುತ್ತದೆ, ಎಂಪಿಎಂಸಿ ಮಂಡಿಯೂ ಇರುತ್ತದೆ, ಮಂಡಿಯ ಹೊರಗೆ ತಮಗೆ ಹೆಚ್ಚು ಬೆಲೆ ನೀಡುವವರಿಗೆ ಫಸಲು ಮಾರಬಹುದು, ಇನ್ನು ಮಧ್ಯವರ್ತಿಗಳ ಕಾಟ ಇರುವುದಿಲ್ಲ ಎಂಬ ವಿಚಾರಗಳ ಫಲಕಗಳೂ ಇದ್ದವು.

ಈ ಮಧ್ಯೆ, ಕೃಷಿ ಕಾಯ್ದೆಯಿಂದಾಗುವ ಲಾಭಗಳ ಕುರಿತು 8 ಪುಟಗಳ ಪತ್ರವೊಂದನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಬರೆದಿದ್ದಾರೆ.

ಇದನ್ನೂ ಓದಿ: ಪಂಜಾಬಿನಲ್ಲಿ ಸುಟ್ಟ ಟ್ರ್ಯಾಕ್ಟರನ್ನೇ ದೆಹಲಿಯಲ್ಲೂ ತಂದು ಸುಟ್ಟ ಕಾಂಗ್ರೆಸ್: ದೇಶಕ್ಕೆ ಅವಮಾನ ಎಂದ ಬಿಜೆಪಿ

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post Rape in Rajasthan: ಉದ್ಯಮಿ ಹತ್ಯೆಗೆ ಬಂದವರಿಂದ ತ್ರೀಸ್ಟಾರ್ ಹೋಟೆಲ್ ಸಿಬ್ಬಂದಿ ಮೇಲೆ ರೇಪ್
Next post ಮೋದಿ ವಿರುದ್ಧದ ರೈತ ಹೋರಾಟ | ಕಿಸಾನ್ ಯೂನಿಯನ್‌ಗೆ ವಿದೇಶದಿಂದ ಅಕ್ರಮವಾಗಿ ಹರಿದುಬರುತ್ತಿದೆ ಲಕ್ಷ ಲಕ್ಷ ಹಣ!

ಸುದ್ದಿ ಸಂಚಯ

ಇವುಗಳನ್ನೂ ನೋಡಿ