ಹೈದರಾಬಾದ್: ಇತ್ತೀಚೆಗೆ ನಡೆದ ಬಿಹಾರ ಹಾಗೂ ಮಧ್ಯಪ್ರದೇಶ, ಕರ್ನಾಟಕ, ಗುಜರಾತ್ ಸಹಿತ ದೇಶದ ವಿವಿಧೆಡೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯ ಸೋಲು ಕಂಡ ಬಳಿಕ, ಅದು ಮೊದಲು ಆರೋಪ ಮಾಡಿದ್ದು ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು (EVM). ಬಿಜೆಪಿಯು ಇವಿಎಂಗಳಲ್ಲಿ ತಂತ್ರಗಾರಿಕೆ ಪ್ರದರ್ಶಿಸಿ, ಮತಗಳು ತನಗೇ ಬೀಳುವಂತೆ ಮಾಡಿಕೊಂಡಿದೆ ಎಂಬುದು ಕಾಂಗ್ರೆಸ್ನ ಅನೇಕರ ಆರೋಪವಾಗಿತ್ತು.
ಅಷ್ಟೇ ಅಲ್ಲದೆ, ಅಮೆರಿಕದಂತೆ ಬ್ಯಾಲೆಟ್ ಪೇಪರ್ (ಮತಪತ್ರ) ಮೂಲಕವೇ ಮತದಾನವಾಗಬೇಕು ಎಂದೂ ಕಾಂಗ್ರೆಸ್ ಹಾಗೂ ವಿವಿಧ ವಿರೋಧ ಪಕ್ಷಗಳು ಒತ್ತಾಯಿಸಿದ್ದವು.
ಆದರೆ, ದೇಶದ ಗಮನ ಸೆಳೆದ ಹೈದರಾಬಾದ್ ಮಹಾನಗರ ಪಾಲಿಕೆ (ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಶನ್) ಚುನಾವಣೆಗಳಲ್ಲಿ ಬಳಸಿದ್ದು ಇದೇ ಮತ ಪತ್ರಗಳನ್ನು. ಅಲ್ಲಿಯೂ ಕಾಂಗ್ರೆಸ್ಗೆ ಸೋಲಾಗಿದೆ. ಆದರೆ, ಬಿಜೆಪಿಯು 2016ರಲ್ಲಿ 4 ಇದ್ದ ತನ್ನ ಹಿಡಿತದ ವಾರ್ಡುಗಳ ಸಂಖ್ಯೆಯನ್ನು 48ಕ್ಕೆ ಏರಿಸಿಕೊಂಡು ಇತಿಹಾಸ ಸೃಷ್ಟಿಸಿತ್ತು.
ಇಲ್ಲಿ ಓದಿ: GHMC Results: ‘ಭಾಗ್ಯನಗರ’ದ ಬಾಗಿಲಲ್ಲಿ ಅರಳಿದ ಕಮಲ: ಅಮಿತ್ ಶಾ ತಂತ್ರದ ಫಲ, ಟಿಆರ್ಎಸ್ ಗರ್ವ ಭಂಗ
ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಕೂಡ 44 ಸ್ಥಾನಗಳನ್ನು ಕಳೆದುಕೊಂಡು, ಮೇಯರ್ಗಿರಿಯಿಂದ ಕೆಳಗಿಳಿಸಲ್ಪಟ್ಟಿತ್ತು. ಇಲ್ಲಿ ಮತಪತ್ರಗಳನ್ನೇ ಬಳಸಿದ್ದರೂ ಮತ್ತು ಬಿಜೆಪಿಗೆ ಭರ್ಜರಿ ಮತಗಳು ದೊರೆತಿದ್ದರೂ, ಯಾರು ಕೂಡ ಈ ಬಗ್ಗೆ ತುಟಿ ಪಿಟಕ್ ಎನ್ನುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಇವಿಎಂ ಮಾತ್ರವೇ ಅಲ್ಲ, ಬ್ಯಾಲೆಟ್ ಪೇಪರ್ನಲ್ಲಿ ಚುನಾವಣೆ ನಡೆದರೂ ಜನರು ಸತ್ಯ ಯಾವುದು ಮಿಥ್ಯೆ ಯಾವುದು ಎಂದು ಯೋಚಿಸಿ ಬಿಜೆಪಿಗೇ ಮತ ಚಲಾಯಿಸುತ್ತಾರೆ ಎಂದು ನೆಟ್ಟಿಗರು ಹೇಳತೊಡಗಿದ್ದಾರೆ.
ಈ ಬಗ್ಗೆ ಕರ್ನಾಟಕ ಶಿಕ್ಷಣ ಸಚಿವ, ಬಿಜೆಪಿ ಮುಖಂಡ ಸುರೇಶ್ ಕುಮಾರ್ ಅವರು ಟ್ವಿಟರ್ನಲ್ಲಿ ಪ್ರಶ್ನೆ ಮಾಡಿ, ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಅಂದ ಹಾಗೆ ಹೈದರಾಬಾದ್ ನಗರಪಾಲಿಕೆ ಚುನಾವಣೆಯಲ್ಲಿ ಇದ್ದದ್ದು ಬ್ಯಾಲೆಟ್ ಪೇಪರ್. EVM ಅಲ್ಲ. ಆದರೂ ಕಾಂಗ್ರೆಸ್ ಗಳಿಸಿದ್ದು 2 ಸ್ಥಾನ. BJP ಗಳಿಸಿದ್ದು 49 ಸ್ಥಾನ. ಕಾಂಗ್ರೆಸ್ ಇನ್ನೇನು ಸಬೂಬು ಹುಡುಕಬಹುದು? ಎಂದು ಸಚಿವರು ಪ್ರಶ್ನಿಸಿದ್ದಾರೆ.
ಇದೇ ರೀತಿ, “ಈ ಬಾರಿ ಬ್ಯಾಲೆಟ್ ಪೇಪರ್ನಲ್ಲೂ ಬಿಜೆಪಿಯೇ ಗೆಲ್ಲುತ್ತಿದೆ. ವಿರೋಧಿಗಳಿಗೆ ದಾರಿ ಕಾಣದಾಗಿದೆ, ಯಾರನ್ನು ದೂರೋದು” ಎಂದು ಟ್ವಿಟರ್ನಲ್ಲಿ ಪ್ರಶ್ನೆಗಳು ಕೇಳಿಬರತೊಡಗಿದೆ.

Average Rating