Read Time:3 Minute, 57 Second

Google Chrome ಗೆ ಬರಲಿವೆ ಹೊಸ ವೈಶಿಷ್ಟ್ಯಗಳು: PDF ತಿದ್ದುಪಡಿ, QR ಕೋಡ್, ವೇಗದ ಟ್ಯಾಬ್

0 0

ಇತ್ತೀಚೆಗೆ ಸ್ಲೋ ಅನುಭವ ನೀಡುತ್ತಿದ್ದ ಗೂಗಲ್ ಕ್ರೋಮ್ ಬ್ರೌಸರ್‌ಗೆ ಗೂಗಲ್ ಕಂಪನಿಯು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ. ವೇಗವಾಗಿ ಲೋಡ್ ಆಗಬಲ್ಲ ಟ್ಯಾಬ್‌ಗಳು ಮತ್ತು ಅವುಗಳನ್ನು ಮನೆ ಅಥವಾ ಕಚೇರಿ – ಎಲ್ಲೇ ಕೆಲಸ ಮಾಡಿದರೂ ಸುಲಭವಾಗಿ ನಿಭಾಯಿಸಬಲ್ಲ ವೈಶಿಷ್ಟ್ಯ ಇದರಲ್ಲಿದೆ.

ಗೂಗಲ್ ತನ್ನ ಕ್ರೋಮ್ ಬ್ರೌಸರಿಗೆ ಮಾಡಿರುವ ಸುಧಾರಣೆಯ ಅನುಸಾರ, ಇನ್ನು ಕ್ರೋಮ್ ಟ್ಯಾಬ್‌ಗಳು ಶೇ.10ರಷ್ಟು ಹೆಚ್ಚು ವೇಗವಾಗಿ ತೆರೆಯುತ್ತವೆ. ಟ್ಯಾಬ್‌ಗಳ ಗುಂಪುಗಳನ್ನು ಕೂಡ ಸುಲಭವಾಗಿ ಕುಗ್ಗಿಸಬಹುದು (Collapse) ಮತ್ತು ವಿಸ್ತರಿಸಬಹುದಾಗಿದೆ (Expand).

ಲ್ಯಾಪ್‌ಟಾಪ್‌ನ ಟ್ಯಾಬ್ಲೆಟ್ ಮೋಡ್‌ನಲ್ಲಿ ಕ್ರೋಮ್ ಬಳಸುತ್ತಿದ್ದರೆ, ಹಲವು ಟ್ಯಾಬ್‌ಗಳನ್ನು ಫ್ಲಿಪ್ ಮಾಡುತ್ತಾ ನೋಡುವುದು ಸುಲಭವಾಗಲಿದೆ. ನಿಮಗೆ ಬೇಕಾದ ಪುಟವನ್ನು ಮತ್ತು ವೆಬ್ ಬ್ರೌಸಿಂಗ್ ಮಾಡುವುದೂ ಸುಲಭವಾಗಲಿದೆ ಎಂದು ಗೂಗಲ್ ತನ್ನ ಬ್ಲಾಗ್‌ನಲ್ಲಿ ವಿವರ ನೀಡಿದೆ.

ಮೊದಲಾಗಿ ಇದು ಕ್ರೋಮ್‌ಬುಕ್‌ಗಳಿಗೆ ಲಭ್ಯವಾಗಲಿದೆ. ಇದರಲ್ಲಿನ ಹೊಸ ಟಚ್ ಸ್ಕ್ರೀನ್ ಇಂಟರ್ಫೇಸ್ ಮೂಲಕ, ದೊಡ್ಡದಾಗಿರುವ ಟ್ಯಾಬ್‌ಗಳಿರುತ್ತವೆ ಮತ್ತು ಬೇಡದೇ ಇರುವ ಟ್ಯಾಬ್‌ಗಳನ್ನು ಮರೆ ಮಾಡುವ ಅವಕಾಶವೂ ಇರುತ್ತದೆ.

ಅಡ್ರೆಸ್ ಬಾರ್‌ನಲ್ಲಿ ಪೇಜ್ ಟೈಟಲ್ ಟೈಪ್ ಮಾಡುತ್ತಾ ಹೋದಾಗ, ಈಗಾಗಲೇ ತೆರೆದಿರುವ ಟ್ಯಾಬ್‌ಗೆ ಹೋಗುವ ಸಲಹೆ ಕಾಣಿಸುತ್ತದೆ. ಈಗಾಗಲೇ ಲ್ಯಾಪ್‌ಟಾಪ್‌ನಲ್ಲಿ ಲಭ್ಯವಿರುವ ಕ್ರೋಮ್‌ನ ಈ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಗೂ ಪರಿಚಯಿಸಲಾಗುತ್ತದೆ. ಅದೇ ರೀತಿ, ಆಂಡ್ರಾಯ್ಡ್ ಬಳಕೆದಾರರಿಗೆ ಲಿಂಕ್ ಕಾಪಿ ಮಾಡಲು, ಅದನ್ನು ನಿಮ್ಮ ಬೇರೆ ಸಾಧನಗಳಿಗೆ ಕಳುಹಿಸಲು ಮತ್ತು ಬೇರೆ ಆ್ಯಪ್‌ಗಳ ಮೂಲಕ ಲಿಂಕ್ ಕಳುಹಿಸಲು ಯುಆರ್‌ಎಲ್ ಹಂಚಿಕೊಳ್ಳುವ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ ಎಂದು ಗೂಗಲ್ ತಿಳಿಸಿದೆ.

ಇಷ್ಟೇ ಅಲ್ಲ, ಪುಟವನ್ನು ಅಲ್ಲಿಂದಲೇ ಮುದ್ರಿಸಬಹುದು, ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಬಹುದು ಮತ್ತು ಡೌನ್‌ಲೋಡ್ ಕೂಡ ಮಾಡಬಹುದಾಗಿರುತ್ತದೆ. ಕ್ಯುಆರ್ ಕೋಡ್ ವೈಶಿಷ್ಟ್ಯವು ಶೀಘ್ರದಲ್ಲೇ ಡೆಸ್ಕ್‌ಟಾಪ್‌ಗೂ ದೊರೆಯಲಿದೆ. ಹೊಸದಾದ ಕ್ಯುಆರ್ ಐಕಾನ್, ಕ್ರೋಮ್‌ನ ಅಡ್ರೆಸ್ ಬಾರ್‌ನಲ್ಲೇ ಇರುತ್ತದೆ.

ಇಷ್ಟೇ ಅಲ್ಲದೆ, ಕ್ರೋಮ್ ಬೀಟಾದಲ್ಲಿ, ಹೊಸ ವೈಶಿಷ್ಟ್ಯವೊಂದು ಇರುತ್ತದೆ. ಅದೆಂದರೆ, ನೀವು ಒಂದು ಟ್ಯಾಬ್‌ನ ಮೇಲೆ ಮೌಸ್ ಪಾಯಿಂಟರ್ ಹೋವರ್ ಮಾಡಿದರೆ ಸಾಕು, ಆ ಪುಟದ ಥಂಬ್‌ನೇಲ್ ಕಾಣಿಸುತ್ತದೆ. ತುಂಬಾ ಟ್ಯಾಬ್‌ಗಳನ್ನು ಏಕಕಾಲದಲ್ಲಿ ತೆರೆದಿಟ್ಟಿರುವಾಗ ಈ ವೈಶಿಷ್ಟ್ಯ ಹೆಚ್ಚು ಅನುಕೂಲಕರ.

ಮುಂದಿನ ಕೆಲವು ದಿನಗಳಲ್ಲಿ ಬಳಕೆದಾರರು ಪಿಡಿಎಫ್ ಫಾರ್ಮ್‌ಗಳನ್ನೂ ಕ್ರೋಮ್‌ನಲ್ಲೇ ತುಂಬಿಸಿ, ಅದನ್ನು ಸೇವ್ ಮಾಡಿಟ್ಟುಕೊಳ್ಳುವ ವೈಶಿಷ್ಟ್ಯವೂ ಬರಲಿದೆ. ಅಲ್ಲದೆ, ಫೈಲ್ ಮುಚ್ಚುವಾಗ ಯಾವ ಪುಟದಲ್ಲಿದ್ದಿರೋ, ಮುಂದೆ ಫೈಲ್ ತೆರೆದಾಗ, ಅದೇ ಪುಟ ತೆರೆದುಕೊಳ್ಳುವಂತಹಾ ವೈಶಿಷ್ಟ್ಯವೂ ಬರಲಿದೆ ಎಂದು ಗೂಗಲ್ ತಿಳಿಸಿದೆ.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy.
Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post JEE, NEET: ಇವರಿಗೆ ಯುವಜನರ ಹಿತ ಮುಖ್ಯವಲ್ಲ, ಮೋದಿ ವಿರೋಧವೇ ಮುಖ್ಯ
Next post Right To Education: ಶಾಲೆಗಳಿಲ್ಲದೆ ಮಕ್ಕಳ ಹಕ್ಕುಗಳ ಚ್ಯುತಿಯಾಗಿದೆಯೇ?

ಸುದ್ದಿ ಸಂಚಯ

ಇವುಗಳನ್ನೂ ನೋಡಿ